Latest Updates
-
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್!
ಕೊರೊನಾವೈರಸ್: ರೋಗ ನಿರೋಧಕ ಶಕ್ತಿ ಹೆಚ್ಚಿಸಲು 'ಆಯುಷ್' ನೀಡಿರುವ ಆರೋಗ್ಯ ಸೂತ್ರಗಳಿವು
ಭಾರತದಲ್ಲಿ ಆಯುರ್ವೇದಕ್ಕೆ ತುಂಬಾ ಪ್ರಾಶಸ್ತ್ಯ ಇದೆ. ಅಲೋಪತಿಯಲ್ಲಿ ಗುಣವಾಗದ ಎಷ್ಟೋ ಕಾಯಿಲೆಗಳನ್ನು ಆಯುರ್ವೇದ ಔಷಧ ಪದ್ಧತಿ ಮೂಲಕ ಗುಣಪಡಿಸಿರುವ ಎಷ್ಟೋ ಉದಾಹರಣೆಗಳಿವೆ.

ನಮ್ಮ ಪರಿಸರದಲ್ಲಿ ಅನೇಕ ರೋಗ ನಿರೋಧಕ ಸಸ್ಯಗಳು, ಬೇರುಗಳಿವೆ, ಅವುಗಳನ್ನು ಬಳಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಈಗ ಬಂದಿರುವ ಕೊರೊನಾವೈರಸ್ ವಿರುದ್ಧ ಹೋರಾಡಬೇಕೆಂದರೆ ಮೊದಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ಅದಕ್ಕಾಗಿ ಯೋಗ, ಹೋಮಿಯೋಪತಿ, ಆಯುರ್ವೇದದ ಸೂತ್ರಗಳನ್ನು ಅನುಸರಿಸುವಂತೆ ಪ್ರಧಾನಿಯೇ ಏಪ್ರಿಲ್ 14ರಂದು ಸಲಹೆ ನೀಡಿದ್ದಾರೆ.
ಕೊರೊನಾವೈರಸ್ ವಿರುದ್ಧ ಹೋರಾಡಲು ಮನೆಯಲ್ಲಿಯೇ ಇರುವುದರ ಜೊತೆಗೆ ಜನರು ಪಾಲಿಸಬೇಕಾದ ಸಪ್ತ ಸೂತ್ರಗಳ ಬಗ್ಗೆ ಆಯುಷ್ ಇಲಾಖೆಯಲ್ಲಿ ಸಲಹೆಗಳಿವೆ. ಅವುಗಳನ್ನು ಪಾಲಿಸುವಂತೆ ಹೇಳಿದ್ದರು. ಆಯುಷ್ ಇದರ ವಿಸ್ತೃತ ರೂಪ ಆಯುರ್ವೇದ, ಯೋಗ, ನ್ಯಾಚುರಾಪತಿ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ. ಇವೆಲ್ಲಾ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಚಿಕಿತ್ಸೆ ನೀಡುವ ಭಾರತೀಯ ಸನಾತನ ಮೂಲದ ಚಿಕಿತ್ಸಾ ವಿಧಾನಗಳಾಗಿವೆ.
ಹಾಗಾದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಇಲಾಖೆ ನೀಡಿರುವ ಸಲಹೆಗಳೇನು ಎಂದು ನೋಡೋಣ:

1. ಆಗಾಗ ಬಿಸಿ ನೀರು ಕುಡಿಯಿರಿ
ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯಬೇಕು. ನಂತರ ಊಟದ ಮೊದಲು ಹಾಗೂ ನಂತರ ಬಿಸಿ ನೀರು ಕುಡಿಯುವುದರಿಂದ ದೇಹದಲ್ಲಿ ಜೀರ್ಣಕ್ರಿಯೆ ಚೆನ್ನಾಗಿ ನಡೆಯುವುದು ಹಾಗೂ ಬೆಳಗ್ಗೆ ಬಿಸಿ ನೀರು ಕುಡಿಯುವುದರಿಂದ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುವಲ್ಲಿ ಸಹಕಾರಿಯಾಗಿದೆ. ಮಲಬದ್ಧತೆ ಸಮಸ್ಯೆ ಇರುವವರು ಈ ವಿಧಾನ ಪಾಲಿಸಿದರೆ ಆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಬಿಸಿ ನೀರು ಕುಡಿಯುವುದರಿಂದ ಮೈ ತೂಕ ಕಾಪಾಡುವಲ್ಲಿಯೂ ಸಹಕಾರಿ. ಬೆಳಗ್ಗೆ ಎದ್ದು ಬಿಸಿ ನೀರಿಗೆ ಸ್ವಲ್ಪ ಜೇನು ತುಪ್ಪ, ನಿಂಬೆ ರಸ ಹಾಕಿ ಕುಡಿದರೆ ಮೈ ತೂಕವನ್ನು ಹತೋಟಿಯಲ್ಲಿಡಬಹುದು. ಅಲ್ಲದೆ ಬಿಸಿ . ನೀರು ಕುಡಿಯುತ್ತಿದ್ದರೆ ಶ್ವಾಸಕೋಶದ ಆರೋಗ್ಯ ಚೆನ್ನಾಗಿರುತ್ತದೆ, ರೋಗ ನಿರೋಧಕ ಶಕ್ತಿಯೂ ಹೆಚ್ಚುವುದು.

2. ಅರಿಶಿಣ, ಜೀರಿಗೆ, ಕೊತ್ತಂಬರಿ ಬೀಜ, ಬೆಳ್ಳುಳ್ಳಿ ಬಳಸಿ
ಈ ಮಸಾಲೆ ಸಾಮಗ್ರಿ ಔಷಧೀಯ ಗುಣಗಳನ್ನು ಹೊಂದಿವೆ. ಭಾರತೋಯ ಆಹಾರದಲ್ಲಿ ಇವುಗಳನ್ನು ಬಳಸುವುದು ಸಾಮಾನ್ಯ. ಇವುಗಳು ನಾವು ತಿನ್ನುವ ಆಹಾರವನ್ನು ಮತ್ತಷ್ಟು ಆರೋಗ್ಯಕರವಾಗಿಸುತ್ತವೆ. ಈ ಮಸಾಲೆ ಸಾಮಗ್ರಿಗಳಲ್ಲಿ ಶಿಲೀಂಧ್ರ, ಬ್ಯಾಕ್ಟರಿಯಾ, ಸೋಂಕಾಣುಗಳ ವಿರುದ್ಧ ಹೋರಾಡುವ ಗುಣಗಳಿವೆ ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು.
ಇವುಗಳಿಂದ ಕಷಾಯ ಮಾಡಿ ಕುಡಿದರೆ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು, ಅಲ್ಲದೆ ಕೆಮ್ಮು, ಶೀತ ಈ ರೀತಿಯ ಸಾಮಾನ್ಯ ಸಮಸ್ಯೆ ಹೋಗಲಾಡಿಸುವಲ್ಲಿಯೂ ಈ ಕಷಾಯ ಸಹಕಾರಿ.

3. ದಿನದಲ್ಲಿ 30 ನಿಮಿಷ ಯೋಗ ಮಾಡಿ
ಯಾರು ದಿನದಲ್ಲಿ 30 ನಿಮಿಷ ಅಥವಾ ಒಂದು ಗಂಟೆ ಯೋಗಕ್ಕಾಗಿ ಮೀಸಲಿಡುತ್ತಾರೋ ಅವರು ಈಗಾಗಲೇ ಅದರ ಪ್ರಯೋಜನಗಳನ್ನು ಕಂಡು ಕೊಂಡಿರುತ್ತೀರಿ. ಯೋಗ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯ ಕೂಡ ಕಾಪಾಡುತ್ತದೆ. ಇದು ಮೈ ತೂಕ ಕಾಪಾಡುವುದರ ಜೊತೆ ಮಾನಸಿಕ ಒತ್ತಡವನ್ನು ಹೊರ ಹಾಕುವುದು. ಪ್ರಾಣಯಾಮ ಮಾಡುವುದರಿಂದ ಶ್ವಾಸಕೋಶದ ಆರೋಗ್ಯ ಕೂಡ ಉತ್ತಮವಾಗುತ್ತದೆ. ಧ್ಯಾನ, ಪ್ರಾಣಯಾಮ ಇವುಗಳನ್ನು ಕಡಿಮೆಯೆಂದರೂ 30 ನಿಮಿಷ ಅಭ್ಯಾಸ ಮಾಡಿದರೆ ಮನಸ್ಸು ಶಾಂತವಾಗುವುದು, ಮನಸ್ಸು ಖುಷಿಯಾಗಿದ್ದರೆ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುವುದು.

4. ತುಪ್ಪ, ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆಯನ್ನು ಮೂಗಿಗೆ ಹಚ್ಚಿ
ತುಪ್ಪ, ಎಳ್ಳೆಣ್ಣೆ, ತೆಂಗಿನೆಣ್ಣೆ ಇವುಗಳನ್ನು ಮೂಗಿಗೆ ಸವರುವುದರಿಂದ ಇದು ಉಸಿರಾಡುವಾಗ ಸೋಂಕಾಣು ಹಾಗೂ ಬ್ಯಾಕ್ಟಿರಿಯಾಗಳು ಒಳಗೆ ಹೋಗದಂತೆ ತಡೆಯುತ್ತದೆ. ಇದನ್ನು ಆಯುರ್ವೇದ ಭಾಷೆಯಲ್ಲಿ ನಾಸಿಯಾ ಕರ್ಮ ಎಂದು ಕರೆಯುತ್ತಾರೆ. ಹೀಗೆ ಮಾಡುವುದರಿಂದ ಮೂಗಿನ ಮೂಲಕ ಬ್ಯಾಕ್ಟಿರಿಯಾ, ಸೋಂಕಾಣುಗಳು ದೇಹದ ಒಳಗೆ ಹೋಗುವುದನ್ನು ತಪ್ಪಿಸಬಹುದು ಹಾಗೂ ಮೂಗು ಕಟ್ಟುವ ಸಮಸ್ಯೆ ಉಂಟಾಗುವುದಿಲ್ಲ.
ಎಳ್ಳೆಣ್ಣೆ, ತೆಂಗಿನೆಣ್ಣೆ ಇವುಗಳನ್ನು ಸ್ವಲ್ಪ ಕಾಯಿಸಿ(ತುಂಬಾ ಬಿಸಿ ಬೇಡ) ಅದಕ್ಕೆ ಇಯರ್ ಬಡ್ ಅದ್ದಿ ಮೂಗಿನ ಒಳಗೆ ಮೆಲ್ಲನೆ ಹಾಕಿ ತಿರುವಿ, ಮೂಗಿನ ಮೇಲ್ಭಾಗ ಕೂಡ ಹಚ್ಚಿ. ಹೀಗೆ ದಿನದಲ್ಲಿ ಮೂರು ಬಾರಿ ಮಾಡಬಹುದು. ಮಲಗುವ ಮುನ್ನ ಮಾಡಿದರೆ ತುಂಬಾ ಒಳ್ಳೆಯದು. ಎಣ್ಣೆಯನ್ನು ಸ್ವಲ್ಪ ಹಚ್ಚಿದರೆ ಸಾಕು.

5. ಅರಿಶಿಣ ಹಾಕಿದ ಹಾಲು ಕುಡಿಯಿರಿ
ಹಾಲಿಗೆ ಅರಿಶಿಣ ಹಾಕಿ ಕುಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಕೆಮ್ಮು, ಗಂಟಲು ಕೆರೆತ ಈ ಸಮಸ್ಯೆಗಳು ಇರುವುದಿಲ್ಲ. ಅರಿಶಿಣ ಹಾಕಿದ ಹಾಲನ್ನು ಚಿನ್ನದ ಹಾಲು ಎಂದೇ ಕರೆಯುತ್ತಾರೆ. ಏಕೆಂದರೆ ಇದನ್ನು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಅಷ್ಟೊಂದು ಪ್ರಯೋಜನಗಳಿವೆ. ಅಲ್ಲದೆ ಅರಿಶಿಣ ಹಾಕಿದ ಹಾಲು ತ್ವಚೆ ಸೌಂದರ್ಯ ಕೂಡ ಹೆಚ್ಚಿಸುವುದು.
ಹಾಲಿಗೆ ಬರೀ ಅರಿಶಿಣ ಹಾಕಿ ಕುಡಿಯಬಹುದು, ಇಲ್ಲಾ ಹಾಲಿಗೆ ಸ್ವಲ್ಪ ಶುಂಠಿ, ಅರಿಶಿಣ ಹಾಕಿ ಕುದಿಸಿ ಅದಕ್ಕೆ ಜೇನು ಸೇರಿಸಿ ಕೂಡ ಕುಡಿಯಬಹುದು. ಹೀಗೆ ಮಾಡಿದರೆ ರುಚಿಕರವಾಗಿರುತ್ತದೆ.

6. ಕಷಾಯ ಕುಡಿಯಿರಿ
ತುಳಸಿ, ಚಕ್ಕೆ, ಕಾಳು ಮೆಣಸು, ಶುಂಠಿ ಇವುಗಳನ್ನು ಹಾಕಿ ಕುದಿಸಿದ ನೀರು ಕುಡಿಯುವುದು ಒಳ್ಳೆಯದು. 2 ಲೀಟರ್ ನೀರಿಗೆ 10 ಎಲೆ ಶುಂಠಿ ಹಾಕಿ ಕುಡಿಯುವುದು ಕೂಡ ಒಳ್ಳೆಯದು. ಕಷಾಯಕ್ಕೆ ಜೇನು ಸೇರಿಸಿ ಕುಡಿಯುವುದರಿಂದ ಇದರಲ್ಲಿರುವ ವಿಟಮಿನ್ ಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ಕೆಮ್ಮು, ಜ್ವರ ಈ ರೀತಿಯ ಸಮಸ್ಯೆಗಳು ಬರದಂತೆ ತಡೆಯುವಲ್ಲಿ ಈ ರೀತಿಯ ಕಷಾಯ ಪರಿಣಾಮಕಾರಿಯಾಗಿದೆ.

7. ಎಣ್ಣೆಯಿಂದ ಬಾಯಿ ಮುಕ್ಕಳಿಸಿ
ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ ಕೂಡ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಆದರೆ ಎಣ್ಣೆಯಿಂದ ಬಾಯಿ ಮುಕ್ಕಳಿಸುವಾಗ ನುಂಗಬೇಡಿ. ಎಣ್ಣೆಯನ್ನು ಬಾಯಿಗೆ ಹಾಕಿ ಒಂದು 3 ನಿಮಿಷ ಬಾಯಿ ಮುಕ್ಕಳಿಸಿ, ನಂತರ ಉಗಿದು, ಬಿಸಿ ನೀರಿನಿಂದ ಬಾಯಿ ತೊಳೆಯಿರಿ. ವಾರಕ್ಕೆ 2-3 ಬಾರಿ ಈ ರೀತಿ ಮಾಡುವುದು ಒಳ್ಳೆಯದು. ಇದನ್ನು ಬ್ರೇಕ್‌ಫಾಸ್ಟ್ ಮುಂಚೆ ಅಥವಾ ಮಲಗುವ ಮುನ್ನ ಮಾಡಿ.

8. ಹಬೆ ತೆಗೆದುಕೊಳ್ಳಿ
ಸ್ವಲ್ಪ ಶೀತ, ಕೆಮ್ಮು ಇದ್ದರೆ ಹಬೆ ತೆಗೆದುಕೊಳ್ಳಿ. ಇದು ಗಂಟಲು ಕೆರೆತ, ಮೂಗು ಕಟ್ಟುವುದು ಈ ರೀತಿಯ ಸಮಸ್ಯೆಗೆ ತಕ್ಷಣ ಪರಿಹಾರ ನೀಡುತ್ತದೆ. ಹಬೆ ತೆಗೆದುಕೊಳ್ಳುವಾಗ ಅಜ್ವೈನ್ ಅಥವಾ ಪುದೀನಾ ಎಣ್ಣೆ ಹಾಕಿ ಹಬೆ ತೆಗೆದುಕೊಳ್ಳುವುದರಿಂದ ತಲೆನೋವು ಕಡಿಮೆಯಾಗುವುದು. ಒಂದು ಬೌಲ್‌ಗೆ ಬಿಸಿ ನೀರು ಹಾಕಿ ಅದಕ್ಕೆ 6-7 ಹನಿ ಪುದೀನಾ ಎಣ್ಣೆ ಹಾಕಿ ಹಬೆ ತೆಗೆದುಕೊಳ್ಳಬಹುದು. ದಿನದಲ್ಲಿ 3-4 ಬಾರಿ ಮಾಡುವುದರಿಂದ ಗಂಟಲು ಕೆರೆತ ಕಡಿಮೆ, ಮೂಗು ಕಟ್ಟುವುದು ಕಡಿಮೆಯಾಗುವುದು,

9. ಕೆಮ್ಮು ಇದ್ದರೆ ಲವಂಗ ಬಳಸಿ
3-4 ಲವಂಗ ಸ್ವಲ್ಪ ಹುರಿದು ಪುಡಿ ಮಾಡಿ, ಅದಕ್ಕೆ ಬೇಕಿದ್ದರೆ ಬೆಳ್ಳುಳ್ಳಿ ಸೇರಿಸಬಹುದು, ಇದನ್ನು ಜೇನಿನ ಜೊತೆ ಮಿಶ್ರ ಮಾಡಿ ಆಗಾಗ ಸ್ವಲ್ಪ ನೆಕ್ಕುತ್ತಿದ್ದರೆ ಕೆಮ್ಮು ಕಡಿಮೆಯಾಗುವುದು. ಇಲ್ಲದಿದ್ದರೆ ಅರ್ಧ ಚಮಚದಂತೆ ಮೂರು ಬಾರಿ ಸೇವಿಸಿ.

10. ಚವ್ಯನಪ್ರಾಶ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಚವ್ಯನಪ್ರಾಶ ಇದೊಂದು ಅತ್ಯುತ್ತಮವಾದ ಔಷಧೀಯ ಗುಣವಿರುವ ಆಯುರ್ವೇದ ಔಷಧಿಯಾಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ಇದರಲ್ಲಿರುವ ನೆಲ್ಲಿಕಾಯಿ ಅಂಶ ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹಿರ ಹಾಕುತ್ತದೆ, ರಕ್ತವನ್ನು ಶುದ್ಧೀಕರಿಸುತ್ತದೆ. ಇದನ್ನು ತಿನ್ನುವುದರಿಂದ ಕೆಮ್ಮು, ಶೀತ ಇಂಥ ಸಮಸ್ಯೆ ತಡೆಗಟ್ಟಬಹುದು.
ಈ ಅಭ್ಯಾಸಗಳನ್ನು ಮಾಡುತ್ತಿದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಇದರಿಂದ ನಮ್ಮ ದೇಹವು ರೋಗಗಳ ವಿರುದ್ಧ ಹೋರಾಡಲು ಶಕ್ತವಾಗುತ್ತದೆ.



Click it and Unblock the Notifications