Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಾವಿನಹಣ್ಣು ತಿಂದ ಬಳಿಕ ಈ ಆಹಾರಪದಾರ್ಥಗಳನ್ನು ಎಂದಿಗೂ ಸೇವಿಸಬೇಡಿ, ಎಚ್ಚರ!
ಹಣ್ಣುಗಳ ರಾಜ, ಮಾವು ಎಲ್ಲರೂ ಇಷ್ಟಪಡುವ ಹಣ್ಣು. ಮಾವಿನ ಹಣ್ಣಿನ ವಿವಿಧ ಖಾದ್ಯಗಳನ್ನ ನೆನಸಿಕೊಂಡರೆ ಬಾಯಲ್ಲಿ ನೀರೂರುವುದು. ಆದರೆ ಈ ಮಾವಿನ ಹಣ್ಣನ್ನು ತಿಂದ ಮೇಲೆ ಕೆಲವೊಂದು ಆಹಾರಗಳನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ. ಇದರಿಂದ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾದರೆ ಆ ವಸ್ತುಗಳಾವುವು? ಅವುಗಳನ್ನು ಯಾಕೆ ತಿನ್ನಬಾರದು, ತಿಂದರೆ ಏನಾಗುವುದು ಎಲ್ಲವನ್ನೂ ಈ ಲೇಖನದಲ್ಲಿ ವಿವರವಾಗಿ ನೀಡಿದ್ದೇವೆ.
ಮಾವಿನಹಣ್ಣು ತಿಂದ ನಂತರ ನೀವು ಸೇವಿಸಬಾರದ ಆಹಾರ ಪದಾರ್ಥಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ:

ಮಾವಿನ ಹಣ್ಣಿನಲ್ಲಿರುವ ಪೋಷಕಾಂಶಗಳು:
ಮಾವಿನಹಣ್ಣು ವಿಟಮಿನ್ ಸಿ, ವಿಟಮಿನ್ ಎ, ಫೋಲೇಟ್, ಕ್ಯಾಲ್ಸಿಯಂ, ಸೋಡಿಯಂ, ಪೊಟ್ಯಾಶಿಯಂ, ಕಬ್ಬಿಣ, ಮೆಗ್ನೀಶಿಯಂ, ಮ್ಯಾಂಗನೀಸ್, ರಂಜಕ ಮತ್ತು ನಿಯಾಸಿನ್ ಗಳ ಸಮೃದ್ಧ ಮೂಲವಾಗಿದ್ದು, ಆರೋಗ್ಯದ ಜೊತೆಗೆ ಸಾಕಷ್ಟು ಸೌಂದರ್ಯ ಲಾಭಗಳನ್ನು ಹೊಂದಿದೆ.

ಒಂದು ಕಪ್ ಮಾವಿನಹಣ್ಣಿನಲ್ಲಿರುವ ಪೋಷಕಾಂಶಗಳು:
ಎನರ್ಜಿ- 99 ಕೆ.ಸಿ.ಎಲ್
ಪ್ರೋಟೀನ್- 1.35 ಗ್ರಾಂ
ಕಾರ್ಬೋಹೈಡ್ರೇಟ್- 24.7 ಗ್ರಾಂ
ಫೈಬರ್- 2.64 ಗ್ರಾಂ
ಕೊಬ್ಬು- 0.627 ಗ್ರಾಂ
ಸಕ್ಕರೆ- 22.5 ಗ್ರಾಂ

ಮಾವಿನಹಣ್ಣು ತಿಂದ ನಂತರ ನೀವು ಸೇವಿಸಬಾರದ ಆಹಾರ ಪದಾರ್ಥಗಳು:
ನೀರು :
ಇದೊಂದನ್ನು ಮಾತ್ರ ಬಹಳ ಹಿಂದಿನಿಂದಲೂ ಕೇಳಿಕೊಂಡು ಬಂದಿರುತ್ತೇವೆ, ನಮ್ಮ ಅಜ್ಜ-ಅಜ್ಜಿಯರು ಈ ಮಾತನ್ನು ಸದಾ ಹೇಳುತ್ತಲೇ ಇರುತ್ತಿದ್ದರು ಅಲ್ವಾ? ಹೌದು, ಮಾವಿನಹಣ್ಣು ತಿಂದ ತಕ್ಷಣ ನೀವು ಎಂದಿಗೂ ನೀರು ಕುಡಿಯಬಾರದು. ಇದು ಗ್ಯಾಸ್ಟಿಕ್, ಹೊಟ್ಟೆ ಉಬ್ಬರ, ದು, ಹೊಟ್ಟೆ ನೋವು ಮತ್ತು ಇತರ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಬಹುದು. ಜೊತೆಗೆ ಗಂಟಲುನೋವು, ಶೀತದಂತಹ ಸಮಸ್ಯೆಗಳೂ ಕಂಡುಬರುತ್ತವೆ. ಆದ್ದರಿಂದ, ಮಾವಿನಹಣ್ಣು ಸೇವಿಸಿದ ಅರ್ಧ ಅಥವಾ ಒಂದು ಗಂಟೆಯ ನಂತರ ಮಾತ್ರ ನೀರನ್ನು ಕುಡಿಯಬೇಕು.

ತಂಪು ಪಾನೀಯ :
ಮಾವಿನಹಣ್ಣಿನಲ್ಲಿ ಈಗಾಗಲೇ ಸಕ್ಕರೆ ಅಧಿಕವಾಗಿದ್ದು, ತಂಪು ಪಾನೀಯಗಳಲ್ಲೂ ಹೆಚ್ಚಾಗಿರುತ್ತದೆ. ಆದ್ದರಿಂದ ಮಾವಿನಹಣ್ಣಿನ ನಂತರ ತಂಪು ಪಾನೀಯಗಳನ್ನು ಸೇವಿಸುವುದರಿಂದ ದಿಢೀರನೇ ನಿಮ್ಮ ಸಕ್ಕರೆ ಮಟ್ಟವನ್ನು ಹೆಚ್ಚಾಗಬಹುದು. ಮುಖ್ಯವಾಗಿ ಮಧುಮೇಹ ರೋಗಿಗಳಿಗೆ ಇದು ತುಂಬಾ ಅಪಾಯಕಾರಿ. ಆದ್ದರಿಂದ ಮಾವಿನ ಹಣ್ಣು ತಿಂದ ಮೇಲೆ ತಂಪು ಪಾನೀಯಗಳನ್ನು ಎಂದಿಗೂ ಕುಡಿಯಲು ಹೋಗಬೇಡಿ.

ಮೊಸರು:
ಅನೇಕ ಜನರು ಮೊಸರು ಮತ್ತು ಮಾವಿನಹಣ್ಣಿನ ತುಂಡುಗಳನ್ನು ಮಿಕ್ಸ್ ಮಾಡಿ ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ಸಂಯೋಜನೆಯು ನಿಮ್ಮ ದೇಹಕ್ಕೆ ಒಳ್ಳೆಯದಲ್ಲ, ಏಕೆಂದರೆ ಇದು ದೇಹದಲ್ಲಿ ಶಾಖ ಮತ್ತು ಶೀತವನ್ನು ಉಂಟುಮಾಡಬಹುದು. ಜೊತೆಗೆ ಚರ್ಮದ ಸಮಸ್ಯೆಗಳು ಅಥವಾ ಅಲರ್ಜಿಗಳಿಗೆ ಕಾರಣವಾಗಬಹುದು. ಆದ್ದರಿಂದ ಮಾವಿನ ಹಣ್ಣಿನ ಜೊತೆಗೆ ಮೊಸರನ್ನು ಸೇವಿಸಬೇಡಿ, ಅಥವಾ ಮಾವಿನ ಹಣ್ಣು ತಿಂದ ತಕ್ಷಣ ಮೊಸರು ತಿನ್ನಬೇಡಿ.

ಮಸಾಲೆ ಆಹಾರ:
ಮಾವಿನಹಣ್ಣಿನ ನಂತರ ಹೆಚ್ಚು ಮಸಾಲೆಯುಕ್ತ ಆಹಾರ ಅಥವಾ ಮೆಣಸಿನಕಾಯಿಯನ್ನು ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳು ಉಂಟಾಗಬಹುದು. ಅಷ್ಟೇ ಅಲ್ಲ ಇದು ಮೊಡವೆ ಮತ್ತು ಅಲರ್ಜಿ ಸೇರಿದಂತೆ ನಿಮ್ಮ ಚರ್ಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆದ್ದರಿಂದ ಮಸಾಲೆಯುಕ್ತ ಆಹಾರಗಳಿಂದ ದೂರವಿರಿ.

ಹಾಗಲಕಾಯಿ:
ಹಾಗಲಕಾಯಿ ಮತ್ತು ಮಾವಿನಹಣ್ಣು ಅತ್ಯಂತ ಕೆಟ್ಟ ಸಂಯೋಜನೆಯಾಗಿದೆ. ಜೊತೆಗೆ ಮಾವಿನ ಹಣ್ಣು ತಿಂದಮೇಲೆಯೂ ಹಾಗಲಕಾಯಿ ತಿನ್ನಬಾರದು. ಏಕೆಂದರೆ ಇದು ವಾಕರಿಕೆ, ವಾಂತಿ ಮತ್ತು ಇತರ ಜೀರ್ಣಕ್ರಿಯೆಗೆ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗೂ ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಆದ್ದರಿಂದ ಮಾವಿನ ಹಣ್ಣಿನಿಂದ ಹಾಗಲಕಾಯಿಯನ್ನು ಆದಷ್ಟು ದೂರವಿಡುವುದು ಉತ್ತಮ.



Click it and Unblock the Notifications
