ಕಬ್ಬಿಣಾಂಶದ ಕೊರತೆಯೇ? ಈ ಆಹಾರಗಳನ್ನು ಸೇವಿಸಿ

ಮನುಷ್ಯನ ಮೆದುಳು ಅತ್ಯಂತ ಪ್ರಮುಖವಾದ ಅಂಗ. ದೇಹದ ಯಾವುದೇ ಅಂಗಾಂಗಗಳು ಸುಸೂತ್ರವಾದ ಚಲನೆಯನ್ನು ಹೊಂದಬೇಕು ಎಂದರೆ ಮೆದುಳಿನ ಸಂಜ್ಞೆ ಸರಿಯಾಗಿ ಇರಬೇಕು. ಇಲ್ಲವಾದರೆ ವ್ಯಕ್ತಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗೆ ಒಳಗಾಗಬೇಕಾಗುವುದು. ಹಾಗಾಗಿ ನಾವು ಸೇವಿಸುವ ಆಹಾರದಲ್ಲಿ ಮಿದುಳಿಗೆ ಪೋಷಣೆ ನೀಡುವ ಮತ್ತು ರಕ್ತವನ್ನು ಹೆಚ್ಚಿಸುವ ಕಬ್ಬಿಣಾಂಶದ ಆಹಾರವನ್ನು ಹೇರಳವಾಗಿ ಸೇವಿಸಬೇಕು. ಆಗ ವ್ಯಕ್ತಿಯು ಉತ್ತಮ ಆರೋಗ್ಯದಿಂದ ಉತ್ಸಾಹ ಶೀಲ ಪ್ರವೃತ್ತಿಯನ್ನು ಹೊಂದಿರುತ್ತಾನೆ.

Eat This Super Food To Fight Iron Deficiency

ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಉತ್ತಮ ಕಬ್ಬಿಣಾಂಶಗಳು ಇದ್ದರೆ ರಕ್ತದಲ್ಲಿ ಕಬ್ಬಿಣಾಂಶದ ಏರಿಕೆ ಆಗುವುದು. ಹಾಗೊಮ್ಮೆ ನಮ್ಮ ರಕ್ತದಲ್ಲಿ ಕಬ್ಬಿಣಾಂಶದ ಕೊರತೆ ಇದೆ ಎಂದಾದರೆ ಅದು ಅನೀಮಿಯಾ ಅಥವಾ ರಕ್ತಹೀನತೆ ಎನಿಸಿಕೊಳ್ಳುತ್ತದೆ. ಯಾರು ಅಗತ್ಯ ಪ್ರಮಾಣದಷ್ಟು ರಕ್ತವನ್ನು ಹೊಂದಿರುವುದಿಲ್ಲ ಅವರು ಸಾಕಷ್ಟು ಬಗೆಯ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುವುದು. ರಕ್ತದಲ್ಲಿ ಕಬ್ಬಿಣಾಂಶದ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ವ್ಯಕ್ತಿ ಮಾನಸಿಕವಾಗಿ ಒತ್ತಡ, ಸಿಟ್ಟು ಹಾಗೂ ಒರಟಾದ ವರ್ತನೆಯನ್ನು ತೋರುವನು.

ಮಹಿಳೆಯರೇ ಹೆಚ್ಚು

ಮಹಿಳೆಯರೇ ಹೆಚ್ಚು

ಕೆಲವು ಅಧ್ಯಯನ ಹಾಗೂ ಸಂಶೋಧನೆಯಿಂದ ತಿಳಿದು ಬಂದ ಮಾಹಿತಿಯ ಪ್ರಕಾರ ಭಾರತದಲ್ಲಿ ಶೇ.50ರಷ್ಟು ಮಹಿಳೆಯರು ರಕ್ತ ಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿ ಕಬ್ಬಿಣದ ಕೊರತೆ ಇದ್ದಾಗ ರಕ್ತ ಹೀನತೆ ಸಮಸ್ಯೆಯು ಸಾಮಾನ್ಯವಾಗಿ ಕಾಡುವುದು. ರಕ್ತ ಹೀನತೆಯ ಸಮಸ್ಯೆಯಿಂದ ಹೊರ ಬರಬೇಕು ಎಂದರೆ ರಕ್ತದಲ್ಲಿ ಕಬ್ಬಿಣಾಂಶ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಹೇರಳವಾಗಿ ಸೇವಿಸಬೇಕು. ನಾವು ನಿತ್ಯ ಸೇವಿಸುವ ಆಹಾರದಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಉತ್ತಮವಾಗಿದ್ದರೆ ದೇಹದಲ್ಲಿ ಸಾಕಷ್ಟು ರಕ್ತ ಪ್ರಮಾಣ ಹೆಚ್ಚುವುದು.

ರಕ್ತ ಹೀನತೆ ಎಂದರೇನು?

ರಕ್ತ ಹೀನತೆ ಎಂದರೇನು?

ದೇಹದಲ್ಲಿ ಆರೋಗ್ಯಕರವಾದ ಹಿಮಗ್ಲೋಬಿನ್ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ಅದನ್ನು ರಕ್ತ ಹೀನತೆ ಎಂದು ಕರೆಯುವರು. ರಕ್ತಹೀನತೆ ಇರುವಾಗ ಆಮ್ಲಜನಕದ ಸಾಗಣೆಗೆ ಅಡ್ಡಿಯಾಗುವುದು. ಅದನ್ನು ಸಾಗಿಸುವ ಸಾಮರ್ಥ್ಯವು ರಕ್ತದ ಕಣಗಳಿಗೆ ಇರುವುದಿಲ್ಲ. ಈ ಸಮಸ್ಯೆಯು ಮಾರಣಾಂತಿಕ ಆರೋಗ್ಯ ಸಮಸ್ಯೆಗೆ ಕಾರಣವಾಗುವುದು.

ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ

ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ

ಎನ್ ಎಚ್ ಎಸ್(ರಾಷ್ಟ್ರೀಯ ಆರೋಗ್ಯ ಸೇವೆ)ನ ಪ್ರಕಾರ ವಯಸ್ಕ ಪುರುಷರಿಗೆ ಪ್ರತಿದಿನ ಸುಮಾರು 8.7 ಮಿ.ಗ್ರಾಂ ಕಬ್ಬಿಣಾಂಶದ ಅಗತ್ಯವಿರುತ್ತದೆ. ವಯಸ್ಕ ಮಹಿಳೆಯರಿಗೆ 14.8 ಗ್ರಾಂ ಕಬ್ಬಿಣಾಂಶದ ಅಗತ್ಯವಿರುತ್ತದೆ. ಅದೇ ಮೌಲ್ಯವು 50ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ 8.9 ಮಿ.ಗ್ರಾಂ ಸಾಕಾಗುವುದು. ಏಕೆಂದರೆ 50 ವರ್ಷ ದಾಟಿದ ಮಹಿಳೆಯರು ಋತುಚಕ್ರಗಳಿಗೆ ಒಳಗಾಗುವುದಿಲ್ಲ. ಜೊತೆಗೆ ರಕ್ತದ ಹಾನಿಯನ್ನು ಅನುಭವಿಸುವುದಿಲ್ಲ.

ರಕ್ತ ಹೀನತೆ ಅಥವಾ ಕಬ್ಬಿಣಾಂಶದ ಪೂರೈಕೆಗಾಗಿ ಕೆಲವು ವಿಶೇಷ ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುವುದು.

ಕಬ್ಬಿಣಾಂಶದ ಕೊರತೆಯಿಂದ ಕಾಡುವ ಆರೋಗ್ಯ ಸಮಸ್ಯೆಗಳು

ಕಬ್ಬಿಣಾಂಶದ ಕೊರತೆಯಿಂದ ಕಾಡುವ ಆರೋಗ್ಯ ಸಮಸ್ಯೆಗಳು

- ವ್ಯಕ್ತಿಯಲ್ಲಿ ಯಾವುದೇ ಉತ್ಸಾಹ ಹಾಗೂ ಶಕ್ತಿಯುತವಾದ ಭಾವನೆ ಇರುವುದಿಲ್ಲ.

- ಉಸಿರಾಟದ ತೊಂದರೆಯನ್ನು ಅನುಭವಿಸಬೇಕಾಗುವುದು.

- ಒಂದು ಬಗೆಯ ಸೆಳೆತ ಹಾಗೂ ಬಡಿತಕ್ಕೆ ಒಳಗಾಗಬೇಕಾಗುವುದು.

- ದೇಹದ ಚರ್ಮಗಳೆಲ್ಲವೂ ತೆಳುವಾಗುತ್ತವೆ.

- ಅನೇಕ ಆರೋಗ್ಯ ಸಮಸ್ಯೆಗಳು ಕಾಡಲು ಪ್ರಾರಂಭಿಸುತ್ತವೆ.

ಸೋಂಕುಗಳು ತಗಲುವುದು

ಸೋಂಕುಗಳು ತಗಲುವುದು

ರಕ್ತ ಹೀನತೆಗೆ ಸರಿಯಾದ ಚಿಕಿತ್ಸೆ ಪಡೆಯದೆ ಹೋದರೆ ದೇಹದಲ್ಲಿ ವಿವಿಧ ಸೋಂಕುಗಳು ಕಾಣಿಸಿಕೊಳ್ಳಬಹುದು. ಕಬ್ಬಿಣದ ಕೊರತೆ ಇರುವಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆಯಾಗುವುದು. ಜೊತೆಗೆ ಹೃದಯಕ್ಕೆ ಸಂಬಂಧಿಸಿದಂತೆ ಶ್ವಾಸಕೋಶದ ತೊಂದರೆ ಮತ್ತು ಉಸಿರಾಟದ ತೊಂದರೆ ಅಧಿಕವಾಗಿರುತ್ತವೆ.

ಕಬ್ಬಿಣಾಂಶ ಹೆಚ್ಚಿಸುವ ಆಹಾರ ಪದಾರ್ಥಗಳು

ಕಬ್ಬಿಣಾಂಶ ಹೆಚ್ಚಿಸುವ ಆಹಾರ ಪದಾರ್ಥಗಳು

ದೇಹದಲ್ಲಿ ರಕ್ತಹೀನತೆ ಅಥವಾ ಕಬ್ಬಿಣಾಂಶದ ಸಮಸ್ಯೆಯನ್ನು ಹೊಂದಿರುವಾಗ ತ್ವರಿತವಾಗಿ ಕಬ್ಬಿಣಾಂಶ ಹೆಚ್ಚಿಸುವ ಆಹಾರಗಳನ್ನು ಸೇವಿಸಬೇಕು. ಅದಕ್ಕೆ ಅದ್ಭುತವಾದ ಆಯ್ಕೆ ಎಂದರೆ ಕಾಳೆ ಸೊಪ್ಪು ಮತ್ತು ಹಸಿರು ಸೊಪ್ಪುಗಳು. ಹಸಿ ತರಕಾರಿ, ಸೊಪ್ಪು ಮತ್ತು ಹಣ್ಣುಗಳನ್ನು ತಿಂದರೆ ಅಗತ್ಯವಾದ ಕಬ್ಬಿಣಾಂಶವು ದೇಹಕ್ಕೆ ಸಿಗುವುದು. 100 ಗ್ರಾಂ ಕರ್ಲಿ ಕೇಲ್ ಸೊಪ್ಪಿನಲ್ಲಿ ಸುಮಾರು 1.5 ಮಿ.ಗ್ರಾಂ ಕಬ್ಬಿಣಾಂಶ ಇರುತ್ತದೆ ಎಂದು ಹೇಳಲಾಗುವುದು.

ಕಬ್ಬಿಣಾಂಶ ಹೊಂದಿರುವ ಇತರ ಆಹಾರಗಳು

ಕಬ್ಬಿಣಾಂಶ ಹೊಂದಿರುವ ಇತರ ಆಹಾರಗಳು

ಸಿರಿ ಧಾನ್ಯಗಳು, ಬೀನ್ಸ್, ಬೀಜಗಳು, ಒಣಗಿದ ಹಣ್ಣುಗಳು ಉತ್ತಮ ಕಬ್ಬಿಣಾಂಶಗಳನ್ನು ಒದಗಿಸುತ್ತವೆ. ಇದರ ಜೊತೆಗೆ ಮಾಂಸ ಮತ್ತು ಯಕೃತ್ತಿನ ಭಾಗವು ಹೆಚ್ಚಿನ ಕಬ್ಬಿಣಾಂಶ ನೀಡುತ್ತವೆ. ಗರ್ಭಿಣಿಯರು ಯಕೃತ್ ಮಾಂಸವನ್ನು ಸೇವಿಸಬಾರದು. ಅದು ಆರೋಗ್ಯದ ಮೇಲೆ ಗಂಭೀರವಾದ ಪ್ರಭಾವವನ್ನು ಉಂಟುಮಾಡುತ್ತದೆ.

ಕಬ್ಬಿಣಾಂಶದ ಕೊರತೆ ಇರುವಾಗ ಸೇವಿಸಬಾರದ ಆಹಾರ ಪದಾರ್ಥಗಳು

ಕಬ್ಬಿಣಾಂಶದ ಕೊರತೆ ಇರುವಾಗ ಸೇವಿಸಬಾರದ ಆಹಾರ ಪದಾರ್ಥಗಳು

ಸಮಸ್ಯೆ ಇರುವ ವ್ಯಕ್ತಿಗಳು ಚಹಾ, ಕಾಫಿ ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸಬಾರದು. ಇವುಗಳಲ್ಲಿ ಫೈಟಿಕ್ ಅಮ್ಲವು ಅಧಿಕ ಪ್ರಮಾಣದಲ್ಲಿ ಇರುತ್ತವೆ. ಫೈಟಿಕ್ ಆಮ್ಲ ಇರುವ ಆಹಾರ ಪದಾರ್ಥಗಳು ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತವೆ. ಆಗ ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶದ ಪೂರೈಕೆಗೆ ಅಡ್ಡಿ ಉಂಟಾಗುವುದು. ಹಾಗಾಗಿ ರಕ್ತ ಹೀನತೆ ಅಥವಾ ಕಬ್ಬಿಣಾಂಶದ ಕೊರತೆ ಇರುವವರು ಫೈಟಿಕ್ ಆಮ್ಲದ ಆಹಾರವನ್ನು ಸೇವಿಸಬಾರದು ಎಂದು ಸಲಹೆ ನೀಡಲಾಗುವುದು.

English summary

Eat This Super Food To Fight Iron Deficiency

Here we are discussing about which food fight against iron deficiency. As per the data 50 per cent of Indian women are anemic. Iron deficiency, also called anemia is caused by the lack of iron in your blood. The deficiency can be easily treated by including more iron in your diet or by having iron supplements. But it’s always best to get your vitamins and minerals from your regular diet and not depend on supplements.
Story first published: Tuesday, December 10, 2019, 18:00 [IST]
X
Desktop Bottom Promotion