Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಡಿಸೆಂಬರ್‌ನಲ್ಲಿ ಭಾರತದಲ್ಲಿ ಸಿಗಲಿದೆ ಕೊರೊನಾ ಲಸಿಕೆ, ಬೆಲೆ ಎಷ್ಟು?
ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ. 24 ಗಂಟೆಗಳಲ್ಲೇ 60963 ಸೋಂಕಿತರು ಪತ್ತೆಯಾಗಿದ್ದಾರೆ. ಒಂದು ಸಮಧಾನಕರ ಸಂಗತಿ ಎಂದರೆ ಭಾರತದಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಿದೆ.

ಕೊರೊನಾವೈರಸ್‌ಗೆ ಲಸಿಕೆ ಬರುವವರಿಗೆ ಈ ಸೋಂಕು ನಿಯಂತ್ರಿಸುವುದು ಸದ್ಯದ ಮಟ್ಟಿಗೆ ಸವಾಲಿನ ಕೆಲಸವಾಗಿದೆ. ಎಲ್ಲಾ ದೇಶಗಳು ಕೊರೊನಾಗೆ ಮದ್ದು ಕಂಡು ಹಿಡಿಯಲು ಹಲವಾರು ಸಂಶೋಧನೆಗಳನ್ನು ನಡೆಸುತ್ತಿವೆ. ರಷ್ಯಾ ಕೊರೊನಾವೈರಸ್‌ಗೆ ಮದ್ದು ಕಂಡು ಹಿಡಿಯಲಾಗಿದೆ ಎಂದು ಅಧಿಕೃತವಾಗಿ ಘೋಷಿಸಿದೆ.

ರಷ್ಯಾ ಕಂಡು ಹಿಡಿದಿರುವ ಕೊರೊನಾಲಸಿಕೆ ಪರಿಣಾಮಕಾರಿಯೇ?
ರಷ್ಯಾದ ಅಧ್ಯಕ್ಷ ಪುಟಿನ್ ನಾವು ಕಂಡು ಹಿಡಿದಿರುವ ಕೊರೊನಾವೈರಸ್ ಲಸಿಕೆ ಪರಿಣಾಮಕಾರಿಯಾಗಿದೆ ಹಾಗೂ ರೋಗನಿರೋಧಕ ಶಕ್ತಿ ಕುಂದದಂತೆ ತಡೆಯುವ ಶಕ್ತಿ ಹೊಂದಿದೆ ಎಂದು ಹೇಳಿದ್ದಾರೆ. ಈ ಔಷಧಿಯನ್ನು ರಷ್ಯಾದ ರಕ್ಷಣೆ ಇಲಾಖೆಯ ಸಹಯೋಗದೊಂದಿಗೆ ಮೋಸ್ಕೋದ ಗಮಲಿಯಾ ಇನ್ಸಿಟ್ಯೂಟ್ ತಯಾರಿಸಿದೆ. ಆದರೆ ಈ ಔಷಧಿಯನ್ನು ತಜ್ಞರು ಸಂಶಯದ ಕಣ್ಣುಗಳಿಂದಲೇ ನೋಡುತ್ತಿದ್ದಾರೆ. ಏಕೆಂದರೆ ಈ ಔಷಧವನ್ನು ಹೆಚ್ಚು ಜನರ ಮೇಲೆ ಪ್ರಯೋಗ ಮಾಡದ ಹೊರತು ಏನೂ ಹೇಳಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಭಾರತದಲ್ಲಿ ಕೋವಿಡ್ 19ಗೆ ಲಸಿಕೆ ಯಾವಾಗ ಬರಲಿದೆ?
ಭಾರತದಲ್ಲಿ ಪುಣೆ ಮೂಲದ ಸೆರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾ (SII) ಲಸಿಕೆ ತಯಾರು ಮಾಡತ್ತಿದೆ. ಇದು ಭಾರತದ ಅತ್ಯಂತ ದೊಡ್ಡ ಔಷಧ ಉತ್ಪಾದಕ ಸಂಸ್ಥೆಯಾಗಿದೆ. ಈ ಸಂಸ್ಥೆಯು ಭಾರತದಲ್ಲಿ ಕೋವಿಡ್ 19ಗೆ ಲಸಿಕೆ 2020ರ ಡಿಸೆಂಬರ್‌ನಲ್ಲಿ ದೊರೆಯಲಿದೆ ಎಂದು ಹೇಳಿದೆ.
CNBC-TV18 ಮಾಹಿತಿಯನ್ನು ನೀಡುತ್ತಾ ಡಿಸೆಂಬರ್ ಅಷ್ಟರಲ್ಲಿ ಮಿಲಿಯನ್ ಡೋಸ್ ಲಸಿಕೆ ತಯಾರಾಗಲಿದೆ ಎಂಬ ಮಾಹಿತಿಯನ್ನು ಈ ಔಷಧ ಕಂಪನಿ ನೀಡಿದೆ.
" ನಾವು ICMR ಜೊತೆ ಸೇರಿ ಇದರ ಟ್ರಯಲ್ ಅನ್ನು ಎರಡು ವಾರಗಳ ಒಳಗೆ ನಡೆಸಲಿದ್ದು, ಆಗಸ್ಟ್ ಕೊನೆಯ ವಾರದಲ್ಲಿ ಉತ್ಪಾದನೆ ಪ್ರಾರಂಭಿಸಲಿದ್ದೇವೆ' ಎಂದು ಕಂಪನಿಯ ಅಧಿಕೃತ ಮೂಲಗಳು ತಿಳಿಸಿವೆ.

ಭಾರತದ ಎಲ್ಲೆಡೆ ಟೆಸ್ಟಿಂಗ್ ಸೆಂಟರ್
ICMR ಮತ್ತು DCGI ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಭಾರತದಲ್ಲಿ ಹಲವು ಕಡೆ ಟ್ರಯಲ್ ಸೆಂಟರ್ ಸ್ಥಾಪಿಸಿದ್ದು 3000-4000ರಷ್ಟು ಜನರು ಸ್ವಯಂ ಪ್ರೇರುತರಾಗಿ ಪ್ರಯೋಗಕ್ಕಾಗಿ ಮುಂದಾಗಿದ್ದಾರೆ. ಈ ಟ್ರಯಲ್ ಅನ್ನು 3 ಹಂತದಲ್ಲಿ ನಡೆಸಲಾಗುವುದು.

ಆಕ್ಸ್‌ಫರ್ಡ್ ಲಸಿಕೆ 3ನೇ ಹಂತದ ಪ್ರಯೋಗದಲ್ಲಿದೆ
ಕೊರೊನಾವೈರಸ್‌ಗೆ ಆಕ್ಸ್‌ಫರ್ಡ್ ಕೂಡ ಲಸಿಕೆ ಕಂಡು ಹಿಡಿದಿದ್ದು ಇದೀಗ ಪ್ರಯೋಗದ ಮೂರನೇ ಹಂತದಲ್ಲಿದೆ. ಈ ಔಷಧ ಕೂಡ ಕೊರೊನಾವೈರಸ್ ಮಣಿಸುವುದರಲ್ಲಿ ಭರವಸೆ ಲಸಿಕೆಯಾಗಿ ಕಂಡು ಬರುತ್ತಿದೆ.

ಲಸಿಕೆಯ ಬೆಲೆ
ಸೆರಮ್ ಇನ್ಸಿಟ್ಯೂಟ್ ಕೋವಿಡ್‌ಶೀಲ್ಡ್ ಹೆಸರಿನಲ್ಲಿ ಔಷಧಿ ತರಲಿದ್ದು ಔಷಧಿಗೆ ರೂ. 250 ಬೆಲೆ ನಿಗದಿ ಮಾಡಲು ತೀರ್ಮಾರ್ನಿಸಿದೆ. ಈ ಔಷಧಿ ಹೊರಬಂದರೆ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ತುಂಬಾ ಅನುಕೂಲವಾಗಲಿದ್ದು ಹೆಚ್ಚಿನ ದುಬಾರಿಯಿಲ್ಲದೆ ಚಿಕಿತ್ಸೆ ದೊರೆಯಲಿದೆ.



Click it and Unblock the Notifications
