Latest Updates
-
ಅಮೆರಿಕದಲ್ಲಿ ಸಮಯ ಬದಲಾವಣೆ: ಭಾರತ-ಯುಎಸ್ ಮೀಟಿಂಗ್ಗಳಲ್ಲಿ ಗೊಂದಲ ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ -
ನಂದಿನಿ ಹಾಲಿನ ದರ ಏರಿಕೆ: ಬಜೆಟ್ ಬಿಸಿ ತಟ್ಟದಂತೆ ಪ್ರೋಟೀನ್, ಕ್ಯಾಲ್ಸಿಯಂ ಪಡೆಯುವುದು ಹೇಗೆ? -
ಕನ್ನಡ ರಾಜ್ಯೋತ್ಸವ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಇಲ್ಲಿದೆ ಮಹತ್ವದ ಸಲಹೆಗಳು! -
ದೆಹಲಿ ವಾಯು ಮಾಲಿನ್ಯ: 'ಸಿವಿಯರ್' AQI ನಡುವೆ ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಪಾಲಿಸಿ! -
ಅರ್ನಬ್ ಚಂಡಮಾರುತದ ಆರ್ಭಟ: ನಿಮ್ಮ ಕುಟುಂಬದ ಸುರಕ್ಷತೆಗಾಗಿ 30 ನಿಮಿಷದ ತುರ್ತು ಪ್ಲಾನ್ ಇಲ್ಲಿದೆ -
ದೀಪಾವಳಿ ಸಿಹಿ ತಿನ್ನುವ ಮುನ್ನ ಎಚ್ಚರ! ದೆಹಲಿಯಲ್ಲಿ 4,000 ಕೆಜಿ ಕಳಪೆ ಆಹಾರ ಜಪ್ತಿ, ನಿಮ್ಮ ಆರೋಗ್ಯಕ್ಕೆ ಅಪಾಯವೇ? -
ಹ್ಯಾಲೋವಿನ್ ಪಾರ್ಟಿ ಹವಾ: ₹500ರೊಳಗೆ ಬೆಸ್ಟ್ ಲುಕ್, ವೈರಲ್ ರೀಲ್ಸ್ ಟ್ರಿಕ್ಸ್ ಮತ್ತು ಸೇಫ್ಟಿ ಗೈಡ್! -
ದೆಹಲಿ-ಎನ್ಸಿಆರ್ನಲ್ಲಿ ಮಳೆಯ ನಂತರ ಶುದ್ಧ ಗಾಳಿ: 20 ನಿಮಿಷಗಳ ಸುರಕ್ಷಿತ ವಾಕಿಂಗ್ಗೆ ಇಲ್ಲಿದೆ ಪ್ಲಾನ್! -
ದೀಪಾವಳಿ ಬಜೆಟ್ ಚಿಂತೆಯೇ? ದಂಪತಿಗಳೇ, ಈ 'ಮನಿ ಡೇಟ್' ಮೂಲಕ ಹಣಕಾಸಿನ ಸಮಸ್ಯೆಗಳಿಗೆ ಗುಡ್ ಬೈ ಹೇಳಿ! -
ವಿಶ್ವ ವೀಗನ್ ದಿನ: ಜೇಬಿಗೆ ಹೊರೆಯಾಗದಂತೆ ಪ್ರೋಟೀನ್ ಪಡೆಯೋದು ಹೇಗೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್!
ಕೊಲೆಸ್ಟ್ರಾಲ್ ಕಡಿಮೆ ಮಾಡಲು ಈ 5 ಹಣ್ಣು ತುಂಬಾ ಒಳ್ಳೆಯದು
ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳಲ್ಲಿ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಕೂಡ ಒಂದು. ಆದ್ದರಿಂದ ಸರಿಯಾದ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಒಂದು ಅಧ್ಯಯನದ ಪ್ರಕಾರ, ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಕೆಲವು ಹಣ್ಣುಗಳಿವೆ. ಆ ಹಣ್ಣುಗಳು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುತ್ತವೆ, ಇದು ಕೊಬ್ಬನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಸೇರಿಸಲು ಫೈಬರ್-ಭರಿತ ಹಣ್ಣುಗಳನ್ನು ಸೇರಿಸುವ ಬಗ್ಗೆ ತಿಳಿದುಕೊಳ್ಳಲು ಈ ಲೇಖನ ಓದಿ.
ಕೊಲೆಸ್ಟ್ರಾಲ್ ಮಟ್ಟವನ್ನು ಸರಿತೂಗಿಸುವಂತಹ ಹಣ್ಣುಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

1. ಸೇಬು:
ಇದನ್ನು ವೈದ್ಯರಿಂದ ದೂರವಿಡುವ ಹಣ್ಣು ಎಂದು ಕರೆಯಲು ಹಲವಾರು ಕಾರಣಗಳಿವೆ, ಹೊಳೆಯುವ ಚರ್ಮದಿಂದ ಹಿಡಿದು, ಜೀರ್ಣಕ್ರಿಯೆಯವರೆಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿರುವುದರ ಜೊತೆಗೆ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸೇಬು ಪೆಕ್ಟಿನ್ ಫೈಬರ್, ಆಂಟಿಆಕ್ಸಿಡೆಂಟ್ ಪಾಲಿಫಿನಾಲ್ಗಳಂತಹ ಅಂಶಗಳು, ಹಾನಿಕಾರಕ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಆಕ್ಸಿಡೀಕರಣವನ್ನು ನಿಧಾನಗೊಳಿಸುತ್ತದೆ - ಇವೆಲ್ಲವೂ ಹೃದಯಾಘಾತದ ಅಪಾಯಕಾರಿ ಅಂಶಗಳಾಗಿವೆ. ಅಷ್ಟೇ ಅಲ್ಲ, ಪಾಲಿಫಿನಾಲ್ಗಳು ಹೃದಯ ಸ್ನಾಯುಗಳು ಮತ್ತು ರಕ್ತನಾಳಗಳನ್ನು ಸ್ವತಂತ್ರ ರಾಡಿಕಲ್ ಹಾನಿಯಿಂದ ರಕ್ಷಿಸುತ್ತದೆ.

2. ಆವಕಾಡೊ:
ಆವಕಾಡೊ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಮತ್ತೊಂದು ಹಣ್ಣು. ಈ ಹಣ್ಣು ಉತ್ತಮ ಕೊಬ್ಬಿನ ಉತ್ತಮ ಮೂಲವಾಗಿದ್ದು, ಈ ಕೊಬ್ಬುಗಳು ಅನಾರೋಗ್ಯಕರ ಕೊಬ್ಬನ್ನು ಬದಲಿಸಬಹುದು, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ವಿಟಮಿನ್ ಕೆ, ಸಿ, ಬಿ5, ಬಿ6, ಇ ಮತ್ತು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳಂತಹ ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿದ್ದು, ಹೃದಯ ಆರೋಗ್ಯಕರವಾಗಿ ಕಾರ್ಯನಿರ್ವಹಿಸಲು ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ಟೊಮೆಟೊ:
ವಿಟಮಿನ್ ಎ, ಬಿ, ಕೆ ಮತ್ತು ಸಿ ಸೇರಿದಂತೆ ಹಲವಾರು ವಿಟಮಿನ್ಗಳಲ್ಲಿ ಟೊಮೆಟೊಗಳು ಅಧಿಕವಾಗಿದ್ದು, ಇವು ಕಣ್ಣುಗಳು, ಚರ್ಮ ಮತ್ತು ಹೃದಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಜೊತೆಗೆ ಟೊಮ್ಯಾಟೋ ಲೈಕೋಪೀನ್ನ ಉತ್ತಮ ಮೂಲವಾಗಿದ್ದು, ಇದು ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಸಸ್ಯ ರಾಸಾಯನಿಕವಾಗಿದೆ. ಸಂಶೋಧನೆಯ ಪ್ರಕಾರ, ಟೊಮೆಟೊಗಳನ್ನು ಬೇಯಿಸಿದಾಗ ಅಥವಾ ಸಂಸ್ಕರಿಸಿದಾಗ ದೇಹವು ಹೆಚ್ಚು ಲೈಕೋಪೀನ್ ಅನ್ನು ಹೀರಿಕೊಳ್ಳುತ್ತದೆ, ಆದ್ದರಿಂದ ಟೊಮೆಟೊ ರಸವನ್ನು ಕುಡಿಯಿರಿ ಮತ್ತು ನಿಮ್ಮ ಆಹಾರದಲ್ಲಿ ಟೊಮೆಟೊಗಳನ್ನು ಸೇರಿಸಿ.

4. ಸಿಟ್ರಸ್ ಹಣ್ಣುಗಳು:
ನಿಂಬೆಹಣ್ಣು, ಕಿತ್ತಳೆ ಮತ್ತು ದ್ರಾಕ್ಷಿಹಣ್ಣುಗಳಂತಹ ಸಿಟ್ರಸ್ ಹಣ್ಣುಗಳು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಸಿಟ್ರಸ್ ಹಣ್ಣುಗಳು ಹೆಸ್ಪೆರಿಡಿನ್ ಅನ್ನು ಒಳಗೊಂಡಿದ್ದು, ಇದು ಅಧಿಕ ರಕ್ತದೊತ್ತಡದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ, ಜೊತೆಗೆ ಪೆಕ್ಟಿನ್ (ಫೈಬರ್) ಮತ್ತು ಲಿಮೋನಾಯ್ಡ್ ರಾಸಾಯನಿಕಗಳು ಅಪಧಮನಿಕಾಠಿಣ್ಯವನ್ನು ತಡೆಯುತ್ತದೆ ಮತ್ತು ರಕ್ತದಲ್ಲಿನ "ಅನಾರೋಗ್ಯಕರ" (LDL) ಕೊಬ್ಬನ್ನು ತಡೆಯುತ್ತದೆ.

5. ಪಪ್ಪಾಯಿ:
ಪಪ್ಪಾಯಿಯಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್, ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಇರುವುದರಿಂದ ಅಪಧಮನಿಗಳು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಉತ್ಕರ್ಷಣ ನಿರೋಧಕಗಳು ಕೊಲೆಸ್ಟ್ರಾಲ್ ಅನ್ನು ಆಕ್ಸಿಡೀಕರಣದಿಂದ ರಕ್ಷಿಸುತ್ತವೆ. ಕೊಲೆಸ್ಟ್ರಾಲ್ ಆಕ್ಸಿಡೀಕರಣಗೊಂಡಾಗ, ಹೃದ್ರೋಗಕ್ಕೆ ಕಾರಣವಾಗುವ ಅಡೆತಡೆಗಳನ್ನು ರೂಪಿಸುವ ಸಾಧ್ಯತೆ ಹೆಚ್ಚು. ಇದಲ್ಲದೆ, ಪಪ್ಪಾಯಿಯಲ್ಲಿ ಹೆಚ್ಚಿನ ಫೈಬರ್ ಅಂಶವು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.



Click it and Unblock the Notifications
