Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಸಿ ಅರಿಶಿಣ VS ಅರಿಶಿಣ ಪುಡಿ, ಯಾವುದು ಹೆಚ್ಚು ಆರೋಗ್ಯಕರ? ಕಲಬೆರಿಕೆ ಅರಿಶಿಣ ಕಂಡು ಹಿಡಿಯುವುದು ಹೇಗೆ?
ಅರಿಶಿಣ ಪುಡಿ ಇಲ್ಲದ ಅಡುಗೆ ಮನೆ ಇರಲ್ಲ, ಏಕೆಂದರೆ ನಾವು ದಿನನಿತ್ಯ ಬಳಸುವ ಆಹಾರಗಳಲ್ಲಿ ಅರಿಶಿಣ ಬಳಸಿಯೇ ಬಳಸುತ್ತೇವೆ. ಅರಿಶಿಣ ಬರಿ ಅಡುಗೆಯ ಬಣ್ಣ, ರುಚಿಗೆಯಷ್ಟೇ ಅಲ್ಲ, ಇದರಿಂದ ಅನೇಕ ಆರೋಗ್ಯಕರ ಗುಣಗಳಿವೆ.
ಅರಿಶಿಣವನ್ನು ಕೆಲವರು ಪೌಡರ್ ಆಗಿ ಬಳಸಿದರೆ ಇನ್ನು ಕೆಲವರು ಒಣ ಅರಿಶಿಣ, ಕೆಲವರು ಹಸಿ ಅರಿಶಿಣ ಬಳಸುತ್ತಾರೆ. ಹಸಿ VS ಪೌಡರ್ ಅರಿಶಿಣದಲ್ಲಿ ಯಾವುದು ಒಳ್ಳೆಯದು ಎಂದು ನೋಡುವುದಾದರೆ:

ಹಸಿ ಅರಿಶಿಣ VS ಅರಿಶಿಣ ಪುಡಿ
ಹಸಿ ಅರಿಶಿಣದಲ್ಲಿ ಒಗರು ಸ್ವಲ್ಪ ಅಧಿಕವಿರುರುತ್ತದೆ. ಇದನ್ನು ನೀವು ಜ್ಯೂಸ್ ಮಾಡುವಾಗ (ತೂಕ ಇಳಿಕೆ, ಸ್ಕಿನ್ ಗ್ಲೋ ಡಯಟ್‌ಗೆ) ಅಥವಾ ಹಾಲಿಗೆ ಹಾಕಿ ಕುಡಿಯುವಾಗ, ಉಪ್ಪಿನಕಾಯಿ ಮಾಡುವಾಗ ಬಳಸಬಹುದು. ಅದೇ ಹಸಿ ಅರಿಶಿಣ ಸಾರಿಗೆ ಬಳಸಿದರೆ ಅದರ ರುಚಿ ಅಷ್ಟು ಇಷ್ಟವಾಗುವುದಿಲ್ಲ. ಆದ್ದರಿಂದ ಎಲ್ಲರು ಹಸಿ ಅರಿಶಿಣದ ಬದಲಿಗೆ ಪೌಡರ್ ಅರಿಶಿಣ ಬಳಸುತ್ತಾರೆ.
ಆದ್ದರಿಂದ ಅಡುಗೆಯಲ್ಲಿ ಪೌಡರ್ ಅರಿಶಿಣ ಬಳಸುವುದು ಒಳ್ಳೆಯದು, ಅಲ್ಲದೆ ಹಸಿ ಅರಿಶಿಣದಲ್ಲಿರುವ ಗುಣಗಳಲ್ಲಿ ಬಹುತೇಕ ಗುಣಗಳು ಪೌಡರ್‌ಮಾಡಿದಾಗಲೂ ಸಿಗುವುದರಿಂದ ಪೌಡರ್ ಬಳಸುವುದು ಕೂಡ ಆರೋಗ್ಯಕರವಾಗಿದೆ ಹಾಗೂ ಅನುಕೂಲಕರವಾಗಿದೆ.

ಅರಿಶಿಣ ಪುಡಿ ಬಾಳಿಕೆ ಅಧಿಕ
ನೀವು ಹಸಿ ಅರಿಶಿಣ ಬಳಸುವುದಾದರೆ ಅದಕ್ಕೆ ಬಾಳಿಕೆ ಕಡಿಮೆ, ಹೆಚ್ಚೆಂದರೆ ಎರಡು ವಾರ ಬಳಸಬಹುದು, ಇನ್ನು ಫ್ರಿಡ್ಜ್‌ನಲ್ಲಿಟ್ಟು ಮತ್ತೂ ಸ್ವಲ್ಪ ಕಾಲ ಅಧಿಕ ಬಳಸಬಹುದು, ಆದರೆ ಅರಿಶಿಣ ಪುಡಿ ತುಂಬಾ ವರ್ಷಗಳವರೆಗೆ ಬಾಳಿಕೆ ಬರುತ್ತದೆ.
ಬಣ್ಣ, ಸೆಪ್ಟಿಕ್ ನಿವಾರಕ ಗುಣ ಹಸಿ ಅರಿಶಿಣದಲ್ಲಿ ಅಧಿಕ
ನೀವು ನಿಮ್ಮ ಸಾರು ಗೋಲ್ಡನ್ ಕಲರ್‌ನಲ್ಲಿರಬೇಕು ಹಾಗೂ ಏನಾದರೂ ಸರ್ಜರಿಯಾಗಿದ್ದರೆ ಗಾಯ ಬೇಗ ಒಣಗಬೇಕು ಎಂದು ಬಯಸುವುದಾದರೆ ಹಸಿ ಅರಿಶಿಣ ಸಿಕ್ಕರೆ ಅದನ್ನು ಸಾರಿಗೆ ಬಳಸುವುದು ಒಳ್ಳೆಯದು. ಹಸಿ ಅರಿಶಿಣದಲ್ಲಿರುವ ಎಣ್ಣೆಯಂಶ ಅದನ್ನು ಬೇಯಿಸಿ ಒಣಗಿಸಿದಾಗ ಇಲ್ಲವಾಗುವುದು, ಉಳಿದಂತೆ ಹಸಿ ಅರಿಶಿಣ ಹಾಗೂ ಅರಿಶಿಣ ಪುಡಿ ಎರಡೂ ಆರೋಗ್ಯಕರವಾಗಿವೆ.

ಇನ್ನು ಹಸಿ ಅರಿಶಿಣದ ಒಂದು ಚಿಕ್ಕ ತುಂಡು ತಿಂದರೆ ಈ ಪ್ರಯೋಜನಗಳು ಸಿಗುವುದು:
ಜೀರ್ಣಕ್ರಿಯೆಗೆ ಒಳ್ಳೆಯದು: ಆಗಾಗ ಅಜೀರ್ಣ ಸಮಸ್ಯೆ ಕಾಡುತ್ತಿದ್ದರೆ ಒಂದು ತುಂಡು ಹಸಿ ಅರಿಶಿ ಪ್ರತಿನಿತ್ಯ ಸೇವಿಸಿದರೆ ಒಳ್ಳೆಯದು. ಹಸಿ ಅರಿಶಿಣ ತಿಂದಾಗ ಪಿತ್ತರಸ ಉತ್ಪತ್ತಿ ಹೆಚ್ಚಾಗಿ ಜೀರ್ಣಕ್ರಿಯೆ ಚೆನ್ನಾಗಿ ನಡೆಯುವುದು.
ಎದೆಯುರಿ, ಹೊಟ್ಟೆಯ ಸಮಸ್ಯೆ ಕಡಿಮೆಯಾಗುವುದು
ಕೆಲವರಲ್ಲಿ ಎದೆಯುರಿ , ಅಲ್ಸರ್ ಮುಂತಾದ ಸಮಸ್ಯೆ ಇರುತ್ತದೆ. ಈ ಸಮಸ್ಯೆ ಇರುವವರು ಹಸಿ ಅರಿಶಿಣ ಸೇವಿಸುವುದು ಒಳ್ಳೆಯದು.
ತ್ವಚೆ ಹೊಳಪು ಹೆಚ್ಚಲು
ನಿಮ್ಮ ತ್ವಚೆಯನ್ನು ಆಂತರಿಕವಾಗಿ ಪೋಷಣೆ ಮಾಡಲು, ನೈಸರ್ಗಿಕವಾಗಿ ತ್ವಚೆಯ ಹೊಳಪು ಹೆಚ್ಚಲು ಬೆಳಗ್ಗೆ ಎದ್ದಾಗ ಒಂದು ಚಿಕ್ಕ ತುಂಡು ಅರಿಶಿಣ ಬಳಸುವುದು ಒಳ್ಳೆಯದು. ಇದರಿಂದ ತ್ವಚೆ ಕಾಂತಿ ಹೆಚ್ಚುವುದು.
ಗಾಯ ಒಣಗಿಸುತ್ತದೆ
ದೇಹದಲ್ಲಿ ಏನಾದರೂ ಗಾಯವಾಗಿದ್ದರೆ, ಸರ್ಜರಿಯಾಗಿದ್ದರೆ ಗಾಯ ಬೇಗನೆ ಒಣಗಲು ಹಸಿ ಅರಿಶಿಣ ಬಳಸುವುದು ಒಳ್ಳೆಯದು.
ರಕ್ತವನ್ನು ಶುದ್ಧೀಕರಿಸುತ್ತದೆ
ಅರಿಶಿಣ ದೇಹದಲ್ಲಿರುವ ಕಶ್ಮಲವನ್ನು ದೇಹದಿಂದ ಹೊರ ಹಾಕುತ್ತದೆ. ಇದು ರಕ್ತ ಶುದ್ಧೀಕರಿಸುವುದರಲ್ಲಿ ಮಹತ್ವದ ಪಾತ್ರವಹಿಸುತ್ತದೆ. ರಕ್ತ ಅಲರ್ಜಿ, ರಕ್ತ ಹೆಪ್ಪುಗಟ್ಟುವುದು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.

ಒಣ ಅರಿಶಿಣ VS ಅರಿಶಿಣ ಪುಡಿ
ಅರಿಶಿಣವನ್ನು ಬೇಯಿಸಿ ಒಣಗಿಸಿ ನಂತರ ಅರಿಶಿಣ ಪುಡಿ ತಯಾರಿಸುವುದು ಆದ್ದರಿಂದ ಒಣ ಅರಿಶಿಣ ಹಾಗೂ ಅರಿಶಿಣ ಪುಡಿಯಲ್ಲಿ ಪೋಷಕಾಂಶದಲ್ಲಿ ವ್ಯತ್ಯಾಸವಿರಲ್ಲ. ಆದರೆ ಹೊರಗಡೆಯಿಂದ ಅರಿಶಿಣ ಖರೀದಿ ಮಾಡುವಾಗ ಅರಿಶಿಣ ಪುಡಿ ಕಲಬೆರಿಕೆಯಾಗಿರಲೂ ಸಾಧ್ಯತೆ ಇದೆ. ಆದ್ದರಿಂದ ನಂಬಿಕೆಗೆ ಅರ್ಹವಾದ ಅರಿಶಿಣ ಪುಡಿ ಮಾತ್ರ ಖರೀದಿಸಿ ಬಳಸಿ.

ಅರಿಶಿಣ ಕಲಬೆರಿಕೆಯಾಗಿದೆಯೇ ಎಂದು ತಿಳಿಯುವುದು ಹೇಗೆ?
ಟೆಸ್ಟ್ 1
ಸ್ವಲ್ಪ ಅರಿಶಿಣ ತೆಗೆದು ಅಂಗೈಗೆ ಹಾಕಿ ತಿಕ್ಕಿ, ಕೈಯಲ್ಲಿ ಹಳದಿ ಬಣ್ಣ ಗಾಢವಾಗಿದ್ದರೆ ಅದು ಶುದ್ಧವಾದ ಅರಿಶಿಣ ಎಂದು ಹೇಳಬಹುದು.
ಟೆಸ್ಟ್ 2
ಒಂದು ಲೋಟ ಬಿಸಿ ನೀರಿಗೆ 1 ಚಮಚ ಅರಿಶಿಣ ಪುಡಿ ಹಾಕಿ 15-20 ಸೆಕೆಂಡ್ ಬಿಡಿ, ಅರಿಶಿಣ ಕೆಳಗಡೆ ಹೋಗಿ ನಿಲ್ಲಬೇಕು. ನೀವು ಅರಿಶಿಣ ನೀರಿಗೆ ಹಾಕಿದ ತಕ್ಷಣ ಅದು ನೀರಿನಲ್ಲಿ ಸಂಪೂರ್ಣ ಕರಗಿದರೆ ಕಲಬೆರಿಕೆ ಎಂದರ್ಥ.



Click it and Unblock the Notifications