Latest Updates
-
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ?
ಅಧ್ಯಯನ ವರದಿ: ಬೆಳಗ್ಗಿನ ಉಪಾಹಾರ ತ್ಯಜಿಸಿದವರಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತದೆಯಂತೆ!
ಕಚೇರಿಗೆ ಬೇಗ ಹೋಗಲಿದೆ ಎಂದು ಬೆಳಗ್ಗಿನ ಉಪಾಹಾರವನ್ನೇ ಮಾಡದೆ ತೆರಳುವ ಅದೆಷ್ಟೋ ಮಂದಿ ಇದ್ದಾರೆ. ಉಪಾಹಾರವು ನಮ್ಮ ದಿನದ ಪ್ರಮುಖ ಆಹಾರವಾಗಿದೆ. ಉಪಾಹಾರವನ್ನು ತ್ಯಜಿಸಿದರೆ ಆಗ ಅದು ನಿಮ್ಮ ಆರೋಗ್ಯದ ಮೇಲೆ ನಾನಾ ರೀತಿಯ ಪರಿಣಾಮಗಳನ್ನು ಉಂಟು ಮಾಡಬಹುದು. ಉಪಾಹಾರವು ನಮಗೆ ದಿನಪೂರ್ತಿ ಶಕ್ತಿಯಿಂದ ಇರಲು, ದಿನಪೂರ್ತಿ ಕೆಲಸ ಮಾಡಲು ಬೇಕಾಗುವಂತಹ ಪೋಷಕಾಂಶಗಳನ್ನು ಇದು ಒದಗಿಸಿಕೊಡುವುದು. 6-8 ಗಂಟೆಗಳ ಕಾಲ ನಿದ್ರೆ ಮಾಡಿದ ಬಳಿಕ ದೇಹಕ್ಕೆ ಸಿಗುವ ಮೊದಲ ಆಹಾರವಾಗಿರುವ ಕಾರಣದಿಂದಲೂ ಉಪಾಹಾರವು ಪ್ರಮುಖವಾಗಿರುವುದು. ದೇಹವು ಬೆಳೆಯಲು ಪ್ರಮುಖ ಪೋಷಕಾಂಶಗಳು ಅದಕ್ಕೆ ಅಗತ್ಯವಾಗಿ ಬೇಕು. ನಿದ್ರೆಯಿಂದ ಎದ್ದ ಒಂದು ಗಂಟೆಯ ಮೊದಲು ನೀವು ಉಪಾಹಾರ ಸೇವಿಸಬೇಕು.
ಅದಾಗ್ಯೂ, ದಿನದ ಪ್ರಮುಖ ಆಹಾರವನ್ನು ನೀವು ಕಡೆಗಣಿಸಿದರೆ, ಆಗ ಹಲವಾರು ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸಿದಂತೆ ಆಗುವುದು. ಉಪಾಹಾರ ತ್ಯಜಿಸಿದರೆ ಆಗ ನಾವು ಹೃದಯಾಘಾತದ ಸಮಸ್ಯೆಯನ್ನು ಹೆಚ್ಚಿಸಿಕೊಂಡಂತೆ ಆಗುವುದು. ಸಂಶೋಧನೆಗಳು ಹೇಳಿರುವ ಪ್ರಕಾರ ಉಪಾಹಾರ ಸೇವನೆ ಮಾಡದೆ ಇರುವಂತಹ ಜನರಲ್ಲಿ ಹೃದಯಾಘಾತದ ಸಮಸ್ಯೆಯು ಹೆಚ್ಚಿರುವುದು. ನಿಯಮಿತವಾಗಿ ಉಪಾಹಾರ ತ್ಯಜಿಸಿದರೆ ಆಗ ದೇಹದಲ್ಲಿ ಬೊಜ್ಜು ಬರುವುದು.

ಉಪಾಹಾರ ಸೇವನೆ ಮಾಡಿದರೆ ಅದರಿಂದ ದೇಹದ ತೂಕ ಹೆಚ್ಚಾಗುತ್ತದೆ ಎಂದು ಭಾವಿಸಿದ್ದರೆ, ಖಂಡಿತವಾಗಿಯೂ ನೀವು ತಪ್ಪಾರ್ಥ ಮಾಡಿಕೊಂಡಿದ್ದೀರಿ. ಯಾಕೆಂದರೆ ಉಪಾಹಾರವು ಚಯಾಪಚಯ ಹೆಚ್ಚಿಸುವ ಆಹಾರವಾಗಿದೆ ಮತ್ತು ಇದು ದೇಹಕ್ಕೆ ಬೇಕಿರುವ ಪ್ರಮುಖ ಪೋಷಕಾಂಶಗಳನ್ನು ನೀಡಿ ತೂಕ ಇಳಿಸಲು ಬಯಸುವವರಿಗೆ ನೆರವಾಗುವುದು. ಉಪಾಹಾರ ತ್ಯಜಿಸಿದರೆ ಆಗ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳಿಂದ ನೀವು ವಂಚಿತವಾಗಲಿದ್ದೀರಿ. ಪೋಷಕಾಂಶಗಳು ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅತೀ ಅಗತ್ಯವಾಗಿ ಇರುವುದು. ಉಪಾಹಾರ ಸೇವನೆ ಮಾಡದೆ ಇದ್ದರೆ ಆಗ ಕೊಬ್ಬು ಕರಗಿಸುವ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಂಡು, ಮತ್ತಷ್ಟು ತೂಕ ಹೆಚ್ಚಾಗುವಂತೆ ಮಾಡುವುದು.
6-8 ಗಂಟೆಗಳ ಕಾಲ ನಿದ್ರಿಸಿದ ಬಳಿಕ ದೇಹಕ್ಕೆ ಹೆಚ್ಚಿನ ಶಕ್ತಿ ಮತ್ತು ಪೋಷಕಾಂಶಗಳು ಬೇಕಾಗಿರುವುದು. ಯಾಕೆಂದರೆ 3-4 ಗಂಟೆಗಳ ಕಾಲ ಉಪವಾಸ ಮಾಡಿದರೆ ಆಗ ಹೊಟ್ಟೆಯಲ್ಲಿನ ಆಮ್ಲೀಯ ಮಟ್ಟವು ಹೆಚ್ಚಾಗುವುದು. ಈ ಆಮ್ಲವು ಸರಿಯಾಗಿ ಆಹಾರ ಜೀರ್ಣವಾಗಲು ನೆರವಾಗುವುದು. ಆಹಾರ ತ್ಯಜಿಸಿದರೆ ಆಗ ಗ್ಯಾಸ ಮತ್ತು ಮಲಬದ್ಧತೆ ಸಮಸ್ಯೆಯು ಬರುವುದು. ಜೀರ್ಣಕ್ರಿಯೆ ವ್ಯವಸ್ಥೆಯು ಆರೋಗ್ಯಕಾರಿ ಆಗಬೇಕಾದರೆ ಪ್ರತೀ 3-4 ಗಂಟೆಗೊಮ್ಮೆ ಆಹಾರ ಸೇವಿಸಬೇಕು.
ಉಪಾಹಾರ ತ್ಯಜಿಸಿದರೆ ಆಗ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದು
ನೀವು ತಿನ್ನುವಂತಹ ಆಹಾರ ಮತ್ತು ಊಟವು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುವುದು. ಉಪಾಹಾರವು ದಿನದ ಪ್ರಮುಖ ಆಹಾರವಾಗಿದೆ ಮತ್ತು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗಿದೆ. ಸರಿಯಾದ ಪ್ರಮಾಣದಲ್ಲಿ ಉಪಾಹಾರ ಸೇವಿಸಿದರೆ ಆಗ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಲು ನೆರವಾಗುವುದು ಮತ್ತು ಮಧುಮೇಹ ನಿಯಂತ್ರಿಸಲು ಇದು ನೆರವಾಗುವುದು. ಮಧುಮೇಹ ಹೊಂದಿರುವಂತಹವರು ಯಾವಾಗಲೂ ಆರೋಗ್ಯಕಾರಿ ಮತ್ತು ಅತ್ಯಧಿಕ ಪೋಷಕಾಂಶಗಳು ಇರುವ ಉಪಾಹಾರ ಸೇವನೆ ಮಾಡಬೇಕು. ಉಪಾಹಾರ ತ್ಯಜಿಸುವಮಹತ ಜನರಲ್ಲಿ ಖಿನ್ನತೆ ಮತ್ತು ಒತ್ತಡ ಕೂಡ ಉಂಟಾಗುವುದು ಎಂದು ಹೇಳಲಾಗಿದೆ.
ಉಪಾಹಾರವು ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಆಮ್ಲೀಯ ಮಟ್ಟವನ್ನು ಕಾಪಾಡುವುದು. ಉಪಾಹಾರ ತ್ಯಜಿಸಿದರೆ ಆಗ ಅದರಿಂದ ಹೊಟ್ಟೆಯ ಅಲ್ಸರ್ ಬರಬಹುದು. ದೀರ್ಘಕಾಲ ತನಕ ಉಪವಾಸ ಇರುವುದರಿಂದ ಹೊಟ್ಟೆಯ ಅಲ್ಸರ್ ಬರುವುದು. ಇದರಲ್ಲಿ ಮುಖ್ಯವಾಗಿ ಉಪಾಹಾರ ತ್ಯಜಿಸುವುದು ಮುಖ್ಯವಾಗಿದೆ. ಬೆಳಗ್ಗಿನ ಉಪಾಹಾರವು ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳನ್ನು ನೀಡುವುದು. ಇದರಿಂದ ನೀವು ಹೊಟ್ಟೆಯ ಅಲ್ಸರ್ ಮತ್ತು ಗಡ್ಡೆ ತಡೆಯಲು ಸಮಯಕ್ಕೆ ಸರಿಯಾಗಿ ಪ್ರತಿನಿತ್ಯ ಉಪಾಹಾರ ಸೇವಿಸಿ.
ಆರೋಗ್ಯಕಾರಿ ಉಪಾಹಾರ ಕ್ರಮಕ್ಕೆ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಕೆಲವೊಂದು ಸಲಹೆಗಳು
ಆಳವಾಗಿ ಕರಿದ ಆಹಾರವನ್ನು ಬೆಳಗ್ಗಿನ ಉಪಾಹಾರಕ್ಕೆ ಸೇವನೆ ಮಾಡಬೇಡಿ. ಇದರಿಂದ ಜೀರ್ಣಕ್ರಿಯೆ ವ್ಯವಸ್ಥೆಗೆ ಅದನ್ನು ಕರಗಿಸಲು ಕಷ್ಟವಾಗುವುದು. ಬೆಳಗ್ಗೆ ಎದ್ದ ಕೂಡಲೇ ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸಿ. ಪ್ರತಿನಿತ್ಯವು ನಿಮ್ಮ ಉಪಾಹಾರದಲ್ಲಿ ಭಿನ್ನತೆ ಇರಲಿ. ಕಾರ್ಬ್ಸ್, ಕೊಬ್ಬು, ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಉಪಾಹಾರದಲ್ಲಿರಲಿ. ಮೊಟ್ಟೆಯು ಉಪಾಹಾರಕ್ಕೆ ತುಂಬಾ ಆರೋಗ್ಯಕಾರಿ ಎಂದು ಹೇಳಲಾಗುತ್ತದೆ. ಇದರ ಅಧಿಕ ಲಾಭ ಪಡೆಯಲು ಯಾವುದೇ ರೂಪದಲ್ಲೂ ಇದನ್ನು ಸೇವಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
