Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಒತ್ತಡದಿಂದ ತಕ್ಷಣ ಮುಕ್ತಿ ಪಡೆಯಲು ಈ ಆಹಾರಗಳೇ ಬೆಸ್ಟ್ !
ಇತ್ತೀಚಿನ ದಿನಗಳಲ್ಲಿ 'ಒತ್ತಡ' ಎಂಬುದು ಎಲ್ಲರ ಬಾಯಿಂದ ಬರುವ ಸಾಮಾನ್ಯ ಪದವಾಗಿದೆ. ವೇಗದ ಬದುಕಿನಲ್ಲಿ ವೃತ್ತಿಪರ ಒತ್ತಡ, ಭಾವನಾತ್ಮಕ ಒತ್ತಡ, ದೈಹಿಕ ಆರೋಗ್ಯ ಮತ್ತು ಇತರ ಹಲವು ಅಂಶಗಳ ಬಗ್ಗೆ ಒತ್ತಡ ಇದ್ದೇ ಇರುತ್ತದೆ. ಆದರೆ, ಈ ಒತ್ತಡವನ್ನು ಸರಿಯಾಗಿ ನಿರ್ವಹಿಸುವುದು ತುಂಬಾ ಮುಖ್ಯ. ಇಲ್ಲವಾದಲ್ಲಿ ನಾನಾ ಸ್ವರೂಪ ಪಡೆದುಕೊಳ್ಳುತ್ತದೆ.
ಒತ್ತಡ ನಿರ್ವಹಣೆಗೆ ಧ್ಯಾನ, ಪ್ರಾಣಾಯಾಮಗಳ ಜೊತೆಗೆ ಸರಿಯಾದ ಆಹಾರ ಸೇವನೆಯು ಸಹಾಯ ಮಾಡುತ್ತದೆ. ಅರೇ, ಒತ್ತಡಕ್ಕೂ, ಆಹಾರಕ್ಕೂ ಎತ್ತಿಂದೆತ್ತ ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಹೌದು, ಕೆಲವೊಂದು ಆಹಾರಗಳಲ್ಲಿ ಒತ್ತಡ ನಿವಾರಿಸುವಂತಹ ಅಂಶಗಳಿವೆ. ಅಂತಹ ಆಹಾರಗಳಾವುವು ಎಂಬುದನ್ನು ಇಲ್ಲಿ ನೋಡೋಣ.
ಒತ್ತಡವನ್ನು ತ್ವರಿತವಾಗಿ ಕಡಿಮೆಮಾಡುವಂತಹ ಆಹಾರಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಡಾರ್ಕ್ ಚಾಕೊಲೇಟ್:
ಡಾರ್ಕ್ ಚಾಕೊಲೇಟ್ ಅತ್ಯುತ್ತಮ ಡಿ-ಸ್ಟ್ರೆಸರ್ ಮತ್ತು ಮೂಡ್-ಬೂಸ್ಟರ್ ಆಗಿದೆ. ಡಾರ್ಕ್ ಚಾಕೊಲೇಟ್ ಫ್ಲೇವನಾಯ್ಡ್‌ಗಳಿಂದ ತುಂಬಿದ್ದು, ಅದು ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಿ, ಮನಸ್ಥಿತಿ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ, ಡಾರ್ಕ್ ಚಾಕೊಲೇಟ್ ಸೇವನೆಯು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಅನ್ನು ಕಡಿಮೆ ಮಾಡುತ್ತದೆ. ಆದರೂ, ನೀವು ಸೇವಿಸುವ ಡಾರ್ಕ್ ಚಾಕೊಲೇಟ್ ಬಾರ್ ಅನ್ನು ಶುದ್ಧ ಘಟಕಗಳಿಂದ ತುಂಬಿಸಲಾಗಿದೆಯೇ, ಅದಕ್ಕೆ ಯಾವುದೇ ರಾಸಾಯನಿಕಗಳನ್ನು ಸೇರಿಸಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಕನಿಷ್ಠ 70 ಪ್ರತಿಶತದಷ್ಟು ಕೋಕೋವನ್ನು ಒಳಗೊಂಡಿರುವ ಸುಮಾರು 30 ಗ್ರಾಂ ಡಾರ್ಕ್ ಚಾಕೊಲೇಟ್ ಒಂದು ಸಮಯಕ್ಕೆ ಸೇವಿಸಬಹುದು.

ಡ್ರೈ ಫ್ರೂಟ್ಸ್:
ಒಣ ಹಣ್ಣುಗಳು ಚರ್ಮ, ಕೂದಲು ಮತ್ತು ದೇಹಕ್ಕೆ ಅಗಾಧ ಪ್ರಯೋಜನ ನೀಡುತ್ತವೆ. ಇವು ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವುದರಿಂದ, ಅವು ಸೆಲ್ಯುಲಾರ್ ರಚನೆ ಮತ್ತು ಅದರ ಕಾರ್ಯಗಳನ್ನು ಬೆಂಬಲಿಸುತ್ತವೆ. ವಾಲ್‌ನಟ್ಸ್, ಗೋಡಂಬಿ ಮತ್ತು ಸೂರ್ಯಕಾಂತಿ ಬೀಜಗಳು ದೇಹದಲ್ಲಿ ಸಿರೊಟೋನಿನ್ ಉತ್ಪಾದನೆಯನ್ನು ಹೆಚ್ಚಿಸಿ, ಒತ್ತಡದ ದಿನವನ್ನು ನಿಭಾಯಿಸಲು ನಮಗೆ ಸಹಾಯ ಮಾಡುತ್ತದೆ. ಸತುವಿನ ಉತ್ತಮ ಮೂಲವಾದ ಕುಂಬಳಕಾಯಿ ಬೀಜಗಳು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ನಿಮ್ಮಲ್ಲಿ ಅವುಗಳನ್ನು ಹಸಿ ಸೇವಿಸಲು ಇಷ್ಟಪಡದವರಿಗೆ, ಸಲಾಡ್‌ಗಳು, ತರಕಾರಿಗಳ ಜೊತೆ ಸೇರಿಸಬಹುದು.

ಆವಕಾಡೊಗಳು:
ನೀವು ಆವಕಾಡೊಗಳ ಅಭಿಮಾನಿಯಾಗಿದ್ದರೆ, ಅವುಗಳನ್ನು ಪ್ರೀತಿಸಲು ಇನ್ನೊಂದು ಕಾರಣ ಇಲ್ಲಿದೆ. ಇದು ಸಿ, ಇ, ಕೆ ಮತ್ತು ಬಿ-6 ಮತ್ತು ರಿಬೋಫ್ಲಾವಿನ್, ನಿಯಾಸಿನ್, ಫೋಲೇಟಗಳಂತಹ ಅಗತ್ಯ ವಿಟಮಿನ್‌ಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದ್ದು, ಒತ್ತಡವನ್ನು ಕಡಿಮೆ ಮಾಡುತ್ತದೆ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ. ಜೊತೆಗೆ ಆಹಾರದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಆವಕಾಡೊವನ್ನು ಪ್ರತಿದಿನ ಸೇವಿಸುವುದರಿಂದ ಅಧಿಕ ರಕ್ತದ ಗ್ಲೂಕೋಸ್, ಅಧಿಕ ರಕ್ತದೊತ್ತಡ ಮತ್ತು ಸ್ಥೂಲಕಾಯತೆಯ ವಿರುದ್ಧ ಹೋರಾಡಲು ಸಹಾಯ ಆಗುವುದು.

ಹುದುಗಿಸಿದ ಆಹಾರಗಳು:
ಮಾನಸಿಕ ಆರೋಗ್ಯ ಮತ್ತು ಹುದುಗಿಸಿದ ಆಹಾರಗಳಿಗೂ ಸಂಬಂಧ ಹೊಂದಿವೆ ಎಂದು ಸಾಬೀತಾಗಿದೆ. ಇದು ನಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿಡಲು ಪ್ರಯೋಜನಕಾರಿ. ಮೊಸರು ಮತ್ತು ಕೊಂಬುಚಾಗಳು ಒತ್ತಡ ಮತ್ತು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುವ ಪ್ರೋಬಯಾಟಿಕ್‌ಗಳನ್ನು ಒಳಗೊಂಡಿರುವ ಕೆಲವು ಅತ್ಯಂತ ಪ್ರಯೋಜನಕಾರಿ ಹುದುಗಿಸಿದ ಆಹಾರಗಳಾಗಿವೆ. ಪ್ರೋಬಯಾಟಿಕ್-ಭರಿತ ಆಹಾರವು ನಕಾರಾತ್ಮಕ ಆಲೋಚನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

ಸಿಟ್ರಸ್ ಹಣ್ಣುಗಳು:
ವಿಟಮಿನ್ ಸಿ ನಮ್ಮ ತ್ವಚೆಯನ್ನು ಕಾಂತಿಯುತಗೊಳಿಸುವುದಕ್ಕಿಂತ ಹೆಚ್ಚು ಮನಸ್ಸಿಗೆ ಒಳ್ಳೆಯದನ್ನು ಮಾಡುತ್ತದೆ. ಉತ್ಕರ್ಷಣ ನಿರೋಧಕ-ಸಮೃದ್ಧ ಸಿಟ್ರಸ್ ಹಣ್ಣುಗಳು ಒತ್ತಡವನ್ನು ನಿವಾರಿಸಲು ಸಹ ಸಂಬಂಧಿಸಿವೆ. ಒತ್ತಡದ ಸಮಯದಲ್ಲಿ ನಮ್ಮ ದೇಹಕ್ಕೆ ವಿಟಮಿನ್ ಸಿ ಬೇಕಾಗುತ್ತದೆ, ಪಪ್ಪಾಯಿ, ಮಾವು, ದ್ರಾಕ್ಷಿಹಣ್ಣು ಮತ್ತು ಕಿತ್ತಳೆಗಳಂತಹ ಸಿಟ್ರಿಕ್ ಹಣ್ಣುಗಳನ್ನು ಸೇವಿಸುವುದು ದೇಹವನ್ನು ಜೀವರಾಸಾಯನಿಕ ಮತ್ತು ಶಾರೀರಿಕ ಮಟ್ಟದಲ್ಲಿ ಸಹಾಯ ಮಾಡಲು ಉತ್ತಮ ಮಾರ್ಗವಾಗಿದೆ. ಅವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ, ಒತ್ತಡ ಮತ್ತು ನರಗಳ ಒತ್ತಡವನ್ನು ಕಡಿಮೆ ಮಾಡುವ ಉತ್ಕರ್ಷಣ ನಿರೋಧಕಗಳ ಪ್ರಬಲ ಮೂಲವಾಗಿದೆ.



Click it and Unblock the Notifications











