Latest Updates
-
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು!
ಮಾಂಸಹಾರಿಗಳೇ ಎಚ್ಚರ, ನಿಮ್ಮ ಆರೋಗ್ಯಕ್ಕೆ ಕಾದಿದೆ ಅಪಾಯ!
ಉತ್ತಮ ಆರೋಗ್ಯಕ್ಕೆ ಸಸ್ಯಾಹಾರ ಒಳ್ಳೆಯದೇ ಅಥವಾ ಮಾಂಸಾಹಾರ ಒಳಿತೇ ಎಂಬುದು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಚರ್ಚೆಯಾಗಿದೆ. ಮಾಂಸಾಹಾರ ಒಳ್ಳೆಯದಲ್ಲ ಎಂಬುದು ಹೆಚ್ಚಿನವರ ಅಭಿಪ್ರಾಯ. ಆದರೆ ಮಾಂಸಾಹಾರಿಗಳು ತಮ್ಮ ಮಾಂಸಾಹಾರಿ ಖಾದ್ಯಗಳಿಗೆ ಒಂದು ರೀತಿ ದಾಸರಾಗಿದ್ದು, ಅದನ್ನು ತಿನ್ನುವುದರಿಂದ ಅವರಿಗೆ ಯಾವುದೇ ಹಾನಿ ಕಾಣಿಸುವುದಿಲ್ಲ.
ಸಾಮಾನ್ಯ ನಂಬಿಕೆಯಂತೆ ಮಾಂಸಾಹಾರವು ಏಕೆ ಆರೋಗ್ಯಕರವಲ್ಲ ಎಂಬುದನ್ನು ನಾವಿಂದು ಹೇಳುತ್ತೇವೆ, ಇದರಿಂದ ಆರೋಗ್ಯದ ಮೇಲೆ ಎಂತಹ ಅನಾನುಕೂಲಗಳು ಸಂಭವಿಸುತ್ತವೆ ಎಂಬುದನ್ನು ನೋಡೋಣ.
ಮಾಂಸಾಹಾರವನ್ನು ಸೇವಿಸುವುದರಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಜೀರ್ಣಕಾರಿ ಸಮಸ್ಯೆಗಳು:
ಮಾಂಸಾಹಾರವನ್ನು ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗುತ್ತವೆ. ಇದರಲ್ಲಿರುವ ಪ್ರೋಟೀನ್ ಅಂಶವು ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಾಗಿರುತ್ತವೆ. ಇದು ಜೀರ್ಣಕ್ರಿಯೆಯನ್ನು ಕಷ್ಟಕರವಾಗಿಸುತ್ತದೆ. ಮಾಂಸಾಹಾರವನ್ನು ಸೇವಿಸುವುದರಿಂದ ಅಸಿಡಿಟಿ ಮತ್ತು ಮಲಬದ್ಧತೆಗೆ ಕಾರಣವಾಗಬಹುದು, ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಇತರ ತೊಡಕುಗಳಿಗೆ ದಾರಿ ಮಾಡಿಕೊಡುವುದು.

ಜೀವಿತಾವಧಿ ಕಡಿತ:
ಅಧ್ಯಯನದ ಪ್ರಕಾರ, ನೀವು ಪ್ರತಿದಿನ ಮಾಂಸಾಹಾರಿ ಆಹಾರವನ್ನು ಸೇವಿಸಿದರೆ, ಅದರಿಂದ ನಿಮ್ಮ ಜೀವಿತಾವಧಿ ಕಡಿಮೆ ಆಗಬಹುದು. ಸಸ್ಯಾಹಾರಿಗಳು ಮಾಂಸಾಹಾರಿಗಳಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದು ಸಂಶೋಧನೆಗಳು ತಿಳಿಸುತ್ತವೆ.

ಆರೋಗ್ಯ ಸಮಸ್ಯೆಗಳಿಗೆ ದಾರಿ:
ರೆಡ್ ಮೀಟ್ ನಲ್ಲಿ, ಕೊಲೆಸ್ಟ್ರಾಲ್ ಇರುವುದರಿಂದ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗಬಹುದು. ಇದರಿಂದ ರಕ್ತನಾಳಗಳಲ್ಲಿ ಅಡಚಣೆಯನ್ನು ಉಂಟಾಗಿ, ಶ್ವಾಸಕೋಶದ ಕಾಯಿಲೆ (ಸಿಒಪಿಡಿ), ಅಧಿಕ ರಕ್ತದೊತ್ತಡಗಳಂತಹ ಪ್ರಮುಖ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು.

ರೋಗನಿರೋಧಕ ಶಕ್ತಿ ಕುಂಠಿತ:
ಹೊಲಗಳಲ್ಲಿ ಪ್ರಾಣಿಗಳನ್ನು ಬೆಳೆಸುವ ವಿಧಾನವು ಅನೈರ್ಮಲ್ಯವಾಗಿದೆ. ಪ್ರಾಣಿಗಳ ನಿಯಮಿತ ನಿರ್ವಹಣೆಯ ಸಮಯದಲ್ಲಿ ಪ್ರತಿಜೀವಕಗಳಂತಹ ಅನೇಕ ಔಷಧಿಗಳನ್ನು ಹೆಚ್ಚಾಗಿ ನೀಡಲಾಗುತ್ತದೆ. ಈ ಪ್ರತಿಜೀವಕಗಳು ಆಹಾರ ಸರಪಳಿಯ ಮೂಲಕ ಮನುಷ್ಯರ ದೇಹವನ್ನು ಪ್ರವೇಶಿಸಬಹುದು. ಇದು ರೋಗನಿರೋಧಕ ಶಕ್ತಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ಹಾರ್ಮೋನುಗಳ ಅಸಮತೋಲನ:
ಹೆಚ್ಚಿನ ಪ್ರಮಾಣದ ಮಾಂಸವನ್ನು ಸೇವಿಸುವುದರಿಂದ ಹೆಚ್ಚು ಕೊಲೆಸ್ಟ್ರಾಲ್ ದೇಹ ಸೇರುತ್ತದೆ, ಇದು ಸ್ಟೀರಾಯ್ಡ್ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು.

ಮಾಂಸಾಹಾರದ ಕುರಿತು ಸಂಶೋಧನೆ:
ಮಾಂಸ ಸೇವನೆಯ ಕೆಟ್ಟ ಪರಿಣಾಮಗಳು ಯಾವುದೇ ವೈಜ್ಞಾನಿಕ ಪುರಾವೆಗಳೊಂದಿಗೆ ಸಾಬೀತಾಗಿಲ್ಲ, ಆದರೆ ಮಾಂಸವನ್ನು ಸೇವಿಸುವುದರಿಂದಾಗುವ ಹಾನಿಕಾರಕ ಪರಿಣಾಮಗಳನ್ನು ಕಂಡುಹಿಡಿಯಲು ಅನೇಕ ಅಧ್ಯಯನಗಳು ನಡೆಯುತ್ತಿವೆ. ಈ ಕೆಳಗಿನ ವೀಕ್ಷಣಾ ಅಧ್ಯಯನಗಳು ಮಾಂಸ ಸೇವನೆ ಮತ್ತು ಕೆಟ್ಟ ಪರಿಣಾಮಗಳ ನಡುವಿನ ಸಂಬಂಧವನ್ನು ಮಾತ್ರ ತೋರಿಸಬಲ್ಲವು ಆದರೆ ವೈಜ್ಞಾನಿಕವಾಗಿ ಸಾಬೀತಾಗಿಲ್ಲ.

ರೆಡ್ ಮೀಟ್ ಮತ್ತು ಕ್ಯಾನ್ಸರ್:
ಹೆಚ್ಚಿನ ಪ್ರಮಾಣದ ಕೆಂಪು ಮಾಂಸವನ್ನು ಸೇವಿಸುವುದರಿಂದ ಸ್ತನ, ಮೂತ್ರಪಿಂಡ ಮತ್ತು ಜೀರ್ಣಾಂಗಗಳಂತಹ ಹಲವಾರು ಕ್ಯಾನ್ಸರ್ ವಿಧಗಳು ಉಂಟಾಗುತ್ತವೆ. ಎಲ್ಲಾ ಕ್ಯಾನ್ಸರ್ ವಿಧಗಳಲ್ಲಿ, ಕರುಳಿನ ಕ್ಯಾನ್ಸರ್ ಎಂಬುದು ಕೆಂಪು ಮಾಂಸ ಸೇವನೆ ಮತ್ತು ಸಂಸ್ಕರಿಸಿದ ಮಾಂಸದೊಂದಿಗೆ ಬಲವಾದ ಸಂಬಂಧವನ್ನು ಹೊಂದಿದೆ ಎಂದು ತೋರಿಸಿದೆ.
ಹೃದೃರೋಗಗಳು:
ಅವಲೋಕನದ ಅಧ್ಯಯನಗಳು, ಮಾಂಸ ಸೇವನೆ ಮತ್ತು ಹೃದಯ ಸಂಬಂಧಿ ರೋಗಗಳ ನಡುವಿನ ಸಂಬಂಧವನ್ನು ತೋರಿಸುತ್ತವೆ. ಅಧ್ಯಯನದ ಪ್ರಕಾರ, ಸಂಸ್ಕರಿಸಿದ ಮಾಂಸ ಉತ್ಪನ್ನಗಳನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಪದೇ ಪದೇ ಮಾಂಸವನ್ನು ಸೇವಿಸುವುದರಿಂದ ಹೃದಯದ ಕಾಯಿಲೆ ಉಂಟಾಗುವ ಅಪಾಯ ಹೆಚ್ಚು.



Click it and Unblock the Notifications











