Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಿಮ್ಮ ಬಾಯಲ್ಲಿ ಈ ಲಕ್ಷಣ ಕಂಡು ಬಂದರೆ ಹೃದಯಾಘಾತದ ಅಪಾಯವಿದೆ
ಹಾರ್ಟ್ ಅಟ್ಯಾಕ್ ಯಾರಿಗೆ ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆ ವ್ಯಕ್ತಿ ಓಡಾಡುತ್ತಾ ಆರಾಮವಾಗಿಯೇ ಇರುತ್ತಾರೆ, ಆದರೆ ಇದ್ದಕ್ಕಿದ್ದಂತೆ ಹಾರ್ಟ್ ಅಟ್ಯಾಕ್ ಬಂದು ತೀರಿ ಹೋಗಿರುತ್ತಾರೆ. ಹಾರ್ಟ್ ಅಟ್ಯಾಕ್ ಅಥವಾ ಹೃದಯಾಘಾತ ಮಧ್ಯ ವಯಸ್ಸು ದಾಟಿದವರಲ್ಲಿ ಮಾತ್ರವಲ್ಲ ತುಂಬಾ ಚಿಕ್ಕ ಪ್ರಾಯದವರಲ್ಲೂ ಕಂಡು ಬರುತ್ತದೆ.
ಹೃದಯಾಘಾತ ಇದ್ದಕ್ಕಿದ್ದಂತೆ ಬಂತೆಂದೆ ಎಲ್ಲರೂ ಹೇಳುತ್ತಾರೆ, ಆದರೆ ಹೃದಯಾಘಾತ ಬರುವ ಮುನ್ನವೇ ಅದರ ಸೂಚನೆಗಳನ್ನು ತೋರಿಸಿರುತ್ತದೆ, ಆದರೆ ಅದನ್ನು ಹೆಚ್ಚಿನವರು ಗಮನಿಸಿರುವುದಿಲ್ಲ, ಹಾಗಾಗಿ ಅಪಾಯ ಸಾಧ್ಯತೆ ಹೆಚ್ಚುವುದು. ಹೃದಯಾಘಾತ ಮುಂಚೆ ಭುಜ ನೋವು, ಸುಸ್ತು ಇವೆಲ್ಲಾ ಕಾಣಿಸಿರುತ್ತದೆ, ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದು ನಮ್ಮ ಬಾಯಲ್ಲಿ ಕಂಡು ಬರುವ ಕೆಲವೊಂದು ಲಕ್ಷಣಗಳು ಹೃದಯಾಘಾತದ ಮುನ್ಸೂಚನೆಯಾಗಿದೆ ಎಂದು ಹೇಳಿದೆ. ಇದರ ಕುರಿತ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.

ವಸಡಿನ ಸಮಸ್ಯೆ ಇರುವವರಿಗೆ ಹೃದಯಾಘಾತದ ಸಾಧ್ಯತೆ ಹೆಚ್ಚು
ಹಾರ್ವಾಡ್ ಸ್ಕೂಲ್ ಆಫ್ ಡೆಂಟಲ್ ಮೆಡಿಸಿನ್ ಮತ್ತು ಫೋರ್ಸಿಯತ್ ಇನ್ಸಿಟ್ಯೂಟ್ ನಡೆಸಿದ ಸಂಶೋಧನೆಯು ವಸಡಿನ ಸಮಸ್ಯೆ ಹೇಗೆ ಹೃದಯಾಘಾತಕ್ಕೆ ಕಾರಣವಾಗುತ್ತೆ ಎಂಬುವುದರ ಕುರಿತು ಅಧ್ಯಯನ ನಡೆಸಿತ್ತು. ಈ ಅಧ್ಯಯನದಲ್ಲಿ 304 ವಸಡಿನ ಸಮಸ್ಯೆ ಇರುವ ರೋಗಿಗಳನ್ನು ಒಳಪಡಿಸಿತ್ತು. ನಾಲ್ಕು ವರ್ಷದ ಬಳಿಕ ಇವರಲ್ಲಿ 13 ಜನರಿಗೆ ತೀವ್ರ ಹೃದಯಾಘಾತ ಉಂಟಾಗಿತ್ತು. ಆದ್ದರಿಂದ ಈ ಸಂಶೋಧನೆಯು ವಸಡಿನ ಸಮಸ್ಯೆ ಇರುವವರಲ್ಲಿ ಹೃದಯಾಘಾತದ ಸಾಧ್ಯತೆ ಇದೆ ಎಂದು ಹೇಳಿದೆ.

ಹೇಗೆ?
ಸಂಶೋಧಕರ ಪ್ರಕಾರ ವಸಡಿನ ನೋವು ಇದ್ದಾಗ ಇದು ನರಗಳಲ್ಲಿ ಉರಿಯೂತ ಉಂಟು ಮಾಡುತ್ತದೆ, ಇದರಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.

ಮಿಲಿಯನ್ ಗಟ್ಟಲೆ ಜನರು ವಸಡಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ
ಸೆಂಟ್ರಲ್ ಡಿಸೀಜ್ ಕಂಟ್ರೋಲ್ ಪ್ರಕಾರ ಶೇ. 47 ಜನರಲ್ಲಿ ವಸಡಿನ ಸಮಸ್ಯೆ ಇರುತ್ತದೆ. ಅದರಲ್ಲೂ ಶೇ.70ರಷ್ಟು ಜನರು 65 ವರ್ಷ ಮೇಲ್ಪಟ್ಟವರಾಗಿರುತ್ತಾರೆ. ವಸಡಿನ ಸಮಸ್ಯೆಗೂ ಹೃದಯಾಘಾತಕ್ಕೂ ನೇರವಾದ ಸಂಬಂಧವಿದೆ.

ವಸಡಿನ ಸಮಸ್ಯೆಯ ಲಕ್ಷಣಗಳೇನು?
ನೀವು ಹಲ್ಲುಜ್ಜುವಾಗ ವಸಡಿನಲ್ಲಿ ರಕ್ತ ಕಂಡು ಬಂದರೆ ಅದು ವಸಡಿನ ಸಮಸ್ಯೆಯಾಗಿರುತ್ತದೆ. ಬಾಯಿನ ಸ್ವಚ್ಛತೆ ಕಡೆ ಗಮನ ನೀಡುವುದರಿಂದ ವಸಡಿನ ಸಮಸ್ಯೆ ತಡೆಗಟ್ಟಬಹುದು. ದಿನದಲ್ಲಿ ಎರಡು ಬಾರಿ ಹಲ್ಲುಜ್ಜಿ ಹಾಗೂ ಮೌತ್‌ವಾಶ್ ಬಳಸಿ. ಅಲ್ಲದೆ ತುಂಬಾ ಹೊತ್ತು ಹಲ್ಲುಜ್ಜುವುದು ಹಾಗೂ ಅಧಿಕ ಬಾರಿ ಮೌತ್‌ವಾಶ್ ಬಳಸುವುದು ಕೂಡ ವಸಡಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿದಿರಲಿ.



Click it and Unblock the Notifications
