Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಮಾವಿನಕಾಯಿ ಸಾರಿಗೆ ಹಾಕಿದರೆ ಆರೋಗ್ಯಕ್ಕೆ 6 ಲಾಭ
ಮಾರ್ಚ್ ತಿಂಗಳಿನಿಂದ ಜೂನ್-ಜುಲೈಯವರಿಗೆ ಮಾವಿನಕಾಯಿ ಹಾಗೂ ಹಣ್ಣುಗಳದ್ದೇ ಕಾರುಬಾರು. ಈ ಸೀಸನಲ್ ಫುಡ್ ಈ ಸಮಯದಲ್ಲಿ ಅನೇಕ ಬಗೆಯ ಖಾದ್ಯಗಳನ್ನು, ಸ್ವೀಟ್, ಜಾಮ್‌ಗಳನ್ನು ಮಾಡಿ ಸವಿಯುತ್ತೇವೆ. ಏಕೆಂದರೆ ಅದು ಸಿಗುವಾಗ ಅವುಗಳಿಂದ ಬಗೆ-ಬಗೆಯ ತಿನಿಸು ಮಾಡಿ ಸವಿಯದಿದ್ದರೆ ನಂತರ ಆ ರುಚಿ ನೋಡಲು ಒಂದು ವರ್ಷ ಕಾಯಬೇಕಾಗುತ್ತದೆ.

ಈಗ ಮಾವಿನ ಹಣ್ಣು ಹೆಚ್ಚಾಗಿ ದೊರೆಯುತ್ತವೆ, ಜೊತೆಗೆ ಕಾಯಗಳು ಕೂಡ ಲಭ್ಯವಿದೆ. ಮಾವಿನಕಾಯಿ ಉಪ್ಪು ಹಾಕಿ ತಿನ್ನುವುದು ಒಂದು ಬಗೆಯ ರುಚಿಯಾದರೆ ಇವುಗಳನ್ನು ಹಾಕಿ ಮಾಡುವ ಸಾರು ಕೂಡ ಅಷ್ಟೇ ರುಚಿಕರವಾಗಿರುತ್ತದೆ. ಇನ್ನು ಕೆಲವರು ಮಿಡಿ ಮಾವಿನಕಾಯಿ ವರ್ಷದವರೆಗೆ ಸಂಗ್ರಹಿಸಿಟ್ಟು ಉಪ್ಪಿನಕಾಯಿ ಹಾಗೂ ಸಾರಿಗೆ ಬಳಸುತ್ತಾರೆ.
ಮಾವಿನಕಾಯಿಂದ ಮಾಡುವ ಸಾರು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಾವಿನಕಾಯಿ ಸಾರು ತಿಂದರೆ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು ನೋಡಿ:

ಮೈ ಉಷ್ಣತೆ ಕಡಿಮೆ ಮಾಡುತ್ತದೆ, ದೇಹದಲ್ಲಿ ನೀರಿನಂಶ ಕಾಪಾಡುತ್ತದೆ
ಕೆಲವು ಕಡೆ ಜೂನ್ ಆದರೂ ಉರಿ ಬಿಸಿಲು ಹಾಗೇ ಇರುತ್ತದೆ. ಮಾವಿನಕಾಯಿ ಸಾರು ಮಾಡಿ ತಿನ್ನುವುದರಿಂದ ಮೈ ಉಷ್ಣತೆ ಕಡಿಮೆಯಾಗುವುದು ಅಲ್ಲದೆ ಇದು ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.

ಹೊಟ್ಟೆ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ
ಕೆಲವರಿಗೆ ಬೆಳಗ್ಗೆ ಎದ್ದಾಗ ತಲೆಸುತ್ತು, ಮಲಬದ್ಧತೆ, ಬೇಧಿ, ಅಜೀರ್ಣ ಈ ರೀತಿಯ ಸಮಸ್ಯೆ ಇರುತ್ತದೆ. ಈ ಸಮಸ್ಯೆ ಇರುವವರು ಮಾವಿನಕಾಯಿ ಸಾರು ಮಾಡಿ ತಿಂದರೆ ಒಳ್ಳೆಯದು. ಇನ್ನು ಹಸಿ ಮಾವಿನಕಾಯಿ ಹಾಗೆಯೂ ತಿನ್ನಬಹುದು.

ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಈ ರುಚಿಕರವಾದ ಹಣ್ಣು ನಿಮ್ಮ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ನಿಯಾಸಿನ್ ಅಂಶವಿರುತ್ತದೆ ಇದು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರೂ ಇದನ್ನು ತಿನ್ನುವುದು ಒಳ್ಳೆಯದು.

ಮಾವಿನ ಕಾಯಿ ಪುಡಿ/ಆಮ್‌ಚೂರ್ ಪೌಡರ್
ಇನ್ನು ಮಾವಿನಕಾಯಿ ಒಣಗಿಸಿ ಪುಡಿ ಮಾಡಿ ಅಡುಗೆಗೆ ಬಳಸುತ್ತಾರೆ. ಇದು ಲಿವರ್ ಸಮಸ್ಯೆ ತಡೆಗಟ್ಟುವಲ್ಲಿ ತುಂಬಾ ಸಹಕಾರಿ. ಚಿಕ್ಕ ಕರುಳು ಹಾಗೂ ದೊಡ್ಡ ಕರುಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಇದು ಹೊಟ್ಟೆಯಲ್ಲಿರುವ ಹಾನಿಕಾರಕ ಬ್ಯಾಕ್ಟಿರಿಯಾಗಳನ್ನು ನಾಶ ಮಾಡುತ್ತದೆ.

ಈ ಸಮಸ್ಯೆಗಳನ್ನೂ ಹೋಗಲಾಡಿಸುತ್ತದೆ
ಕೆಲವರಿಗೆ ಹಲ್ಲಿನ ವಸಡಿನಲ್ಲಿ ರಕ್ತಸ್ರಾವ ಉಂಟಾಗುವುದು, ಇದನ್ನು ತಡೆಗಟ್ಟುವಲ್ಲಿಯೂ ಸಹಕಾರಿ. ಇನ್ನು ಮೈಯಲ್ಲಿ ದದ್ದು ಏಳುವುದು, ಸುಸ್ತು, ತಲೆಸುತ್ತು ಇವುಗಳಿಗೆಲ್ಲಾ ಆಮ್‌ಚೂರ್ ಪುಡಿ ಅತ್ಯುತ್ತಮವಾದ ಮನೆಮದ್ದಾಗಿದೆ. ಅಲ್ಲದೆ ಇದು ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪತ್ತಿಗೂ ಸಹಕಾರಿ.

ದೇಹಕ್ಕೆ ಶಕ್ತಿಯನ್ನು ತುಂಬುವುದು
ಮಧ್ಯಾಹ್ನ ಊಟವಾದ ಬಳಿಕ ನಿದ್ದೆ ಬರುವುದು, ಆಯಾಸ, ಆಲಸ್ಯ ಉಂಟಾದರೆ ಸ್ವಲ್ಪ ಮಾವಿನಕಾಯಿ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿದು ನೋಡಿ, ಸುಸ್ತು ಮಾಯ ಲವಲವಿಕೆಯಿಂದ ಕೆಲಸ ಮಾಡುವಿರಿ.



Click it and Unblock the Notifications