Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಕಡಿಮೆ ನೀರು ಕುಡಿಯುವವರು, ತಮ್ಮ ಬಾಯಾರಿಕೆಯನ್ನು ಹೆಚ್ಚಾಗಲು ಈ ಆಹಾರಗಳನ್ನು ಸೇವಿಸಿ
ಆರೋಗ್ಯ ಚೆನ್ನಾಗಿರಲು, ಸಾಕಷ್ಟು ನೀರು ಕುಡಿಯುವುದು ತುಂಬಾ ಮುಖ್ಯ. ಇಡೀ ದಿನ ಏನೂ ತಿನ್ನದೇ, ನೀರು ಕುಡಿದು ಇರಬಹುದು, ಆದರೆ ನೀರು ಕುಡಿಯದೇ ದಿನ ಕಳೆದರೆ, ದೇಃ ಸಾಕಷ್ಟು ದುರ್ಬಲವಾಗುವುದಂತೂ ಸತ್ಯ, ಅಷ್ಟು ಶಕ್ತಿಯಿದೆ ಈ ದ್ರವಕ್ಕೆ. ದಿನಕ್ಕೆ ಕನಿಷ್ಠ ಎರಡು ಲೀಟರ್ ನೀರನ್ನು ಕುಡಿಯಲು ವೈದ್ಯರು ಶಿಫಾರಸು ಮಾಡುತ್ತಾರೆ, ಆದರೆ ಹೆಚ್ಚಿನವರು ದೇಹಕ್ಕೆ ಅಗತ್ಯವಾದಷ್ಟು ನೀರು ಕುಡಿಯುವುದೇ ಇಲ್ಲ.
ಬೇಸಿಗೆಯಲ್ಲಾದರೆ, ಬಿಸಿಯ ಬೇಗೆಗೆ ನೀರನ್ನು ಕುಡಿಯಬೇಕೆನೆಸುವುದು, ಆದರೆ ಈಗಿರುವ ಮಳೆಗಾಲದಲ್ಲಿ ನೀರಿನ ಹತ್ತಿರ ಸುಳಿಯುವ ಮನಸ್ಸು ಆಗುವುದಿಲ್ಲ. ಆದ್ದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗಿ ನಾನಾ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.
ಅದಕ್ಕಾಗಿ ನಾವಿಂದು ಪರ್ಯಾಯ ಮಾರ್ಗವೊಂದನ್ನು ಹೇಳಹೊರಟಿದ್ದೇವೆ. ನೀರನ್ನು ಕುಡಿಯಲು ಮನಸ್ಸಾಗದಿದ್ದರೆ, ಬಾಯಾರಿಕೆ ಉಂಟುಮಾಡುವ ಆಹಾರ ಸೇವಿಸಿ. ಇದರಿಂದ ನಿಮಗೆ ನೀರು ಕುಡಿಯಬೇಕೆಂದು ಅನಿಸುತ್ತದೆ. ಹಾಗಾದರೆ ಅಂತಹ ವಸ್ತುಗಳಾವುವು ಎಂಬುದನ್ನು ಇಲ್ಲಿ ನೋಡೋಣ.
ಬಾಯಾರಿಕೆ ಉಂಟುಮಾಡುವ ಆಹಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ, ಕಡಿಮೆ ನೀರು ಕುಡಿಯುವವರು ಈ ಆಹಾರಗಳನ್ನು ಸೇವಿಸಬಹುದು. ಇದರಿಂದ ನಿಮಗೆ ನೀರು ಕುಡಿಯುವಂತಾಗುವುದು:

ಆಲೂಗಡ್ಡೆ:
ಆಲೂಗಟ್ಟೆಯಲ್ಲಿ ಸೋಡಿಯಂ, ಪೊಟ್ಯಾಷಿಯಂ, ಪೈಬರ್ ಹಾಗೂ ವಿಟಮಿನ್ ಸಿ ಸಮೃದ್ಧವಾಗಿದ್ದು, ನಿಮ್ಮನ್ನು ಹೆಚ್ಚೆಚ್ಚು ನೀರು ಕುಡಿಯುವಂತೆ ಪ್ರೇರೇಪಿಸುತ್ತದೆ. ಆದ್ದರಿಂದ ನೀವು ಬಾಯಾರಿಕೆ ಆಗದಿದ್ದರೆ, ನಿಮ್ಮ ಆಹಾರದಲ್ಲಿ ಹೆಚ್ಚೆಚ್ಚು ಆಲೂಗಡ್ಡೆಯನ್ನು ಸೇರಿಸಿಕೊಳ್ಳಿ. ಆದರೆ ನೆನಪಿಡಿ, ಇದು ಗ್ಯಾಸ್ರ್ಟಿಕ್ ಗೂ ಕಾರಣವಾಗಬಹುದು, ಆದ್ದರಿಂದ ಜಾಗರೂಕರಾಗಿರಿ, ಇತರ ಆರೋಗ್ಯ ಸಮಸ್ಯೆ ಇರುವವರು ಇದನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಬೇಡಿ.

ಉಪ್ಪಿನಂಶವಿರುವ ಆಹಾರ:
ವ್ಯಕ್ತಿಯು ಯಾವಾಗಲು ಹೆಚ್ಚು ಸೋಡಿಯಂ ಭರಿತ ವಸ್ತುಗಳನ್ನು ಸೇವಿಸುತ್ತಾನೋ, ಆಗ ಅವನಿಗೆ ಅತಿಯಾಗಿ ಬಾಯಾರಿಕೆಯಾಗುತ್ತದೆ. ಏಕೆಂದರೆ ಸೋಡಿಯಂನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಹೆಚ್ಚು ನೀರು ಬೇಕಾಗುತ್ತದೆ. ಆದ್ದರಿಂದ ಉಪ್ಪಿನಂಶ ಹೆಚ್ಚಿರುವ ತರಕಾರಿ-ಹಣ್ಣುಗಳನ್ನು ಸೇವಿಸಿ. ಸೋಡಿಯಂ ಪ್ರಮಾಣವು ಕ್ಯಾರೆಟ್, ಮೂಲಂಗಿ, ಟೊಮ್ಯಾಟೋ, ಅನಾನಸ್, ಪಪ್ಪಾಯಿ ಸೇರಿದಂತೆ ಇತರ ಆಹಾರಗಳಲ್ಲಿ ಸಮೃದ್ಧವಾಗಿದೆ. ಇವುಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಪ್ರೋಟೀನ್ ಭರಿತ ಆಹಾರ:
ಅಧಿಕ ಪ್ರೋಟೀನ್ ಇರುವ ಆಹಾರವನ್ನು ಸೇವಿಸುವ ವ್ಯಕ್ತಿಯು ಆಗಾಗ ಬಾಯಾರಿಕೆಯನ್ನು ಅನುಭವಿಸುತ್ತಾನೆ. ಏಕೆಂದರೆ ಹೆಚ್ಚಿನ ಪ್ರೋಟೀನ್ ಆಹಾರಗಳು ಸಾರಜನಕವನ್ನು ಹೊಂದಿರುತ್ತವೆ. ಇವುಗಳನ್ನು ದೇಹ ಸರಿಯಾಗಿ ಚಯಾಪಚಯಗೊಳಿಸಲು ಹೆಚ್ಚಿನ ನೀರು ಅಗತ್ಯವಿರುತ್ತದೆ. ಈ ಕಾರಣಕ್ಕಾಗಿಯೇ ಒಬ್ಬ ವ್ಯಕ್ತಿಯು ಹೆಚ್ಚಿನ ಪ್ರೋಟೀನ್ ಭರಿತ ಆಹಾರ ಸೇವಿಸಿದಾಗ, ಅವನಿಗೆ ಆಗಾಗ ಬಾಯಾರಿಕೆ ಉಂಟಾಗುತ್ತದೆ. ಇದು ಮೊಟ್ಟೆ, ಮಾಂಸ, ಬಾದಾಮಿ ಮೊದಲಾದವುಗಲ್ಲಿ ಹೆಚ್ಚಿರುತ್ತದೆ.

ಸಿಹಿ ವಸ್ತುಗಳು:
ಯಾವಾಗ ಒಬ್ಬ ವ್ಯಕ್ತಿ ಸಿಹಿ ಆಹಾರ ಅಥವಾ ಪಾನೀಯವನ್ನು ಸೇವಿಸುತ್ತಾನೋ, ಆತನಿಗೆ ಕೆಲವು ದಿನಗಳಿಗೊಮ್ಮೆ ಬಾಯಾರಿಕೆ ಶುರುವಾಗುತ್ತದೆ. ಏಕೆಂದರೆ ಸಕ್ಕರೆ ಪದಾರ್ಥಗಳು ನಮ್ಮ ದೇಹದೊಳಗೆ ಆಮ್ಲೀಯ ವಾತಾವರಣವನ್ನು ಸೃಷ್ಟಿಸುತ್ತವೆ, ಇದು ನಮ್ಮ ದೇಹದ ಕಿಣ್ವದ ಕಾರ್ಯವನ್ನು ತೊಂದರೆಗೊಳಿಸುತ್ತದೆ. ಇದರಿಂದ ಆಗಾಗ ನಮಗೆ ಬಾಯಾರಿಕೆಯಾಗುತ್ತದೆ. ಬಾಯಾರಿಕೆ ಆಗದಿದ್ದರೆ, ನಿಮ್ಮ ನೀರು ಕುಡಿಯುವ ಪ್ರಮಾಣ ಹೆಚ್ಚಿಸಲು ಸ್ಟೀಟ್ ಅಥವಾ ಸಿಹಿ ಆಹಾರ ಸೇವಿಸಿ.



Click it and Unblock the Notifications
