Latest Updates
-
ಚಾತ್ ಪೂಜೆ: ಸಂಧ್ಯಾ ಅರ್ಘ್ಯದ ವೇಳೆ ಸಂಗಾತಿಯೊಂದಿಗೆ ಜಗಳ ತಪ್ಪಿಸಿ, ಹಬ್ಬವನ್ನು ಶಾಂತಿಯುತವಾಗಿ ಆಚರಿಸುವುದು ಹೇಗೆ? -
ದಕ್ಷಿಣ ಭಾರತದಲ್ಲಿ ಮಳೆ ಅಬ್ಬರ: ₹120 ರಲ್ಲೇ ಪೌಷ್ಟಿಕ ಊಟದ ಪ್ಲಾನ್ ಮತ್ತು ಸುರಕ್ಷಿತ ಆಹಾರ ಟಿಪ್ಸ್ -
ಬೆಂಗಳೂರು-ಗೋವಾ ವಂದೇ ಭಾರತ್ ರೈಲು ಸಂಚಾರ ಆರಂಭ: ಪ್ರಯಾಣಿಕರ ಸಂಭ್ರಮ, ಟಿಕೆಟ್ ದರ ಮತ್ತು ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ -
ದೆಹಲಿ-ಎನ್ಸಿಆರ್ ಮಳೆ: AQI ಸುಧಾರಣೆ, 15 ನಿಮಿಷದ ವಾಕಿಂಗ್ಗೆ ಈ ಟಿಪ್ಸ್ ಪಾಲಿಸಿ! -
ವಿಶ್ವ ಮಧುಮೇಹ ದಿನ: ಸಿಹಿ ತಿನ್ನುವಾಗ 'ಶುಗರ್-ಪೋಲೀಸ್' ಆಗಬೇಡಿ, ದಂಪತಿಗಳಿಗಾಗಿ ಇಲ್ಲಿದೆ ಬೆಸ್ಟ್ ಸಂವಹನ ಸೂತ್ರ! -
ಅಕ್ಕಿ, ಬೇಳೆ ಬೆಲೆ ಏರಿಕೆ ಬಿಸಿ: ತಮಿಳುನಾಡು ಸರ್ಕಾರದ ಹೊಸ ನಿಯಮದಿಂದ ಗ್ರಾಹಕರಿಗೆ ಸಿಗುತ್ತಾ ರಿಲೀಫ್? -
ಮಕ್ಕಳ ದಿನಾಚರಣೆ: ಇಂದೇ ಮಕ್ಕಳನ್ನು ಹೊರಗೆ ಕರೆದೊಯ್ಯಲು ಬೆಸ್ಟ್ ಪ್ಲೇಸ್ ಮತ್ತು ಉಚಿತ ಆಫರ್ಗಳ ಮಾಹಿತಿ ಇಲ್ಲಿದೆ! -
ವಾಯುಭಾರ ಕುಸಿತದ ಎಚ್ಚರಿಕೆ: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಮನೆಯಲ್ಲೇ ಇರಿ, ಸುರಕ್ಷಿತರಾಗಿರಿ! -
ಬುಧ ಮಾರ್ಗಿ: ದಂಪತಿಗಳ ಜಗಳಕ್ಕೆ ಫುಲ್ ಸ್ಟಾಪ್ ಇಡಲು 10 ನಿಮಿಷದ ಮ್ಯಾಜಿಕ್ ಸೂತ್ರ! -
ಹಣದುಬ್ಬರದ ಬಿಸಿ: ₹99ರಲ್ಲಿ ಹೈ-ಪ್ರೋಟೀನ್ ಊಟ ತಯಾರಿಸುವುದು ಹೇಗೆ? ಇಲ್ಲಿದೆ ಬಜೆಟ್ ಪ್ಲಾನ್
Health tips: ನಿಯಮಿತ ಗೋಡಂಬಿ ಸೇವನೆಯಿಂದ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನ
ಯಾವುದೇ ಖಾದ್ಯವಾಗಿರಲಿ ಅದಕ್ಕೆ ಗೋಡಂಬಿ ಹಾಕಿದ್ದರೆ ಅಡುಗೆಯ ಸ್ವಾದವನ್ನೇ ಶ್ರೀಮಂತವಾಗಿಸುತ್ತದೆ. ಸಿಹಿ ಇರಲಿ, ಖಾರದ ಅಡುಗೆ ಇರಲಿ ಸ್ವಲ್ಪವಾದರೂ ಗೋಡಂಬಿ ಇರಲೇಬೇಕು. ಆದರೆ ಇತ್ತೀಚೆಗೆ ಗೋಡಂಬಿಯ ಅತಿಯಾದ ಸೇವನೆ ಒಳ್ಳೆಯದಲ್ಲ ಎಂಬ ಮಾತುಕೇಳಿರಬಹುದು, ಹೌದು ಅತಿಯಾದ ಗೋಡಂಬಿ ಸೇವನೆ ಒಳ್ಳೆಯದಲ್ಲ ಆದರೂ ಮಿತವಾಗಿ ಗೋಡಂಬಿ ಸೇವಿಸಿದರೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.
ಗೋಡಂಬಿಯು ಆಂಟಿ ಆಕ್ಸಿಡೆಂಟ್, ಮಿನರಲ್, ವಿಟಮಿನ್, ಪ್ರೊಟಿನ್, ಕಬ್ಬಿಣಾಂಶ, ಫೈಬರ್, ಮೆಗ್ನೇಶಿಯಂ, ಪಾಸ್ಪರೆಸ್, ಸೆಲೆನಿಯಂನಂಥ ಪೋಷಕಾಂಶಗಳ ಆಗರವಾಗಿದೆ. ಗೋಡಂಬಿಯಲ್ಲಿ ಸಕ್ಕರೆ ಕಡಿಮೆ ಇದ್ದು, ಫೈಬರ್, ಕೊಬ್ಬು ಮತ್ತು ಸಸ್ಯ ಪ್ರೋಟೀನ್ ಸಮೃದ್ಧವಾಗಿದೆ. ಈ ಪೋಷಕಾಂಶಗಳು ಶಕ್ತಿ ಉತ್ಪಾದನೆ, ಮೂಳೆ ಆರೋಗ್ಯ, ರೋಗನಿರೋಧಕ ಶಕ್ತಿ, ಹೃದಯ ಆರೋಗ್ಯ, ಚರ್ಮ ಸಮಸ್ಯೆಗಳಿಗೆ ಪರಿಹಾರವಾಗಿದೆ.
ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಗೋಡಂಬಿಯನ್ನು ಸೇರಿಸಬೇಕೆ ಅಥವಾ ಬೇಡವೇ ಎಂಬ ಗೊಂದಲ ಇರುವವರಿಗೆ ಒಂದಷ್ಟು ಮಾಹಿತಿ ಹಾಗೂ ಗೋಡಂಬಿಯ ಕೆಲವು ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿ:

ಹೃದಯದ ಆರೋಗ್ಯ
ಗೋಡಂಬಿಯಲ್ಲಿರುವ ಅಪರ್ಯಾಪ್ತ ಕೊಬ್ಬಿನಾಮ್ಲಗಳು ಎಲ್ಡಿಎಲ್ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಹೃದಯರಕ್ತನಾಳದ ಕಾಯಿಲೆ, ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಧುಮೇಹ
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್, USA ಪ್ರಕಟಿಸಿದ ಅಧ್ಯಯನದಲ್ಲಿ, ಗೋಡಂಬಿಯಿಂದ ತಮ್ಮ ದೈನಂದಿನ ಕ್ಯಾಲೊರಿಗಳಲ್ಲಿ 10% ಇರುವ ಹಾಗೂ ಟೈಪ್ 2 ಮಧುಮೇಹ ಹೊಂದಿರುವ ಜನರು ಗೋಡಂಬಿಯನ್ನು ಸೇವಿಸದವರಿಗಿಂತ ತುಲನಾತ್ಮಕವಾಗಿ ಕಡಿಮೆ ಇನ್ಸುಲಿನ್ ಮಟ್ಟವನ್ನು ಹೊಂದಿದ್ದಾರೆ ಎಂದು ಕಂಡುಬಂದಿದೆ.

ರಕ್ತದೊತ್ತಡ
ಗೋಡಂಬಿಗಳು ಅಪರ್ಯಾಪ್ತ ಕೊಬ್ಬುಗಳು ಮತ್ತು ಮೆಗ್ನೀಸಿಯಂ, ಪೊಟ್ಯಾಸಿಯಮ್ ಮತ್ತು ಎಲ್-ಅರ್ಜಿನೈನ್ ನಂತಹ ಖನಿಜಗಳು ಹೇರಳವಾಗಿವೆ. ಈ ಪೋಷಕಾಂಶಗಳು ರಕ್ತನಾಳಗಳನ್ನು ಹಿಗ್ಗಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕಾಲಜನ್
ಗೋಡಂಬಿಯಲ್ಲಿ ಹೆಚ್ಚಿನ ತಾಮ್ರದ ಅಂಶವಿದೆ. ತಾಮ್ರವು ನಮ್ಮ ದೇಹದಲ್ಲಿನ ಕಾಲಜನ್ ಮತ್ತು ಎಲಾಸ್ಟಿನ್ ಮಟ್ಟವನ್ನು ನಿರ್ವಹಿಸುತ್ತದೆ. ಹಾನಿಗೊಳಗಾದ ಅಂಗಾಂಶ ಅಥವಾ ಕಾಲಜನ್ ಅನ್ನು ಬದಲಿಸಲು ಇದು ಸಹಾಯ ಮಾಡುತ್ತದೆ.

ಮೂಳೆ
ಗೋಡಂಬಿಯಲ್ಲಿನ ಮೆಗ್ನೀಸಿಯಮ್ ಮತ್ತು ತಾಮ್ರವು ಮೂಳೆಗಳಿಗೆ ಅತ್ಯವಶ್ಯಕವಾಗಿದೆ, ಏಕೆಂದರೆ ಅವು ಮೂಳೆಗೆ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ತೀವ್ರವಾದ ತಾಮ್ರದ ಕೊರತೆಯು ಕಡಿಮೆ ಮೂಳೆ ಸಾಂದ್ರತೆಯೊಂದಿಗೆ ಸಂಬಂಧಿಸಿದೆ ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸಬಹುದು.

ತ್ವಚೆಯ ಸಮಸ್ಯೆಗೆ ಪರಿಹಾರ
ಗೋಡಂಬಿಯಲ್ಲಿ ವಿಟಮಿನ್ ಇ ಮತ್ತು ಆಂಟಿ ಆಕ್ಸಿಡೆಂಟ್ ಗುಣ ಸಾಕಷ್ಟಿರುತ್ತದೆ. ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ, ಹಲವು ತ್ವಚೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.



Click it and Unblock the Notifications
