ಆ ವರ್ಷದ ಬಾಲಕ 6 ತಿಂಗಳಿನಲ್ಲಿ ಕ್ಯಾನ್ಸರ್‌ನಿಂದ ಸಾಯುತ್ತೇನೆ, ಇದನ್ನು ಪೋಷಕರಿಗೆ ಹೇಳಬೇಡಿ ಅಂದರೂ ಹೇಳಿ ಪುಣ್ಯಕಟ್ಟಿಕೊಳ್ಳುತ್ತಾ

ಹೈದರಾಬಾದ್‌ನ ವೈದ್ಯ ಡಾ. ಸುಧೀರ್ ಕುಮಾರ್‌ ತಮ್ಮ ಬಳಿ ಚಿಕಿತ್ಸೆಗೆ ಬಂದಿದ್ದ 6 ವರ್ಷದ ಪುಟಾಣಿ ಬಗ್ಗೆ ಬರೆದಿರುವ ಸಾಲುಗಳನ್ನು ಓದುವಾಗ ಎಂಥ ಕಲ್ಲು ಹೃದಯದ ವ್ಯಕ್ತಿಯಾದರೂ ಕರಗಿ ಬಿಡುತ್ತಾನೆ. ಆ ಮಗುವಿಗೆ ಸಾವು ನನ್ನ ಮುಂದೆ ಇದೆ ಎಂದು ಗೊತ್ತಾದಾಗ 'ಡಾಕ್ಟರೇ... ನನ್ನ ಅಪ್ಪ-ಅಮ್ಮನಿಗೆ ನಾನು ಬದುಕಿರಲ್ಲ ಎಂದು ಹೇಳಬೇಡಿ' ಎಂದು ಕೇಳಿಕೊಂಡ ಎಂದು ವೈದ್ಯರು ಬರೆದಿದ್ದಾರೆ.

6-Year-Old Cancer Patient story

ಆ ಸಾಲುಗಳನ್ನು ಓದುವಾಗ ಅಷ್ಟು ಚಿಕ್ಕ ಮಗುವಿಗೆ ಎಂಥ ದೊಡ್ಡ ಮನಸ್ಸು, ಆ ಕ್ಷಣದಲ್ಲೂ ತನ್ನ ಅಪ್ಪ-ಅಮ್ಮನಿಗೆ ನೋವಾಗಬಾರದೆಂದು ಯೋಚಿಸುವ ಆ ಪುಟ್ಟ ಮನಸ್ಸು ನೋಡುವಾಗ ಓಹೋ ದೇವರೇ... ಆ ಮಗುವನ್ನು ಅವರ ಪೋಷಕರ ಬಳಿಯಿಂದ ಕಿತ್ತುಕೊಳ್ಳಬೇಡ ಎಂದು ನಮ್ಮ ಮನಸ್ಸು ಹೇಳುತ್ತೆ...

ಮಗು ವೈದ್ಯರ ಬಳಿ ನಾನು ಸಾಯುತ್ತೇನೆ ಎಂದು ಪೋಷಕರ ಬಳಿ ಹೇಳಬೇಡಿ ಎಂದರೂ ಡಾ. ಸುಧೀರ್‌ ಅವರು ಈ ವಿಷಯವನ್ನು ಆ ಹುಡುಗನ ಪೋಷಕರಿಗೆ ಹೇಳುವ ಮೂಲಕ ಪುಣ್ಯ ಕಟ್ಟಿಕೊಂಡಿದ್ದಾರೆ, ಏಕೆ ಗೊತ್ತಾ... ಈ ಸತ್ಯಕತೆ ಸಂಪೂರ್ಣ ಓದಿ

ಡಾ. ಸುಧೀರ್‌ ಅವರ ಮಾತುಗಳಲ್ಲಿಯೇ ಹೇಳುವುದಾದರೆ " 6 ವರ್ಷದ ಹುಡುಗ ನನಗೆ ಹೇಳುತ್ತಾನೆ ' ಡಾಕ್ಟರ್ ಗ್ರೇಡ್‌ 4 ಕ್ಯಾನ್ಸರ್ ಇದೆ, ನಾನು ಇನ್ನು 6 ತಿಂಗಳಷ್ಟೇ ಬದುಕಿರುತ್ತೇನೆ, ಆದರೆ ನನ್ನ ಪೋಷಕರಿಗೆ ಇದರ ಬಗ್ಗೆ ಹೇಳಬೇಡಿ"

ಡಾಕ್ಟರ್ ಮಗನಿಗೆ ಕ್ಯಾನ್ಸರ್ ಕಾಯಿಲೆ ಇರುವುದು ಗೊತ್ತಿಲ್ಲ ಎಂದ ಪೋಷಕರು

ಎಲ್ಲಾ ದಿನದಂತೆ ಆ ದಿನ ಕೂಡ OPDಯಲ್ಲಿ ಬ್ಯುಸಿಯಾಗಿದ್ದೆ, ಆಗ ದಂಪತಿ ನನ್ನ ಬೇಟಿಯಾದರು " ಅವರು ನನ್ನ ಬಳಿ ಹೇಳುತ್ತಾರೆ "ಮನು (ಅವರ ಆ 6 ವರ್ಷದ ಮಗ) ಹೊರಗಡೆ ಕೂತಿದ್ದಾನೆ, ಅವನಿಗೆ ಕ್ಯಾನ್ಸರ್ ಇದೆ, ಆದರೆ ಅವನಿಗೆ ನಾವು ಇದರ ಬಗ್ಗೆ ತಿಳಿಸಿಲ್ಲ, ನೀವು ಅವನ ನೋಡಿ ಚಿಕಿತ್ಸೆ ನೀಡಿ, ಆದರೆ ಅವನ ಬಳಿ ಅವನ ಕಾಯಿಲೆ ಬಗ್ಗೆ ಏನೂ ಹೇಳಬೇಡಿ' ಎಂದು ಹೇಳುತ್ತಾರೆ. ನಾನು ಸರಿ ಅಂತ ಒಪ್ಪಿ ತಲೆಯಾಡಿಸುತ್ತೇನೆ, ನಂತರ ಮನುವನ್ನು ಒಳಗಡೆ ಕರೆದುಕೊಂಡು ಬರುತ್ತಾರೆ. ನೋಡಿದರೆ ವ್ಹೀಲ್ ಚೇರ್‌ನಲ್ಲಿ ಆ ಬಾಲಕ ಕುಳಿತಿದ್ದ, ಅವನ ಮುಖದಲ್ಲಿ ನಗು ಹಾಗೂ ಆತ್ಮವಿಶ್ವಾಸದ ಎದ್ದು ಕಾಣುತ್ತಿತ್ತು.

ಅವನ ಹೆಲ್ತ್ ಹಿಸ್ಟರಿ ನೋಡಿದಾಗ ಅವನಿಗೆ glioblastoma 4 ಹಂತದಲ್ಲಿದೆ (ಮೆದುಳಿನ ಕ್ಯಾನ್ಸರ್) ಎಂಬುವುದು ತಿಳಿದು ಬಂತು, ಆದ್ದರಿಂದ ಅವನ ಬಲಗೈ ಮತ್ತು ಬಲಗಾಲು ಬಲಹೀನವಾಗಿತ್ತು. ಅವನಿಗೆ ಆಪರೇಷನ್ ಮಾಡಲಾಗಿತ್ತು, ಮೆದುಳು ಕ್ಯಾನ್ಸರ್ ಕಾರಣ ತಲೆಸುತ್ತು ಬರ್ತಾ ಇತ್ತು. ಅವನಿಗೆ ಯಾವ ಔಷಧ ನೀಡಬೇಕು ಎಂದು ಅವರ ಪೋಷಕರಿಗೆ ಸೂಚಿಸಿದೆ. ಅವರು ಹೊರಡಬೇಕು ಆಗ ಮನು ಡಾಕ್ಟರ್ ಬಳಿ ಪರ್ಸನಲ್‌ ಮಾತನಾಡಬೇಕು ಎಂದು ರಿಕ್ವೆಸ್ಟ್‌ ಮಾಡುತ್ತಾನೆ, ಪೋಷಕರು ಸರಿ ಅಂತ ಹೊರಗಡೆ ಹೋಗುತ್ತಾರೆ.

ನನಗೆ ಕ್ಯಾನ್ಸರ್ ಇದೆ, 6 ತಿಂಗಳಷ್ಟೇ ಬದುಕುತ್ತೇನೆ ಆದರೆ ಪೋಷಕರಿಗೆ ಹೇಳಬೇಡಿ ಎಂದ ಬಾಲಕ

ಆಗ ಮನು ಹೇಳ್ತಾನೆ " ಡಾಕ್ಟರ್ ನನ್ನ ಕಾಯಿಲೆ ಬಗ್ಗೆ ಐಪ್ಯಾಡ್‌ನಲ್ಲಿ ಎಲ್ಲಾ ಓದಿದೆ, ನನಗೆ ಇನ್ನು 6 ತಿಂಗಳಷ್ಟೇ ಬದುಕಿರುವುದು ಅಂತ ಗೊತ್ತಿದೆ, ಆದರೆ ನನ್ನ ಪೋಷಕರಿಗೆ ಹೇಳಬೇಡಿ, ಅವರಿಗೆ ಹೇಳಿದರೆ ಅವರು ಬೇಜಾರು ಮಾಡಿಕೊಳ್ಳುತ್ತಾರೆ, ಅವರು ನನ್ನ ತುಂಬಾ ಇಷ್ಟಪಡುತ್ತಾರೆ ಎಂದು ಹೇಳುತ್ತಾನೆ. ಪ್ಲೀಸ್‌ ಡಾಕ್ಟರ್ ಅವರ ಬಳಿ ಹೇಳಬೇಡಿ" ಅಂತ ಕೇಳಿಕೊಳ್ಳುತ್ತಾನೆ. ಆ ಹುಡುಗನಿಗೆ ಸರಿ ಅಂತ ಹೇಳುತ್ತೇನೆ, ಆದರೆ ಅವನಿಗೆ ಕೊಟ್ಟ ಪ್ರಾಮಿಸ್‌ ಉಳಿಸಿಕಒಳ್ಳಲು ಸಾಧ್ಯವಾಗಲಿಲ್ಲ.

ಅವನ ಕಾಯಿಲೆ ಬಗ್ಗೆ ಪೋಷಕರಿಗೆ ತಿಳಿಸಬೇಕಾಗಿರುವುದು ನನ್ನ ವೃತ್ತಿ ಧರ್ಮ. ಪೋಷಕರನ್ನು ಕರೆದು ಮನು ಆರೋಗ್ಯ ಸ್ಥಿತಿ ಬಗ್ಗೆ ಹೇಳಿ, ಅವನಿಗೆ ಈ ಕಾಯಿಲೆ ಇರುವುದು ಗೊತ್ತಿದೆ ಎಂದು ಹೇಳಿದೆ, ಆ ದಂಪತಿ ಧನ್ಯವಾದ ಹೇಳಿ ಅಲ್ಲಿಂದ ತೆರಳಿದರು.

ಅದಾಗಿ 9 ತಿಂಗಳು ಕಳೆದಿರಬಹುದು, ಆಘಟನೆ ಮರೆತೇ ಹೋಗಿತ್ತು, ನೋಡಿದರೆ ಆ ದಂಪತಿ ನನ್ನ ಭೇಟಿಯಾಗಲು ಮತ್ತೆ ಬಂದಿದ್ದರು, ಅವರನ್ನು ನೋಡಿದಾಗ ಗುರುತು ಹಿಡಿದು, ಮನು ಬಗ್ಗೆ ವಿಚಾರಿಸಿದೆ.

ಡಾಕ್ಟರ್‌ಗೆ ಥ್ಯಾಂಕ್ಸ್‌ ಹೇಳಲು ಬಂದ ದಂಪತಿ

ಆಗ ಅವರು " ಡಾಕ್ಟರ್ ನಾವು ಮನು ಜೊತೆ ತುಂಬಾ ಒಳ್ಳೆಯ ಸಮಯ ಕಳೆದೆವು, ನಾವು ಕೆಲಸಕ್ಕೆ ರಜೆ ಹಾಕಿ ಅವನ ಜೊತೆಯೇ ಸಮಯ ಕಳೆದೆವು, ಅವನ ಇಷ್ಟದ ಡಿಸ್ನಿ ಲ್ಯಾಂಡ್‌ಗೆ ಹೋದೆವು, ಮನು ಜೊತೆ ತುಂಬಾ ಒಳ್ಳೆಯ ಸಮಯ ಕಳೆದೆವು, ಕಳೆದ ತಿಂಗಳು ಅವನ ಕಳೆದುಕೊಂಡೆವು, ಇವತ್ತು ನಿಮ್ಮನ್ನು ಭೇಟಿ ಮಾಡಿ ಥ್ಯಾಂಕ್ಸ್ ಹೇಳಿ ಹೋಗಲು ಬಂದೆವು" ಎಂದು ಬರೆದಿದ್ದಾರೆ.

ಟಾಕ್ಟರ್‌ ಪೋಷಕರಿಗೆ ತಿಳಿಸಿದ್ದಕ್ಕೆ ಅವನ ಜೊತೆ ಇರುವಷ್ಟು ದಿನ ಅವನಿಗಾಗಿಯೇ ಕಳೆಯಲು ಸಾಧ್ಯವಾಯಿತು, ಆ ಪೋಷಕರ ಪಾಲಿಗೆ ಅವನಿಲ್ಲದ ನೋವು ಇರುತ್ತೆ, ಆದರೆ ಅವನ ಜೊತೆ ಕಳೆದ ಕ್ಷಣಗಳು ನೆನಪಿನಲ್ಲಿ ಸದಾ ಇರುತ್ತೆ ಅಲ್ವಾ"

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Hyderabad Doctor’s Shared Heartfelt Story of a 6-Year-Old Cancer Patient Goes Viral on Social Media

Hyderabad Doctor Dr Sudhir Kumar MD DM Shared Heartfelt Story of a 6-Year-Old Cancer Patient: These stoy goes viral in social media, read this story,
Story first published: Monday, January 9, 2023, 21:26 [IST]
X
Desktop Bottom Promotion