Latest Updates
-
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್!
ಎಚ್ಚರ, ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪಪ್ಪಾಯಿ ಸೇವನೆ ಅಪಾಯಕಾರಿ!
ಜನರು ಚಳಿಗಾಲದಲ್ಲಿ ಪಪ್ಪಾಯಿಯನ್ನು ತಿನ್ನಲು ತುಂಬಾ ಇಷ್ಟಪಡುತ್ತಾರೆ ಏಕೆಂದರೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛವಾಗಿರಿಸುತ್ತದೆ. ಇದು ವಿಟಮಿನ್, ನಾರಿನಾಂಶ, ಖನಿಜಗಳ ಖಜಾನೆ ಎಂಬುದಂತೂ ಸತ್ಯ. ಇದರೊಂದಿಗೆ ಇದನ್ನು ತಿಂದರೆ ಹೊಟ್ಟೆ ತುಂಬಾ ಹೊತ್ತು ತುಂಬಿರುವುದರ ಜೊತೆಗೆ ತೂಕ ಕೂಡ ನಿಯಂತ್ರಣದಲ್ಲಿರುತ್ತದೆ. ಮಧುಮೇಹ, ಹೃದಯ ಕ್ಯಾನ್ಸರ್ ರೋಗಿಗಳಿಗೆ ಇದು ತುಂಬಾ ಪ್ರಯೋಜನಕಾರಿ.
ಆದರೆ, ಇದು ಕೆಲವರಿಗೆ ತುಂಬಾ ಹಾನಿಕಾರಕವಾಗಿದೆ. ಹಾಗಾದರೆ, ಪಪ್ಪಾಯಿ ತಿನ್ನುವುದು ಯಾರಿಗೆ ಒಳಿತಲ್ಲ ಎಂಬುದನ್ನು ತಿಳಿದುಕೊಳ್ಳೋಣ.
ಪಪ್ಪಾಯಿಯನ್ನು ಯಾರು ಸೇವಿಸಬಾರದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಗರ್ಭಿಣಿಯರು:
ಪಪ್ಪಾಯಿ ತಿನ್ನುವುದು ಗರ್ಭಿಣಿ ಮಹಿಳೆಯರಿಗೆ ವಿಷದಂತೆ ಪರಿಣಾಮ ಬೀರುವುದು. ಆದ್ದರಿಂದ ಗರ್ಭಿಣಿಯರಿಗೆ ಪಪ್ಪಾಯಿ ತಿನ್ನದಂತೆ ಸಲಹೆ ನೀಡಲಾಗುತ್ತದೆ. ಪಪ್ಪಾಯಿಯು ಲ್ಯಾಟೆಕ್ಸ್ ಅನ್ನು ಹೊಂದಿರುವುದರಿಂದ ಗರ್ಭಾಶಯದ ಸಂಕೋಚನವನ್ನು ಪ್ರಚೋದಿಸಬಹುದು ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಮಗು ಅಕಾಲಿಕವಾಗಿ ಜನಿಸಬಹುದು. ಜೊತೆಗೆ ಪಪ್ಪಾಯಿಯು ಪಾಪೈನ್ ಅನ್ನು ಹೊಂದಿದ್ದು, ಇದನ್ನು ದೇಹವು ಪ್ರೋಸ್ಟಗ್ಲಾಂಡಿನ್ ಎಂದು ತಪ್ಪಾಗಿ ಗ್ರಹಿಸಬಹುದು. ಇದರ ಮೂಲಕ ಕೃತಕವಾಗಿ ಹೆರಿಗೆ ನೋವನ್ನು ಉಂಟುಮಾಡಬಹುದು. ಪಪ್ಪಾಯಿ ತಿನ್ನುವುದರಿಂದ ಭ್ರೂಣವನ್ನು ಬೆಂಬಲಿಸುವ ಪೊರೆಯನ್ನು ದುರ್ಬಲಗೊಳ್ಳಬಹುದು.

ಕಿಡ್ನಿ ಸಮಸ್ಯೆ ಇರುವವರು:
ಕಿಡ್ನಿಯಲ್ಲಿ ಕಲ್ಲುಗಳ ಸಮಸ್ಯೆ ಇರುವವರು ಪಪ್ಪಾಯಿಯನ್ನು ತಿನ್ನಬಾರದು ಅಥವಾ ಕಡಿಮೆ ತಿನ್ನಬೇಕು. ತಜ್ಞರ ಪ್ರಕಾರ ಇದು ಕಲ್ಲಿನ ಸಮಸ್ಯೆಯನ್ನೂ ಹೆಚ್ಚಿಸಬಹುದು. ಅಷ್ಟೇ ಅಲ್ಲ, ಪಪ್ಪಾಯಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಕಿಡ್ನಿ ಸ್ಟೋನ್ ರೋಗಿಗಳಿಗೆ ತೊಂದರೆಯನ್ನುಂಟು ಮಾಡುತ್ತದೆ.

ಅಲರ್ಜಿ ಹೊಂದಿರುವವರು:
ಲ್ಯಾಟೆಕ್ಸ್ ಅಲರ್ಜಿಯಿಂದ ಬಳಲುತ್ತಿರುವ ಜನರು ಪಪ್ಪಾಯಿಯಿಂದ ದೂರವಿರಬೇಕು. ಪಪ್ಪಾಯಿ ತಿನ್ನುವುದು ಅವರಿಗೆ ಹಾನಿಕಾರಕ. ಪಪ್ಪಾಯಿಯಲ್ಲಿ ಚಿಟಿನೇಸ್ ಎಂಬ ಕಿಣ್ವವಿದೆ. ಈ ಕಿಣ್ವವು ಲ್ಯಾಟೆಕ್ಸ್ ಜೊತೆ ಪ್ರತಿಕ್ರಿಯಿಸಬಹುದು. ಇದರಿಂದ ಸೀನುವಿಕೆ, ಉಸಿರಾಟದ ತೊಂದರೆ, ಕೆಮ್ಮು, ಕಣ್ಣಿನಲ್ಲಿ ನೀರು ಬರುವುದು ಮುಂತಾದ ಸಮಸ್ಯೆ ಉಂಟಾಗಬಹದು. ಆದ್ದರಿಂದ ನಿಮಗೆ ಅಲರ್ಜಿ ಇದ್ದರೆ, ನಂತರ ಪಪ್ಪಾಯಿ ತಿನ್ನುವುದನ್ನು ತಪ್ಪಿಸಿ.

ರಕ್ತದೊತ್ತಡ ಸಮಸ್ಯೆಯಿರುವವರು:
ಬಿಪಿ ಅಥವಾ ರಕ್ತದೊತ್ತಡ ಸಮಸ್ಯೆ ಇರುವವರು ಪಪ್ಪಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನಬಾರದು. ತಜ್ಞರ ಪ್ರಕಾರ, ಪಪ್ಪಾಯಿಯನ್ನು ಅತಿಯಾಗಿ ತಿನ್ನುವುದರಿಂದ ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ. ಆದ್ದರಿಂದ ಹೈ ಬಿಪಿ ಅಥವಾ ಲೋ ಬಿಪಿ ಯಾವುದೇ ಸಮಸ್ಯೆ ಇರುವವರು ಇದರಿಂದ ದೂರವಿರುವುದು ಒಳಿತು.

ಜೀರ್ಣಕ್ರಿಯೆ ಸಮಸ್ಯೆಯಿರುವವರು:
ಯಾವುದೇ ಆದರೂ, ಮಿತಿಗಿಂತ ಹೆಚ್ಚು ತಿನ್ನುವುದು ದೇಹಕ್ಕೆ ಹಾನಿ ಮಾಡುತ್ತದೆ. ಪಪ್ಪಾಯಿಯ ವಿಷಯದಲ್ಲೂ ಇದೇ ಆಗಿದೆ. ಪಪ್ಪಾಯಿಯನ್ನು ಅತಿಯಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ಹದಗೆಡುತ್ತದೆ. ವಾಸ್ತವವಾಗಿ, ಪಪ್ಪಾಯಿಯಲ್ಲಿರುವ ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಹೋದರೆ, ಅದು ಹೊಟ್ಟೆ ನೋವು ಮತ್ತು ಉರಿಯುವ ಗ್ಯಾಸ್ ಸಮಸ್ಯೆಗೆ ಕಾರಣವಾಗಬಹುದು. ಪಪ್ಪಾಯಿಯಿಂದ ಮಲಬದ್ಧತೆಯನ್ನು ಹೋಗಲಾಡಿಸಬಹುದು, ಆದರೆ ಇದನ್ನು ಅತಿಯಾಗಿ ತಿನ್ನುವುದರಿಂದ ಅತಿಸಾರವೂ ಉಂಟಾಗುತ್ತದೆ.



Click it and Unblock the Notifications