ಮಕ್ಕಳಿಗೆ 3 ಗಂಟೆಗಿಂತ ಅಧಿಕ ಆನ್‌ಲೈನ್ ಕ್ಲಾಸ್ ಅಪಾಯಕಾರಿ: ಮಾನವ ಸಂಪನ್ಮೂಲ ಇಲಾಖೆ

ಮಾನವ ಸಂಪನ್ಮೂಲ ಇಲಾಖೆ (HRD) ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಆನ್ಲೈನ್ ತರಗತಿಗಳು ಪರದೆ ಸಮಯ (screen time) ಅಥವಾ ವಿದ್ಯಾರ್ಥಿ ತನ್ನ ಪಠ್ಯಗಳನ್ನು ಕಂಪ್ಯೂಟರ್ ಪರದೆಯ ಮೂಲಕ ಪಡೆಯುವ ಅವಧಿಯನ್ನು ದಿನಕ್ಕೆ ಗರಿಷ್ಟ ಮೂರು ಘಂಟೆಗಳಿಗೆ ಮಿತಿಗೊಳಿಸಬೇಕಾಗುತ್ತದೆ.

ಮಕ್ಕಳು ಕಂಪ್ಯೂಟರ್ ಪರದೆಯನ್ನು ವೀಕ್ಷಿಸುವ ಸಮಯ ಹೆಚ್ಚಾಗುವುದು ಯಾವಾಗಲೂ ಕಳವಳಕ್ಕೆ ಕಾರಣವಾಗಿದೆ, ಸಾಂಕ್ರಾಮಿಕ ರೋಗ ಉಳಿದೆಲ್ಲಾ ಕ್ಷೇತ್ರಗಳಿಗಿಂತ ಶೈಕ್ಷಣಿಕ ಕ್ಷೇತ್ರದ ಮೇಲೆ ಖಂಡಿತವಾಗಿಯೂ ಅತಿ ಹೆಚ್ಚಿನ ಪ್ರಭಾವ ಬೀರಿದೆ. ಇದರ ಪರಿಣಾಮವಾಗಿ ಇಂದು ಆನ್ಲೈನ್ ತರಗತಿಗಳು ಅನಿವಾರ್ಯವಾಗಿದ್ದು ಮಕ್ಕಳು ಪರದೆಯ ಮುಂದೆ ಪಾಠಗಳನ್ನು ಕಲಿಯುವಂತಾಗಿದೆ.

 Online Class For Kids

ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಅನಿರ್ದಿಷ್ಟ ಅವಧಿಗೆ ಮುಚ್ಚಲ್ಪಟ್ಟಿರುವುದರಿಂದ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಜೂಮ್ ಕಾಲ್ ಸೆಷನ್‌ಗಳ ಮೂಲಕ ಸಂಪರ್ಕ ಸಾಧಿಸುತ್ತಿದ್ದಾರೆ. ನಿಯಮಿತ ತರಗತಿಗಳಿಂದ ಆನ್‌ಲೈನ್ ತರಗತಿಗಳಿಗೆ ಸ್ಥಳಾಂತರಗೊಳ್ಳಬೇಕಾದರೆ ಹಲವಾರು ಸವಾಲುಗಳನ್ನು ಎದುರಿಸಬೇಕಾಗಿದೆ. ಇದರಲ್ಲಿ ಮಕ್ಕಳ ಆರೋಗ್ಯವನ್ನು ಪರಿಗಣಿಸಿದಾಗ ಮಕ್ಕಳು ದಿನಕ್ಕೆಷ್ಟು ಹೊತ್ತು ಪರದೆಯನ್ನು ವೀಕ್ಷಿಸಬೇಕು ಎಂಬ ಪ್ರಶ್ನೆ ಅತಿ ಹೆಚ್ಚಿನ ಮಹತ್ವ ಪಡೆಯುತ್ತದೆ.

ಸರ್ಕಾರದಿಂದ ಹೊರಡಿಸಲ್ಪಟ್ಟ ಮಾರ್ಗಸೂಚಿಗಳು:

ಸರ್ಕಾರದಿಂದ ಹೊರಡಿಸಲ್ಪಟ್ಟ ಮಾರ್ಗಸೂಚಿಗಳು:

ಈ ಸವಾಲುಗಳನ್ನು ಎದುರಿಸಲು, ಕೇಂದ್ರ ಮಾನವ ಸಂಪನ್ಮೂಲ ಇಲಾಖೆ (HRD) ಸಚಿವಾಲಯವು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳ ಅವಧಿಗಳಿಗೆ ಗರಿಷ್ಠ ಸಮಯದ ಮಿತಿಯನ್ನು ಹೇರಲು ಮತ್ತು ಅಧಿವೇಶನಗಳ ಸಂಖ್ಯೆಯನ್ನು ಮಿತಿಗೊಳಿಸಲು ಸೂಚನೆಗಳನ್ನು ಹೊರಡಿಸಿದೆ. ಮಕ್ಕಳು ತಮ್ಮ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಸಾಧನಗಳ ಮುಂದೆ ವಿನಿಯೋಗಿಸುವ ಸಮಯವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಶಾಲೆಗಳು ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಸ್ಥಗಿತಗೊಳ್ಳುತ್ತಿರುವುದರಿಂದ, ಸರ್ಕಾರದ ಈ ಮಾರ್ಗಸೂಚಿಗಳು ವಿದ್ಯಾರ್ಥಿಗಳಿಗೆ ಆಫ್‌ಲೈನ್ ಮತ್ತು ಆನ್‌ಲೈನ್ ಗಂಟೆಗಳ ನಡುವೆ ಹೆಚ್ಚು ಅಗತ್ಯವಿರುವ ಸಮತೋಲನವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ.

ಮಾನವ ಸಂಪನ್ಮೂಲ ಸಚಿವಾಲಯದ ಮಾರ್ಗಸೂಚಿಗಳು

ಮಾನವ ಸಂಪನ್ಮೂಲ ಸಚಿವಾಲಯದ ಮಾರ್ಗಸೂಚಿಗಳು

ಆನ್‌ಲೈನ್ ತರಗತಿಗಳಿಗೆ ಪರದೆಯ ಸಮಯವನ್ನು ಮಿತಿಗೊಳಿಸಲು ಮಾನವ ಸಂಪನ್ಮೂಲ ಸಚಿವಾಲಯದ ಮಾರ್ಗಸೂಚಿಗಳು

ಕೇಂದ್ರ ಮಾನವ ಸಂಪನ್ಮೂಲ ಇಲಾಖೆ (HRD) ಸಚಿವಾಲಯದ ಈ ಮಾರ್ಗಸೂಚಿಗಳನ್ನು ‘ಪ್ರಜ್ಞತಾ' ಎಂದು ಕರೆಯಲಾಗುತ್ತದೆ ಮತ್ತು ಒಂದರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳು ದಿನಕ್ಕೆ 2 ಕ್ಕಿಂತಲೂ ಹೆಚ್ಚಿನ ಆನ್‌ಲೈನ್ ತರಗತಿಗಳನ್ನು ಹೊಂದಿರಬಾರದು ಎಂದು ಶಿಫಾರಸು ಮಾಡಿದೆ, ಪ್ರತಿಯೊಂದು ತರಗತಿಯೂ ಸುಮಾರು 30-45 ನಿಮಿಷಗಳವರೆಗೆ ಇರಬಹುದು. IX ರಿಂದ XII ತರಗತಿಗಳಿಗೆ, HRD ಸಚಿವಾಲಯವು ತಲಾ 45 ನಿಮಿಷಗಳ ಅವಧಿಯವರೆಗಿನ ನಾಲ್ಕು ಆನ್‌ಲೈನ್ ತರಗತಿಗಳನ್ನು ಒದಗಿಸುವಂತೆ ಶಿಫಾರಸು ಮಾಡಿದೆ, ಅಂದರೆ ಇದು ಒಟ್ಟಾರೆಯಾಗಿ ದಿನಕ್ಕೆ 3 ಗಂಟೆಗಳ ತರಗತಿಗಳಿಗೆ ಸಮನಾಗಿರುತ್ತದೆ. ಪೂರ್ವ-ಪ್ರಾಥಮಿಕ ತರಗತಿಗಳಲ್ಲಿನ ಮಕ್ಕಳು ತಮ್ಮ ಆನ್‌ಲೈನ್ ತರಗತಿಯೊಂದರಲ್ಲಿ 30 ನಿಮಿಷಗಳಿಗಿಂತ ಹೆಚ್ಚು ಸಮಯವನ್ನು ಕಳೆಯಬಾರದು ಎಂದು ಮಾರ್ಗಸೂಚಿಗಳು ಆದೇಶಿಸುತ್ತವೆ.

ಮಕ್ಕಳ ಮೇಲಾಗುವ ಪರಿಣಾಮಗಳು

ಮಕ್ಕಳ ಮೇಲಾಗುವ ಪರಿಣಾಮಗಳು

ಮಾರ್ಗಸೂಚಿಗಳು ಇದೇ ಅಂತಿಮ ಎಂದು ಖಚಿತವಾಗಿ ಹೇಳಿಲ್ಲವಾದರೂ, ಈ ಸಮಯಗಳು ಮಾತ್ರ ಖಂಡಿತವಾಗಿಯೂ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ಪೋಷಕರಿಗೆ ಭರವಸೆಯ ಕಿರಣವಾಗಿ ಗೋಚರಿಸಿವೆ.

ಅವರು ತಮ್ಮ ಮಕ್ಕಳ ಪರದೆಯ ಸಮಯವನ್ನು ಅನಿವಾರ್ಯವಾಗಿ ಹೆಚ್ಚಿಸಿದರೆ ಇವರ ಮಕ್ಕಳ ದೃಷ್ಟಿ ಮತ್ತು ಒಟ್ಟಾರೆ ಕಲಿಕಾ ಸಾಮರ್ಥ್ಯದ ಮೇಲೆ ಬೀರುವ ಒತ್ತಡ ಮತ್ತು ತನ್ಮೂಲಕ ಎದುರಾಗುವ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ತರಗತಿಗಳು ಆನ್‌ಲೈನ್‌ಗೆ ತೆರಳಿದಂತೆ, ಮಕ್ಕಳಲ್ಲಿ ಎದುರಾಗುವ ತೊಂದರೆಗಳನ್ನು ವಿವರಿಸಿ ನೀಡಲಾಗುವ ಸಾಮಾನ್ಯ ದೂರುಗಳಲ್ಲಿ ತಲೆನೋವು ಮತ್ತು ಒಣಗುವ ಮತ್ತು ತುರಿಸುವ ಕಣ್ಣುಗಳು ಸೇರಿವೆ.

ಆನ್‌ಲೈನ್ ತರಗತಿಗಳನ್ನು ನಿಗದಿಪಡಿಸುವ ಮೊದಲು ಸ್ಮಾರ್ಟ್‌ಫೋನ್ ಸಾಧನಗಳು / ಗ್ಯಾಜೆಟ್‌ಗಳ ಲಭ್ಯತೆ ಮತ್ತು ವಿದ್ಯಾರ್ಥಿಗಳಿಗೆ ಸ್ಥಿರವಾದ ಇಂಟರ್ನೆಟ್ ಸಂಪರ್ಕದ ಲಭ್ಯತೆಗಳ ಬಗ್ಗೆ ಸರಿಯಾದ ಸಮೀಕ್ಷೆಯನ್ನು ಪೂರ್ಣಗೊಳಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸಚಿವಾಲಯ ನಿರ್ದೇಶನ ನೀಡಿದೆ.

ಭೀಕರ ಕಂಪ್ಯೂಟರ್ ದೃಷ್ಟಿ ಸಿಂಡ್ರೋಮ್

ಭೀಕರ ಕಂಪ್ಯೂಟರ್ ದೃಷ್ಟಿ ಸಿಂಡ್ರೋಮ್

(The dreaded computer vision syndrome)

ಇದುವರೆಗೆ ಕಂಪ್ಯೂಟರ್ ಪರದೆಯನ್ನು ಹೆಚ್ಚು ಕಾಲ ವೀಕ್ಷಿಸಿ ಕೆಲಸ ಮಾಡದ ವ್ಯಕ್ತಿಗಳಿಗೆ, ಒಮ್ಮೆಲೇ ತಮ್ಮ ನಿತ್ಯದ ಕೆಲಸವನ್ನು ಹೆಚ್ಚಿನ ಸಮಯದವರೆಗೆ ಪರದೆಯನ್ನು ನೋಡುತ್ತಾ ಪೂರ್ಣಗೊಳಿಸುವ ಹೊರೆಯನ್ನು ಹೇರಿದಾಗ, ಅದು ದೃಷ್ಟಿ ಮಂದವಾಗುವಂತ ಒಂದು ಬಗೆಯ ಆಯಾಸಕ್ಕೆ ಕಾರಣವಾಗಬಹುದು.

ಡಿಜಿಟಲ್ ಐ ಸ್ಟ್ರೈನ್ (digital eye strain) ಎಂದೂ ಕರೆಯಲ್ಪಡುವ ಇದು ತಲೆನೋವು, ಒಣಗಿದ ಕಣ್ಣುಗಳು, ಮಸುಕಾದ ಅಥವಾ ಎರಡೆರಡು ಕಾಣುವ ದೃಷ್ಟಿ ಮತ್ತು ಕಣ್ಣುಗಳಲ್ಲಿ ಉರಿಯುಂಟಾಗಲು ಕಾರಣವಾಗುತ್ತದೆ.

ಇಡೀ ದಿನ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಸಮಯದ ಕಾರಣದಿಂದಾಗಿ ಇದು ಕುತ್ತಿಗೆಯ ಒತ್ತಡ ಮತ್ತು ಬೆನ್ನುನೋವಿಗೂ ಕಾರಣವಾಗಬಹುದು.

English summary

Maximum Screen Time Should Be 3 Hours per Day for Online Classes: HRD Ministry

HRD Says Only 3 hours is the best for online screening for kids, here are more information...
X
Desktop Bottom Promotion