Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಅತಿಯಾಗಿ ನೀಲಿ ಚಿತ್ರ ನೋಡಿದರೆ, ನೋಡಿ ಇಂತಹ ಸಮಸ್ಯೆ ಕಾಡಬಹುದು!
ನೀಲಿ ಚಿತ್ರಗಳು ಲೈಂಗಿಕತೆ ಬಗ್ಗೆ ನೀಡುವ ಶಿಕ್ಷಣಕ್ಕಿಂತ ಹೆಚ್ಚಾಗಿ ಅದು ಚಟವಾಗಿ ಪರಿಣಮಿಸುತ್ತದೆ ಎನ್ನುವುದು ಹಲವಾರು ಅಧ್ಯಯನಗಳಿಂದಲೂ ತಿಳಿದುಬಂದಿದೆ. ಇದು ಕೇವಲ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರುವುದಲ್ಲದೆ, ವ್ಯಕ್ತಿಯೊಬ್ಬನ ಮನಸ್ಸಿನಲ್ಲಿ ತಪ್ಪಿತಸ್ಥ ಭಾವನೆ, ಅವಮಾನ ಅಥವಾ ಹತಾಶೆ ಉಂಟು ಮಾಡುವುದು. ಅಂತಿಮವಾಗಿ ಇದರಿಂದಾಗಿ ಆ ವ್ಯಕ್ತಿ ಖಿನ್ನತೆಗೆ ಒಳಗಾಗುತ್ತಾನೆ ಮತ್ತು ಆತನಲ್ಲಿನ ಸ್ವಾಭಿಮಾನ ಕಡಿಮೆಯಾಗುವುದು. ಇದು ಆತನ ಲೈಂಗಿಕ ಜೀವನ ಮತ್ತು ಲೈಂಗಿಕ ಸಂಬಂಧದ ಮೇಲೆ ಪರಿಣಾಮ ಬೀರುವುದು.
ಲೈಂಗಿಕ ಚಟದಿಂದಾಗಿ ಅಪಾಯಕಾರಿ ಲೈಂಗಿಕ ಮತ್ತು ವೃತ್ತಿಪರ ನಡವಳಿಕೆ ಕಂಡುಬರುವುದು ಎಂದು ಅಧ್ಯಯನಗಳು ಹೇಳಿವೆ.
ಶೃಂಗಾರಸಾಹಿತ್ಯದ ಶಕ್ತಿಯನ್ನು ನಂಬುತ್ತೀರೋ ಇಲ್ಲವೋ ಎನ್ನುವುದು ಗೊತ್ತಿಲ್ಲ. ಆದರೆ ಅಮೆರಿಕಾದ ಮನಶಾಸ್ತ್ರಜ್ಞರ ಸಂಸ್ಥೆ ಪ್ರಕಾರ ಮಹಿಳೆಯರಲ್ಲಿ ನೀಲಿ ಚಿತ್ರ ನೋಡುವ ಸಂಖ್ಯೆಯು ಶೇ.30ರಷ್ಟು ಮತ್ತು ಪುರುಷರಲ್ಲಿ ಇದು ಶೇ.50ಕ್ಕಿಂತಲೂ ಹೆಚ್ಚಾಗಿದೆಯಂತೆ. ಕೆಲವರಿಗೆ ಇದು ಶಿಕ್ಷಣ ನೀಡಿದರೆ, ಇನ್ನು ಕೆಲವರಿಗೆ ಇದು ಲೈಂಗಿಕ ಮನೋರಂಜನೆಯಾಗಿದೆ. ಆದರೆ ಈ ಮನೋರಂಜನೆಯು ಚಟವಾಗಿ ಬದಲಾದರೆ ಅದು ನಿಮ್ಮನ್ನು ದೊಡ್ಡ ಸಮಸ್ಯೆಗೀಡು ಮಾಡಲಿದೆ. ನೀಲಿಚಿತ್ರದ ಆಸಕ್ತಿಯಿಂದ ಹಿಡಿದು ಅದು ಚಟವಾಗುವ ಲಕ್ಷಣಗಳು ಯಾವುದು ಎಂದು ತಿಳಿಯಿರಿ. ನೀಲಿಚಿತ್ರಗಳ ಅಡ್ಡಪರಿಣಾಮಗಳ ಐದು ಸಾಧ್ಯತೆಗಳ ಬಗ್ಗೆ ನಿಮಗಿಲ್ಲಿ ತಿಳಿಸಲಿದ್ದೇವೆ....

ಖಿನ್ನತೆ
ನೀಲಿಚಿತ್ರದ ಚಟವು ತುಂಬಾ ಆಳವಾಗಿರುವ, ಖಿನ್ನತೆಯಂತಹ ಅಡ್ಡಪರಿಣಾಮ ಬೀರುವುದು ಮತ್ತು ಇದಕ್ಕಾಗಿ ವೈದ್ಯರ ಸಲಹೆ ಪಡೆಯುವುದು ಅತೀ ಅಗತ್ಯ. ಅಧ್ಯಯನವೊಂದರ ಪ್ರಕಾರ ನೀಲಿ ಚಿತ್ರಗಳ ಚಟ ಅಂಟಿಸಿಕೊಂಡಿರುವವರು ಇತರರಿಗಿಂತ ಹೆಚ್ಚು ಖಿನ್ನತೆಗೆ ಒಳಗಾಗುವರು ಮತ್ತು ಮಾನಸಿಕ ಆರೋಗ್ಯವು ತುಂಬಾ ಕೆಟ್ಟದಾಗಿರುವುದು ಮಾತ್ರವಲ್ಲದೆ ಜೀವನವು ಕಳಪೆಯಾಗಿರುವುದು. ಖಿನ್ನತೆ ಮತ್ತು ನೀಲಿಚಿತ್ರದ ಚಟದ ಬಗ್ಗೆ ಚಿಕಿತ್ಸೆ ಪಡೆದುಕೊಳ್ಳದೆ ಇದ್ದರೆ ಆಗ ದೊಡ್ಡ ಮಟ್ಟದ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ. ಪುರುಷರ ಮ್ಯಾಗಜಿನ್ ನಲ್ಲಿ ಓದುವವರ ರಿಸ್ಕ್ ಮೇಲೆ ಎಂದು ಬರೆಯಲಾಗಿರುತ್ತದೆ. ಇದನ್ನು ಕಡೆಗಣಿಸಿ ನೀಲಿಚಿತ್ರ ನೋಡುವುದು ಒತ್ತಡ ಅಥವಾ ಏಕಾಂಗಿತನದ ಲಕ್ಷಣವಾಗಿದೆ. ಇದರಿಂದ ವ್ಯಕ್ತಿಯು ಯಾವತ್ತೂ ಸಂತೋಷವಾಗಿರಲು ಸಾಧ್ಯವಿಲ್ಲ.

ಸ್ವಾಭಿಮಾನ ಕಡಿಮೆಯಾಗುವುದು
ನೀಲಿಚಿತ್ರ ನೋಡುವುದಕ್ಕೆ ಮೊದಲು ಮತ್ತು ಬಳಿಕ ಒಂದು ರೀತಿಯ ಕುತೂಹಲವಿರುವುದು. ದುರಾದೃಷ್ಟವೆಂದರೆ ಇದನ್ನು ನೋಡಿಯಾದ ಬಳಿಕ ನಿಮ್ಮಲ್ಲಿ ನಕಾರಾತ್ಮಕ ಭಾವನೆಗಳು ಮೂಡುವುದು. ಇದರಿಂದಾಗಿ ನಿಮ್ಮಲ್ಲಿ ಅಪರಾಧಿ ಭಾವನೆ ಅಥವಾ ಅವಮಾನ ಕಾಡಲು ಆರಂಭವಾಗುವುದು. ಇದರಿಂದಾಗಿ ಖಿನ್ನತೆಯಲ್ಲಿ ಬೀಳುವ ಸಾಧ್ಯತೆಯಿದೆ. ಇದರಿಂದ ವ್ಯಕ್ತಿಯ ಸ್ವಾಭಿಮಾನದ ಮೇಲೆ ಸಂಪೂರ್ಣ ಪರಿಣಾಮ ಬೀರುವುದು.

ಸಂಬಂಧದ ಸಮಸ್ಯೆ ಮತ್ತು ಕೆಟ್ಟ ಲೈಂಗಿಕ ಜೀವನ
ನೀಲಿಚಿತ್ರಗಳನ್ನು ಅತಿಯಾಗಿ ನೋಡಿಕೊಂಡರೆ ಆಗ ಅದರಿಂದ ನಿಮ್ಮ ವೈವಾಹಿಕ ಜೀವನದ ಲೈಂಗಿಕ ಸಂಬಂಧದ ಮೇಲೆ ಪರಿಣಾಂ ಬೀರುವುದು. ಹಸ್ತಮೈಥುನ ಮಾಡಿಕೊಳ್ಳುವ ಸಲುವಾಗಿ ಅತಿಯಾಗಿ ನೀಲಿಚಿತ್ರಗಳನ್ನು ನೋಡಿದರೆ ಆಗ ಲೈಂಗಿಕವಾಗಿ ಸಂಗಾತಿಯಿಂದ ನೀವು ದೂರವಾಗಬಹುದು. ನೀಲಿಚಿತ್ರದಲ್ಲಿ ಇರುವಂತೆ ಮಹಿಳೆ ಕೂಡ ಮಾಡಬೇಕೆಂದು ನೀವು ಬಯಸಬಹುದು. ಕಾಲೇಜಿನ ಹುಡುಗರು ಅತಿಯಾಗಿ ನೀಲಿಚಿತ್ರ ನೋಡುತ್ತಾರೆಂದು ಭಾವಿಸಲಾಗಿದ್ದ ಕಾಲೇಜಿನ ಹುಡುಗಿಯರನ್ನು ಸಂದರ್ಶನ ಮಾಡಿದಾಗ ಈ ವಿಷಯವು ಬೆಳಕಿಗೆ ಬಂದಿದೆ. ಇದರಿಂದ ಮಹಿಳೆಯರು ಕೂಡ ಸ್ವಾಭಿಮಾನ ಕಳೆದುಕೊಳ್ಳುವರು ಮತ್ತು ಅವರ ಲೈಂಗಿಕ ತೃಪ್ತಿಯು ತುಂಬಾ ಕಡಿಮೆಯಿರುವುದು.

ಅಪಾಯಕಾರಿ ನಡವಳಿಕೆ
ನೀಲಿಚಿತ್ರದ ಚಟ ಅಂಟಿಸಿಕೊಂಡಿರುವವರು ಸಾಮಾಜಿಕವಾಗಿ ಅಪಾಯಕಾರಿಯಾಗುವಂತಹ ಸಾಧ್ಯತೆಗಳು ಇವೆ. ಈ ಚಟದ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲವೆಂದಾದರೆ ಅದು ಅಪಾಯಕಾರಿ ನಡವಳಿಕೆಯಲ್ಲಿ ಬದಲಾಗಬಹುದು. ಇದರಿಂದ ಅವರ ಶಿಕ್ಷಣ ಅಥವಾ ಕೆಲಸವು ಅಪಾಯದಲ್ಲಿ ಸಿಲುಕಬಹುದು. ಕೆಲವರು ಈ ಚಟದಿಂದ ಕೆಲಸ ಕಳೆದುಕೊಂಡು, ಆರ್ಥಿಕವಾಗಿಯೂ ಸಂಕಷ್ಟಕ್ಕೆ ಸಿಲುಕುವರು. ಇವರು ತಮ್ಮ ಚಟ ತೀರಿಸಿಕೊಳ್ಳಲು ವೃತ್ತಿ ಮತ್ತು ಜವಾಬ್ದಾರಿಯನ್ನು ಅಪಾಯಕ್ಕೆ ಸಿಲುಕಿಸುವರು.

ಲೈಂಗಿಕ ಚಟ
ನೀಲಿಚಿತ್ರದ ಚಟವೆನ್ನುವುದು ಕೆಲವರಿಗೆ ಕೇವಲ ಒಂದು ಭಾಗವಾಗಿರುವುದು. ಯಾಕೆಂದರೆ ಇದರಲ್ಲಿ ಪ್ರಮುಖವಾಗಿ ಇವರು ಲೈಂಗಿಕ ಚಟಕ್ಕೆ ಒಳಗಾಗಿರುವರು. ಇಂತಹ ಸಂದರ್ಭದಲ್ಲಿ ಲೈಂಗಿಕವಾಗಿ ಬರುವಂತಹ ರೋಗಗಳು ಹಾಗೂ ಸೋಂಕಿಗೆ ಒಳಗಾಗುವಂತಹ ಸಾಧ್ಯತೆಯು ಇರುವುದು. ಮುರಿದು ಬಿದ್ದ ಮದುವೆ, ಕಚೇರಿಯಲ್ಲಿ ಗುರಿ ಸಾಧಿಸಲು ಆಗದೆ ಇರುವುದು ಅಥವಾ ಜೀವನದ ಕೆಲವೊಂದು ನಕಾರಾತ್ಮಕ ಅಂಶಗಳು ಇವರನ್ನು ಈ ರೀತಿ ಮಾಡಬಹುದು. ಲೈಂಗಿಕ ಚಟವನ್ನು ಒಳಗೊಂಡಿರುವಂತವರಿಗೆ ತಮ್ಮ ಚಟ ತೀರಿಸಿಕೊಳ್ಳಲು ನೀಲಿಚಿತ್ರವೆನ್ನುವುದು ಸುಲಭ ಮಾಧ್ಯಮವಾಗಿದೆ.



Click it and Unblock the Notifications