Latest Updates
-
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್ -
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ!
ಕಾಲಿಗೆ ಮುಳ್ಳು, ಸೂಜಿ ಚುಚ್ಚಿದ್ದರೆ, ಈ ಮನೆಮದ್ದು ಪ್ರಯತ್ನಿಸಿ
ಆಕಸ್ಮಿಕವಾಗಿ ಪಾದದಡಿ ಚುಚ್ಚಿದ ಮುಳ್ಳೋ ಅಥವಾ ಸೂಜಿ ಸಾಕಷ್ಟು ನೋವು ಉಂಟುಮಾಡುತ್ತದೆ. ಚುಚ್ಚಿದ ವಸ್ತು ಸಣ್ಣದಾಗಿದ್ದರೂ, ಅದರಿಂದ ಆಗುವ ನೋವು ನರಕ ಯಾತನೆಯಂತಿರುತ್ತದೆ. ಇದರ ಜೊತೆಗೆ ಇನ್ನೂ ಕೆಲವರಿಗೆ ಆಗಾಗ ಪಾದದಡಿಯಲ್ಲಿ ಸೂಜಿ ಚುಚ್ಚುತ್ತಿರುವಂತಹ ವಿಚಿತ್ರ ಅನುಭವ ಆಗುತ್ತಿರುತ್ತದೆ. ನಮ್ಮ ದೇಹದಲ್ಲಿನ ಹಲವು ವಿಟಮಿನ್ ಗಳ ಕೊರತೆಯೂ ಇಂತಹ ವಿಚಿತ್ರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇದು ಆಗಾಗ ಸಂಭವಿಸುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ನೀವೇನಾದರೂ ಪಾದದ ಅಡಿಯಲ್ಲಿ ತೀಕ್ಷ್ಣವಾದ ನೋವನ್ನು ಸಹ ಅನುಭವಿಸುತ್ತೀರಾ? ವೈದ್ಯರ ಸಲಹೆಯ ಮೇರೆಗೆ ನೀವು ಚಿಕಿತ್ಸೆ ತೆಗೆದುಕೊಳ್ಳಬಹುದು, ಆದರೆ ಅದಕ್ಕೂ ಮುನ್ನ ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಅವು ಯಾವುವು ನೋಡೋಣ.

ಚೂಪಾದ ವಸ್ತು ಚುಚ್ಚಿರುವ ನೋವು ನಿವಾರಣೆಗೆ ಮನೆಮದ್ದನ್ನು ಈ ಕೆಳಗೆ ನೀಡಲಾಗಿದೆ
ಅರಿಶಿನ
ಅರಿಶಿನವನ್ನು ನೈಸರ್ಗಿಕ ಔಷಧಿ ಎಂದು ಕರೆಯಲಾಗುವುದಲ್ಲದೇ, ಇದನ್ನು ಅನಾದಿ ಕಾಲದಿಂದಲೂ ಆರೋಗ್ಯ ರಕ್ಷಣೆಗಾಗಿ ಬಳಸಲಾಗುತ್ತಿದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳು ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತವೆ. ಅರಿಶಿನವನ್ನು ಸೂಜಿ, ಮುಳ್ಳುಗಳಿಂದ ಆಗುವ ಪಾದದ ಅಡಿಭಾಗದಲ್ಲಿರುವ ನೋವನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ನೀವು ಪ್ರತಿದಿನ ಅರಿಶಿನ ಹಾಲನ್ನು ಸರಿಯಾದ ಪ್ರಮಾಣದಲ್ಲಿ ಕುಡಿಯಬೇಕು. ಬೇಕಿದ್ದರೆ ಸಾಸಿವೆ ಅಥವಾ ತೆಂಗಿನೆಣ್ಣೆಯೊಂದಿಗೆ ಅರಿಶಿನವನ್ನು ಬೆರೆಸಿ ಪಾದದ ಅಡಿಗೆ ಹಚ್ಚಬಹುದು. ಈ ಪೇಸ್ಟ್ ಸೋಂಕನ್ನು ಕಡಿಮೆ ಮಾಡುತ್ತದೆ ಮತ್ತು ನೋವು ಸಹ ಶಮನವಾಗುತ್ತದೆ.

ಹಾಗಲಕಾಯಿ ಎಲೆ
ಮಧುಮೇಹಿಗಳು ಹಾಗಲಕಾಯಿಯನ್ನು ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು ಎಂಬುದನ್ನು ಗೊತ್ತೇ ಇದೆ. ಅಂದಹಾಗೆ, ಪಾಪದ ಅಡಿಯಿರುವ ಚುಚ್ಚುವಂತಹ ನೋವನ್ನು ತೆಗೆದುಹಾಕಲು ನೀವು ಹಾಗಲಕಾಯಿ ಎಲೆಗಳನ್ನು ಬಳಸಬಹುದು. ಹಾಗಲಕಾಯಿ ಎಲೆಗಳ ಪೇಸ್ಟ್ ಅನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದನ್ನು ಮುಳ್ಳು ಅಥವಾ ಸೂಜಿ ಚುಚ್ಚಿರುವ ಜಾಗಕ್ಕೆ ಹಚ್ಚಿ. ಸ್ವಲ್ಪ ಸಮಯ ಬಿಟ್ಟ ನಂತರ, ಉಗುರು ಬೆಚ್ಚಗಿನ ನೀರಿನಿಂದ ಈ ಪೇಸ್ಟ್ ಅನ್ನು ತೊಳೆಯಿರಿ. ಹೀಗೆ ಕೆಲವು ದಿನಗಳ ಕಾಲ ಮಾಡಿದ ನಂತರ ನಿಮ್ಮ ನೋವು ಗುಣವಾಗುವುದು.

ಆಪಲ್ ಸೈಡರ್ ವಿನೆಗರ್
ಆಪಲ್ ಸೈಡರ್ ವಿನೆಗರ್ ಪಾದದ ಅಡಿಯ ಮುಳ್ಳು ಅಥವಾ ಸೂಜಿ ಚುಚ್ಚಿದ ನೋವನ್ನು ತೆಗೆದುಹಾಕುತ್ತದೆ ಎಂದು ನಿಮಗೆ ತಿಳಿದಿದೆಯೇ?.. ಇದಕ್ಕಾಗಿ ನೀವು ಆಪಲ್ ಸೈಡರ್ ವಿನೆಗರ್ ಸೇವಿಸಬೇಕು. ಒಂದು ಲೋಟದಲ್ಲಿ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಆಪಲ್ ಸೈಡರ್ ವಿನೆಗರ್ ಸೇರಿಸಿ. ಇದನ್ನು ಸಿಪ್ ಬೈ ಸಿಪ್ ಕುಡಿಯಿರಿ ಮತ್ತು ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ನೋಡಲು ಸಾಧ್ಯವಾಗುತ್ತದೆ.



Click it and Unblock the Notifications