Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹಸಿ ಜೀರಿಗೆ ಸೇವನೆಯಿಂದ ಸಿಗಲಿದೆ ಈ ಆರೋಗ್ಯ ಲಾಭಗಳು
ನಮ್ಮ ಅಡುಗೆಮನೆಯಲ್ಲಿರುವ ಮಸಾಲೆಪದಾರ್ಥಗಳಲ್ಲಿ ಜೀರಿಗೆಯೂ ಒಂದು. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ ಉತ್ತಮ. ಆದರೆ, ಇದರ ಪುಡಿಯನ್ನೇ ಹೆಚ್ಚಾಗಿ ಬಳಸುವುದು. ಜೀರಿಗೆಯನ್ನು ಹಸಿಯಾಗಿ ಸೇವಿಸುವುದರಿಂದ ರಕ್ತಹೀನತೆಯ ಸಮಸ್ಯೆಯನ್ನು ನಿವಾರಣೆಯಾಗುವುದಲ್ಲದೇ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಕಾರಿ. ಆದ್ದರಿಂದ ಆಯುರ್ವೇದದಲ್ಲಿ ಜೀರಿಗೆಯನ್ನು ಔಷಧವಾಗಿಯೂ ಬಳಸುತ್ತಾರೆ. ಹಾಗಾದರೆ ಹಸಿ ಜೀರಿಗೆಯನ್ನು ತಿನ್ನುವುದರಿಂದ ಆಗುವ ಇತರ ಪ್ರಯೋಜನಗಳೇನು ಎಂಬುದನ್ನ ತಿಳಿಯೋಣ.
ಆರೋಗ್ಯಕ್ಕಾಗಿ ಹಸಿ ಜೀರಿಗೆ ಸೇವನೆಯ ಪ್ರಯೋಜನಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ರಕ್ತಹೀನತೆಯನ್ನು ನಿವಾರಿಸುವುದು:
ಹೆಚ್ಚಿನ ಮಹಿಳೆಯರು ರಕ್ತಹೀನತೆಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ರಕ್ತಹೀನತೆ ಎಂದರೆ ದೇಹದಲ್ಲಿ ರಕ್ತದ ಕೊರತೆ. ದೇಹದಲ್ಲಿ ಕಬ್ಬಿಣದ ಕೊರತೆಯಿದ್ದರೆ, ರಕ್ತಹೀನತೆಯ ಸಮಸ್ಯೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ, ಹಸಿ ಜೀರಿಗೆಯನ್ನು ಸೇವಿಸುವುದು ಪ್ರಯೋಜನಕಾರಿ. ಹಸಿ ಜೀರಿಗೆಯಲ್ಲಿ ಕಬ್ಬಿಣದ ಅಂಶ ತುಂಬಾ ಹೆಚ್ಚಿದ್ದು, ಇದರಿಂದ ರಕ್ತಹೀನತೆಯ ಸಮಸ್ಯೆ ದೂರವಾಗುತ್ತದೆ. ನೀವು ರಕ್ತಹೀನತೆಯನ್ನು ತಪ್ಪಿಸಲು ಬಯಸಿದರೆ, ಹಸಿ ಜೀರಿಗೆಯನ್ನು ಸಹ ಸೇವಿಸಬಹುದು.

2. ಮೂಳೆಗಳನ್ನು ಬಲಗೊಳಿಸುವುದು:
ಬೆಳೆಯುವ ವಯಸ್ಸಿನಲ್ಲಿಯೇ, ಹೆಚ್ಚಿನ ಜನರು ಮೂಳೆಗಳು, ಕೀಲುಗಳಲ್ಲಿನ ನೋವಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮೂಳೆಗಳ ಬಲಕ್ಕೆ ಕ್ಯಾಲ್ಸಿಯಂ ಬಹಳ ಮುಖ್ಯ. ಹಸಿ ಜೀರಿಗೆಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಆದ್ದರಿಂದ ನೀವು ಜೀರಿಗೆಯನ್ನು ಸೇವಿಸಬಹುದು. ಇದು ಮೂಳೆಗಳನ್ನು ಬಲಗೊಳಿಸುತ್ತದೆ.

3. ಜೀರ್ಣಕ್ರಿಯೆಗೆ ಸಹಕಾರಿ:
ಅನಾರೋಗ್ಯಕರ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರು ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ನೀವು ಅಜೀರ್ಣದಿಂದ ತೊಂದರೆಗೊಳಗಾಗಿದ್ದರೆ, ಹಸಿ ಜೀರಿಗೆಯನ್ನು ಸೇವಿಸಬಹುದು. ಹಸಿ ಜೀರಿಗೆಯನ್ನು ತಿನ್ನುವುದರಿಂದ ಜೀರ್ಣಾಂಗ ಅಸ್ವಸ್ಥತೆಗಳು, ಅಜೀರ್ಣ, ಗ್ಯಾಸ್ ಮತ್ತು ವಾಯು ಮುಂತಾದ ಸಮಸ್ಯೆಗಳು ದೂರವಾಗುತ್ತವೆ.

4. ದೇಹದಲ್ಲಿ ನೀರು ಕಡಿಮೆ ಮಾಡುವುದು:
ದೇಹದಲ್ಲಿ ನೀರು ಹೆಚ್ಚಾಗುವ ಸಮಸ್ಯೆ ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಇದನ್ನು ನೀರಿನ ಧಾರಣ ಎಂದು ಕರೆಯಲಾಗುತ್ತದೆ. ನೀರು ಹಿಡಿದಿಟ್ಟುಕೊಂಡರೆ ತೂಕ ಹೆಚ್ಚಾಗುತ್ತದೆ. ದೇಹದಲ್ಲಿ ನೀರಿನಂಶ ಹೆಚ್ಚಾದಾಗ ಹಸಿ ಜೀರಿಗೆಯನ್ನು ಸೇವಿಸಬಹುದು. ಹಸಿ ಜೀರಿಗೆಯನ್ನು ಸೇವಿಸುವುದರಿಂದ ತೂಕವೂ ನಿಯಂತ್ರಣದಲ್ಲಿರುತ್ತದೆ. ನೀರಿನ ಧಾರಣಕ್ಕೆ ಇದು ಉತ್ತಮ ಪರಿಹಾರವಾಗಿದೆ.

5. ರೋಗ ನಿರೋಧಕ ಶಕ್ತಿ ವೃದ್ಧಿ:
ಹಸಿ ಜೀರಿಗೆಯನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹಸಿ ಜೀರಿಗೆಯ ನೀರನ್ನು ಬೆಳಗ್ಗೆ ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜೀರಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇಮ್ಯುನೊಮಾಡ್ಯುಲೇಟರಿ ಪರಿಣಾಮಗಳನ್ನು ಹೊಂದಿದೆ. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದನ್ನು ಸೇವಿಸಬಹುದು.

ಜೀರಿಗೆಯನ್ನು ಹೇಗೆ ಸೇವಿಸಬೇಕು?:
ಉತ್ತಮ ಆರೋಗ್ಯ ಪ್ರಯೋಜನಗಳಿಗಾಗಿ ಹಸಿ ಜೀರಿಗೆಯನ್ನು ಹಾಗೆಯೇ ಸುಲಭವಾಗಿ ಸೇವಿಸಬಹುದು ಅಥವಾ ಜೀರಿಗೆ ನೀರನ್ನು ಸಹ ಸೇವಿಸಬಹುದು. ಇದಕ್ಕಾಗಿ ಜೀರಿಗೆಯನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಕುಡಿಯಿರಿ.



Click it and Unblock the Notifications
