Latest Updates
-
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು!
ನೋರೋವೈರಸ್ ಎಂದರೇನು? ಇದರ ಲಕ್ಷಣಗಳೇನು, ತಡೆಗಟ್ಟುವುದು ಹೇಗೆ?
ಇಂಗ್ಲೆಂಡ್‌ನಲ್ಲಿ ನೋರೋವೈರಸ್ ಕಂಡು ಬಂದಿದ್ದು, ಇದರ ಬಗ್ಗೆ ಎಚ್ಚರವಹಿಸುವಂತೆ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಕಳೆದ 4-5 ವಾರಗಳಿಂದ ಈ ವೈರಸ್ ಹೆಚ್ಚಾಗಿ ಕಂಡು ಬಂದಿದ್ದು, ಬೇಸಿಗೆಯಲ್ಲಿ ಈ ವೈರಸ್ ಹೆಚ್ಚಾಗಿ ಹರಡುವುದು ಎಂಬುವುದಾಗಿ PHE(Public Health England)ಹೇಳಿದೆ.

ಪ್ರೀಸ್ಕೂಲ್ ಹಾಗೂ ನರ್ಸರಿ ಮಕ್ಕಳ ಮೂಲಕ ಇದು ವೇಗವಾಗಿ ಹರಡುತ್ತಿದ್ದು ಅವರಿಂದಲೇ ಇತರ ವಯಸ್ಸಿನವರಿಗೂ ಹರಡುತ್ತಿದೆ. ಈ ನೋರೋವೈರಸ್ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ಅನುಸರಿಸುವಂತೆ PHE ತನ್ನ ನಾಗರಿಕರಿಗೆ ಸೂಚಿಸಿದೆ. ನೋರೋವೈರಸ್ ಎಂದರೇನು? ಇದು ಹೇಗೆ ಹರಡುತ್ತಿದೆ? ತಡೆಗಟ್ಟುವುದು ಹೇಗೆ ಎಂದು ನೋಡೋಣ ಬನ್ನಿ:

ನೋರೋವೈರಸ್ ಎಂದರೇನು?
ಇದು ತುಂಬಾ ಬೇಗನೆ ಹರಡುವ ಸೋಂಕು ಆಗಿದ್ದು ಇದು ತಾಗಿದರೆ ವಾಂತಿ-ಬೇಧಿ ಸಮಸ್ಯೆ ಕಂಡು ಬರುವುದು. ಇದು ಒಬ್ಬ ವ್ಯಕ್ತಿಗೆ ಬಂದರೆ ಕೆಲವೇ ದಿನಗಳಲ್ಲಿ ಆ ವ್ಯಕ್ತಿಯಿಂದ ಇತರ ಜನರಿಗೆ ಹರಡುವುದು. ಈ ಸೋಂಕು ತಗುಲಿ ವಾಂತಿ ಕಂಡು ಬಂದರೆ ಸ್ವಲ್ಪ ಅಪಾಯಕಾರಿ, ಕೂಡಲೇ ಚಿಕಿತ್ಸೆ ನೀಡಬೇಕಾಗುವುದು.

ಇದು ಹರಡುವುದು ಹೇಗೆ?
ನೋರೋವೈರಸ್ ಪ್ರಮುಖವಾಗಿ ನೀರು ಮತ್ತು ಆಹಾರದ ಮೂಲಕ ಹರಡುತ್ತದೆ ಎಂದು ಸಿಡಿಸಿ ಹೇಳಿದೆ.
* ಸೋಂಕು ತಗುಲಿದ ವ್ಯಕ್ತಿ ಆಹಾರವನ್ನು ಬರಿಗೈಯಿಂದ ಮುಟ್ಟಿದಾಗ ಆ ಸೋಂಕು ಆಹಾರಕ್ಕೆ ಹರಡುವುದು, ಅವುಗಳನ್ನು ಬೇರೆಯವರು ತಿಂದಾಗ ಅವರಿಗೆ ಈ ಸೋಂಕು ಹರಡುವುದು.
* ಸೋಂಕಿತರು ವಾಂತಿ ಮಾಡಿದಾಗ ವೈರಸ್‌ನ ಚಿಕ್ಕ ಕಣ ಗಾಳಿಯಲ್ಲಿರುತ್ತದೆ, ನಂತರ ಅದು ಆಹಾರ ಅಥವಾ ನೀರಿನ ಮೇಲೆ ಕೂರುತ್ತದೆ.
* ಸೋಂಕಿತ ವ್ಯಕ್ತಿ ನೀರಿನಲ್ಲಿ ವಾಂತಿ ಮಾಡಿದಾಗ ಅಥವಾ ಮಲ ವಿಸರ್ಜಿಸಿದಾಗ ಆ ನೀರಿನಲ್ಲಿಯೂ ಇರುವುದು
* ನೀರಿಗೆ ಕ್ಲೋರಿನ್ ಹಾಕದೇ ಇದ್ದರೆ ಆ ನೀರಿನ ಮೂಲಕ ಕೂಡ ಹರಡುವುದು.

ನೋರೋವೈರಸ್ ಲಕ್ಷಣಗಳು
* ಬೇಧಿ
*ವಾಂತಿ
*ಹೊಟ್ಟೆ ನೋವು
ಇದರ ಜೊತೆಗೆ
*ಜ್ವರ
* ತಲೆನೋವು
*ಮೈಕೈ ನೋವು ಕಂಡು ಬರುವುದು.
ವೈರಸ್ ಸೋಂಕಿ 12-48 ಗಂಟೆಗಳ ಒಳಗಾಗಿ ರೋಗ ಲಕ್ಷಣಗಳು ಕಂಡು ಬರುವುದು, ಕೆಲವರು 1-3 ದಿನಗಲಲ್ಲಿ ಚೇತರಿಸಿದರೆ ಇನ್ನು ಕೆಲವರಿಗೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ನಿತ್ರಾಣವಿರುತ್ತದೆ.

ತಡೆಗಟ್ಟುವುದು ಹೇಗೆ
* ಆಹಾರ ಹಾಗೂ ನೀರಿನ ಸ್ವಚ್ಛತೆ ಕಡೆಗೆ ಗಮನ ಹರಿಸಬೇಕು
* ಬಿಸಿ -ಬಿಸಿಯಾದ ಆಹಾರ ಸೇವಿಸಿ
* ನಿಮಗೆ ಅನಾರೋಗ್ಯವಿದ್ದಾಗ ಬೇರೆಯವರಿಗೆ ಆಹಾರ ತಯಾರಿಸಬೇಡಿ ಅಥವಾ ಆರೈಕೆ ನಾಡಬೇಡಿ
* ನೆಲವನ್ನು ಡಿಸ್‌ಇನ್‌ಫೆಕ್ಟ್ ಬಳಸಿ ಸ್ವಚ್ಛವಾಗಿಡಿ
* ಬಟ್ಟೆಗಳು ಶುಭ್ರವಾಗಿರಲಿ.

ನೋರೋವೈರಸ್‌ಗೆ ಚಿಕಿತ್ಸೆ
* ಸಿಡಿಸಿ ಪ್ರಕಾರ ನೋರೋವೈರಸ್‌ಗೆ ಅಂತಲೇ ಪ್ರತ್ಯೇಕ ಚಿಕಿತ್ಸೆಯಿಲ್ಲ. ವಾಂತಿ-ಬೇಧಿಗೆ ನೀಡುವ ಚಿಕಿತ್ಸೆಯನ್ನೇ ನೀಡಲಾಗುವುದು.
* ಸೋಂಕಿತ ವ್ಯಕ್ತಿ ಸಾಕಷ್ಟು ನೀರು ಕುಡಿಯಬೇಕು ಇದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದನ್ನು ತಡೆಗಟ್ಟಬಹುದು.
* ತುಂಬಾ ನಿತ್ರಾಣದಲ್ಲಿರುವವರಿಗೆ ಗ್ಲೂಕೋಸ್ ಡ್ರಿಪ್ ನೀಡಲಾಗುವುದು.



Click it and Unblock the Notifications