Latest Updates
-
ದೆಹಲಿ ಮಾಲಿನ್ಯ: ಉಸಿರುಗಟ್ಟುವ ಗಾಳಿಯಲ್ಲಿ ಆರೋಗ್ಯ ರಕ್ಷಣೆ ಹೇಗೆ? 12 ನಿಮಿಷದ ವರ್ಕೌಟ್ ಮತ್ತು ಮಾಸ್ಕ್ ಟಿಪ್ಸ್ -
ಡೇಟಿಂಗ್ ಆಪ್ ಬಳಸುವಾಗ ಎಚ್ಚರ: ಸೈಬರ್ ವಂಚನೆ ಮತ್ತು ಸೆಕ್ಸ್ಟಾರ್ಷನ್ನಿಂದ ಪಾರಾಗುವುದು ಹೇಗೆ? -
ಈರುಳ್ಳಿ ಬೆಲೆ ಇಳಿಕೆ: ಗೃಹಿಣಿಯರಿಗೆ ನಿರಾಳ, ಬಜೆಟ್ ಸ್ನೇಹಿ ಅಡುಗೆಗೆ ಈಗ ಸುಲಭ! -
ಕಿಚ್ಚ ಸುದೀಪ್-ಪ್ರೇಮ್ ಟೀಸರ್ ರಿಲೀಸ್: ಸಂಭ್ರಮಿಸಲು ಸಿದ್ಧರಾಗಿ, ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ ವಿಷಕಾರಿ ಗಾಳಿ: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 15 ನಿಮಿಷದ ವರ್ಕೌಟ್ -
ಮದುವೆ ಭರವಸೆ ವಂಚನೆ: ಹಣ ಕೊಟ್ಟು ರಾಜಿ ಮಾಡಿಕೊಳ್ಳುವವರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ -
ಚಳಿಗಾಲದ ಸ್ಪೆಷಲ್: 30 ನಿಮಿಷದಲ್ಲಿ ತಯಾರಾಗುವ 5 ಹೈ-ಪ್ರೋಟೀನ್, ಡಯಾಬಿಟಿಸ್-ಸ್ಮಾರ್ಟ್ ಸೂಪ್ಗಳು! -
ಸಂವಿಧಾನ ದಿನ: ಬೆಳಿಗ್ಗೆ 11 ಗಂಟೆಗೆ ಪ್ರಸ್ತಾವನೆ ಓದಿ, ನಿಮ್ಮ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ? -
ಮಳೆಗಾಲದ ಬೆಳಿಗ್ಗೆ ಆಲಸ್ಯವೇ? ಬೆಂಗಳೂರಿನಲ್ಲಿ ಫಿಟ್ ಆಗಿರಲು 20 ನಿಮಿಷಗಳ ಸರಳ ವರ್ಕೌಟ್ ಇಲ್ಲಿದೆ! -
16 ದಿನಗಳ ಸುರಕ್ಷತಾ ಅಭಿಯಾನ: ನಿಮ್ಮ ರಕ್ಷಣೆಗಾಗಿ ಈ ತುರ್ತು ಸಂಖ್ಯೆಗಳು ಮತ್ತು ಸಲಹೆಗಳು ಇಂದೇ ತಿಳಿಯಿರಿ
ಟೀಯನ್ನು ಮತ್ತೊಮ್ಮೆ ಬಿಸಿಮಾಡಿ ಕುಡಿದರೆ ಆರೋಗ್ಯ ಜೋಕೆ!
ನಮ್ಮಲ್ಲಿ ಹೆಚ್ಚಿನವರು ಚಹಾಪ್ರಿಯರು. ಬೆಳಗ್ಗೆ ಎದ್ದಾಗಿನಿಂದ, ರಾತ್ರಿ ಮಲಗುವವರೆಗೂ ಟೀಯನ್ನು ಎಷ್ಟು ಬಾರಿ ಕುಡಿಯುತ್ತಾರೋ, ಅವರಿಗೆ ತಿಳಿದಿರುವುದಿಲ್ಲ. ಅಷ್ಟು ಈ ಚಹಾಕ್ಕೆ ಅಂಟಿಕೊಂಡಿರುತ್ತಾರೆ. ಆದರೆ, ಕೆಲವು ಸೋಮಾರಿಗಳು ಒಮ್ಮೆ ಮಾಡಿಟ್ಟ ಚಹಾವನ್ನು ಪದೇ ಪದೇ ಬಿಸಿ ಮಾಡಿ ಕುಡಿಯುತ್ತಾರೆ.
ಟೀಯನ್ನು ಬಿಸಿ ಇದ್ದಾಗಲೇ ಕುಡಿಯುವುದು ಆರೋಗ್ಯಕರ, ಅದನ್ನು ಪುನಃ ಬಿಸಿಮಾಡುವುದು ಹಾನಿಕಾರಕ ಎಂದು ಅನೇಕ ಸಂಶೋಧನೆಗಳಿಂದ ಸಾಬೀತಾಗಿದೆ. ಹೀಗೆ ಮತ್ತೊಮ್ಮೆ ಬಿಸಿ ಮಾಡಿ ಕುಡಿದರೆ ಏನಾಗುತ್ತದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಮತ್ತೊಮ್ಮೆ ಬಿಸಿ ಮಾಡಿದ ಚಹಾ ಕುಡಿಯುವುದು ಒಳ್ಳೆಯದಲ್ಲ ಎಂಬುದಕ್ಕೆ ಕೆಲವೊಂದು ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ:

ರುಚಿ ಮತ್ತು ವಾಸನೆ ನಷ್ಟ:
ಚಹಾವನ್ನು ಪುನಃ ಬಿಸಿ ಮಾಡುವುದಿರಂದ ಆಗುವ ಮೊದಲ ಮತ್ತು ಪ್ರಮುಖವಾದ ಅನಾನುಕೂಲವೆಂದರೆ ನಮ್ಮನ್ನು ಕುಡಿಯುವಂತೆ ಆಕರ್ಷಿಸುವ ಟೀಯ ರುಚಿ ಮತ್ತು ಸುವಾಸನೆ ನಷ್ಟವಾಗುತ್ತದೆ. ಅಷ್ಟೇ ಅಲ್ಲ, ಮರು ಬಿಸಿ ಮಾಡುವುದರಿಂದ ಸಾಕಷ್ಟು ಪೌಷ್ಟಿಕಾಂಶದ ಗುಣಗಳು ನಾಶವಾಗಿ, ರುಚಿ ಕಳೆದುಕೊಳ್ಳುವುದು. ಆದ್ದರಿಂದ ಟೀಯನ್ನು ಬಿಸಿ ಇದ್ದಾಗಲೇ, ಕುಡಿಯಬೇಕು. ಆಗಲೇ, ಅದರ ನಿಜವಾದ ರುಚಿ ಹಾಗೂ ಪರಿಮಳವನ್ನು ಆಸ್ವಾದಿಸಲು ಸಾಧ್ಯವಾಗುವುದು.

ಸೂಕ್ಷ್ಮಜೀವಿಯ ಬೆಳವಣಿಗೆ:
ಕೆಲವರು ಬೆಳಗ್ಗೆ ಮಾಡಿಟ್ಟ ಚಹಾವನ್ನು ಮಧ್ಯಾಹ್ನದ ವೇಳೆ ಬಿಸಿ ಮಾಡಿ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ನೀವೇನಾದರೂ ಚಹಾವನ್ನು 4 ಗಂಟೆಗಳ ಕಾಲ ಬಿಟ್ಟು ನಂತರ ಮತ್ತೆ ಕಾಯಿಸಿ ಕುಡಿಯುವ ಅಭ್ಯಾಸ ಹೊಂದಿದ್ದರೆ, ತಕ್ಷಣ ನಿಲ್ಲಿಸಬೇಕು. ಉಳಿದಿರುವ ಚಹಾದಲ್ಲಿ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಜೀವಿಗಳು ಉಗಮಗೊಳ್ಳುತ್ತವೆ. ಇದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತವೆ.
ಒಂದು ಗಿಡಮೂಲಿಕೆಗಳ ಚಹಾವನ್ನು ಹೀಗೆ ತುಂಬಾ ಸಮಯದವರೆಗೆ ಬಿಟ್ಟು, ಮತ್ತೆ ಬಿಸಿಮಾಡುವುದರಿಂದ, ಎಲ್ಲಾ ಪೋಷಕಾಂಶಗಳು ಮತ್ತು ಖನಿಜಗಳು ಕಳೆದುಹೋಗುತ್ತವೆ. ಇದಲ್ಲದೆ, ಟೀಯಲ್ಲಿರುವ ಇತರ ಸಂಯುಕ್ತಗಳಿಗೆ ಎರಡೆರಡು ಬಾರಿ ಶಾಖ ನೀಡುವುದರಿಂದ ನಾಶವಾಗುತ್ತವೆ.

ಅನಾರೋಗ್ಯಕ್ಕೆ ಕಾರಣವಾಗಬಹುದು:
ಎರಡನೇ ಬಾರಿ ಬಿಸಿ ಮಾಡಿದ ಚಹಾವನ್ನು ಕುಡಿಯುವುದು ತುಂಬಾ ಅಪಾಯಕಾರಿ, ಏಕೆಂದರೆ ಅದನ್ನು ಮತ್ತೆ ಬಿಸಿ ಮಾಡಿದಾಗ ಎಲ್ಲಾ ಖನಿಜಗಳು ಮತ್ತು ಉತ್ತಮ ಸಂಯುಕ್ತಗಳು ನಷ್ಟವಾಗಿರುತ್ತವೆ, ಹೀಗಾಗಿ ಇದನ್ನು ಕುಡಿಯುವುದು ಅಪಾಯಕಾರಿ. ಇದು ಹೊಟ್ಟೆನೋವು, ಅತಿಸಾರ, ಉರಿಯೂತ, ವಾಕರಿಕೆ ಮುಂತಾದ ಪ್ರಮುಖ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ಕೆಲವೊಮ್ಮೆ ದೀರ್ಘಕಾಲದ ಅನಾರೋಗ್ಯಕ್ಕೂ ದಾರಿಯಾಗುತ್ತದೆ.

ಟ್ಯಾನಿನ್ ಗಳನ್ನ ಬಿಡುಗೊಳಿಸುವುದು:
ಟೀಯನ್ನು ತುಂಬಾ ಸಮಯ ಬಿಡುವುದರಿಂದ, ಕಹಿಗೆ ಕಾರಣವಾಗುವ ಬಹಳಷ್ಟು ಟ್ಯಾನಿನ್ಗಳ ಬಿಡುಗಡೆಗೆ ಕಾರಣವಾಗುತ್ತದೆ. ಇದರಿಂದ ಚಹಾ ಕಹಿ ಅಥವಾ ಒಗರಾಗಬಹುದು. ಆದ್ದರಿಂದ ಆದಷ್ಟು ಚಹಾವನ್ನು ಹೆಚ್ಚು ಕಾಲ ಇಡದೇ, ಬಿಸಿ ಇದ್ದಾಗಲೇ, ಕುಡಿಯುವುದು ಒಳ್ಳೆಯದು.

ತಿಳಿಯಬೇಕಾದ ಪ್ರಮುಖ ವಿಷಯಗಳು:
- ಟೀ ತಯಾರಿಸಿದ 15 ನಿಮಿಷಗಳ ನಂತರ ಮತ್ತೆ ಬಿಸಿ ಮಾಡಬಹುದು, ಆಗ ಅದು ವಿಷಕಾರಿಯಾಗುವುದಿಲ್ಲ.
- 4 ಗಂಟೆಗಳಿಗಿಂತ ಹೆಚ್ಚು ಕಾಲ ಇಟ್ಟಿರುವ ಚಹಾವನ್ನು ಮತ್ತೆ ಬಿಸಿ ಮಾಡಬೇಡಿ, ಇದು ತುಂಬಾ ಹಾನಿಕಾರಕವಾಗಿದೆ.
- ಅಗತ್ಯವಿರುವಷ್ಟು ಚಹಾವನ್ನು ಮಾತ್ರ ತಯಾರಿಸಬೇಕು, ಹಣ ಉಳಿಸುವ ಪ್ರಯತ್ನದಲ್ಲಿ ಆರೋಗ್ಯ ಕಳೆದುಕೊಳ್ಳಬೇಡಿ.



Click it and Unblock the Notifications
