Latest Updates
-
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಗರಂ ಮಸಾಲೆಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು!
ಭಾರತೀಯ ಅಡುಗೆಗಳಲ್ಲಿ ಸಾಮಾನ್ಯವಾಗಿ ಬಳಸುವ ಮಸಾಲೆಗಳಲ್ಲಿ ಗರಂ ಮಸಾಲೆ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಲವಂಗ, ದಾಲ್ಚಿನ್ನಿ, ಜೀರಿಗೆ, ಏಲಕ್ಕಿ, ಮೊದಲಾದ ಮಸಾಲೆಗಳ ಸಂಪೂರ್ಣ ಮಿಶ್ರಣವೇ ಈ ಗರಂ ಮಸಾಲೆ. ಅದರಲ್ಲೂ ನಾನ್ ವೆಜ್ ಪ್ರಿಯರಿಗಂತೂ ಗರಂಮಸಾಲೆ ಹಾಕದ ಖಾದ್ಯ ಅಪೂರ್ಣ.
ಇಂತಹ ಗರಂ ಮಸಾಲೆ ಕೇವಲ ನಿಮ್ಮ ಆಹಾರಕ್ಕೆ ಘಮ, ರುಚಿಯನ್ನ ಮಾತ್ರ ಸೇರಿಸುತ್ತದೆ ಎಂದು ನೀವು ನಂಬಿದ್ದರೆ, ನಿಮ್ಮ ಊಹೆ ತಪ್ಪು. ಏಕೆಂದರೆ ಗರಂ ಮಸಾಲೆಯಲ್ಲಿ ಸಾಕಷ್ಟು ಖನಿಜಗಳು ತುಂಬಿರುವುದರಿಂದ, ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನಮಗೆ ನೀಡುತ್ತದೆ. ಅವುಗಳಾವುವು ಎಂಬುದು ಈ ಲೇಖನ ಓದಿ ತಿಳಿಯುತ್ತೆ.
ಗರಂ ಮಸಾಲೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು, ಮನೆಯಲ್ಲಿಯೇ ಗರಂ ಮಸಾಲೆ ತಯಾರಿಸುವುದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಗರಂ ಮಸಾಲೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು:

ಜೀರ್ಣಕ್ರಿಯೆ ಸುಧಾರಣೆ:
ನಿಮ್ಮ ಆಹಾರಗಳಿಗೆ ಗರಂ ಮಸಾಲೆಯನ್ನು ಸೇರಿಸುವ ಒಂದು ಪ್ರಮುಖ ಪ್ರಯೋಜನವೆಂದರೆ ಅದು ಜೀರ್ಣಕ್ರಿಯೆಯನ್ನು ಸುಲಭ ಮಾಡುತ್ತದೆ. ಏಕೆಂದರೆ ಈ ಮಸಾಲೆ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಜ್ಯೂಸ್ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಕರುಳಿನ ಚಲನೆಯನ್ನು ಸುಗಮಗೊಳಿಸಿ, ಜೀರ್ಣಕ್ರಿಯೆಗೆ ಸಂಬಂಧಿಸಿದ ಅಸಿಡಿಟಿ, ಉಬ್ಬುವಿಕೆ, ಅಜೀರ್ಣ ಮುಂತಾದ ಸಮಸ್ಯೆಗಳನ್ನು ತಡೆಯುತ್ತದೆ.

ಚಯಾಪಚಯ ಶಕ್ತಿಯ ವೃದ್ಧಿ:
ಗರಂ ಮಸಾಲೆ ಹಲವು ಮಸಾಲೆಗಳ ಸಂಯೋಜನೆಯಾಗಿದ್ದು, ಈ ಪದಾರ್ಥಗಳು ಒಟ್ಟಾಗಿ ಫೈಟೊನ್ಯೂಟ್ರಿಯೆಂಟ್‌ಗಳಲ್ಲಿ ಸಮೃದ್ಧವಾಗಿವೆ, ಇದು ದೇಹದ ಚಯಾಪಚಯ ದರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುವರಿಗೆ ಇದು ಉತ್ತಮವಾಗಿದೆ. ಏಕೆಂದರೆ, ಹೆಚ್ಚಿನ ಚಯಾಪಚಯ ಶಕ್ತಿ ಎಂದರೆ ದೇಹವು ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಸುಡುವುದು ಎಂದರ್ಥ. ಆದ್ದರಿಂದ, ಒಬ್ಬ ವ್ಯಕ್ತಿಯು ಹೆಚ್ಚಿನ ಚಯಾಪಚಯ ಸಾಮರರ್ಥ್ಯವನ್ನು ಹೊಂದಿದ್ದರೆ, ಆತ ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸಿದರೂ, ಅವರ ತೂಕ ಹೆಚ್ಚಾಗುವುದಿಲ್ಲ.

ಹೃದಯದ ಆರೋಗ್ಯ:
ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುವ ಪದಾರ್ಥಗಳನ್ನು ಹುಡುಕುತ್ತಿದ್ದರೆ, ನೀವು ಈ ಗರಂ ಮಸಾಲೆಗೆ ಗಮನ ಕೊಡಬೇಕು. ಗರಂ ಮಸಾಲೆಯು ಏಲಕ್ಕಿಯನ್ನು ಹೊಂದಿದ್ದು, ಇದು ನಿಮ್ಮ ಹೃದಯಕ್ಕೆ ಉತ್ತಮವಾಗಿದೆ. ಜೊತೆಗೆ ಈ ಮಸಾಲೆಯನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಆಗುವುದು ಈ ಮೂಲಕ ನಿಮ್ಮ ಹೃದಯದ ಆರೋಗ್ಯವನ್ನು ಇನ್ನಷ್ಟು ಸುಧಾರಿಸುತ್ತದೆ.

ಕ್ಯಾನ್ಸರ್ ಅಪಾಯ ಕಡಿಮೆ ಮಾಡುವುದು:
ಕೆಲವು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ನಿಮ್ಮ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಕ್ಯಾನ್ಸರ್ ನಂತಹ ಮಾರಣಾಂತಿಕ ರೋಗಗಳಿಂದ ಪಾರಾಗಲು, ನಿಮ್ಮ ಆಹಾರಕ್ಕೆ ಗರಂ ಮಸಾಲೆ ಸೇರಿಸಬೇಕು. ಈ ಮಸಾಲೆಯು ಪೋಷಕಾಂಶಗಳನ್ನು ಹೊಂದಿದ್ದು ಅದು ದೇಹದಲ್ಲಿ ಗೆಡ್ಡೆಯ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ವಿವಿಧ ರೀತಿಯ ಕ್ಯಾನ್ಸರ್‌ಗಳನ್ನು ತಡೆಯುತ್ತದೆ.

ಮನೆಯಲ್ಲಿ ಗರಂ ಮಸಾಲೆ ಮಾಡುವುದು ಹೇಗೆ?:
ಗರಂ ಮಸಾಲೆ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದ್ದರೂ, ಪ್ರತಿಯೊಬ್ಬರೂ ರೆಡಿಮೇಡ್ ಅನ್ನು ಇಷ್ಟಪಡುವುದಿಲ್ಲ. ಅನೇಕರು ಇದನ್ನು ಮನೆಯಲ್ಲಿ ತಯಾರಿಸುತ್ತಾರೆ. ನಿಮಗೂ ಮನೆಯಲ್ಲಿಯೇ ತಯಾರಿಸಿದ ಗರಂ ಮಸಾಲೆ ಬೇಕಿದ್ದರೆ ಹೀಗೆ ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಪದಾರ್ಥಗಳು:
ಏಲಕ್ಕಿ
ಕರಿಮೆಣಸು
ದಾಲ್ಚಿನ್ನಿ
ಜೀರಿಗೆ
ದಾಲ್ಚಿನ್ನಿ ಎಲೆಗಳು
ತಯಾರಿಸುವ ವಿಧಾನ:
ಬಾಣಲೆಯಲ್ಲಿ, ಎಲ್ಲಾ ಮಸಾಲೆಗಳನ್ನು ಹಾಕಿ, ಹಸಿ ವಾಸನೆ ಹೋಗುವವರೆಗೆ ಡ್ರೈ ರೋಸ್ಟ್ ಮಾಡಿ. ಅವುಗಳನ್ನು ತಣ್ಣಗಾಗಲು ಬಿಡಿ. ನಂತರ ಈ ಮಿಶ್ರಣವನ್ನು ಮಿಕ್ಸಿಗೆ ಹಾಕಿ, ಪುಡಿ ಮಾಡಿ. ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ.

ಆಹಾರಕ್ಕೆ ಗರಂ ಮಸಾಲವನ್ನು ಸೇರಿಸುವುದು ಹೇಗೆ?:
ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಗಿರಲಿ, ಗರಂ ಮಸಾಲೆ ಯಾವುದೇ ಆಹಾರ ತಯಾರಿಸುವಾಗಾದರೂ ಬಳಸಬಹುದು. ಇದು ನಿಮ್ಮ ಭಕ್ಷ್ಯಗಳಿಗೆ ಉತ್ತಮವಾದ, ರೆಸ್ಟೋರೆಂಟ್ ತರಹದ ರುಚಿಯನ್ನು ನೀಡುತ್ತದೆ.
ನೆನಪಿಡಿ:
ಗರಂ ಮಸಾಲೆಯು ಅನೇಕ ಪ್ರಯೋಜನಗಳನ್ನು ಹೊಂದಿದ್ದರೂ, ಇದನ್ನು ಅತಿಯಾಗಿ ಸೇವಿಸಬಾರದು ಏಕೆಂದರೆ ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ, ಯಾವುದಾದರೂ ಆರೋಗ್ಯ ಸಮಸ್ಯೆ ಹೊಂದಿದ್ದರೆ, ಅದನ್ನು ನಿಮ್ಮ ಆಹಾರದ ಭಾಗವಾಗಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.



Click it and Unblock the Notifications
