Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಖ್ಯಾತ ಪಾಪ್ ಸ್ಟಾರ್ ಜಸ್ಟೀನ್ ಬೀಬರ್‌ಗೆ ರ‍್ಯಾಂಸೇ ಹಂಟ್ ಸಿಂಡ್ರೋಮ್ ಕಾಯಿಲೆ, ಏಕೆ ಬರುತ್ತದೆ, ಲಕ್ಷಣಗಳೇನು?
ಖ್ಯಾತ ಪಾಪ್ ಸ್ಟಾರ್ ಜಸ್ಟೀನ್ ಬೀಬರ್ ತನಗೆ ರ‍್ಯಾಂಸೇ ಹಂಟ್ ಸಿಂಡ್ರೋಮ್ ಕಾಯಿಲೆ ಇರುವುದಾಗಿ ಹೇಳಿಕೊಂಡಿದ್ದಾರೆ. ಈ ಕಾರಣದಿಂದಾಗಿ ತಾವು ಒಪ್ಪಿಕೊಂಡಿರುವ ಶೋಗಳನ್ನು ರದ್ದು ಪಡಿಸಿರುವ ವಿಷಯವನ್ನೂ ತಿಳಿಸಿದ್ದಾರೆ. ಇವರಿಗೆ ಬಂದಿರುವ ಕಾಯಿಲೆಯನ್ನು ಸಾಮಾನ್ಯ ಭಾಷೆಯಲ್ಲಿ ಪಾರ್ಷಿಯಲ್ ಫೇಶಿಯಲ್ ಪ್ಯಾರಲಿಸಿಸ್ ಅಂದ್ರೆ ಭಾಗಶಃ ಮುಖದ ಪಾರ್ಶ್ವವಾಯು ಎಂದು ಕರೆಯಲಾಗುವುದು.

28 ವರ್ಷದ ಈ ಗಾಯಕ ತನ್ನ ಅಭಿಮಾನಿಗಳಿಗೆ ತನ್ನ ಕಾಯಿಲೆಗೆ ಬಗ್ಗೆ ವೀಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶೋ ಕ್ಯಾನ್ಸಲ್ ಮಾಡಿದ್ದಕ್ಕೆ ಕಾರಣ ತಿಳಿಸಿದ ಜಸ್ಟಿನ್ ಬೀಬರ್‌ಗೆ
ಜಸ್ಟಿನ್ ಬೀಬರ್ ಅವರ ಶೋಗಳನ್ನು ಕ್ಯಾನ್ಸಲ್ ಮಾಡಲಾಗಿತ್ತು, ಇದು ಅವರ ಅಭಿಮಾನಿಗಳಲ್ಲಿ ಅಸಮಧಾನ ಉಂಟು ಮಾಡಿತ್ತು, ಆದರೆ ತಾನು ಏಕೆ ಶೋಗಳನ್ನು ಕ್ಯಾನ್ಸಲ್ ಮಾಡಿದೆ ಎಂಬುವುದರ ಬಗ್ಗೆ ತಮ್ಮ ಅಭಿಮಾನಿಗಳಿಗೆ ಸ್ಪಷ್ಟಪಡಿಸಿದ್ದಾರೆ. ಈಗ ಅವರಿಗೆ ದೈಹಿಕವಾಗಿ ಶೋ ನೀಡಲು ಸಾಧ್ಯವಾಗದೇ ಇರುವ ಕಾರಣದಿಂದಾಗಿ ಕ್ಯಾನ್ಸಲ್ ಮಾಡಲಾಯಿತು ಎಂದು ತಿಳಿಸಿದ್ದಾರೆ.
ಮುಖದ ಒಂದು ಭಾಗದಲ್ಲಿ ಯಾವುದೇ ಚಲನೆ ಇಲ್ಲದಿರುವುದು ಕೂಡ ಆ ವೀಡಿಯೋದಲ್ಲಿ ತೋರಿಸಿದ್ದಾರೆ.
ಜಸ್ಟಿನ್ ಬೀಬರ್‌ಗೆ ಕಾಣಿಸಿರುವ ಆರೋಗ್ಯ ಸಮಸ್ಯೆಗೆ ವೇರಿಸೆಲ್ಲಾ ಜೋಸ್ಟರ್ ವೈರಸ್ (varicella zoster virus) ಕಾರಣವಾಗಿದೆ. ಹರ್ಪೀಸ್ ಹಾಗೂ ಚಿಕನ್‌ಪಾಕ್ಸ್‌ಗೂ ಇದೇ ವೈರಸ್ ಕಾರಣವಾಗಿದೆ.
ಚಿಕ್ಕಂದಿನಲ್ಲಿ ಚಿಕನ್‌ಪಾಕ್ಸ್ ಬಂದಿದ್ದರೆ ವ್ಯಕ್ತಿಯಲ್ಲಿ ಈ ವೈರಸ್ ಮತ್ತೆ ಪಾರ್ಷಿಯಲ್ ಫೇಶಿಯಲ್ ಪ್ಯಾರಲಿಸಿಸ್ ಉಂಟು ಮಾಡುವ ಸಾಧ್ಯತೆ ಇದೆ.

ಪಾರ್ಷಿಯಲ್ ಫೇಶಿಯಲ್ ಪ್ಯಾರಲಿಸಿಸ್ ಲಕ್ಷಣಗಳು
ಈ ಕಾಯಿಲೆ ಬಂದವರಿಗೆ ಮುಖದ ಒಂದು ಭಾಗ ಚಲನೆ ಇಲ್ಲವಾಗುವುದು. ತಿನ್ನಲು, ಕಣ್ಣು ಮುಚ್ಚಲು ತೊಂದರೆ ಉಂಟಾಗುವುದು. ಈ ವೈರಸ್‌ನಿಂದಾಗಿ ಕಿವಿ, ನಾಲಗೆ , ಬಾಯಿಯಲ್ಲಿ ಗುಳ್ಳೆಗಳು ಕಂಡು ಬರುವುದು, ಕಿವಿ ನೋವು, ವರ್ಟಿಗೋ ಸಮಸ್ಯೆ ಕೂಡ ಉಂಟಾಗುತ್ತದೆ.
ಕೆಲವರಿಗೆ ಕಣ್ಣು ಒಣಗುವುದು, ರುಚಿ ಗೊತ್ತಾಗದೇ ಇರುವುದು ಕೂಡ ಉಂಟಾಗುತ್ತೆ.

ಪಾರ್ಷಿಯಲ್ ಫೇಶಿಯಲ್ ಪ್ಯಾರಲಿಸಿಸ್ ಪತ್ತೆ ಹೇಗೆ?
* ಇದನ್ನು ರಕ್ತ ಪರೀಕ್ಷೆ ಮೂಲಕ ಕಂಡು ಹಿಡಿಯಬಹುದು. MRI ಸ್ಕ್ಯಾನ್ ಕೂಡ ಮಾಡಲಾಗುವುದು.

ಚಿಕಿತ್ಸೆಯೇನು?
ರೋಗಿಗೆ ಆ್ಯಂಟಿ ಇನ್‌ಫ್ಲೇಮಟರಿ ಹಾಗೂ ಆ್ಯಂಟಿವೈರಲ್ ಔಷಧಿಗಳನ್ನು ನೀಡಲಾಗುವುದು. ಕಾರ್ನಿಯಲ್ ಸಮಸ್ಯೆ ಉಂಟಾಗದಿರಲು ಐ ಪ್ಯಾಚಸ್ ಬಳಸಲು ಸಲಹೆ ನೀಡಲಾಗುವುದು.



Click it and Unblock the Notifications