Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕೊರೊನಾ ನೆಗೆಟಿವ್ ವರದಿ ಬಂದರೂ ಈ ಲಕ್ಷಣಗಳಿವೆಯೇ? ನಿರ್ಲಕ್ಷ್ಯ ಮಾಡಲೇಬಾರದು
ದೇಹದಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದಾಗ RT-PCR ಪರೀಕ್ಷೆ ಮಾಡಲಾಗುವುದು. ಈ ಪರೀಕ್ಷೆಯಲ್ಲಿ ಕೋವಿಡ್ 19 ಬಂದರೆ ವೈದ್ಯರು ಹೋಂ ಕ್ವಾರೆಂಟೈನ್ ಆಗಬೇಕಾ ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾ ಎಂಬುವುದನ್ನು ಹೇಳುತ್ತಾರೆ, ಇವರು ಸ್ವಾಭಾವಿಕ್ಕಾಗಿ ತಮ್ಮ ಹಾಗೂ ಮನೆಯವರ ರಕ್ಷಣೆಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಾರೆ.

ಆದರೆ ಯಾರಿಗೆ ನೆಗೆಟಿವ್ ಎಂಬ ರಿಪೋರ್ಟ್ ಬರುತ್ತೋ ಅವರು ನಿಟ್ಟಿಸಿರು ಬಿಡುತ್ತಾರೆ, ನನಗೆ ಕೊರೊನಾ ಇಲ್ಲ ಎಂದು ತಿರುಗಾಡುತ್ತಾರೆ, ಇಂಥವರು ಇತರರಿಗೆ ಕೊರೊನಾ ಹರಡುವುದು ಮಾತ್ರವಲ್ಲ ತಮ್ಮ ಬದುಕಿಗೂ ಅಪಾಯ ತಂದುಕೊಳ್ಳುತ್ತಾರೆ, ಹೇಗೆ ಎಂದು ತಿಳಿಯಲು ಈ ಲೇಖನ ಓದಿ:

RT-PCR ಪರೀಕ್ಷೆಯಲ್ಲಿ ತಪ್ಪು ವರದಿಯೂ ಬರಬಹುದು?
ಹೌದು ಕೋವಿಡ್ 19 ಪರೀಕ್ಷೆಯಾದ RT-PCRನಲ್ಲಿ ಕೆಲವೊಮ್ಮೆ ತಪ್ಪು ವರದಿ ಬರುವ ಸಾಧ್ಯತೆ ಇದೆ. ಕೋವಿಡ್ 19ನ ಎಲ್ಲಾ ಲಕ್ಷಣಗಳಿದ್ದರೂ ಪರೀಕ್ಷೆಯ ವರದಿಯಲ್ಲಿ ನೆಗೆಟಿವ್ ಎಂದು ಬಂದಿರುತ್ತದೆ. ಈ ರೀತಿ ತಪ್ಪಾದ ವರದಿ ಬರಲು ಅನೇಕ ಕಾರಣಗಳಿವೆ.

ಕೋವಿಡ್ 19 ಲಕ್ಷಣಗಳಿದ್ದರೂ ಈ ರೀತಿ ತಪ್ಪಾದ ವರದಿ ಬರಲು ಕಾರಣಗಳು
ಈಗ ಬಂದಿರುವ ಕೊರೊನಾ ಎರಡನೇ ಅಲೆಯು ರೂಪಾಂತರ ಕೊರೊನಾ ವೈರಸ್‌ನಿಂದಾಗಿ ಉಂಟಾಗಿದೆ. ಕೆಲವೊಮ್ಮೆ RT-PCR ಪರೀಕ್ಷೆಯಲ್ಲಿ ಈ ರೂಪಾಂತರ ತಳಿ ಪತ್ತೆಯಾಗುವುದಿಲ್ಲ. ಈ ಕಾರಣದಿಂದಾಗಿ ವರದಿಯು ನೆಗೆಟಿವ್ ಬರುತ್ತದೆ.
ಇದಲ್ಲದೆ ದೇಹದಲ್ಲಿ ವೈರಸ್ ಪ್ರಮಾಣ ತುಂಬಾ ಕಡಿಮೆಯಿದ್ದರೂ ಪರೀಕ್ಷೆಯಲ್ಲಿ ಪತ್ತೆಯಾಗದಿರುವ ಸಾಧ್ಯತೆ ಇದೆ. ಕೆಲವೊಮ್ಮೆ ಸ್ವ್ಯಾಬ್ ಸ್ಟಿಕ್ ಮೂಗಿನ ಒಳಗಡೆ ಹಾಕಿದ್ದು ಸರಿಯಿಲ್ಲದಿದ್ದರೆ ಕೂಡ ನೆಗೆಟಿವ್ ವರದಿ ಬರಬಹುದು.

ವರದಿ ನೆಗೆಟಿವ್ ಬಂದರೂ ಈ ಲಕ್ಷಣಗಳಿವೆಯೇ ಗಮನಿಸಿ
ಕೋವಿಡ್ 19 ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದರೂ ನಿಮ್ಮಲ್ಲಿ ಕೊರೊನಾ ಲಕ್ಷಣಗಳಿದ್ದರೆ ಹೊರಗಡೆ ತಿರುಗಾಡುವುದು, ಮನೆಯವರೊಂದಿಗೆ ಬೆರೆಯುವುದು ಮಾಡಬಾರದು, ಪ್ರತ್ಯೇಕ ಒಂದು ರೂಮ್‌ನಲ್ಲಿರಿ. ಅಲ್ಲದೆ ಈ ಲಕ್ಷಣಗಳು ಕಂಡು ಬಂದರೆ ವರದಿ ನೆಗೆಟಿವ್ ಆದರೂ ಕೊರೊನಾ ಸೋಂಕು ತಗುಲಿರುತ್ತದೆ. ಸಿಟಿ ಸ್ಕ್ಯಾನ್ ಮಾಡಿಸಿದರೆ ಖಚಿತವಾದ ವರದಿ ಸಿಗುವುದು.

ಬಾಯಿಗೆ ಏನೂ ರುಚಿ ಗೊತ್ತಾಗುತ್ತಿಲ್ಲವೇ?
ಕೊರೊನಾ ಸೋಂಕು ತಗುಲಿದಾಗ ಕಂಡು ಬರುವ ಪ್ರಮುಖ ಲಕ್ಷಣಗಳಲ್ಲಿ ಒಂದು ಬಾಯಿಗೆ ರುಚಿ ಇಲ್ಲವಾಗುವುದು, ಯಾವುದೇ ಆಹಾರ ತಿಂದರೂ ಅದರ ರುಚಿ ಗೊತ್ತಾಗುವುದಿಲ್ಲ. ಖಾರದ ಹಸಿ ಮೆಣಸು ಕಚ್ಚಿದರೂ ಏನೂ ಅನಿಸುವುದೇ. ಇನ್ನು ಕೆಲವರಿಗೆ ಮೂಗಿಗೆ ವಾಸನೆ ಕೂಡ ಬಡಿಯುವುದಿಲ್ಲ. ಈ ರೀತಿಯ ಲಕ್ಷಣಗಳು ಜ್ವರ ಬರುವ ಮೊದಲೇ ಕಂಡು ಬರಬಹುದು. ಅಲ್ಲದೆ ಈ ಲಕ್ಷಣ ರೋಗದಿಂದ ಗುಣಮುಖರಾದ ಮೇಲೂ ಕೆಲವು ದಿನಗಳವರೆಗೆ ಇರಬಹುದು.

ಚಳಿ-ಜ್ವರ
ಚಳಿ-ಜ್ವರ ಕೂಡ ಕೋವಿಡ್ 19 ಲಕ್ಷಣವಾಗಿದೆ. ಚಳಿ-ಜ್ವರಕ್ಕೆ ಔಷಧಿ ತೆಗೆದುಕೊಂಡ ಮೇಲೂ ಜ್ವರ ಬಿಡದೆ ಹಾಗೇ ಇದ್ದು ಮೈ ತುಂಬಾ ಚಳಿಯಾಗುತ್ತಿದ್ದರೆ ಅದು ಕೊರೊನಾ ಸೋಂಕಿನ ಲಕ್ಷಣವಾಗಿದೆ.

ತಲೆಸುತ್ತು
ಕೋವಿಡ್ 19 ಸೋಂಕಿತರು ತಲೆಸುತ್ತು, ಸುಸ್ತು ಎಂದು ಹೇಳ್ತಾ ಇರುತ್ತಾರೆ. ಕೊರೊನಾ ಸೋಂಕು ತಗುಲಿದವರಿಗೆ ಎದ್ದು ನಡೆದಾಡಲೂ ಕಷ್ಟವಾಗಬಹುದು, ಈ ಸುಸ್ತು ದೇಹವನ್ನು ತುಂಬಾ ಬಲಹೀನವಾಗಿಸುತ್ತದೆ.

ಗಂಟಲು ಕೆರೆತ
ಅನೇಕರಿಗೆ ಗಂಟಲು ಕೆರೆತ, ಕೆಮ್ಮು ಕಂಡು ಬಂದಾಗ ಇದು ಸಾಮನ್ಯ ಕೆಮ್ಮು ಆಗಿರಬಹುದೇ ಅಥವಾ ಕೋವಿಡ್ 19 ಇರಬಹುದೇ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಗಂಟಲು ಕೆರೆತ ಜೊತೆಗೆ ನಿರಂತರ ಕೆಮ್ಮು ಹಾಗೂ ಜ್ವರವಿದ್ದರೆ ಅದು ಕೋವಿಡ್ 19ನ ಲಕ್ಷಣವಾಗಿರಬಹುದು.

ಹೊಟ್ಟೆ ಹಾಳಾಗುವುದು
ಕೊರೊನಾ ಸೋಂಕು ತಗುಲಿದಾಗ ಇನ್ನು ಕೆಲವರಿಗೆ ಬೇಧಿ, ವಾತಿ ಕಂಡು ಬರುತ್ತದೆ. ಇದರಿಂದ ತೀವ್ರ ಕಿಬ್ಬೊಟ್ಟೆಯ ಸೆಳೆತ ಉಂಟಾಗಬಹುದು.
ಪರೀಕ್ಷೆಯಲ್ಲಿ ನೆಗೆಟಿವ್ ಬಂದು ಕೋವಿಡ್ 19 ಲಕ್ಷಣಗಳಿದ್ದರೆ ಏನು ಮಾಡಬೇಕು?
ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದು ಕೊರೊನಾ ಲಕ್ಷಣಗಳಿದ್ದರೆ ಮೊದಲಿಗೆ ನೀವು ಮಾಡಬೇಕಾಗಿರುವುದು ಯಾರ ಸಂಪರ್ಕಕ್ಕೆ ಬಾರದೆ ಪ್ರತ್ಯೇಕವಾಗಿ ಇರುವುದು. ಜ್ವರ, ಕೆಮ್ಮು ಸುಸ್ತು ಕಡಿಮೆಯಾಗಲು ಔಷಧಿ ತೆಗೆದುಕೊಳ್ತಾ ಇರಿ ಹಾಗೂ ನಿಮ್ಮ ದೇಹದಲ್ಲಿ ಆಮ್ಲಜಕ ಪ್ರಮಾಣ ಎಷ್ಟಿದೆ ಎಂದು ಪರೀಕ್ಷಿಸುತ್ತಾ ಇರಿ. ಅಮ್ಲಜನಕ ಕಡಿಮೆಯಾದರೆ ಕೂಡಲೇ ವೈದ್ಯರಿಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿ, ಇಲ್ಲಾಂದರೆ 2 ದಿನಗಳ ಬಳಿಕ ಮತ್ತೊಮ್ಮೆ RT PCR ಪರೀಕ್ಷೆ ಮಾಡಿಸಿ, ಆಗಲೂ ನೆಗೆಟಿವ್ ಬಂದರೆ CT ಸ್ಕ್ಯಾನ್ ಮಾಡಿಸಿ.



Click it and Unblock the Notifications












