Latest Updates
-
ಈ ರೀತಿ ಟೊಮೆಟೊ ಸೆಟ್ ದೋಸೆ! ಹಿಟ್ಟು ರುಬ್ಬುವ ಅವಶ್ಯಕತೆಯಿಲ್ಲ.. ಬ್ಯಾಚುಲರ್ಗಳಿಗೆ ಬೆಸ್ಟ್, ತೂಕ ಇಳಿಕೆಗೆ ಸೂಪರ್! -
ಸಂಬಂಧಿಕರ ಮಾತುಗಳನ್ನು ನಿರ್ಲಕ್ಷಿಸಬೇಡಿ! ಸ್ನೇಹಿತರಿಂದ ಪೂರ್ಣ ಸಹಕಾರ -
March 16 Horoscope: ಹಣಕಾಸು ವಿಚಾರವಾಗಿ ಎಚ್ಚರದಿಂದ ವ್ಯವಹರಿಸಿ! -
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ
ಬಟಾಣಿ ಕಾಳಿನ ಆರೋಗ್ಯ ಹಾಗೂ ಸೌಂದರ್ಯ ಲಾಭಗಳು
ಪ್ರಕೃತಿಯಲ್ಲಿ ಸಿಗುವಂತಹ ಪ್ರತಿಯೊಂದು ಹಣ್ಣು ಹಾಗೂ ತರಕಾರಿಗಳು ತುಂಬಾ ಆರೋಗ್ಯಕಾರಿ ಹಾಗೂ ಪೋಷಕಾಂಶಗಳನ್ನು ಹೊಂದಿರುವುದು. ಸಾವಯವವಾಗಿ ಬೆಳೆದಿರುವಂತಹ ಪ್ರತಿಯೊಂದು ತರಕಾರಿಯು ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳನ್ನು ನೀಡುವುದು. ಕೆಲವೊಂದು ಧಾನ್ಯಗಳು ಹಾಗೂ ಬೀಜಗಳು ದೇಹದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಅದರಲ್ಲಿ ಬಟಾಣಿ ಕಾಳು ಕೂಡ ಒಂದು. ಇದು ತುಂಬಾ ಆರೋಗ್ಯಕಾರಿ ಹಾಗೂ ರುಚಿಯೂ ಅದ್ಭುತವಾಗಿದೆ.
ಬಟಾಣಿ ಕಾಳಿನಲ್ಲಿ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಗಳು, ಖನಿಜಾಂಶಗಳು ಮತ್ತು ಇತರ ಕೆಲವೊಂದು ಅಂಶಗಳು ಇದ್ದು, ಇದು ಕಾಯಿಲೆಗಳು ಬರದಂತೆ ತಡೆಯುವುದು ಮತ್ತು ಆರೋಗ್ಯ ವೃದ್ಧಿಸುವುದು. ನಿಮ್ಮ ಆಹಾರಕ್ಕೆ ಹೆಚ್ಚಿನ ಬಟಾಣಿ ಕಾಳನ್ನು ಸೇರಿಸಿಕೊಂಡರೆ ಅದರಿಂದ ರುಚಿ ಹಾಗೂ ಪೋಷಕಾಂಶ ಮೌಲ್ಯವು ಅಧಿಕವಾಗುವುದು. ಇದನ್ನು ಹಸಿ, ಸಲಾಡ್ ರೂಪದಲ್ಲಿ ತಿಂದರೂ ಹಲವಾರು ಆರೋಗ್ಯ ಲಾಭಗಳನ್ನು ನೀಡುವುದು.
ಬಟಾಣಿ ಕಾಳನ್ನು ಅದರ ಸಿಪ್ಪೆಯಿಂದ ತೆಗೆದು ಹಸಿ ಮತ್ತು ತಾಜಾವಾಗಿ ತಿಂದರೆ ಅದು ಅತ್ಯುತ್ತಮ ವಾಗಿರುವುದು. ಇದರಿಂದ ನಿಮಗೆ ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ಉಂಟು ಮಾಡುವುದು. ಇದರ ಹೊರತಾಗಿ ಇದರಲ್ಲಿ ವಿಟಮಿನ್ ಗಳು, ಖನಿಜಾಂಶಗಳು, ಆ್ಯಂಟಿಆಕ್ಸಿಡೆಂಟ್ ಗಳು ಮಾತ್ರವಲ್ಲದೆ ಬಟಾಣಿ ಕಾಳಿನಲ್ಲಿ ಪ್ರೋಟೀನ್ ಮತ್ತು ನಾರಿನಾಂಶವಿದೆ. ಇದು ದೇಹಕ್ಕೆ ಅಮೂಲ್ಯವಾದ ಪೋಷಕಾಂಶಗಳನ್ನು ನೀಡುವುದು. ಈ ಲೇಖನದಲ್ಲಿ ಬಟಾಣಿ ಕಾಳಿನಿಂದ ಸಿಗುವಂತಹ ಆರೋಗ್ಯ ಲಾಭಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಓದಲು ತಯಾರಾಗಿ...

ಕ್ಯಾನ್ಸರ್ ತಡೆಯುವುದು
ಬಟಾಣಿ ಕಾಳಿನಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಇದರಲ್ಲಿ ಫ್ಲಾವನಾಯ್ಡ್ ಗಳು, ಕ್ಯಾರೋಟಿನಾಯ್ಡ್, ಫೆನಾಲಿಕ್ ಆಮ್ಲಗಳ ಸಹಿತ ಪಾಲಿಫಿನಾಲ್ ಗಳು ದೇಹದಲ್ಲಿ ಅದ್ಭುತವಾಗಿ ಆ್ಯಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುವುದು. ಬಟಾಣಿ ಕಾಳುಗಳು ಕ್ಯಾನ್ಸರ್ ಕೋಶಗಳು ಬೆಳೆಯುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಅದೇ ರೀತಿಯಾಗಿ ಕ್ಯಾನ್ಸರ್ ಕೋಶಗಳಲ್ಲಿ ಅಪೊಪ್ಟೋಸಿಸ್ ಪ್ರೇರೇಪಿಸುವುದರಲ್ಲಿ ತುಂಬಾ ಪರಿಣಾಮಕಾರಿಯಾಗಿರುವುದು. ಬಟಾಣಿ ಕಾಳಿನಲ್ಲಿ ಇರುವಂತಹ ಕೊಮೆಸ್ಟೆರೊಲ್ ಹೊಟ್ಟೆಯ ಕ್ಯಾನ್ಸರ್ ನ್ನು ತಡೆಯುವುದು ಎಂದು ಸಾಬೀತು ಮಾಡುವುದು. ಬಟಾಣಿ ಕಾಳನ್ನು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಅದರಿಂದ ಕ್ಯಾನ್ಸರ್ ಬರುವ ಅಪಾಯವನ್ನು ಬಹಳಷ್ಟು ಮಟ್ಟಿಗೆ ತಡೆಯಬಹುದು.

ಪ್ರತಿರೋಧಕ ಶಕ್ತಿ ಬಲಪಡಿಸುವುದು
ತಾಜಾ ಹಾಗೂ ಹಸಿ ಬಟಾಣಿ ಕಾಳಿನಲ್ಲಿ ಆಸ್ಕೋರ್ಬಿಕ್ ಆಮ್ಲ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುವುದು. ಪ್ರತಿರೋಧಕ ವ್ಯವಸ್ಥೆಯು ಬಲಿಷ್ಠವಾಗಿದ್ದರೆ ಆಗ ಸಾಮಾನ್ಯ ಶೀತ ಮತ್ತು ಸೋಂಕು ನಿವಾರಣೆ ಆಗುವುದು. ಪ್ರತಿರೋಧಕ ವ್ಯವಸ್ಥೆಯು ಬಲಿಷ್ಠವಾಗಿದ್ದರೆ ಆಗ ಉತ್ತಮ ಜೀವನಮಟ್ಟದೊಂದಿಗೆ ನೀವು ಫಿಟ್ ಆಗಿ ಇರಬಹುದು. ಇದರಿಂದ ನೀವು ಪ್ರತಿನಿತ್ಯವು ಬಟಾಣಿ ಕಾಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ ಮತ್ತು ಶ್ರೇಷ್ಠ ಪ್ರತಿರೋಧಕ ಶಕ್ತಿ ಪಡೆಯಿರಿ.

ಮೂಳೆಗಳನ್ನು ಬಲಗೊಳಿಸುವುದು
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಲವಾದ ಮೂಳೆಗಳು ಅತೀ ಅಗತ್ಯವಾಗಿದೆ. ಬಟಾಣಿ ಕಾಳಿನಲ್ಲಿ ಸಿಗುವಂತಹ ಪೋಷಕಾಂಶಗಳು ಮೂಳೆಗಳನ್ನು ಬಲಗೊಳಿಸುವುದು. ಬಟಾಣಿ ಕಾಳು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ ಮತ್ತು ಸತು ಕೂಡ ಇರುವ ಕಾರಣದಿಂದ ಮೂಳೆಗಳು ಕ್ಯಾಲ್ಸಿಯಂನ್ನು ಹೀರಿಕೊಳ್ಳಲು ನೆರವಾಗುವುದು ಮತ್ತು ಮೂಳೆಗಳ ಆರೋಗ್ಯ ಕಾಪಾಡುವುದು. ಅದೇ ರೀತಿಯಲ್ಲಿ ತಾಜಾ ಬಟಾಣಿ ಕಾಳುಗಳಲ್ಲಿ ವಿಟಮಿನ್ ಕೆ ಅಂಶವು ಅಧಿಕವಾಗಿದೆ. ಮೂಳೆಗಳಿಗೆ ಖನಿಜಾಂಶ ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ವಿಟಮಿನ್ ಇದಾಗಿದೆ. ಬೆಳೆಯುತ್ತಿರುವ ಮಕ್ಕಳ ಆಹಾರ ಕ್ರಮದಲ್ಲಿ ಹೆಚ್ಚಿನ ಬಟಾಣಿ ಕಾಳುಗಳನ್ನು ಸೇರಿಸಿಕೊಳ್ಳಿ. ಅದೇ ರೀತಿಯಾಗಿ ಗರ್ಭಿಣಿ ಮಹಿಳೆಯರು, 40ರ ಹರೆಯದ ಮತ್ತು ವಯಸ್ಸಾದವರು ಬಟಾಣಿ ಕಾಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡು ಬಲಿಷ್ಠ ಮೂಳೆಗಳನ್ನು ಪಡೆಯಿರಿ.

ಅಲ್ಝೈಮರ್ ತಡೆಯುವುದು
ಬಟಾಣಿ ಕಾಳಿನಲ್ಲಿ ಇರುವಂತಹ ವಿಟಮಿನ್ ಕೆ ಯಾವುದೇ ರೀತಿಯ ನರ ಹಾನಿಯನ್ನು ತಡೆಯುವಂತಹ ಸಾಮರ್ಥ್ಯ ಹೊಂದಿದೆ. ಮೆದುಳಿನ ಕೋಶಗಳ ಅವನತಿಯನ್ನು ತಡೆಯುವಲ್ಲಿ ವಿಟಮಿನ್ ಕೆ ಪ್ರಮುಖ ಪಾತ್ರ ನಿರ್ವಹಿಸುವುದು ಮತ್ತು ಇದರಿಂದಾಗಿ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವಂತಹ ಅಲ್ಝೈಮರ್ ಕಾಯಿಲೆಯ ಅಪಾಯವನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿ ಇರುವುದು.
Most Read: ಬಹುಪಯೋಗಿ 'ಹಸಿ ಬಟಾಣಿ', ಆರೋಗ್ಯದ ಕೀಲಿಕೈ....

ದೃಷ್ಟಿ ಉತ್ತಮ ಪಡಿಸುವುದು
ಕಣ್ಣಿನ ದೃಷ್ಟಿ ಉತ್ತಮ ಪಡಿಸಲು ಬಟಾಣಿ ಕಾಳು ಅತ್ಯುತ್ತಮ ಆಹಾರ ಎಂದು ಪರಿಗಣಿಸಲಾಗಿದೆ. ಬಟಾಣಿ ಕಾಳಿನಲ್ಲಿ ಅತ್ಯುತ್ತಮ ಮಟ್ಟದ ವಿಟಮಿನ್ ಎ ಇರುವ ಕಾರಣ ಇದು ಕಣ್ಣಿನ ದೃಷ್ಟಿಗೆ ತುಂಬಾ ನೆರವಾಗುವುದು ಮತ್ತು ಅಕ್ಷಿಪಟಲದ ಅವನತಿಯನ್ನು ತಡೆಯುವುದು. ಬಟಾಣಿ ಕಾಳಿನಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೆಂಟ್ ಲುಟೇನ್ ಕಣ್ಣಿನ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಲುಟೇನ್ ನನ್ನು ಅಧಿಕ ಪ್ರಮಾಣದಲ್ಲಿ ಸೇವನೆ ಮಾಡಿದರೆ ಅದರಿಂದ ವಯಸ್ಸಾಗುವ ವೇಳೆ ಕಂಡು ಬರುವಂತಹ ಕಣ್ಣಿನ ದೃಷ್ಟಿ ದೋಷ ಮತ್ತು ಅವನತಿಯನ್ನು ಪರಿಣಾಮಕಾರಿಯಾಗಿ ತಡೆಯಬಹುದು. ವಯಸ್ಸಾಗುವ ವೇಳೆ ಕಂಡುಬರುವಂತಹ ಕಣ್ಣಿನ ಪೊರೆ, ಗ್ಲುಕೋಮಾ ಮತ್ತು ಅಕ್ಷಿಪಟಲದ ಅವನತಿ ತಡೆಯುವುದು.

ಖಿನ್ನತೆ ವಿರುದ್ಧ ಹೋರಾಡುವುದು
ಬಟಾಣಿ ಕಾಳಿನಲ್ಲಿ ಇರುವಂತಹ ಉನ್ನತ ಮಟ್ಟದ ವಿಟಮಿನ್ ಬಿ ಮತ್ತು ಸತುವಿನ ಅಂಶವು ಮೆದುಳಿನಲ್ಲಿ ಒಳ್ಳೆಯ ಹಾರ್ಮೋನ್ ಬಿಡುಗಡೆ ಮಾಡಲು ಸಹಕರಿಸುವುದು. ಇದರಿಂದಾಗಿ ಖಿನ್ನತೆ ವಿರುದ್ಧ ತುಂಬಾ ಪರಿಣಾಮಕಾರಿಯಾಗಿ ಹೋರಾಡಬಹುದು. ಈ ಅಂಶಗಳು ನರಗಳು ಶಾಂತವಾಗಿರಲು ಪರಿಣಾಮಕಾರಿ ಮತ್ತು ಒಳ್ಳೆಯ ನಿದ್ರೆಗೆ ಸಹಕಾರಿ ಆಗಿರುವುದು. ನಿಮಗೆ ಪದೇ ಪದೇ ಮನಸ್ಥಿತಿ ಬದಲಾಗುತ್ತಲಿದ್ದರೆ ಆಗ ನೀವು ಬಟಾಣಿ ಕಾಳು ಸೇವನೆ ಮಾಡಿಕೊಂಡು ಸಮಸ್ಯೆಯನ್ನು ನಿಯಂತ್ರಣಕ್ಕೆ ತರಬಹುದು.

ಜೀರ್ಣಕ್ರಿಯೆ ಸುಧಾರಣೆ
ವಿಟಮಿನ್ ಬಿ ಮತ್ತು ಅಧಿಕ ಮಟ್ಟದ ನಾರಿನಾಂಶವನ್ನು ಹೊಂದಿರುವಂತಹ ಬಟಾಣಿ ಕಾಳು ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗುವಂತಹ ಆಹಾರವೆಂದು ಪರಿಗಣಿಸಲಾಗಿದೆ. ಬಟಾಣಿ ಕಾಳಿನಲ್ಲಿ ಇರುವಂತಹ ವಿಟಮಿನ್ ಬಿ ಜೀರ್ಣಕ್ರಿಯೆ ಕಿಣ್ವಗಳ ಸ್ರವಿಸುವಿಕೆಗೆ ನೆರವಾಗುವುದು ಮತ್ತು ಜೀರ್ಣಕ್ರಿಯೆಯು ಸರಿಯಾಗಿ ಆಗಲು ಸಹಕರಿಸುವುದು. ಇದರೊಂದಿಗೆ ಬಟಾಣಿ ಕಾಳಿನಲ್ಲಿ ರುವಂತಹ ಅಧಿಕ ಮಟ್ಟದ ನಾರಿನಾಂಶವು ಹೊಟ್ಟೆಯ ಚಲನೆಗೆ ತುಂಬಾ ಸಹಕಾರಿಯಾಗುವುದು. ಬಟಾಣಿ ಕಾಳನ್ನು ಇತರ ಕೆಲವು ಹಸಿರು ತರಕಾರಿಗಳ ಜತೆಗೆ ಸೇವನೆ ಮಾಡಿದರೆ ಮಲಬದ್ಧತೆಯನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು.

ಗರ್ಭಿಣಿ ಮಹಿಳೆಯರಿಗೆ ಅದ್ಭುತ ಆಹಾರ
ಫೋಲೆಟ್ ಅಧಿಕವಾಗಿರುವ ಆಹಾರದ ವಿಚಾರಕ್ಕೆ ಬಂದರೆ ಬಟಾಣಿ ಕಾಳು ಇದರಲ್ಲಿ ಅಗ್ರ ಸ್ಥಾನ ಪಡೆಯುವುದು. ಫೋಲೆಟ್ ಗರ್ಭದಲ್ಲಿರುವಂತಹ ಶಿಶುವಿನ ನರಗಳ ಬೆಳವಣಿಗೆಗೆ ಅತೀ ಅಗತ್ಯ ಮತ್ತು ಬಟಾಣಿ ಕಾಳನ್ನು ಸೇವನೆ ಮಾಡಿದರೆ ಮಗುವಿನಲ್ಲಿ ಫೋಲೆಟ್ ಅಂಶದ ಕೊರತೆಯು ಕಾಡದು. ಗರ್ಭಿಣಿ ಮಹಿಳೆಯರಿಗೆ ಬೇಕಾಗಿರುವಂತಹ ಕ್ಯಾಲ್ಸಿಯಂನ್ನು ಕೂಡ ಬಟಾಣಿ ಕಾಳು ಒದಗಿಸಿಕೊಡುವುದು. ಇದು ಮೂಳೆಗಳ ಬೆಳವಣಿಗೆಗೆ ಸಹಕಾರಿ. ಗರ್ಭಧಾರಣೆ ವೇಳೆ ಹೆಚ್ಚಾಗಿ ಮಹಿಳೆಯರಿಗೆ ಮಲಬದ್ಧತೆ ಸಮಸ್ಯೆಯು ಕಾಡುವುದು. ಮಲಬದ್ಧತೆ ನಿವಾರಣೆ ಮಾಡುವಂತಹ ಗುಣವು ಬಟಾಣಿ ಕಾಳಿನಲ್ಲಿ ಇರುವ ಕಾರಣದಿಂದಾಗಿ ಗರ್ಭಿಣಿ ಮಹಿಳೆಯರಿಗೆ ಇದು ಅದ್ಭುತವಾದ ಆಹಾರವಾಗಿದೆ. ಬಟಾಣಿ ಕಾಳಿನಿಂದ ಸಿಗುವಂತಹ ಆರೋಗ್ಯ ಲಾಭದ ಬಗ್ಗೆ ನೀವು ತಿಳಿದುಕೊಂಡಿದ್ದೀರಿ. ಇದರಿಂದ ಸಿಗುವಂತಹ ಸೌಂದರ್ಯ ಲಾಭಗಳನ್ನು ಕೂಡ ತಿಳಿಯಿರಿ.
Most Read: ಆಹಾ, ದೊಣ್ಣೆಮೆಣಸು-ಪನ್ನೀರ್ ಬಟಾಣಿ ಕರಿ!

ವಯಸ್ಸಾಗುವ ಲಕ್ಷಣ ತಡೆಯುವುದು
ಹೆಚ್ಚಿನ ಜನರಲ್ಲಿ ಕಂಡುಬರುವಂತಹ ದೊಡ್ಡ ಸಮಸ್ಯೆ ಎಂದರೆ ಅದು ಚರ್ಮಕ್ಕೆ ವಯಸ್ಸಾಗುವುದು. ಕಲುಷಿತವಾಗಿರುವ ವಾತಾವರಣ, ಆಹಾರ ಕ್ರಮ ಮತ್ತು ಜೀವನ ಶೈಲಿಯಿಂದಾಗಿ ಚರ್ಮವು ವಯಸ್ಸಾದಂತೆ ಕಾಣಿಸುವುದು. ಕೆಲವು ಜನರಲ್ಲಿ ಹದಿಹರೆಯದಲ್ಲೇ ಈ ಸಮಸ್ಯೆಯು ಕಾಡುವುದು. ನೆರಿಗೆ, ಗೆರೆಗಳು, ಚರ್ಮದ ಬಣ್ಣ ಮಾಸುವುದು, ಒಣಗುವುದು ಅಥವಾ ಒಡೆದ ಚರ್ಮವು ನಿಮ್ಮದಾಗಿದ್ದರೆ ಆಗ ನೀವು ಬಟಾಣಿ ಕಾಳು ಮತ್ತು ಜೇನುತುಪ್ಪವನ್ನು ಒಳಗೊಂಡಿರುವ ಪ್ಯಾಕ್ ನ್ನು ಬಳಸಿಕೊಳ್ಳಬಹುದು. ಇದರಿಂದ ನಿಮ್ಮ ಚರ್ಮವು ಕಾಂತಿಯುತವಾಗುವುದು. ತಾಜಾ ಬಟಾಣಿ ಕಾಳಿನಲ್ಲಿ ಅತ್ಯಧಿಕ ಮಟ್ಟದ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಇದೆ. ಇದು ಚರ್ಮಕ್ಕೆ ಆಗುವಂತಹ ಆಕ್ಸಿಡೇಟಿವ್ ಹಾನಿ ತಪ್ಪಿಸುವುದು ಮತ್ತು ಪೋಷಕಾಂಶಗಳನ್ನು ನೀಡಿ ಚರ್ಮಕ್ಕೆ ವಯಸ್ಸಾಗುವ ಲಕ್ಷಣಗಳನ್ನು ಇದು ನಿಯಂತ್ರಿಸುವುದು.

ಚರ್ಮವನ್ನು ಬಿಸಿಲಿನಿಂದ ರಕ್ಷಿಸುವುದು
ಬಿಸಿಲಿನಿಂದಾಗಿ ಹಲವಾರು ರೀತಿಯ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಮತ್ತು ಬಟಾಣಿ ಕಾಳು ಚರ್ಮವನ್ನು ಯುವಿ ಕಿರಣಗಳಿಂದ ರಕ್ಷಿಸುವುದು. ಬಟಾಣಿ ಸಿಪ್ಪೆಯು ಯುವಿ ಕಿರಣಗಳನ್ನು ಪರಿಣಾಮಕಾರಿಯಾಗಿ ತಡೆಯುವುದು ಮತ್ತು ಕಾಲಜನ್ ರಕ್ಷಿಸಿ, ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡುವುದು. ಇದು ಚರ್ಮದ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದು.
Most Read:Most Read: ದೇಹದ ಈ ಭಾಗದಲ್ಲಿ ಮಚ್ಚೆ ಇರುವವರು ತುಂಬಾನೇ ಅದೃಷ್ಟವಂತರಂತೆ!

ಮೊಡವೆಗಳ ನಿವಾರಣೆ
ವಿಟಮಿನ್ ಸಿ ಮತ್ತು ನೈಸರ್ಗಿಕ ಖನಿಜಾಂಶಗಳನ್ನು ಹೊಂದಿರುವಂತಹ ಬಟಾಣಿ ಕಾಳಿನಲ್ಲಿ ಮಧ್ಯಮ ಮಟ್ಟದ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಉರಿಯೂತ ಶಮನಕಾರಿ ಎಂದು ಪರಿಗಣಿಸಲ್ಪಟ್ಟಿದೆ. ಇದು ಮೊಡವೆ ಹಾಗೂ ಬೊಕ್ಕೆಗಳ ನಿವಾರಣೆಗೆ ನೈಸರ್ಗಿಕವಾಗಿ ನೆರವಾಗುವುದು.



Click it and Unblock the Notifications











