Latest Updates
-
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್!
ಈ ಸೂಪರ್ ಫುಡ್ಸ್ ತಿಂದರೆ ರೋಗ ನಿರೋಧಕ ಸಾಮಾರ್ಥ್ಯ ಹೆಚ್ಚುವುದು
ಕೋವಿಡ್ 19 ಕಾಯಿಲೆ ಬಂದಾಗಿನಿಂದ ಎಲ್ಲರೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಂಬಾ ಕಾಳಜಿ ವಹಿಸುತ್ತಿದ್ದಾರೆ. ನಮ್ಮ ದೇಹಕ್ಕೆ ರೋಗ ಪ್ರತಿರೋಧಕ ಶಕ್ತಿ ಇದ್ದರೆ ಯಾವ ಕಾಯಿಲೆಗಳು ಸುಲಭವಾಗಿ ಬರುವುದಿಲ್ಲ.

ಅದರಲ್ಲೂ ಈಗ ಇಡೀ ದೇಶವನ್ನ ಕಾಡುತ್ತಿರುವ ಕೊರೊನಾ ವೈರಸ್ ಎಂಬ ಡೆಡ್ಲಿ ವೈರಸ್ ಯಾರಲ್ಲಿ ರೋಗ ಪ್ರತಿರೋಧಕ ಶಕ್ತಿ ಕಡಿಮೆ ಇರುತ್ತದೆಯೋ ಅವರಿಗೇ ಕಂಟಕ ತರುತ್ತಿದೆ. ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸಲು ನಾವು ತಿನ್ನುವ ಆಹಾರಗಳ ಕಡೆ ಹೆಚ್ಚಿನ ಗಮನ ನೀಡಬೇಕು.
ಇಲ್ಲಿ ನಾವು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸೂಪರ್‌ಫುಡ್‌ಗಳ ಬಗ್ಗೆ ಹೇಳಿದ್ದೇವೆ. ಈ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸುತ್ತಾ ಬಂದರೆ ರೋಗ ಪ್ರತಿರೋಧಕ ಶಕ್ತಿ ಹೆಚ್ಚುವುದು.

ಸಿಟ್ರಸ್ ಆಹಾರಗಳು:
ಶೀತ, ಕೆಮ್ಮು, ಜ್ವರ ಬಂದಾಗ ವಿಟಮಿನ್ ಸಿ ಇರುವ ಆಹಾರಗಳನ್ನು ತಿಂದಾಗ ದೇಹದಲ್ಲಿ ಬೇಗನೆ ಚೇತರಿಕೆ ಉಂಟಾಗುತ್ತದೆ. ಈ ಆಹಾರಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಬಿಳಿ ರಕ್ತ ಕಣಗಳ ಉತ್ಪತ್ತಿಗೆ ಸಹಕಾರಿಯಾಗಿದೆ.
ಸಿಟ್ರಸ್ ಅಂಶ ಅಧಿಕವಿರುವ ಆಹಾರಗಳೆಂದರೆ
- ಗ್ರೇಪ್‌ಫ್ರೂಟ್ಸ್
- ಕಿತ್ತಳೆ
- ಹುಣಸೆಹಣ್ಣು
- ನಿಂಬೆಹಣ್ಣು
- ಕಿತ್ತಳೆಹಣ್ಣು
- ಟೊಮೆಟೊ
- ಒಂದೇ ಬಗೆಯ ಆಹಾರ ಸೇವಿಸಬೇಡಿ, ನಿಮ್ಮ ಆಹಾರದಲ್ಲಿ ಹಲವಾರು ತರಕಾರಿಗಳಿರಲಿ.
- ಆಹಾರ ತೆಗೆದುಕೊಳ್ಳುವ ಪ್ರಮಾಣದ ಕಡೆಯೂ ಗಮನ ನೀಡಿ. ಒಂದು ಬಗೆಯ ವಿಟಮಿನ್ ತುಂಬಾ ತಿನ್ನಬೇಡಿ. ಎಲ್ಲಾ ಬಗೆಯ ವಿಟಮಿನ್‌ಗಳು ನಿಮ್ಮ ಆಹಾರದಲ್ಲಿರಲಿ.
- ಅಲ್ಲಿಯ ಮನೆ ಸ್ವಚ್ಛವಾಗಿಡಿ, ವೈದ್ಯರ ಬಳಿ ಮಾತನಾಡಿ ಅವರ ಸಲಹೆ ಪಡೆಯಿರಿ.
ಈ ಆಹಾರಗಳನ್ನು ನೀವು ತಿನ್ನುವ ಆಹಾರಕ್ಕೆ ಸೇರಿಸಿ ತಿಂದರೆ ಸಾಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ತುಂಬಾ ಒಳ್ಳೆಯದು.

ಕೆಂಪು ದುಂಡು ಮೆಣಸು
ಕೆಂಪು ದುಂಡು ಮೆಣಸು ಕೂಡ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ಇದರಲ್ಲಿ ವಿಟಮಿನ್ ಸಿ ಜೊತೆಗೆ ಬೀಟಾ ಕೆರೋಟಿನ್ ಇದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ತ್ವಚೆ ಆರೋಗ್ಯವನ್ನೂ ವೃದ್ಧಿಸುತ್ತದೆ, ನಿಮ್ಮ ತ್ವಚೆಯ ಹೊಳಪು ಹೆಚ್ಚಿಸುವುದು.

ಬ್ರೊಕೋಲಿ
ಬ್ರೊಕೋಲಿ ವಿಟಮನ್‌ಗಳಿರುವ ಸೂಪರ್ ಫುಡ್ ಆಗಿದೆ. ಇದರಲ್ಲಿ ವಿಟಮಿನ್‌ಗಳಾದ ಎ, ಸಿ ಮತ್ತು ಇ ಇದ್ದು, ನಾರಿನಂಶ, ಆ್ಯಂಟಿಆಕ್ಸಿಡೆಂಟ್ ನಿಮ್ಮ ಆಹಾರಕ್ರಮದಲ್ಲಿ ಸೇರಿಸಲೇಬೇಕಾದ ಆಹಾರ ಇದಾಗಿದೆ.

ಬೆಳ್ಳುಳ್ಳಿ
ಬೆಳ್ಳುಳ್ಳಿಯನ್ನು ಕೆಮ್ಮು, ಶೀತ ಉಂಟಾದಾಗ ಬೆಳ್ಳುಳ್ಳಿಯನ್ನು ಮನೆಮದ್ದಾಗಿ ಬಳಸುತ್ತಾರೆ. ಬೆಳ್ಳುಳ್ಳಿ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಇದು ಗಂಟಲಿನಲ್ಲಿ ಉರಿಯೂತ, ಗಂಟಲು ಕೆರೆತ ಇವುಗಳನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿ ರಕ್ತದೊತ್ತಡವನ್ನು ಕಡಿಮೆ ಮಾಡಲು, ಸಂಧಿ ನೋವು ಕಡಿಮೆ ಮಾಡಲು ಹಾಗೂ ದೇಹದಲ್ಲಿ ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ. ಇದರಲ್ಲಿರುವ ಅಲಿಸಿನ್ ಅಂಶ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.

ಶುಂಠಿ
ಗಂಟಲಿನಲ್ಲಿ ಕೆರೆತ, ಕೆಮ್ಮು ಉಂಟಾದಾಗ ಅತ್ಯತ್ತುಮವಾದ ಮನೆಮದ್ದು ಶುಂಠಿ. ಇದನ್ನು ಮದ್ದಾಗಿ ಮಾತ್ರವಲ್ಲ ಅಡುಗೆಗೆ ಬಳಸಿದರೆ ಅಡುಗೆಯ ರುಚಿ ಹೆಚ್ಚುವುದು ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಾ ಹೋಗುತ್ತದೆ. ಇದು ಮೈ ಉಷ್ಣತೆ ಹೆಚ್ಚಿಸುವುದು ಹಾಗೂ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ.
ಕೆಮ್ಮು, ಗಂಟಲು ಕೆರೆತ ಉಂಟಾದಾಗ, ಅರ್ಧ ಚಮಚ ಶುಂಠಿ ರಸಕ್ಕೆ, ಸ್ವಲ್ಪ ಕಾಳು ಮೆಣಸಿನ ಪುಡಿ ಮಿಶ್ರ ಮಾಡಿ ಆಗಾಗ ನೆಕ್ಕುತ್ತಿದ್ದರೆ ಗಂಟಲು ಕೆರೆತ ಕಡಿಮೆಯಾಗುವುದು.

ಪಾಲಾಕ್
ಪಾಲಾಕ್‌ನಲ್ಲಿ ವಿಟಮಿನ್ ಸಿ ಮಾತ್ರವಲ್ಲ ಅನೇಕ ಆ್ಯಂಟಿಆಕ್ಸಿಡೆಂಟ್ ಅಂಶಗಳು, ಬೀಟಾ ಕೆರೋಟಿನ್ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ನಮ್ಮ ದೇಹ ಸೋಂಕಿನ ವಿರುದ್ಧ ಹೋರಾಡುವಂತೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಎ ಕಣ್ಣಿಗೆ ಒಳ್ಳೆಯದು. ಇದನ್ನು ನಿಮ್ಮ ಆಹಾರಕ್ರಮದಲ್ಲಿ ತಪ್ಪದೆ ಸೇರಿಸಿ.

ಮೊಸರು
ಮೊಸರು ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದು ಪ್ರಮುಖವಾಗಿ ಹೊಟ್ಟೆ ಆರೋಗ್ಯ ಕಾಪಾಡುತ್ತದೆ. ಇನ್ನು ಯೋಗರ್ಟ್‌ಗಳಿಗೆ ಸ್ವಲ್ಪ ಹಣ್ಣು ಹಾಕಿ ತಿಂದರೆ ತುಂಬಾ ಒಳ್ಳೆಯದು. ಮೊಸರು ಅಥವಾ ಯೋಗರ್ಟ್ ಅನ್ನು ಸಂಜೆ ಅಥವಾ ಡಿನ್ನರ್‌ಗೆ ತಿಂದರೆ ಕೆಲವರಿಗೆ ಕಫ ಉಂಟಾಗುವುದು. ಇದನ್ನು ಬೆಳಗ್ಗೆ ಅಥವಾ ಮಧ್ಯಾಹ್ನ ತಿಂದರೆ ಆ ಸಮಸ್ಯೆ ಉಂಟಾಗುವುದಿಲ್ಲ.

ಬಾದಾಮಿ
ವಿಟಮಿನ್ ಸಿಯಷ್ಟೇ ವಿಟಮಿನ್ ಇ ಕೂಡ ದೇಹದ ಆರೋಗ್ಯ ವೃದ್ಧಿಸುವಲ್ಲಿ ಸಹಕಾರಿ. ಇದರಲ್ಲಿ ವಿಟಮಿನ್ ಇ ಜೊತೆಗೆ ಆರೋಗ್ಯಕರವಾದ ಕೊಬ್ಬಿನಂಶ ಕೂಡ ಇದೆ. ದಿನದಲ್ಲಿ ಒಂದು ಮುಷ್ಠಿಯಷ್ಟು ಬಾದಾಮಿ ತಿಂದರೆ ದೇಹಕ್ಕೆ ಅಗ್ಯತವಾದ ವಿಟಮಿನ್ ಇ ದೊರೆಯುವುದು.

ಅರಿಶಿಣ
ಅರಿಶಿಣವನ್ನು ಕೂಡ ಮನೆಮದ್ದಾಗಿ ಬಳಸಲಾಗುತ್ತದೆ. ಇದನ್ನು ಮನೆಯಲ್ಲಿ ಅಡುಗೆ ಮಾಡುವಾಗ ಬಳಸುವುದು ಸಹಜ. ದಿನ ಸ್ವಲ್ಪ ಅರಿಶಿಣ ನಮ್ಮ ದೇಹವನ್ನು ಸೇರಿದರೆ ದೇಹಕ್ಕೆ ಅನೇಕ ಗುಣಗಳಿವೆ. ಗಂಟಲು ಕೆರೆತ ಉಂಟಾದಾಗ ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿದರೆ ಗಂಟಲು ಕೆರೆತ ಕಡಿಮೆಯಾಗುವುದು. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲ, ಸ್ನಾಯುಗಳ ಆರೋಗ್ಯಕ್ಕೂ ಒಳ್ಳೆಯದು.

ಗ್ರೀನ್ ಟೀ
ಬ್ಲ್ಯಾಕ್ ಟೀ ಹಾಗೂ ಗ್ರೀನ್ ಟೀ ಎರಡರಲ್ಲೂ ಒಂದು ರೀತಿಯ ಆ್ಯಂಟಿಆಕ್ಸಿಡೆಂಟ್ ಆದ ಫ್ಲೇವೋನಾಯ್ಡ್ ಅಂಶವಿದೆ. ಗ್ರೀನ್ ಟೀಯಲ್ಲಿ ಅಮೈನೋ ಆಮ್ಲ ಇದು ನಮ್ಮ ಟೀ ಜೋನ್ ಅಂದರೆ ಕಣ್ಣು-ಮೂಗು-ಬಾಯಿ ಈ ಭಾಗದಲ್ಲಿ ರೋಗಾಣುಗಳ ವಿರುದ್ಧ ಹೋರಾಡುತ್ತದೆ.

ಪಪ್ಪಾಯಿ
ವಿಟಮಿನ್ ಸಿ ಅಧಿಕವಿರುವ ಹಣ್ಣು ಪಪ್ಪಾಯಿ. ಪ್ರತಿನಿತ್ಯ ನಿಮ್ಮ ದೇಹಕ್ಕೆ ಅಗ್ಯತವಿರುವ ವಿಟಮಿನ್ ಸಿ ಪಪ್ಪಾಯಿಯಲ್ಲಿದೆ. ಅಲ್ಲದೆ ಪಪ್ಪಾಯಿ ಉರಿಯೂತ ಕಡಿಮೆ ಮಾಡುವುದು ಹಾಗೂ ಜೀರ್ಣಾಂಗವ್ಯೂಹದ ಆರೋಗ್ಯ ವೃದ್ಧಿಗೆ ತುಂಬಾ ಸಹಕಾರಿ.
ಪಪ್ಪಾಯಿ ಹಣ್ಣಿನಲ್ಲಿ ಪೊಟಾಷ್ಯಿಯಂ, ಬಿ ವಿಟಮಿನ್ಸ್, ಪೋಲೆಟ್ ಅಂಶವಿದ್ದು ಒಟ್ಟು ಮೊತ್ತು ಆರೋಗ್ಯಕ್ಕೂ ಒಳ್ಳೆಯದು.

ಕಿವಿ ಹಣ್ಣು
ಪಪ್ಪಾಯಿ ರೀತಿಯಲ್ಲಿಯೇ ಕಿವಿ ಹಣ್ಣಿನಲ್ಲಿ ಕೂಡ ವಿಟಮಿನ್ ಸಿ ಹಾಗೂ ಹಾಗೂ ಅನೇಕ ವಿಟಮಿನ್‌ಗಳಿವೆ. ಇದರಲ್ಲಿ ಪೊಟಾಷ್ಯಿಯಂ, ಫೋಲೆಟ್, ಪೊಟಾಷ್ಯಿಯಂ, ವಿಟಮಿನ್ ಕೆ ಇವೆ. ಈ ಹಣ್ಣಿನಲ್ಲಿರುವ ವಿಟಮಿನ್‌ಗಳು ನಮ್ಮ ದೇಹ ಸೋಂಕಾಣುಗಳ ವಿರುದ್ಧ ಹೋರಾಡುವಂತೆ ಮಾಡುತ್ತದೆ.

ಚಿಕನ್
ಕಾಯಿಲೆ ಬಿದ್ದಾಗ ಚಿಕನ್ ಸೂಪ್ ಕುಡಿದರೆ ದೇಹ ಬೇಗನೆ ಚೇತರಿಸಿಕೊಳ್ಳುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೀತ ಕಡಿಮೆಯಾಗಲು ಕೂಡ ಚಿಕನ್ ಸೂಪ್ ಸಹಕಾರಿ. ನಮ್ಮ ದೇಹಕ್ಕೆ ಅಗ್ಯತವಿರುವ ವಿಟಮಿನ್ ಬಿ6 ಕೂಡ ಇದರಿಂದ ದೊರೆಯುವುದು.
ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪತ್ತಿಯಲ್ಲಿ ವಿಟಮಿನ್ ಬಿ6 ಪ್ರಮುಖ ಪಾತ್ರವಹಿಸುತ್ತದೆ. ಇನ್ನು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ ಇದು ಸಹಕಾರಿ.

ಸೂರ್ಯಕಾಂತಿ ಬೀಜ
ಸೂರ್ಯಕಾಂತಿ ಬೀಜದಲ್ಲಿ ರಂಜಕ, ಮೆಗ್ನಿಷ್ಯಿಯಂ, ವಿಟಮಿನ್ ಬಿ6 ಹಾಗೂ ವಿಟಮನ್ ಇ ಇದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆ್ಯಂಟಿಆಕ್ಸಿಡೆಂಟ್ ಅಂಶಗಳಿವೆ. ವಿಟಮಿನ್ ಇ ಇರುವ ಮತ್ತಿತರ ಆಹಾರಗಳೆಂದರೆ ಬೆಣ್ಣೆಹಣ್ಣು ಮತ್ತು ಸೊಪ್ಪು.

ಸಮುದ್ರಾಹಾರಗಳು
ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಮುದ್ರಾಹಾರಗಳು ಕೂಡ ಸಹಕಾರಿ. ಇವುಗಳಲ್ಲಿ ಸತುವಿನಂಶ ಅಧಿಕವಿರುತ್ತದೆ. ಏಡಿ, ಮೈದ್ವಂಗಿಗಳು ಇವುಗಳಲ್ಲಿ ಸತುವಿನಂಶ ಅಧಿಕವಿರುತ್ತದೆ. ಸಮುದ್ರಾಹಾರವನ್ನು ಸೇವಿಸುವುದರಿಂದ ಕೂಡ ದೇಹಕ್ಕೆ ಅಗ್ಯತವಾದ ವಿಟಮಿನ್ಸ್ ದೊರೆಯುವುದು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚುವುದು.
ಇತರ ಸಲಹೆ



Click it and Unblock the Notifications