Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ನೀವು ಒತ್ತಡದಲ್ಲಿದ್ದಾಗ ಈ ಆಹಾರ ಪದಾರ್ಥಗಳಿಂದ ದೂರವಿರಿ
ನಾವು ಸಾಮಾನ್ಯವಾಗಿ ಒತ್ತಡಕ್ಕೊಳಗಾದಾಗ, ಅದರಿಂದ ಹೊರಬರಲು ಸಹಾಯ ಮಾಡುವ ಕೆಲವು ಆಹಾರಗಳನ್ನು ಹುಡುಕಿ ಹೋಗುತ್ತೇವೆ. ಒಂದು ಕಪ್ ಸ್ಟ್ರಾಂಗ್ ಕಾಫಿ, ಸ್ವೀಟ್ಸ್ ಹೀಗೆ ವಿವಿಧ ಆಹಾರಗಳನ್ನು ತಿನ್ನುತ್ತೇವೆ. ಆದರೆ ಇದು ಆರೋಗ್ಯಕರ ಆಹಾರವಲ್ಲ. ಇದು ನಿಮ್ಮ ಒತ್ತಡವೇನೋ ಕಡಿಮೆ ಮಾಡಬಹುದು ಆದರೆ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಜೊತೆಗೆ ಆ ಒತ್ತಡವನ್ನು ನಮ್ಗೆ ಗೊತ್ತಿಲ್ಲದೇ ಮತ್ತಷ್ಟು ಹದಗೆಡಿಸುವ ಸಾಧ್ಯತೆಯೂ ಇರುತ್ತದೆ. ಹಾಗಾದರೆ ನಿವು ಒತ್ತಡದಲ್ಲಿದ್ದಾಗ ದೂರವಿಡಬೇಕಾದ ಆಹಾರಗಳು ಯಾವುವು ಎಂಬುದನ್ನು ಈ ಲೇಖನದಲ್ಲು ನೋಡೋಣ.
ನೀವು ಒತ್ತಡದಲ್ಲಿದ್ದಾಗ ದೂರವಿಡಬೇಕಾದ ಆಹಾರಗಳು ಇಲ್ಲಿವೆ:

ಕೆಫೀನ್:
ಇದನ್ನು ನಿಯಂತ್ರಿತ ರೀತಿಯಲ್ಲಿ ಸೇವಿಸಿದಾಗ ದೇಹಕ್ಕೆ ಒಳ್ಳೆಯದು, ಆದರೆ ಎರಡು ಕಪ್ಗಳಿಗಿಂತ ಹೆಚ್ಚು ಸೇವಿಸಿದರೆ ಅದು ಉರಿಯೂತಕ್ಕೆ ಕಾರಣವಾಗಬಹುದು. ಇದು ಒತ್ತಡದ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ನಿಮ್ಮ ಮೂತ್ರಜನಕಾಂಗದ ಗ್ರಂಥಿಗಳ ಮೇಲೆ ಹಾನಿ ಉಂಟುಮಾಡುವ ಮೂಲಕ ನಿಮಗೆ ಆತಂಕವನ್ನುಂಟುಮಾಡುತ್ತದೆ.

ಸಂಸ್ಕರಿಸಿದ ಮಾಂಸ:
ಹೆಸರೇ ಸೂಚಿಸುವಂತೆ, ಅವು ನೈಟ್ರೇಟ್ ಗಳು ಮತ್ತು ಸಲ್ಫೈಟ್ ಗಳಂತಹ ಸಂರಕ್ಷಕಗಳಿಂದ ತುಂಬಿವೆ. ಇವುಗಲು ಕರುಳಿನ ಆರೋಗ್ಯವನ್ನು ಹಾಳುಮಾಡುವುದಲ್ಲದೇ, ಮನಸ್ಥಿತಿ ಬದಲಾವಣೆಗಳಿಗೂ ಕಾರಣವಾಗುತ್ತದೆ.

ಸಂಸ್ಕರಿಸಿದ ಕಾರ್ಬ್ಸ್:
ನೀವು ಹೆಚ್ಚುವರಿ ಕಿಲೋಗಳನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಇದು ಖಂಡಿತವಾಗಿಯೂ ಸೇವಿಸಲು ಅತ್ಯುತ್ತಮ ವಸ್ತುವಲ್ಲ. ಅಲ್ಲದೆ, ಇದು ನಿಮ್ಮ ಪಟ್ಟಿಯಲ್ಲಿ ಇರಬಾರದು ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆಯಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ, ಇದು ನಿಧಾನವಾಗಿ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

ಓಟ್ಸ್ ನಂತಹ ವಸ್ತುಗಳು :
ಇದು ಯಾವಾಗಲೂ ಸಕ್ಕರೆ ಮತ್ತು ಸಂಸ್ಕರಿಸಿದ ಕಾರ್ಬ್ಗಳಿಂದ ತುಂಬಿರುತ್ತದೆ ಮತ್ತು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ, ಇದನ್ನು ಸೇವಿಸಿದ ನಂತರದ ಇಡೀ ದಿನ ನೀವು ಭಾವನಾತ್ಮಕವಾಗಿ ಕುಗ್ಗಿರಿರುತ್ತೀರಿ.

ಸಕ್ಕರೆ:
ಸಕ್ಕರೆಯನ್ನು ಸೇವಿಸುವ ಬಗ್ಗೆ ನೀವು ಜಾಗೃತರಾಗಿರಬೇಕು ಏಕೆಂದರೆ ಇದನ್ನು ನಮ್ಮ ದೈನಂದಿನ ಆಹಾರ ಸೇವಿಸುವುದನ್ನು ಕಡಿಮೆ ಮಾಡುತ್ತದೆ. ಉತ್ತಮ ಬ್ಯಾಕ್ಟೀರಿಯಾವನ್ನು ಕೊಲ್ಲುವ ಮೂಲಕ ಸಕ್ಕರೆ ನಿಮ್ಮ ಕರುಳನ್ನು ಅಸಮತೋಲನಗೊಳಿಸುತ್ತದೆ. ನಿಮ್ಮ ಕರುಳನ್ನು ಆರೋಗ್ಯವಾಗಿಡಲು, ಸಕ್ಕರೆಯನ್ನು ಕಡಿಮೆ ಮಾಡಿ. ಏಕೆಂದರೆ ನಮ್ಮ ಮಾನಸಿಕ ಆರೋಗ್ಯವು ನಮ್ಮ ಕರುಳಿನ ಆರೋಗ್ಯದೊಂದಿಗೆ ಗಮನಾರ್ಹವಾಗಿ ಸಂಪರ್ಕ ಹೊಂದಿದೆ.

ಸಂಸ್ಕರಿಸಿದ ಸಸ್ಯಾಹಾರಿ ಎಣ್ಣೆ:
ಒಮೆಗಾ -3 ಕೊಬ್ಬಿನಾಮ್ಲವು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದರೆ ಸಂಸ್ಕರಿಸಿದ ಸಸ್ಯಾಹಾರಿ ಎಣ್ಣೆಯು ಕೆಟ್ಟ ಪರಿಣಾಮ ಬೀರುತ್ತದೆ. ಇದು ಉರಿಯೂತವನ್ನುಂಟುಮಾಡಿ, ಹೊಟ್ಟೆಯ ಮೇಲೆ ಪರಿಣಾಮ ಬೀರುವಂತೆ ಮಾಡುತ್ತದೆ.

ಸೋಡಾ:
ಸಕ್ಕರೆಯ ಹೊರತಾಗಿ, ಡಾರ್ಕ್ ಸೋಡಾಗಳಲ್ಲಿ ಫಾಸ್ಪರಿಕ್ ಆಮ್ಲವಿದೆ, ಇದು ಮಾನಸಿಕ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶವಾದ ಮೆಗ್ನೀಸಿಯಮ್ ಹೀರಿಕೊಳ್ಳುವಿಕೆಯೊಂದಿಗೆ ಸ್ಪರ್ಧಿಸುತ್ತದೆ. ಆದ್ದರಿಂದ ಒತ್ತಡದಲ್ಲಿದ್ದಾಗ ಇದನ್ನು ಸೇವಿಸಬೇಡಿ.



Click it and Unblock the Notifications