Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ವೇಗವಾಗಿ ಹರಡುವ C.1.2 ರೂಪಾಂತರ : ಇದರ ಲಕ್ಷಣಗಳೇನು? ಭಾರತದಲ್ಲಿ ಈ ವೈರಸ್ ಹರಡಿದೆಯೇ?
2019 ಡಿಸೆಂಬರ್‌ನಲ್ಲಿ ಈ ಕೊರೊನಾ ಎಂಬ ಹೊಸ ವೈರಸ್ ಚೀನಾದ ವುಹಾನ್‌ನಲ್ಲಿ ಕಂಡು ಬಂತು. ಅದು ಬಂದಾಗ ಇದೇನಿದು ವೈರಸ್, ಇದೆಷ್ಟು ಅಪಾಯಕಾರಿ ಎಂಬುವುದು ವಿಜ್ಞಾನಿಗಳಿಗೂ ಗೊತ್ತಿರಲಿಲ್ಲ, ಆದರೆ ಬಂದ ಒಂದು ತಿಂಗಳ ಒಳಗಾಗಿ ವುಹಾನ್‌ಗೆ ಬಂದ ಪರಿಸ್ಥಿತಿ ನೋಡಿ ಈ ವೈರಸ್ ಎಷ್ಟು ಭೀಕರ ಎಂಬುವುದು ಜಗತ್ತಿಗೆ ಗೊತ್ತಾಯಿತು, 2020ರಲ್ಲಿ ಇಡೀ ವಿಶ್ವವನ್ನೇ ಈ ವೈರಸ್ ಸ್ತಬ್ಧ ಮಾಡಿತು. 2021ರಲ್ಲಿ ಲಸಿಕೆ ಬಂದರೂ ವೈರಸ್ ರೂಪಾಂತರವಾಗಿ ಕಾಡುತ್ತಿದೆ.
C.1.2 ಎಂಬ ಹೊಸ ರೂಪಾಂತರ ದಕ್ಷಿಣ ಆಫ್ರಿಕದಲ್ಲಿ ಮೇ ತಿಂಗಳಿನಲ್ಲಿ ಕಾಣಿಸಿಕೊಂಡಿತ್ತು. ಈ ವೈರಸ್ ವರ್ಷದಲ್ಲಿ 41.8 ಬಾರಿ ರೂಪಾಂತರ ಹೊಂದಬಹುದು ಹಾಗೂ ಈಗ ಇರುವ ವೈರಸ್‌ಗಿಂತ 1.7 ಪಟ್ಟು ಹೆಚ್ಚು ವೇಗದಲ್ಲಿ ಹರಡುವ ಸಾಮರ್ಥ್ಯ ಈ ವೈರಸ್‌ಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಏನಿದು C.1.2 ರೂಪಾಂತರ?
ಈ ರೂಪಾಂತರ ದಕ್ಷಿಣ ಆಫ್ರಿಕದಲ್ಲಿ ಮೇ ತಿಂಗಳಿನಲ್ಲಿ ಪತ್ತೆಯಾಯಿತು. ಇದು C.1ರಿಂದ ರೂಪಾಂತರವಾದ ವೈರಸ್ ಆಗಿದೆ. ದಕ್ಷಿಣ ಅಮೆರಿಕದಲ್ಲಿ ಕೊರೊನಾ ಮೊದಲನೇ ಅಲೆಗೆ ಈ ವೈರಸ್ ಕಾರಣವಾಗಿತ್ತು.

ಯಾವೆಲ್ಲಾ ದೇಶಗಳಲ್ಲಿ ಈ ವೈರಸ್ ಪತ್ತೆಯಾಗಿದೆ?
C.1.2 ವೈರಸ್ ಮೊದಲಿಗೆ ದಕ್ಷಿಣ ಆಫ್ರಿಕದ ಎಪುಮಲಂಗ ಮತ್ತು ಗೌಟೆಂಗ್ ಪ್ರಾಂತ್ಯಗಳಲ್ಲಿ ಕಂಡು ಬಂತು. ಈ ವೈರಸ್ ಪತ್ತೆಯಾದ ಕೆಲವೇ ದಿನಗಳಲ್ಲಿ ದಕ್ಷಿಣ ಆಫ್ರಿಕದ ಬಹುತೇಕ ಭಾಗಗಳಲ್ಲಿ ಕಂಡು ಬಂತು. ನಂತರ ಈ ವೈರಸ್ ಚೀನಾದಲ್ಲಿ ಪತ್ತೆಯಾಯಿತು. ಕಾಂಗೋ, ಮಾರಿಷಸ್, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಪೋರ್ಚುಗಲ್ ಮತ್ತು ಸ್ವಿಜರ್ಲ್ಯಾಂಡ್‌ಗಳಲ್ಲಿ ಕಂಡು ಬಂದಿದೆ.

ಈ ರೂಪಾಂತರ ಎಷ್ಟು ಅಪಾಯಕಾರಿ?
ಇತರ ರೂಪಾಂತರಗಳಿಗೆ ಹೋಲಿಸಿದರೆ ಇದು ಸ್ವಲ್ಪ ಅಪಾರಿಯಾದ ವೈರಸ್ ಆಗಿದೆ. ಈ ರೂಪಾಂತರ ವೈರಸ್‌ನಿಂದ ಉಂಟಾಗುವ ಬೇರೆ ರೂಪಾಂತರದಿಂದ ತೊಂದರೆಯಾಗಬಹುದೇ ಎಂಬುವುದರ ಬಗ್ಗೆ ಆತಂಕವಿದ್ದು ಈ ಕುರಿತು ಸಂಶೋಧನೆಗಳು ನಡೆಯುತ್ತಿವೆ.

ಇದು ಎಷ್ಟು ವೇಗವಾಗಿ ರೂಪಾಂತರವಾಗುವುದು?
C.1.2 ವೈರಸ್ 41.8 ರೂಪಾಂತರವಾಗುವುದು ಎಂದು ಅಧ್ಯಯನ ಹೇಳಿದೆ. ಈಗಿರುವ ರೂಪಾಂತರಕ್ಕಿಂತ 1.7 ಪಟ್ಟು ವೇಗವಾಗಿ, ಮೊದಲು ಪತ್ತೆಯಾದ ಕೊರೊನಾ ವೈರಸ್‌ಗಿಂತ 1.8 ಪಟ್ಟು ವೇಗವಾಗಿ ಹರಡುವುದು. ಆಲ್ಫಾ, ಬೇಟಾ, ಗಾಮ ಇವುಗಳಿಗಿಂತಲೂ ವೇಗವಾಗಿ ಈ ವೈರಸ್ ಹರಡುವುದು.

ಲಕ್ಷಣಗಳೇನು?
C.1.2 ವೈರಸ್ ತಗುಲಿದಾಗ ಇತರ ಕೊರೊನಾ ಲಕ್ಷಣಗಳಿಗಿಂತ ಭಿನ್ನವಾದ ಯಾವೆಲ್ಲಾ ರೋಗ ಲಕ್ಷಣಗಳು ಕಾಣುತ್ತಿವೆ ಎಂಬುವುದರ ಬಗ್ಗೆ ಅಧ್ಯಯನ ನಡೆಯುತ್ತಿದೆ, ಇದು ತಗುಲಿದಾಗ ಶೀತ, ವಿಪರೀತ ಕೆಮ್ಮು, ಸ್ನಾಯು ಸೆಳೆತ, ಕಣ್ಣು ಕೆಂಪಾಗುವುದು, ಬೇಧಿ ಮುಂತಾದ ಸಮಸ್ಯೆ ಕಂಡು ಬರುವುದು.
ಭಾರತದಲ್ಲಿ ಈ ರೂಪಾಂತರ ವೈರಸ್ ಹರಡಿದೆಯೇ?
ಭಾರತದಲ್ಲಿ C.1.2 ರೂಪಾತರ ಇದುವರೆಗೆ ಕಂಡು ಬಂದಿಲ್ಲ. ಭಾರತದಲ್ಲಿ ಈಗ ಕಂಡು ಬರುತ್ತಿರುವುದು ಡೆಲ್ಟಾ ಪ್ಲಸ್ ರೂಪಾಂತರವಾಗಿದೆ.



Click it and Unblock the Notifications
