Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
Eta Variant of COVID: ಮಂಗಳೂರಿನ ವ್ಯಕ್ತಿಯಲ್ಲಿ ಈಟ ವೈರಸ್ ಪತ್ತೆ, ಈ ಕೊರೊನಾ ರೂಪಾಂತರ ಅಪಾಯಕಾರಿಯೇ?
ಕೊರೊನಾ ವೈರಸ್ 3ನೇ ಆತಂಕ ಎದುರಾಗಿದೆ, ಇದೀಗ ಕರ್ನಾಟಕದಲ್ಲಿ ಕೊರೊನಾವೈರಸ್‌ನ ಮತ್ತೊಂದು ರೂಪಾಂತರ ಈಟ ವೈರಸ್ ಪತ್ತೆಯಾಗಿದೆ. ನಾಲ್ಕು ತಿಂಗಳ ಹಿಂದೆ ದುಬೈನಿಂದ ಮಂಗಳೂರಿಗೆ ಬಂದಿರುವ ವ್ಯಕ್ತಿಯಲ್ಲಿ ಪತ್ತೆಯಾಗಿದೆ. ಅವರಿಗೆ ಈಟ ವೈರಸ್ ತಗುಲಿರುವುದು ಆಗಸ್ಟ್ 5ಕ್ಕೆ ಖಚಿತವಾಗಿದೆ.
ಈಟ ವೈರಸ್ ಇತರ ರೂಪಾಂತರಗಳಿಗಿಂತಲೂ ಪರಿಣಾಮಕಾರಿಯೇ, ಲಸಿಕೆ ಇದರ ವಿರುದ್ಧ ಪರಿಣಾಮ ಬೀರುವುದೇ? ಈ ರೂಪಾಂತರ ಬೇಗನೆ ಹರಡುವುದೇ ಎಂಬೆಲ್ಲಾ ಮಾಹಿತಿ ತಿಳಿಯೋಣ:

ಭಾರತದಲ್ಲಿ ಈಟ ವೈರಸ್ ಪತ್ತೆಯಾಗಿರುವುದು ಇದೇ ಮೊದಲಲ್ಲ
ಗಮನಿಸಬೇಕಾದ ಒಂದು ವಿಷಯ ಏನೆಂದರೆ ಕೊರೊನಾ ರೂಪಾಂತರ ಈಟ ವೈರಸ್ ಪತ್ತೆಯಾಗಿರುವುದು ಇದೇ ಮೊದಲಲ್ಲ, 2020 ಏಪ್ರಿಲ್‌ನಲ್ಲೂ ಈ ವೈರಸ್ ಕಂಡು ಬಂದಿತ್ತು. ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯ ವೈರಾಲಾಜಿ ಲ್ಯಾಬ್ ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ನೀಡಿತ್ತು.
ಜುಲೈ, 2021ರಲ್ಲಿ ಭಾರತದಲ್ಲಿ ಮತ್ತೊಂದು ಈಟ ವೈರಸ್ ಕೇಸ್ ಪತ್ತೆಯಾಯ್ತು. ಮಿಜೋರಾಂನ 75 ಜನರ ಸ್ಯಾಂಪಲ್ ತೆಗೆದು ಪರೀಕ್ಷಿಸಿದಾಗ ಅಲ್ಲಿಯೂ ಈ ವೈರಸ್ ಪತ್ತೆಯಾಗಿತ್ತು.

ಮೊದಲಿಗೆ ಈ ವೈರಸ್ ಎಲ್ಲಿ ಪತ್ತೆಯಾಯ್ತು?
ಟ ರೂಪಾಂತರ ಅಥವಾ B.1.525 ರೂಪಾಂತರ ವೈರಸ್ ಡಿಸೆಂಬರ್ 2020ರಲ್ಲಿ ಯುಕೆ ಮತ್ತು ನೈಜೀರಿಯಾದಲ್ಲಿ ಕಂಡು ಬಂತು

ಈಟ ರೂಪಾಂತರ ಅಪಾಯಕಾರಿಯೇ?
ಈಟ ರೂಪಾಂತರ ಇತರ ರೂಪಾಂತರಗಳಂತೆಯೇ ಪರಿಣಾಮ ಬೀರುವುದು. ಈಟ ರೂಪಾತರ ಇತರ ರೂಪಾಂತರಗಳಾದ ಆಲ್ಫಾ, ಬೇಟಾ, ಗಾಮಾದಂತೆ N501Y ರೂಪಾಂತರ ಹರಡುವುದಿಲ್ಲ. ಅಲ್ಲದೆ ಇತರ ವೈರಸ್‌ಗಳಿಗಿಂತ ಬೇಗನೆ ಹರಡುವುದೋ ಇಲ್ಲ. ಈ ರೂಪಾಂತರ ವೈರಸ್‌ನ ಲಕ್ಷಣಗಳು ಇತರ ಕೊರೊನಾ ವೈರಸ್‌ನಂತೆಯೇ ಇರುವುದು.
ಈಟ ವೈರಸ್ ಇತರ ವೈರಸ್‌ಗಳಂತೆಯೇ ಸ್ವಭಾವ ಲಕ್ಷಣಗಳನ್ನು ಹೊಂದಿದೆ, ಇತರ ರೂಪಾಂತರ ವೈರಸ್ ತಗುಲಿದಾಗ ಉಂಟಾಗುವ ಆರೋಗ್ಯ ಸಮಸ್ಯೆಗಳು ಈಟ ವೈರಸ್ ತಗುಲಿದಾಗಲೂ ಉಂಟಾಗುವುದು.

ರೂಪಾಂತರಗಳ ವಿರುದ್ಧ ಲಸಿಕೆ ಪರಿಣಾಮಕಾರಿಯೇ?
ಲಸಿಕೆ ಆಲ್ಫಾ, ಬೇಟಾ, ಗಾಮ, ಡೆಲ್ಟಾ, ಈಟ ರೂಪಾಂತರ ವಿರುದ್ಧ ಪರಿಣಾಮಕಾರಿಯಾಗಿದೆ. ಎರಡು ಡೋಸ್ ಲಸಿಕೆ ಪಡೆದವರು ಈ ರೂಪಾಂತರ ವೈರಸ್ ವಿರುದ್ಧ ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿರುತ್ತಾರೆ.



Click it and Unblock the Notifications