Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ಕಿಡ್ನಿ ಬಾವು ಬರಲು ಕಾರಣಗಳು-ಇದರಿಂದ ಆರೋಗ್ಯದಲ್ಲಿ ಆಗುವ ಏರುಪೇರು
ದೇಹದಲ್ಲಿನ ಕಲ್ಮಶಗಳು ಹಾಗೂ ಹೆಚ್ಚುವರಿ ನೀರನ್ನು ಮೂತ್ರದ ಮೂಲಕ ಹೊರಹಾಕುವಲ್ಲಿ ಕಿಡ್ನಿ (ಮೂತ್ರಪಿಂಡ) ಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಆದರೆ ಕೆಲಬಾರಿ ಯಾವುದಾದರೂ ಒಂದು ಮೂತ್ರಪಿಂಡಕ್ಕೆ ಬಾವು ಬಂದಾಗ ಸಮಸ್ಯೆ ಸೃಷ್ಟಿಯಾಗುತ್ತದೆ. ಮೂತ್ರಪಿಂಡ ಊದಿಕೊಂಡಾಗ ತಕ್ಷಣ ವೈದ್ಯರಿಂದ ಚಿಕಿತ್ಸೆ ಆರಂಭಿಸಬೇಕಾಗುತ್ತದೆ. ಮೂತ್ರಕೋಶದ ಸೋಂಕು, ಮೂತ್ರಪಿಂಡದಲ್ಲಿ ಗಂಟು, ಮೂತ್ರಪಿಂಡಗಳಿಗೆ ರಕ್ತಪರಿಚಲನೆಯಲ್ಲಿ ಅಡ್ಡಿಯಾಗುವಿಕೆ ಅಥವಾ ಮೂತ್ರಪಿಂಡಗಳಲ್ಲಿ ಮೂತ್ರ ಸಂಗ್ರಹವಾಗುವಿಕೆ (ಹೈಡ್ರೊನೆಫ್ರೊಸಿಸ್) ಹೀಗೆ ಹಲವಾರು ಕಾರಣಗಳಿಂದ ಕಿಡ್ನಿ ಊದಿಕೊಳ್ಳಬಹುದು.

ಸಿಸ್ಟಿಸಿಸ್ ಎಂಬ ಸೋಂಕು
ಮೂತ್ರಕೋಶಕ್ಕೆ ತಗಲುವ ಸಿಸ್ಟಿಸಿಸ್ ಎಂಬ ಸೋಂಕಿನ ಕಾರಣದಿಂದ ಇಡೀ ಮೂತ್ರಪಿಂಡಕ್ಕೆ ಪೈಲೊನೆಫ್ರಿಟಿಸ್ ಎಂಬ ಸೋಂಕು ಉಂಟಾಗುತ್ತದೆ. ಮೂತ್ರಕೋಶದಲ್ಲಿರುವ ಬ್ಯಾಕ್ಟೀರಿಯಾಗಳು ಯುರೇಟರ್ ನಾಳದ ಮೂಲಕ ಮೂತ್ರಪಿಂಡಕ್ಕೆ ಪ್ರವೇಶಿಸಿದಾಗ ಮೂತ್ರಪಿಂಡಗಳು ಸಹ ಸೋಂಕಿತವಾಗುತ್ತವೆ. ಬ್ಯಾಕ್ಟೀರಿಯಾಗಳು ರಕ್ತದ ಮೂಲಕ ಮೂತ್ರಪಿಂಡಕ್ಕೆ ಪ್ರವೇಶಿಸುವ ಸಾಧ್ಯತೆಗಳು ಬಹಳ ಕಡಿಮೆ. ಪೈಲೊನೆಫ್ರಿಟಿಸ್‌ನಿಂದ ಮೂತ್ರಪಿಂಡಗಳಲ್ಲಿ ಉರಿಯೂತ ಉಂಟಾಗಿ ಬಾವು ಕಂಡುಬರುತ್ತದೆ. ಬೆನ್ನ ಕೆಳಗೆ ನೋವು, ಜ್ವರ, ಅಸ್ವಸ್ಥತೆ ಮತ್ತು ವಾಂತಿ ಮುಂತಾದ ರೋಗ ಲಕ್ಷಣಗಳು ಇದರಿಂದ ಉಂಟಾಗುತ್ತವೆ. ಮಹಿಳೆಯರಲ್ಲಿ ಸೋಂಕು ತಗುಲಿದಾಗ ಮೂತ್ರದಲ್ಲಿ ರಕ್ತ ಸಹ ಹೊರ ಹೋಗಬಹುದು. ಮೂತ್ರಪಿಂಡದ ಸೋಂಕು ನಿವಾರಣೆಗೆ ಆಂಟಿ ಬಯಾಟಿಕ್‌ಗಳ ಮೂಲಕ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ.

ಯುರೇಟರ್ ಬ್ಲಾಕ್ ಆಗಲು ಕಾರಣಗಳು
ಯುರೇಟರ್ ನಾಳವು ಭಾಗಶಃ ಅಥವಾ ಸಂಪೂರ್ಣವಾಗಿ ಬ್ಲಾಕ್ ಆದಾಗ ಮೂತ್ರಕೋಶಕ್ಕೆ ಸಹಜವಾಗಿ ಮೂತ್ರದ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ ಹಾಗೂ ಇದರಿಂದ ಮೂತ್ರಪಿಂಡಗಳಲ್ಲಿ ಮೂತ್ರ ಸಂಗ್ರಹವಾಗತೊಡಗುತ್ತದೆ. ಸಾಮಾನ್ಯವಾಗಿ ಯುರೇಟರ್ ನಾಳದಲ್ಲಿ ಬೆಳೆದ ಕಿಡ್ನಿ ಸ್ಟೋನ್ ಅಥವಾ ರಕ್ತ ಹೆಪ್ಪುಗಟ್ಟುವಿಕೆಯಿಂದ ಯುರೇಟರ್ ಬ್ಲಾಕ್ ಆಗುವ ಸಾಧ್ಯತೆ ಇರುತ್ತದೆ. ಯಾವುದೋ ಗಾಯ, ಸರ್ಜರಿ ಅಥವಾ ಸೋಂಕು ತಗಲುವಿಕೆಯಿಂದ ಸಹ ಯುರೇಟರ್ ನಾಳ ಸಂಕುಚಿತಗೊಳ್ಳಬಹುದು. ಇದರಿಂದ ಉಂಟಾಗುವ ಹೈಡ್ರೊನೆಫ್ರೊಸಿಸ್‌ಗೆ ಬೇಗನೆ ಚಿಕಿತ್ಸೆ ನೀಡಿ ಗುಣಪಡಿಸದಿದ್ದಲ್ಲಿ ಮೂತ್ರಪಿಂಡಗಳ ಕಾರ್ಯಕ್ಷಮತೆ ಕಡಿಮೆಯಾಗಿ ಅವು ಸಂಪೂರ್ಣ ವಿಫಲವಾಗುವ ಸಾಧ್ಯತೆಗಳಿರುತ್ತವೆ.

ಕಿಡ್ನಿಗಳಿಗೆ ರಕ್ತ ಸರಬರಾಜಿನಲ್ಲಿ ಅಡ್ಡಿ
ಮೂತ್ರಕೋಶದ ಅಪಧಮನಿಗಳ ಮೂಲಕ ಮೂತ್ರಪಿಂಡಗಳಿಗೆ ರಕ್ತ ಸರಬರಾಜಾಗುತ್ತದೆ. ಆದರೆ ಕಿಡ್ನಿಗಳಿಗೆ ರಕ್ತ ಸರಬರಾಜಿನಲ್ಲಿ ಅಡ್ಡಿ ಆದಾಗ ಅಥವಾ ಸಂಪೂರ್ಣ ಬಂದ್ ಆದಾಗ ಆಮ್ಲಜನಕ ಹಾಗೂ ಇತರ ಅಗತ್ಯ ಪೋಷಕಾಂಶಗಳ ಕೊರತೆಯಿಂದ ಕಿಡ್ನಿ ಜೀವಕೋಶಗಳು ಸಾಯಲಾರಂಭಿಸುತ್ತವೆ. ಹೀಗೆ ಜೀವಕೋಶಗಳು ಹಾಳಾದಾಗ ಕಿಡ್ನಿ ಸೋಂಕು ಉಂಟಾಗಿ ಕಿಡ್ನಿ ಬಾತುಕೊಳ್ಳುತ್ತವೆ. ಐಯೊರ್ಟಾ ಎಂದು ಕರೆಯಲಾಗುವ ಮೂತ್ರಕೋಶದ ಅಪಧಮನಿ ಅಥವಾ ಮುಖ್ಯ ರಕ್ತನಾಳದಲ್ಲಿ ಕೊಲೆಸ್ಟರಾಲ್ ಅಂಶ ಸಂಗ್ರಹಗೊಂಡು ಉಂಟಾಗುವ ಅಥೆರೊಸ್ಲೆರೊಸಿಸ್ ಎಂಬ ಸ್ಥಿತಿಯಿಂದ ಕಿಡ್ನಿಗಳಿಗೆ ರಕ್ತ ಸರಬರಾಜಿನಲ್ಲಿ ಅಡ್ಡಿ ಉಂಟಾಗುತ್ತದೆ.

ಕಿಡ್ನಿಗಳಿಗೆ ಬಾವು ಬರಬಹುದು
ಹಾಗೆಯೇ ಕಿಡ್ನಿಯಿಂದ ರಕ್ತ ಹೊರಹೋಗುವ ರಕ್ತನಾಳಗಳು ಭಾಗಶಃ ಅಥವಾ ಸಂಪೂರ್ಣ ಬ್ಲಾಕ್ ಆದಾಗ ರಕ್ತ ಕಿಡ್ನಿಯಲ್ಲಿಯೇ ಸಂಗ್ರಹಗೊಂಡು ಕಿಡ್ನಿಗಳಿಗೆ ಬಾವು ಬರುತ್ತದೆ. ಸಾಮಾನ್ಯವಾಗಿ ರಕ್ತ ಹೆಪ್ಪುಗಟ್ಟುವಿಕೆಯಿಂದ ರಕ್ತನಾಳಗಳು ಬ್ಲಾಕ್ ಆಗುತ್ತವೆ. ಘನೀಕರಣ ರೋಗದಿಂದ ದೇಹದ ಹಲವಾರು ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಲಾರಂಭಿಸುತ್ತದೆ. ಇಂಥ ಸಮಸ್ಯೆಯಿಂದಲೇ ಬಹುತೇಕ ಸಂದರ್ಭಗಳಲ್ಲಿ ಮೂತ್ರಪಿಂಡದ ನಾಳಗಳಲ್ಲಿಯೂ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ. ಇನ್ನು ಕಿಬ್ಬೊಟ್ಟೆಯ ಕೆಳಭಾಗದಲ್ಲಿ ಬೆಳೆಯುವ ಗಂಟುಗಳಿಂದ ಸಹ ರಕ್ತನಾಳಗಳ ಸುಗಮ ಕೆಲಸಕ್ಕೆ ಅಡ್ಡಿಯಾಗುತ್ತದೆ.

ಮೂತ್ರಚೀಲ ಹಾಗೂ ಗಂಟುಗಳು
ಮೂತ್ರಪಿಂಡಗಳಲ್ಲಿ ದ್ರಾವಣದಿಂದ ತುಂಬಿರುವ ರೀನಲ್ ಸಿಸ್ಟ್ ಎಂದು ಕರೆಯಲಾಗುವ ಚೀಲಗಳು ಸಹ ಕಿಡ್ನಿ ಬಾವು ಉಂಟಾಗಲು ಕಾರಣವಾಗುತ್ತವೆ. ಈ ರೀನಲ್ ಸಿಸ್ಟ್‌ಗಳು ಕಿಡ್ನಿಗೆ ಹಾನಿ ಉಂಟುಮಾಡಬಲ್ಲವಾದರೂ ವಿರಳ ಸಂದರ್ಭಗಳಲ್ಲಿ ಮಾತ್ರ ಇವು ಕ್ಯಾನ್ಸರಕಾರಕವಾಗಿರಬಹುದು. ಒಂದೇ ರೀನಲ್ ಸಿಸ್ಟ್ ಅಥವಾ ಬಹು ಸಿಸ್ಟ್‌ಗಳು ಬೆಳೆಯಬಹುದು. ಒಂದೇ ಕಿಡ್ನಿಯಲ್ಲಿ ಅನೇಕ ರೀನಲ್ ಸಿಸ್ಟ್ ಬೆಳೆಯುವುದು ಅಪರೂಪದ ರೋಗ ಲಕ್ಷಣವಾಗಿದೆ. ಇದು ಸಾಮಾನ್ಯವಾಗಿ ಯಾವುದೇ ರೋಗ ಲಕ್ಷಣವನ್ನು ತೋರ್ಪಡಿಸುವುದಿಲ್ಲ ಹಾಗೂ ಕಿಡ್ನಿಯ ಕಾರ್ಯದಲ್ಲಿ ಯಾವುದೇ ಅಡ್ಡಿ ಉಂಟುಮಾಡುವುದಿಲ್ಲ. ಇನ್ನು ಕಿಡ್ನಿಯಲ್ಲಿನ ಗಂಟುಗಳು ಸಹ ಕಿಡ್ನಿ ಬಾವು ಬರಲು ಕಾರಣವಾಗುತ್ತವೆ. ಇಂಥ ಗಂಟುಗಳು ನೋವುಕಾರಕ ಅಥವಾ ಕೆಲ ಬಾರಿ ಕ್ಯಾನ್ಸರಕಾರಗಳೂ ಆಗಿರಬಹುದು. ಅಮೆರಿಕೆಯ ನ್ಯಾಷನಲ್ ಕ್ಯಾನ್ಸರ್ ಇನ್ಸಟಿಟ್ಯೂಟ್ ವರದಿಯ ಪ್ರಕಾರ ಕಿಡ್ನಿ ಕ್ಯಾನ್ಸರ್ ಇದು ಅಮೆರಿಕೆಯ ಎಂಟನೇ ಅತಿ ಹೆಚ್ಚು ಬಾಧಿಸುವ ಕ್ಯಾನ್ಸರ್ ಆಗಿದೆ. ಕಿಡ್ನಿ ಕ್ಯಾನ್ಸರ್‌ನ ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಕಾಣಿಸದೇ ಇರಬಹುದು. ಪಾರ್ಶ್ವ ನೋವು, ಮೂತ್ರದಲ್ಲಿ ರಕ್ತಸ್ರಾವ ಹಾಗೂ ಯಾವುದಾದರೂ ರೋಗದೊಂದಿಗೆ ಜ್ವರ ಬರುವುದು ಮುಂತಾದ ಲಕ್ಷಣಗಳು ನಂತರ ಕಂಡು ಬರಲಾರಂಭಿಸುತ್ತವೆ. ಕೆಲಬಾರಿ ಮೂತ್ರಪಿಂಡದ ಅಭಿಧಮನಿಗಳಿಗೆ ಕ್ಯಾನ್ಸರ್ ಹರಡಿ ಅದರಿಂದ ರಕ್ತ ಹೆಪ್ಪುಗಟ್ಟುತ್ತದೆ. ಇದು ಕಿಡ್ನಿ ಬಾವು ಬರಲು ಕಾರಣವಾಗುತ್ತದೆ.

ಇತರ ಕಾರಣಗಳು
ಕ್ಯಾನ್ಸರ್‌ನ ಕಾರಣದಿಂದ ಒಂದು ಕಿಡ್ನಿಯನ್ನು ಸರ್ಜರಿ ಮೂಲಕ ತೆಗೆದುಹಾಕಿದಾಗ ಇರುವ ಒಂದೇ ಕಿಡ್ನಿ ಎರಡೂ ಕಿಡ್ನಿಗಳ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಸಹ ಕಿಡ್ನಿ ಬಾವು ಕಾಣಿಸಿಕೊಳ್ಳಬಹುದು. ಮೊದಲಿಗೆ ಒಂದು ಕಿಡ್ನಿಗೆ ಸಮಸ್ಯೆ ಉಂಟಾಗಿ ಅದು ನಂತರ ಎರಡೂ ಕಿಡ್ನಿಗಳಿಗೆ ಹರಡುತ್ತದೆ. ಉದಾಹರಣೆಗೆ: ಡಯಾಬಿಟೀಸ್‌ನಿಂದ ಕಿಡ್ನಿ ಸೋಂಕು ಉಂಟಾಗಿ ಕಿಡ್ನಿ ಬಾವು ಬರುವ ಸಮಸ್ಯೆ ಒಂದೇ ಕಿಡ್ನಿಗೂ ಸೀಮಿತವಾಗಿರಬಹುದು.



Click it and Unblock the Notifications











