Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಣ ದ್ರಾಕ್ಷಿಯಲ್ಲಿರುವ ಆರೋಗ್ಯ ಪ್ರಯೋಜನಗಳು ಹಾಗೂ ಸೇವಿಸುವ ಸರಿಯಾದ ವಿಧಾನಗಳು
ಒಣ ದ್ರಾಕ್ಷಿ ಎಂದರೆ ಮಕ್ಕಳಿಗೆ ಪಂಚಪ್ರಾಣ ಎನ್ನಬಹುದು. ಯಾವುದೇ ಕೇಕ್ ಅಥವಾ ಬೇರೆ ತಿಂಡಿಗಳಲ್ಲಿ ಇರುವಂತಹ ಒಣ ದ್ರಾಕ್ಷಿಯನ್ನು ಮಕ್ಕಳು ಮೊದಲು ಹೆಕ್ಕಿಕೊಂಡು ತಿನ್ನುವರು. ಇದನ್ನು ಮಕ್ಕಳಿಗೆ ಜೀರ್ಣಕ್ರಿಯೆ ಹೆಚ್ಚಿಸಲು ಕೂಡ ನೀಡಲಾಗುತ್ತದೆ. ಹಿಂದಿನಿಂದಲೂ ಒಣ ದ್ರಾಕ್ಷಿಯಲ್ಲಿ ಇರುವಂತಹ ಲಾಭಗಳ ಬಗ್ಗೆ ತಿಳಿದು ಅದನ್ನು ಬಳಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಒಣ ದ್ರಾಕ್ಷಿಯು ಇಂದು ಪ್ರತಿಯೊಂದು ಖಾದ್ಯಗಳನ್ನು ಬಳಸಲ್ಪಡುತ್ತದೆ. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದ್ದು, ಆರೋಗ್ಯಕ್ಕೆ ತುಂಬಾ ಲಾಭಕಾರಿ. ಇದು ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಪ್ರತಿಯೊಬ್ಬರಿಗೂ ತುಂಬಾ ಲಾಭಕಾರಿ.
ದ್ರಾಕ್ಷಿಗಳನ್ನು ಒಣಗಿಸಿ ತಯಾರಿಸುವ ಒಣದ್ರಾಕ್ಷಿಯು ನೈಸರ್ಗಿಕವಾಗಿ ತುಂಬಾ ಸಿಹಿ ಹೊಂದಿದೆ ಮತ್ತು ಇದರಲ್ಲಿ ಯಾವುದೇ ರೀತಿಯ ಹೆಚ್ಚುವರಿ ಸಕ್ಕರೆ ಅಂಶವು ಇಲ್ಲ. ಒಣ ದ್ರಾಕ್ಷಿಯನ್ನು ಬಿಸಿಲಿನಲ್ಲಿ ಒಂದು ವಿಧಾನದ ಮೂಲಕ ಒಣಗಿಸಲಾಗುತ್ತದೆ. ಈ ವಿಧಾನದ ವೇಳೆ ನೈಸರ್ಗಿಕ ಸಕ್ಕರೆಯಲ್ಲಿರುವಂತಹ ಆಕ್ಸಿಡೇಶನ್ ಮತ್ತು ಕ್ಯಾರಮೆಲೈಸೇಶನ್ ಕಂದು ಬಣ್ಣದಿಂದ ಕಪ್ಪು ಬಣ್ಣವನ್ನು ನೀಡುವುದು.

ಒಣ ದ್ರಾಕ್ಷಿಯಲ್ಲಿರುವ ವಿಧಗಳು
ಬಿಸಿಲಿನಲ್ಲಿ ಒಣಗಿಸಿರುವುದು(ನೈಸರ್ಗಿಕ ವಿಧಾನ)
ಕೃತಕವಾಗಿ ಒಣಗಿಸುವುದು(ನೀರನ್ನು ಹೀರುವುದು)
ಸಲ್ಫರ್ ಡಯಾಕ್ಸೈಡ್ ಹಾಕಿರುವ ಒಣದ್ರಾಕ್ಷಿ
ಒಣ ದ್ರಾಕ್ಷಿಯಲ್ಲಿರುವ ಕೆಲವು ಪೋಷಕಾಂಶ ಮೌಲ್ಯಗಳು
*100 ಗ್ರಾಂ ಒಣದ್ರಾಕ್ಷಿಯಲ್ಲಿ ಸುಮಾರು 299 ಕ್ಯಾಲರಿ ಇದೆ ಮತ್ತು ಇದರಲ್ಲಿ ಇನ್ನಷ್ಟು ಪೋಕಷಾಂಶಗಳಾಗಿರುವ...
*3.1 ಗ್ರಾಂ ಪ್ರೋಟೀನ್
*79.2 ಗ್ರಾಂ ಕಾರ್ಬೋಹೈಡ್ರೇಟ್ಸ್
*3.7 ಗ್ರಾಂ ನಾರಿನಾಂಶ
*59.2 ಗ್ರಾಂ ಸಕ್ಕರೆ
*2.3 ಮಿ.ಗ್ರಾಂ. ವಿಟಮಿನ್ ಸಿ
*0.1 ಮಿ.ಗ್ರಾಂ ವಿಟಮಿನ್ ಇ
*3.5 ಎಂಸಿಜಿ ವಿಟಮಿನ್ ಕೆ
*0.1 ಮಿಗ್ರಾಂ ಥೈಮೆನ್
*0.1 ಮಿ.ಗ್ರಾಂ ರಿಬೊಫ್ಲಾವಿನ್
*0.8 ಮಿ.ಗ್ರಾಂ ನಿಯಾಸಿನ್
*0.2 ಮಿ.ಗ್ರಾಂ ವಿಟಮಿನ್ ಬಿ6
*5.0 ಎಂಸಿಜಿ ಫಾಲಟೆ
*50.0 ಮಿ.ಗ್ರಾಂ ಕ್ಯಾಲ್ಸಿಯಂ
*1.9 ಮಿ.ಗ್ರಾಂ ಕಬ್ಬಿನಾಂಶ
*32.0 ಮಿ.ಗ್ರಾಂ ಮೆಗ್ನಿಶಿಯಂ
*101 ಮಿ.ಗ್ರಾಂ ಪೋಸ್ಪರಸ್
*749 ಮಿ.ಗ್ರಾಂ ಪೊಟಾಶಿಯಂ
*11.0 ಮಿ.ಗ್ರಾಂ ಸೋಡಿಯಂ
*0.2 ಮಿ.ಗ್ರಾಂ ಸತು
*0.3 ಮಿ.ಗ್ರಾಂ ತಾಮ್ರ
0.3 ಮಿ.ಗ್ರಾಂ ಮೆಗ್ನಿಶಿಯಂ
ಒಣ ದ್ರಾಕ್ಷಿಯಲ್ಲಿರುವ ಆರೋಗ್ಯ ಲಾಭಗಳು
*ಹೃದಯದ ಆರೋಗ್ಯ ಸುಧಾರಿಸುವುದು
ಒಣ ದ್ರಾಕ್ಷಿಯಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಮತ್ತು ಫೈಥೋನ್ಯೂಟ್ರಿಯೆಂಟ್ ಗಳು ಇದ್ದು, ಇದರಿಂದಾಗಿ ಹೃದಯದ ಕಾಯಿಲೆ ಮತ್ತು ಹೃದಯಾಘಾತದಂತಹ ದೀರ್ಘಕಾಲಿಕ ಸಮಸ್ಯೆ ತಡೆಯಬಹುದು. ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಾಜಿ ಪ್ರಕಾರ ದಿನನಿತ್ಯ ಒಣ ದ್ರಾಕ್ಷಿ ಸೇವಿಸಿದರೆ ಅದರಿಂದ ರಕ್ತದೊತ್ತಡ ಕಡಿಮೆ ಆಗುವುದು.
*ಮಧುಮೇಹದ ಅಪಾಯ ತಗ್ಗಿಸುವುದು
ಒಣ ದ್ರಾಕ್ಷಿಯು ಟೈಪ್ 2 ಮಧುಮೇಹ ಇರುವಂತಹ ರೋಗಿಗಳಿಗೆ ತುಂಬಾ ಆರೋಗ್ಯಕಾರಿ ತಿಂಡಿ ಎಂದು ಪರಿಗಣಿಸಲಾಗಿದೆ. ಒಂದು ಅಧ್ಯಯನದ ಪ್ರಕಾರ ಒಣ ದ್ರಾಕ್ಷಿ ಸೇವನೆ ಮಾಡಿರುವ ಪರಿಣಾಮವಾಗಿ ಊಟದ ಬಳಿಕ ಸಕ್ಕರೆ ಮಟ್ಟವು ಶೇ.23ರಷ್ಟು ತಗ್ಗಿದೆ ಮತ್ತು ಸಿಸ್ಟೊಲಿಕ್ ರಕ್ತದೊತ್ತಡವನ್ನು ಕೂಡ.
ಕ್ಯಾನ್ಸರ್ ತಡೆಯುವುದು
ಒಣ ದ್ರಾಕ್ಷಿಯಲ್ಲಿ ಇರುವಂತಹ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಪ್ರಮಾಣವು ಫ್ರೀ ರ್ಯಾಡಿಕಲ್ ನಿಂದ ಅಂಗಾಂಶಗಳ ಮೇಲೆ ಆಗುವಂತಹ ಹಾನಿಯನ್ನು ತಪ್ಪಿಸುವುದು. ಫ್ರೀ ರ್ಯಾಡಿಕಲ್ ನಿಂದಾಗಿ ಕ್ಯಾನ್ಸರ್ ಕೋಶಗಳು ಬೆಳವಣಿಗೆ ಆಗುವುದು. ಇದರಿಂದ ಒಣ ದ್ರಾಕ್ಷಿ ಸೇವಿಸಿದರೆ ಕ್ಯಾನ್ಸರ್ ನ್ನು ದೂರವಿಡಬಹುದು.
ಜೀರ್ಣಕ್ರಿಯೆಗೆ ಸಹಕಾರಿ
ಒಣ ದ್ರಾಕ್ಷಿಯಲ್ಲಿ ಆಹಾರದ ನಾರಿನಾಂಶವಿದ್ದು, ಇದು ಹೊಟ್ಟೆಯ ಮೇಲೆ ವಿರೇಚಕ ಪರಿಣಾಮ ಬೀರುವುದು ಮತ್ತು ಮಲಬದ್ಧತೆ ನಿವಾರಣೆ ಮಾಡುವುದು. ದಿನನಿತ್ಯವು ಒಣದ್ರಾಕ್ಷಿ ಸೇವಿಸಿದರೆ ಅದರಿಂದ ಕರುಳಿನ ಕ್ರಿಯೆಗಳು ಸರಾಗವಾಗಿ ಆಗುವುದು ಮತ್ತು ಜೀರ್ಣಕ್ರಿಯೆಗೆ ನೆರವಾಗುವುದು.
ರಕ್ತ ಹೀನತೆ ತಡೆಯುವುದು
ಒಣ ದ್ರಾಕ್ಷಿಯಲ್ಲಿ ಉತ್ತಮ ಮಟ್ಟದ ಕಬ್ಬಿನಾಂಶವಿದೆ ಮತ್ತು ಇದು ಕೆಂಪು ರಕ್ತದ ಕಣಗಳನ್ನು ಉತ್ಪತ್ತಿ ಮಾಡುತ್ತದೆ ಮತ್ತು ದೇಹದ ವಿವಿಧ ಭಾಗಗಳಿಗೆ ಆಮ್ಲಜನಕ ಸರಬರಾಜು ಮಾಡಲು ಇದು ನೆರವಾಗುವುದು. ಒಣ ದ್ರಾಕ್ಷಿ ಸೇವನೆ ಮಾಡಿದರೆ ಕಬ್ಬಿನಾಂಶದ ಕೊರತೆ ನೀಗಿಸಬಹುದು.
Most Read: ತಾಜಾಕ್ಕಿಂತ ಒಣ ಹಣ್ಣುಗಳಲ್ಲಿರುವ ವಿಶೇಷತೆ ಏನು?
ದಂತಕುಳಿ ಸಮಸ್ಯೆ ತಗ್ಗಿಸುವುದು
ಒಣ ದ್ರಾಕ್ಷಿಯಲ್ಲಿ ಪೈಥೋಕೆಮಿಕಲ್ ಇದೆ ಮತ್ತು ಇದು ಬಾಯಿಯ ಆರೋಗ್ಯವನ್ನು ಕಾಪಾಡುವುದು. ಜರ್ನಲ್ ಆಫ್ ನ್ಯೂಟ್ರಿಷನ್ ನಲ್ಲಿ ಪ್ರಕಟಗೊಂಡಿರುವಂತಹ ವರದಿಯೊಂದರ ಪ್ರಕಾರ ಪೈಥೋಕೆಮಿಕಲ್ ಗಳು ಒಣದ್ರಾಕ್ಷಿಯಲ್ಲಿ ಇರುವ ಕಾರಣದಿಂದಾಗಿ ಇದು ಹಲ್ಲುಗಳು ಮತ್ತು ಒಸಡಿನ ಆರೋಗ್ಯಕ್ಕೆ ನೆರವಾಗುವುದು ಮತ್ತು ಬಾಯಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವುದು. ಇದರಿಂದಾಗಿ ದಂತಕುಳಿ ಆಗುವ ಸಾಧ್ಯತೆಯು ಕಡಿಮೆ ಆಗುವುದು.
ಅಸ್ಥಿರಂಧ್ರತೆ ತಡೆಯವುದು
ಒಣ ದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದ್ದು, ಇದು ದೇಹದ ಆರೋಗ್ಯ ಮತ್ತು ಮೂಳೆ ಹಾಗೂ ಹಲ್ಲುಗಳ ಆರೋಗ್ಯಕ್ಕೆ ಬೇಕಾಗಿರುವಂತಹ ಪ್ರಮುಖ ಖನಿಜಾಂಶವಾಗಿದೆ. ಋತುಬಂಧಕ್ಕೆ ಒಳಗಾಗುವ ಮೊದಲು ಮಹಿಳೆಯರು ಹೆಚ್ಚು ಒಣದ್ರಾಕ್ಷಿ ಸೇವನೆ ಮಾಡಬೇಕು. ಯಾಕೆಂದರೆ ಇದರಿಂದ ಅಸ್ಥಿರಂಧ್ರತೆಯು ತಪ್ಪುವುದು.
ಕಣ್ಣಿನ ಆರೋಗ್ಯ ಕಾಪಾಡುವುದು
ಒಣ ದ್ರಾಕ್ಷಿಯಲ್ಲಿ ಫಾಲಿಫೆನಾಲ್ ಇದ್ದು, ಇದು ಒಂದು ರೀತಿಯ ಆಂಟಿಆಕ್ಸಿಡೆಂಟ್ ಆಗಿದೆ ಮತ್ತು ಕಣ್ಣುಗಳನ್ನು ಫ್ರೀ ರ್ಯಾಡಿಕಲ್ ನಿಂದ ಆಗುವಂತಹ ಹಾನಿಯಿಂದ ತಪ್ಪಿಸುವುದು. ಇದರಿಂದಾಗಿ ಕಣ್ಣುಗಳ ಕಾಯಿಲೆ, ಕಣ್ಣಿನ ಪೊರೆ ಮತ್ತು ವಯಸ್ಸಾಗುವ ವೇಳೆ ಕಾಣಿಸಿಕೊಳ್ಳುವಂತಹ ಅಕ್ಷಿಪಟಲದ ಅವನತಿ ತಡೆಯಬಹುದು.
ಅತೀ ವಾಯು ಸಮಸ್ಯೆ ನಿವಾರಿಸುವುದು
ಒಣ ದ್ರಾಕ್ಷಿಯಲ್ಲಿ ಉತ್ತಮ ಮಟ್ಟದಲ್ಲಿ ಕಬ್ಬಿನಾಂಶ, ತಾಮ್ರ, ಪೊಟಾಶಿಯಂ ಮತ್ತು ಮೆಗ್ನಿಶಿಯಂ ಇದ್ದು, ಇದು ಹೊಟ್ಟೆಯಲ್ಲಿ ಅಸಿಡಿಟಿ ಮಟ್ಟವನ್ನು ಕಾಪಾಡುವುದು.
ಚರ್ಮದ ಆರೋಗ್ಯವನ್ನು ಸುಧಾರಣೆ ಮಾಡುವುದು
ಹಲವಾರು ರೀತಿಯ ಆಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಇರುವ ಒಣ ದ್ರಾಕ್ಷಿಯು ಸತು ಮತ್ತು ವಿಟಮನ್ ಸಿ ಕೂಡ ಇದೆ. ಇದು ಚರ್ಮದ ಅಂಗಾಂಶಗಳನ್ನು ಯೌವನಯುತವಾಗಿಸುವುದು ಮತ್ತು ವಯಸ್ಸಾಗುವ ಪ್ರಕ್ರಿಯೆಯನ್ನು ವಿಳಂಬಗೊಳಿಸುವುದು. ರೆಸ್ವೆರಾಟ್ರೊಲ್ ಎನ್ನುವ ಅಂಶವನ್ನು ಹೊಂದಿರುವಂತಹ ಒಣ ದ್ರಾಕ್ಷಿಯು ಚರ್ಮದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಸೂರ್ಯನ ಬಿಸಿಲಿನಿಂದಾಗಿ ಚರ್ಮಕ್ಕೆ ಆಗುವಂತಹ ಹಾನಿಯನ್ನು ಇದು ತಡೆಯುವುದು.
ಒಣ ದ್ರಾಕ್ಷಿ ತಿನ್ನುವ ಕೆಲವೊಂದು ಅಪಾಯಗಳು
ಒಣ ದ್ರಾಕ್ಷಿ ತಿನ್ನುವುದರಿಂದ ಕೆಲವೊಂದು ಅಪಾಯಗಳು ಇವೆ. ಇದರಲ್ಲಿ ಮುಖ್ಯವಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾ ಇರುವಂತಹ ಜನರು ಇದನ್ನು ಸೇವಿಸಬಾರದು. ಒಣ ದ್ರಾಕ್ಷಿಯಲ್ಲಿ ಆಹಾರದ ನಾರಿನಾಂಶವಿದೆ. ಇದನ್ನು ಅತಿಯಾಗಿ ಸೇವನೆ ಮಾಡಿದರೆ ಅದರಿಂದ ಹೊಟ್ಟೆ ಉಬ್ಬರ, ಗ್ಯಾಸ್, ಭೇದಿ ಮತ್ತು ಹೊಟ್ಟೆ ಸೆಳೆತ ಉಂಟಾಗಬಹುದು.
ಒಣ ದ್ರಾಕ್ಷಿ ತಿನ್ನುವ ವಿಧಾನಗಳು
•ಓಟ್ ಮೀಲ್ ನ ಜತೆಗೆ ದ್ರಾಕ್ಷಿ ಸೇವಿಸಿ ಅಥವಾ ಉಪಾಹಾರದ ಸೀರಲ್ ಗೆ ಇದನ್ನು ಹಾಕಿಕೊಳ್ಳಿ.
•ಪ್ಯಾನ್ ಕೇಕ್, ಕೇಕ್ ಮತ್ತು ಮಫಿನ್ ಗೆ ಇದನ್ನು ಸೇರಿಸಿಕೊಳ್ಳಿ.
•ಗ್ರೀನ್ ಸಲಾಡ್ ಗೆ ಇದನ್ನು ನೀವು ಹಾಕಿಕೊಂಡು ಸೇವಿಸಿ.
•ಖಾರದ ಪದಾರ್ಥಗಳಿಗೆ ನೀವು ಇದನ್ನು ಬೆರೆಸಿಕೊಂಡು ಸೇವಿಸಿ.
ಮನೆಯಲ್ಲೇ ಒಣ ದ್ರಾಕ್ಷಿ ತಯಾರಿಸುವುದು ಹೇಗೆ?
•ಒಂದು ಹಿಡಿ ದ್ರಾಕ್ಷಿ ತೆಗೆದುಕೊಂಡು ಅದನ್ನು ಸರಿಯಾಗಿ ತೊಳೆಯಿರಿ.
•ಇದನ್ನು ಒಣ ಟ್ರೇಗೆ ಹಾಕಿ ಮತ್ತು ಒಣಗಲು ಬಿಸಿಲಿನಲ್ಲಿ ಇಟ್ಟುಬಿಡಿ.
•ಬಿಸಿಲು ತಾಗುವ ವೇಳೆ ನೀವು ಪ್ರತಿನಿತ್ಯ ಅದನ್ನು ತಿರುಗಿಸುತ್ತಾ ಇರಿ.
•2-3 ದಿನಗಳಲ್ಲಿ ನಿಮಗೆ ಮನೆಯಲ್ಲೇ ತಯಾರಿಸಿದ ದ್ರಾಕ್ಷಿ ಲಭ್ಯವಾಗುವುದು.
ಒಣ ದ್ರಾಕ್ಷಿಯ ಖಾದ್ಯಗಳು
ಇಲ್ಲಿ ನಾವು ನಿಮಗೆ ಒಣ ದ್ರಾಕ್ಷಿಯಿಂದ ಮಾಡಿರುವಂತಹ ಖಾದ್ಯದ ಬಗ್ಗೆ ತಿಳಿಸಿಕೊಡಲಿದ್ದೇವೆ.
ಈ ಖಾರ, ಸಿಹಿ ಖಾದ್ಯವು ತುಂಬಾ ರುಚಿಕರವಾಗಿದೆ ಮತ್ತು ಇದನ್ನು ಚಪಾತಿ ಮತ್ತು ಅನ್ನದೊಂದಿಗೆ ಸೇವಿಸಬಹುದು.
ಒಣದ್ರಾಕ್ಷಿಯಿಂದ ತಯಾರಿಸಿರುವಂತಹ ಖಾದ್ಯವನ್ನು ಹೆಚ್ಚಾಗಿ ಶುಭಸಮಾರಂಭಗಳು ಮತ್ತು ಹಬ್ಬಗಳ ವೇಳೆ ಬಡಿಸಲಾಗುತ್ತದೆ. ಇದರಿಂದ ನೀವು ಒಣದ್ರಾಕ್ಷಿಯಿಂದ ಮಾಡಿರುವಂತಹ ಖಾದ್ಯವನ್ನು ಪ್ರಯತ್ನಿಸಿ ನೋಡಿ.
ನಾಲ್ಕು ಜನರಿಗೆ ಬೇಕಾಗುವಷ್ಟು
- ಅಡುಗೆ ಸಮಯ-20 ನಿಮಿಷ
- ತಯಾರಿ ಸಮಯ-15 ನಿಮಿಷ
ಬೇಕಾಗುವ ಸಾಮಗ್ರಿಗಳು
*ಒಣದ್ರಾಕ್ಷಿ- 200 ಗ್ರಾಂ
*ಬೆಲ್ಲ-1/4 ಕಪ್
*ಕೆಂಪು ಮೆಣಸು 5-6
*ಜೀರಿಗೆ 1 ಚಮಚ
*ಹುಣಸೆ ಹುಳಿ- ಒಂದು ಲಿಂಬೆ ಗಾತ್ರದಷ್ಟು
*ಉದ್ದಿನ ಬೇಳೆ 2 ಚಮಚ
*ಸಾಸಿವೆ-1/2 ಚಮಚ
*ಒಣ ತೆಂಗಿನಕಾಯಿ-1/2 ಕಪ್
*ಕರಿಬೇವಿನ ಎಲೆ-8-10
*ಕೊತ್ತಂಬರಿ ಸೊಪ್ಪು-5-6 ಎಸಲು(ತುಂಡರಿಸಿರುವುದು)
*ಅರಿಶಿನ-1/2 ಚಮಚ
*ಉಪ್ಪು
*ಎಣ್ಣೆ
ವಿಧಾನ
*ಒಂದು ಪಾತ್ರೆಯಲ್ಲಿ ನೀರು ಮತ್ತು ದ್ರಾಕ್ಷಿ ಹಾಕಿಕೊಳ್ಳಿ. ಇದು ಸುಮಾರು 5-6 ಗಂಟೆ ಕಾಲ ನೆನೆಯಲಿ.
*ಒಂದು ತವಾದಲ್ಲಿ ಎಣ್ಣೆ ಬಿಸಿ ಮಾಡಿ ಮತ್ತು ಇದಕ್ಕೆ ಉದ್ದಿನ ಬೇಳೆ ಹಾಕಿ ಕರಿಯಿರಿ.
*ಇದಕ್ಕೆ ಕೆಂಪು ಮೆಣಸು, ಜೀರಿಗೆ ಮತ್ತು ಸಾಸಿವೆ ಹಾಕಿಕೊಳ್ಳಿ. ಒಂದರ ಬಳಿಕ ಒಂದನ್ನು ಹಾಕಿ.
*ಎಲ್ಲವನ್ನು ಸರಿಯಾಗಿ ಹುರಿದ ಬಳಿಕ ಮಿಕ್ಸಿ ಜಾರ್ ಗೆ ಹಾಕಿ.
*ಇದಕ್ಕೆ ಒಣ ತೆಂಗಿನಕಾಯಿ ಮತ್ತು ನೀರು ಹಾಕಿಕೊಂಡು ಸರಿಯಾಗಿ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ.
*ಇದನ್ನು ಈಗ ತವಾಗೆ ಹಾಕಿ ಎಣ್ಣೆ ಹಾಕಿಕೊಳ್ಳಿ.
*ಇದಕ್ಕೆ ಕರಿಬೇವಿನ ಎಲೆಗಳನ್ನು ಹಾಕಿ.
*ಇದಕ್ಕೆ ಈಗ ನೆನೆಸಿದ ದ್ರಾಕ್ಷಿ ಹಾಕಿಕೊಳ್ಳಿ.
*ಉಪ್ಪು ಹಾಕಿ ಮತ್ತು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
*ಅಂತಿಮವಾಗಿ ಕೊತ್ತಂಬರಿ ಸೊಪ್ಪು ಹಾಕಿ ಅಲಂಕಾರ ಮಾಡಿ ಮತ್ತು ಬಿಸಿ ಇರುವಾಗಲೇ ಬಡಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



