For Quick Alerts
ALLOW NOTIFICATIONS  
For Daily Alerts

ಅತಿಯಾಗಿ ತಿನ್ನುವ ಸಮಸ್ಯೆ ಮಹಿಳೆಯರನ್ನೇ ಕಾಡುತ್ತದೆ! ಯಾಕೆ ಹೀಗೆ?

|

ಇಂದು ಹೇಳಿ ಕೇಳಿ ವಿಶ್ವ ಮಹಿಳಾ ದಿನ. ಮಹಿಳಾ ಸ್ವಾತಂತ್ರ್ಯ, ಮಹಿಳೆಯ ರಕ್ಷಣೆ ಹೀಗೆ ಈ ದಿನ ಮಹಿಳೆಯರ ಹಿತಾಸಕ್ತಿಗಳನ್ನು ಸಂರಕ್ಷಿಸುವ ಆಕೆಗೆ ಆರ್ಥಿಕ, ನೈತಿಕ, ಸಾಮಾಜಿಕ ಭದ್ರತೆಯನ್ನು ನೀಡುವ ಅವರ ಬಗ್ಗೆ ಕಳವಳ ವ್ಯಕ್ತಪಡಿಸುವ ಹಲವಾರು ಘೋಷಣೆಗಳು, ವಾಗ್ದಾನಗಳು ಕೇಳಿ ಬರುತ್ತಲೇ ಇರುತ್ತದೆ. ಆದರೆ ವಿಪರ್ಯಾಸವೆಂದರೆ ಬರಿಯ ವಾಗ್ದಾನಗಳು ಘೋಷಣೆಗಳು ಇಂದಿಗೆ ಮಾತ್ರವೇ ಬಾಕಿ ಉಳಿಯುತ್ತದೆ. ಯಾರೂ ಕೂಡ ಆಕೆಯ ಮಾನಸಿಕ ತಳಮಳವನ್ನು ಅರಿತುಕೊಳ್ಳುವುದಿಲ್ಲ, ಆಕೆಯ ಬೇನೆ, ನೋವು ಬರಿಯ ಮುಗಿಲಿನ ಕೂಗಾಗಿರುತ್ತದೆ. ಮಹಿಳಾ ದಿನದಂದು ಮಾತ್ರವಲ್ಲದೆ ಎಲ್ಲಾ ದಿನ ಕೂಡ ಆಕೆಗೆ ಸಲ್ಲಬೇಕಾದ ಗೌರವವನ್ನು ನೀಡಬೇಕಾಗುತ್ತದೆ.

ಆಕೆಯ ಮಾನಸಿಕ ವಿಪ್ಲವವನ್ನು ಅರಿತುಕೊಳ್ಳಬೇಕಾಗುತ್ತದೆ. ಆಕೆಗೂ ನೋವುಗಳಿರುತ್ತದೆ, ಆಕೆಗೂ ಮಾನಸಿಕ ಬೆಂಬಲ ಬೇಕಾಗುತ್ತದೆ ಪ್ರೀತಿ ಬೇಕಾಗುತ್ತದೆ. ಮನೆಯಲ್ಲಿರುವ ಇತರ ಸದಸ್ಯರಿಗೆ ಗೊತ್ತಿಲ್ಲದಂತೆ ಆಕೆಯೂ ಕೆಲವೊಂದು ನೋವುಗಳಿಗೆ ಒಳಗಾಗಿರುತ್ತಾರೆ. ಇಂದಿನ ದಿನದಿಂದ ನಿಮ್ಮ ಮನೆಯಾಕೆಯನ್ನು ನಿಮ್ಮ ಮನೆ ಮನದೊಡತಿಯನ್ನು ಸಾಕಷ್ಟು ಅರ್ಥಮಾಡಿಕೊಳ್ಳಲು ಮುಂದಾಗಿ. ಏಕೆಂದರೆ ಹೆಣ್ಣು ಎಂಬುದು ಒಂದು ಅನರ್ಘ್ಯ ರತ್ನ ಅದನ್ನು ಕಳೆದುಕೊಂಡಿರಿ ಎಂದರೆ ನಿಮಗೆ ಪುನಃ ಸಿಗುವುದು ಸಂದೇಹವಾಗಿರುತ್ತದೆ.

ನಮ್ಮ ಇಂದಿನ ಲೇಖನದಲ್ಲಿ ಮುಖ್ಯವಾಗಿ ಮಹಿಳೆಯರು ಅನುಭವಿಸುವ ಆಹಾರ ಸೇವನೆಯಂತಹ ದೌರ್ಬಲ್ಯಗಳ ಬಗ್ಗೆ ಅರಿತುಕೊಳ್ಳಲಿದ್ದೇವೆ. ತಿನ್ನುವಿಕೆಯ ಅಸಮತೋಲನ ಸಣ್ಣ ವಯಸ್ಸಿನಿಂದಲೇ ಬರಬಹುದು ಇದಕ್ಕೆ ಮುಖ್ಯ ಕಾರಣ ಮಕ್ಕಳನ್ನು ಹಿಯಾಳಿಸುವುದು, ಸಣ್ಣವರು ಇರುವಾಗ ಇದ್ದಾಗಿನ ಸ್ಥೂಲಕಾಯತೆ ಹೀಗೆ ಮೊದಲಾದ ಸಮಸ್ಯೆಗಳು ಅವರನ್ನು ಕಾಡಿರಬಹುದಾದ್ದರಿಂದ ದೊಡ್ಡವರಾದಾಗ ಕೂಡ ಇದು ಹಾಗೆಯೇ ಬೆಳೆದುಕೊಂಡು ಬಿಡುತ್ತದೆ. ತಿನ್ನುವ ಅಸಾಮರ್ಥ್ಯವು ಶೇಕಡಾ 95 ರಷ್ಟು ಮಹಿಳೆಯರನ್ನು ಕಾಡುತ್ತಿದೆ ಎಂಬುದಾಗಿ ಇತ್ತೀಚಿನ ಅಧ್ಯಯನದಿಂದ ತಿಳಿದು ಬಂದಿರುವ ವಿಷಯವಾಗಿದೆ.

ಕೆಲವರು ದಪ್ಪಗಿದ್ದರೆ ಅವರಿಗಿರುವ ಭಯ ಎಂದರೆ ಹೆಚ್ಚು ತಿಂದಲ್ಲಿ ತಾವು ದಪ್ಪಗಾಗಿಬಿಡುತ್ತೇವೇಯೋ ಎಂದಾಗಿದೆ. ಇನ್ನು ಕೆಲವು ಮಹಿಳೆಯರು ಸಣ್ಣ ಇದ್ದೂ ತಾವು ದಪ್ಪಗಾಗಬೇಕೆಂಬ ಆಸೆಯಿಂದ ಸಿಕ್ಕಿದ್ದನ್ನೆಲ್ಲಾ ಸೇವಿಸುತ್ತಾರೆ. ಹಾಗಿದ್ದರೆ ಬನ್ನಿ ಕೆಲವೊಂದು ಅಂಶಗಳ ಮೂಲಕ ತಿನ್ನುವಿಕೆಯ ಈ ಅಸಮತೋಲನ ಮಹಿಳೆಯರ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಅರಿಯೋಣ....

ಮಧ್ಯ ವಯಸ್ಸಿನಲ್ಲಿ ಕಾಡುತ್ತದೆ

ಮಧ್ಯ ವಯಸ್ಸಿನಲ್ಲಿ ಕಾಡುತ್ತದೆ

ತಿನ್ನುವ ಕಾಯಿಲೆಗಳನ್ನು ಹೊಂದಿರುವ ಮಹಿಳೆಯರು, ಮೂರು ವಿಭಿನ್ನ ವರ್ಗಗಳಾಗಿ ರೂಪುಗೊಳ್ಳುತ್ತಾರೆ. ಹದಿಹರೆಯದವರಲ್ಲಿ ತಿನ್ನುವ ಅಸ್ವಸ್ಥತೆಯನ್ನು ಬೆಳೆಸಿಕೊಳ್ಳುವಲ್ಲಿ ಹೆಚ್ಚಿನವರು ಪುನಃ ಅಸ್ವಸ್ಥರಾಗಿ ನಂತರ ಚೇತರಿಕೆಯನ್ನು ಕಂಡುಕೊಳ್ಳುತ್ತಾರೆ ಮತ್ತು ಕೆಲವರು ಜೀವನದಲ್ಲಿ ಮೊದಲ ಬಾರಿಗೆ ಅನೋರೆಕ್ಸಿಯಾ ಅಥವಾ ಬುಲಿಮಿಯಾವನ್ನು ಅಭಿವೃದ್ಧಿಪಡಿಸುತ್ತಾರೆ. ಆದರೆ, ಈ ಅನಾರೋಗ್ಯವು ಸಾಮಾನ್ಯವಾಗಿ ವೈದ್ಯರಿಂದ ಕಡೆಗಣಿಸಲ್ಪಡುತ್ತದೆ ಮತ್ತು ವ್ಯಕ್ತಿಯ ಕುಟುಂಬವೂ ಸಹ ಗಮನಿಸುವುದಿಲ್ಲ.

ತೆಳ್ಳಗಾಗಿರುವುದು ಸೌಂದರ್ಯವಲ್ಲ

ತೆಳ್ಳಗಾಗಿರುವುದು ಸೌಂದರ್ಯವಲ್ಲ

ಅನೇಕ ಮಹಿಳೆಯರು ತೂಕವನ್ನು ಕಳೆದುಕೊಳ್ಳುವ ಸಂದರ್ಭದಲ್ಲಿ ಸಾಮಾಜಿಕ ಒತ್ತಡಕ್ಕೆ ಕೂಡ ಒಳಗಾಗುತ್ತಾರೆ. ವಯಸ್ಸಾದ ಮಹಿಳೆಯರಲ್ಲಿ ತೆಳ್ಳಗಾಗಬೇಕೆಂಬ ಮನೋಭಾವನೆ ಹೆಚ್ಚಾಗುತ್ತಿದೆ. ಸುಮಾರು 80 ಪ್ರತಿಶತದಷ್ಟು ಮಹಿಳೆಯರು ತಮ್ಮ ನೋಟಕ್ಕೆ ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಸಣ್ಣಗಿಲ್ಲದಿದ್ದರೆ ಅವರು ಯಶಸ್ವಿಯಾಗಿಲ್ಲ ಎಂದೇ ಭಾವಿಸುತ್ತಾರೆ, ಇದು ಹೆಚ್ಚು ತಿನ್ನುವುದರಿಂದ ತಾವು ದಪ್ಪಗಾಗುತ್ತೇವೆ ಎನ್ನುವುದು ಅವರನ್ನು ತಿನ್ನುವ ಅಸ್ವಸ್ಥತೆಗೆ ದೂಡುತ್ತದೆ.

ಒತ್ತಡ ಮತ್ತು ಡಯಟಿಂಗ್

ಒತ್ತಡ ಮತ್ತು ಡಯಟಿಂಗ್

ಸಾಮಾಜಿಕ ಒತ್ತಡ ಮಹಿಳೆಯರನ್ನು ಕಾಡುವಾಗ ಅವರು ಡಯಟಿಂಗ್ ಮಾಡುವುದಕ್ಕೆ ಮುನ್ನಾಗುತ್ತಾರೆ. ಆದರೆ ಇದು ದೈಹಿಕವಾಗಿ ಹಾಗೂ ಮಾನಸಿಕವಾಗಿ ಅವರನ್ನು ಹೈರಾಣಾಗಿಸಿಬಿಡುತ್ತದೆ. ಈ ಒತ್ತಡದಿಂದಾಗಿ ಅವರು ಮಾನಸಿಕ ಕಾಯಿಲೆಗೆ ಒಳಗಾಗುತ್ತಾರೆ. ಅದುವೇ ವಿಚ್ಛೇದನ, ವಿಧವೆ, ಮುಟ್ಟಿನ ತೊಂದರೆಗಳು ಹಾಗೂ ಬಂಜೆತನದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಕುಟುಂಬ ಕೂಡ ಸಮಸ್ಯೆಗೆ ಒಳಗಾಗುತ್ತದೆ

ಕುಟುಂಬ ಕೂಡ ಸಮಸ್ಯೆಗೆ ಒಳಗಾಗುತ್ತದೆ

ಒಬ್ಬ ವ್ಯಕ್ತಿಯು ತಿನ್ನುವ ಅಸ್ವಸ್ಥತೆ ಅಥವಾ ಯಾವುದೇ ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದಾಗ, ಇದು ಕುಟುಂಬದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಅನೋರೆಕ್ಸಿಯಾ ನರ್ವೋಸಾ ಇಡೀ ಕುಟುಂಬವನ್ನು ಚೆಲ್ಲಾಪಿಲ್ಲಿಯಾಸಿಬಲ್ಲ ಅನಾರೋಗ್ಯ. ಅನೋರೆಕ್ಸಿಯಾದಿಂದ ಉಂಟಾಗುವ ಮನೋಭಾವನೆಯ ಬದಲಾವಣೆಗಳು ಮತ್ತು ವ್ಯಕ್ತಿತ್ವದ ಬದಲಾವಣೆಗಳೂ ಅಂತೆಯೇ ವೈಯಕ್ತಿಕ ಸಂಬಂಧಗಳು ಮತ್ತು ಕುಟುಂಬ ಸಂಬಂಧಗಳನ್ನು ಇದು ಹಾಳುಮಾಡಬಹುದು

ಇಂತಹ ಕಾಯಿಲೆಗಳಿಗಾಗಿ ಪರಿಹಾರ ಕೇಂದ್ರಗಳು

ಇಂತಹ ಕಾಯಿಲೆಗಳಿಗಾಗಿ ಪರಿಹಾರ ಕೇಂದ್ರಗಳು

ತಿನ್ನುವ ಅಸ್ವಸ್ಥತೆಗೆ ಸರಿಯಾದ ಪುನರ್ವಸತಿ ಕಾರ್ಯಕ್ರಮವನ್ನು ಆಯ್ಕೆ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ಅನೇಕ ಮಹಿಳೆಯರು ಖಿನ್ನತೆ ಮತ್ತು ಇತರ ಮಾನಸಿಕ ಅಸ್ವಸ್ಥತೆಗಳ ಜೊತೆಗೆ ಇಮತಹ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ, ಅನೋರೆಕ್ಸಿಯಾ ಮತ್ತು ಬುಲಿಮಿಯಾ ಚಿಕಿತ್ಸೆಗಾಗಿ ಚಿಕಿತ್ಸಾ ಕ್ರಮಗಳು ಮಾನಸಿಕ ಅಸ್ವಸ್ಥತೆಯನ್ನು ಬಗೆಹರಿಸಬೇಕು. ತಿನ್ನುವ ಕಾಯಿಲೆಯಿಂದ ಬಳಲುತ್ತಿರುವ ಯಾರಿಗಾದರೂ ದ್ವಿ ರೋಗನಿರ್ಣಯ ಚಿಕಿತ್ಸೆ ಕೇಂದ್ರಗಳು ಪರಿಪೂರ್ಣ ಆಯ್ಕೆಯಾಗಿದೆ.

English summary

why-are-eating-disorders-more-common-in-women

Many women suffer from eating disorders like anorexia and bulimia. Eating disorders often happen in childhood and the root causes of it are child abuse, childhood obesity, peer pressure and a low self-esteem. Eating disorders can sometimes lead to serious physical and mental health problems. In severe cases, the starvation of the body leads to heart failure and death.
X
Desktop Bottom Promotion