Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ವ್ಯಾಯಾಮವು ಹೃದಯ ರೋಗಿಯ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆಯಂತೆ
ವ್ಯಾಯಾಮ ಅನ್ನುವುದು ನಮ್ಮ ದೇಹದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ನಿಯಮಿತವಾಗಿ ವ್ಯಾಯಾಮ ಮಾಡಬೇಕು. ವ್ಯಾಯಾಮದಿಂದ ದೇಹದ ತೂಕವನ್ನು ಸಮತೋಲನದಲ್ಲಿ ಇಡುವುದು ಮಾತ್ರವಲ್ಲದೆ, ಹಲವಾರು ರೀತಿಯ ಕಾಯಿಲೆಗಳನ್ನು ಇದು ತಡೆಯುವುದು. ಇತ್ತೀಚಿನ ವರದಿಯೊಂದರ ಪ್ರಕಾರ ವ್ಯಾಯಾಮವು ಹೃದಯ ಕಾಯಿಲೆ ಇರುವವರಿಗೆ ತುಂಬಾ ಪರಿಣಾಮಕಾರಿ.ಹೃದಯದ ಕಾಯಿಲೆ ಇರುವಂತವರಲ್ಲಿ ಹೆಚ್ಚಾಗಿ ಅರಿವಿನ ಕೊರತೆಯು ಕಾಡುವುದು.
ಅಧ್ಯಯನದ ಪ್ರಕಾರ ನಿಯಮಿತವಾಗಿ ವ್ಯಾಯಾಮ ಮಾಡುವಂತಹ ರೋಗಿಗಳು ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಬಹುದು ಮತ್ತು ಅರಿವಿನ ದುರ್ಬಲತೆ ಸಮಸ್ಯೆಯು ಕೂಡ ತಗ್ಗುವುದು. ವ್ಯಕ್ತಿಯು ಆರೋಗ್ಯ ಹಾಗೂ ಫಿಟ್ ಇದ್ದಷ್ಟು ಆತನ ಜ್ಞಾಪಕ ಶಕ್ತಿಯು ಉತ್ತಮವಾಗಿರುವುದು.ಇಟಲಿಯ ಮಿಲಾನ್ ನಲ್ಲಿ ನಡೆದ ಯುರೋಪಿಯನ್ ಸೊಸೈಟಿ ಆಫ್ ಕಾರ್ಟಿಯಾಲಜಿ ಸೈನ್ ಟಿಫಿಕ್ ಕಾಂಗ್ರೆಸ್ 2019ರ ಯುರೋ ಹಾರ್ಟ್ ಕೇರ್ ನಲ್ಲಿ ಈ ವರದಿಯನ್ನು ಪ್ರಸ್ತುತಪಡಿಸಲಾಗಿದೆ.

ಆರು ರಾಷ್ಟ್ರಗಳಿಂದ ಹೃದಯಾಘತಕ್ಕೆ ಒಳಗಾಗಿದ್ದ ಸುಮಾರು 600 ಮಂದಿ ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಯಿತು. ಈ ಎಲ್ಲಾ ರೋಗಿಗಳು 67-71ರ ಹರೆಯದವರಾಗಿದ್ದರು. ಅರಿವಿನ ಕಾರ್ಯವನ್ನು ಪತ್ತೆ ಮಾಡಲು ಮಾಂಟ್ರಿಯಲ್ ಕಾಗ್ನಿಟಿವ್ ಅಸೆಸ್ಮೆಂಟ್ ನ್ನು ಬಳಸಲಾಗಿದೆ. ಆರು ನಿಮಿಷಗಳ ನಡಿಗೆಯಿಂದ ರೋಗಿಯ ವ್ಯಾಯಾಮದ ಸಾಮರ್ಥ್ಯವನ್ನು ತಿಳಿಯಲಾಗುತ್ತಿತ್ತು.
ಈ ಪರೀಕ್ಷೆಯನ್ನು ಪೂರ್ಣಗೊಳಿಸಿದ ಬಳಿಕ ಉತ್ತಮ ಫಿಟ್ನೆಸ್ ಹೊಂದಿರುವಂತಹ ಹೃದಯ ರೋಗಿಗಳಲ್ಲಿ ಅರಿವಿನ ದುರ್ಬಲತೆಯು ಗಣನೀಯ ಪ್ರಮಾಣದಲ್ಲಿ ಕಡಿಮೆ ಇದೆ ಎಂದು ತಿಳಿದುಬಂತು. 2/3ಭಾಗದಷ್ಟು ಹೃದಯ ರೋಗಿಗಳಲ್ಲಿ ಈಗಾಗಲೇ ಅರಿವಿನ ದುರ್ಬಲತೆ ಸಮಸ್ಯೆಯು ಕಂಡುಬಂದಿದೆ.
ಹೃದಯ ರೋಗಿಗಳಿಗೆ ಇಲ್ಲಿ ನೀಡುವಂತಹ ಸಲಹೆ ಎಂದರೆ ಸರಿಯಾಗಿ ವ್ಯಾಯಮ ಮಾಡಿ ಎಂದು ಲೇಖಕ ಹಾಗೂ ಇಟಲಿಯ ಯೂನಿವರ್ಸಿಟಿ ಆಫ್ ರೋಮ್ ಟೊರ್ ವೆರ್ಗಟಾದ ಇರ್ಕೊಲೆ ವೆಲೋನೆ ತಿಳಿಸಿದ್ದಾರೆ. ಹೃದಯ ರೋಗಿಗಳು ವ್ಯಾಯಾಮ ಮಾಡಬಾರದು ಎನ್ನುವಂತಹ ಒಂದು ತಪ್ಪು ತಿಳುವಳಿಕೆ ಇದೆ. ಆದರೆ ಅದು ಖಂಡಿತವಾಗಿಯೂ ತಪ್ಪು ಎಂದು ವೆಲೋನೆ ತಿಳಿಸಿದರು.
ನೀವು ಪ್ರತಿನಿತ್ಯವು ಮಾಡುವಂತಹ ಚಟುವಟಿಕೆಯನ್ನು ಆನಂದಿಸಿ ಮತ್ತು ಇದನ್ನು ನಿಯಮಿತವಾಗಿ ಮಾಡಿ. ಇದು ನಡೆಯುವುದು, ಈಜುವುದು ಅಥವಾ ಬೇರೆ ಯಾವುದೇ ರೀತಿಯ ಚಟುವಟಿಕೆ ಆಗಿರಬಹುದು. ಇದರಿಂದಾಗಿ ನಿಮ್ಮ ಆರೋಗ್ಯವು ತುಂಬಾ ಸುಧಾರಣೆ ಆಗುವುದು ಮತ್ತು ನೆನಪಿನ ಶಕ್ತಿ ಕೂಡ. ಇದರಿಂದಾಗಿ ನೀವು ಇನ್ನಷ್ಟು ಉತ್ತಮ ಭಾವನೆ ಪಡೆಯಬಹುದು ಎಂದು ವೆಲೋನೆ ಹೇಳಿದರು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
