Latest Updates
-
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ! -
ಈ ರೀತಿ ಟೊಮೆಟೊ ಸೆಟ್ ದೋಸೆ! ಹಿಟ್ಟು ರುಬ್ಬುವ ಅವಶ್ಯಕತೆಯಿಲ್ಲ.. ಬ್ಯಾಚುಲರ್ಗಳಿಗೆ ಬೆಸ್ಟ್, ತೂಕ ಇಳಿಕೆಗೆ ಸೂಪರ್! -
ಸಂಬಂಧಿಕರ ಮಾತುಗಳನ್ನು ನಿರ್ಲಕ್ಷಿಸಬೇಡಿ! ಸ್ನೇಹಿತರಿಂದ ಪೂರ್ಣ ಸಹಕಾರ -
March 16 Horoscope: ಹಣಕಾಸು ವಿಚಾರವಾಗಿ ಎಚ್ಚರದಿಂದ ವ್ಯವಹರಿಸಿ! -
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ
ಮನೆಔಷಧಿಗಳು: ಹೊಟ್ಟೆ ನೋವಿದ್ದರೆ ಕ್ಷಣ ಮಾತ್ರದಲ್ಲಿ ಮಾಯವಾಗುತ್ತೆ!
ಸಣ್ಣ ಮಕ್ಕಳಿಗೆ ಶಾಲೆಗೆ ಹೋಗಲು ಮನಸ್ಸಿಲ್ಲದೆ ಇದ್ದರೆ ನೀಡುವಂತಹ ಕಾರಣ ಹೊಟ್ಟೆನೋವು. ಹೊಟ್ಟೆನೋವು ಇದ್ದರೆ ಶಾಲೆಗೆ ಕಳುಹಿಸುವುದಿಲ್ಲವೆನ್ನುವ ನಂಬಿಕೆ ಮಕ್ಕಳಲ್ಲಿ ಇರುತ್ತದೆ. ಇದರಿಂದಾಗಿ ಮಕ್ಕಳು ಈ ಕಾರಣ ನೀಡುತ್ತಾರೆ. ಇನ್ನು ಕೆಲಸಕ್ಕೆ ಹೋಗಲು ಮನಸ್ಸಿಲ್ಲದಿದ್ದರೂ ಇಂತಹ ಕಾರಣ ನೀಡುವುದಿದೆ. ಆದರೆ ನಾವಿಲ್ಲಿ ಗಮನಿಸಬೇಕಾದ ವಿಷಯವೆಂದರೆ ಹೊಟ್ಟೆ ನೋವು ಅಥವಾ ಅಸಿಡಿಟಿ ಸಮಸ್ಯೆಯಿದ್ದರೆ ಅದು ಇನ್ನಿಲ್ಲದಂತೆ ಕಾಡುವುದು.
ಸಾಮಾನ್ಯವಾಗಿ ಹೊಟ್ಟೆಯಲ್ಲಿ ನೋವು ಬರಲು ಪ್ರಮುಖ ಕಾರಣಗಳೆಂದರೆ ಅಜೀರ್ಣತೆ, ಆಮ್ಲೀಯತೆ, ಮಲಬದ್ಧತೆ, ಕೆಲವು ಆಹಾರಗಳಿಗೆ ಅಲರ್ಜಿ ಹೊಂದಿರುವುದು, ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳುವುದು, ವಿಷಾಹಾರ ಸೇವನೆ, ಆಮಶಂಕೆ, ಹೊಟ್ಟೆ ಅಥವಾ ಕರುಳುಗಳ ಒಳಭಾಗದಲ್ಲಿ ಹುಣ್ಣುಗಳಾಗುವುದು, ಅಪೆಂಡಿಸೈಟಿಸ್, ಪಿತ್ತಕೋಶದಲ್ಲಿ ಕಲ್ಲುಗಳು, ಮೂತ್ರಪಿಂಡದ ಕಲ್ಲುಗಳು ಇತ್ಯಾದಿಗಳಾಗಿವೆ.
ಒಟ್ಟಾರೆ ಹೇಳಬೇಕೆಂದರೆ ಹೊಟ್ಟೆನೋವಿಗೆ ಹೊಟ್ಟೆಯ ಯಾವುದೇ ಅಂಗ ಕಾರಣವಾಗಬಹುದು. ಒಳ್ಳೆಯ ಸುದ್ದಿ ಎಂದರೆ ಕಾರಣವೇನೇ ಇದ್ದರೂ ಹೊಟ್ಟೆನೋವನ್ನು ಶೀಘ್ರವಾಗಿ ಕಡಿಮೆಗೊಳಿಸಲು ಸಮರ್ಥವಾದ ಮನೆಮದ್ದುಗಳಿವೆ. ಇಂತಹ ಕೆಲವು ಮದ್ದುಗಳ ಬಗ್ಗೆ ವಿವರಗಳನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ....

ಶುಂಠಿ
ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವಂತಹ ಶುಂಠಿಯು ಹೊಟ್ಟೆಯ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಅತಿಯಾಗಿ ಶುಂಠಿ ಸೇವನೆ ಮಾಡಿದರೆ ಇದರಿಂದ ಅಡ್ಡಪರಿಣಾಮ ಉಂಟಾಗಬಹುದು. ಇದು ತುಂಬಾ ಬಲವಾಗಿರುವ ಕಾರಣದಿಂದಾಗಿ ಶುಂಠಿ ಸೇವನೆ ಮಾಡುವಾಗ ಗಮನವಿರಲಿ.

ಲವಂಗ
ಇದರಲ್ಲಿ ಸ್ವಾಭಾವಿಕವಾದ ಕಾರ್ಮಿಟಿವ್‍ಗಳಿದ್ದು, ಇದು ಪೆರಿಸ್ಟಲಿಸಿಸ್ ( ಅನ್ನನಾಳದ ಮುಖಾಂತರ ಆಹಾರವು ಜಠರ ಸೇರುವ ಪ್ರಕಿಯೆ) ಅನ್ನು ಇದು ಹೆಚ್ಚಿಸುತ್ತದೆ. ಇದಲ್ಲದೆ ಇದು ಲಾಲಾರಸವನ್ನು ಸಹ ಹೆಚ್ಚು ಮಾಡುತ್ತದೆ. ಇದು ಸ್ವಲ್ಪ ಕಟುವಾದ ಘಾಟು ರೀತಿಯ ರುಚಿಯನ್ನು ಹೊಂದಿದೆ. ಇದರ ರುಚಿಯನ್ನು ನೊಡುವುದರಿಂದ ನಮ್ಮ ರುಚಿಗ್ರಂಥಿಗಳು ಸಕ್ರಿಯಗೊಂಡು, ಲಾಲಾರಸವನ್ನು ಹೆಚ್ಚಿಗೆ ಉತ್ಪಾದಿಸುತ್ತವೆ. ಈ ಲಾಲಾರಸವು ಜೀರ್ಣಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಹಾಗಾಗಿ ನೀವೇನಾದರು ಅಸಿಡಿಟಿಯಿಂದ ಬಾಧೆಪಡುತ್ತಿದ್ದರೆ, ಒಂದು ಲವಂಗವನ್ನು ಕಚ್ಚಿ ತಿನ್ನಿ. ಆಗ ನಿಮ್ಮ ಬಾಯಿಯಲ್ಲಿ ಉತ್ಪತಿಯಾಗುವ ಲಾಲಾರಸವು ಅಸಿಡಿಟಿಯನ್ನು ಶಮನ ಮಾಡುವ ಸಲುವಾಗಿ ಹೊಟ್ಟೆಗೆ ದೌಡಾಯಿಸುತ್ತದೆ.

ಪುದೀನಾ ಎಲೆಗಳು
ಇದನ್ನು ಬಹು ಹಿಂದಿನ ಕಾಲದಿಂದಲು ಬಾಯಿ ದುರ್ವಾಸನೆಯನ್ನು ತೊಲಗಿಸಲು ಬಳಸುತ್ತಿದ್ದಾರೆ. ಇದರ ಜೊತೆಗೆ ಹಲವಾರು ಆಹಾರಗಳ ತಯಾರಿಕೆಯಲ್ಲಿ ಸಹ ಇದು ಅತ್ಯಾವಶ್ಯಕ. ಇದೊಂದು ಅದ್ಭುತ ಗುಣಗಳನ್ನು ಹೊಂದಿರುವ ಎಲೆಯಾಗಿದೆ. ಅಸಿಡಿಟಿಯಿಂದ ವಿಮುಕ್ತಿ ಹೊಂದಲು ಇದು ನೆರವಾಗುತ್ತದೆ. ಹೊಟ್ಟೆಯಲ್ಲಿ ಅಸಿಡನ್ನು ಕಡಿಮೆ ಮಾಡಿ ಜೀರ್ಣಶಕ್ತಿಯನ್ನು ಹೆಚ್ಚಿಸಲು ಇದು ಸಹಕರಿಸುತ್ತದೆ. ಇದರಲ್ಲಿನ ತಂಪುಕಾರಿ ಗುಣಗಳು ಹೊಟ್ಟೆಯಲ್ಲಿನ ಉರಿಯನ್ನು ನಿವಾರಿಸುತ್ತವೆ. ಪುದೀನಾ ಎಲೆಯನ್ನು ಬಿಸಿನೀರಿನಲ್ಲಿ ಹಾಕಿ ಕುದಿಸಿ, ಅದು ಆರಿದ ನಂತರ ಕುಡಿಯುವುದರಿಂದ ಅಸಿಡಿಟಿಯಿಂದ ಮುಕ್ತರಾಗಬಹುದು.

ಏಲಕ್ಕಿಯ ಬೀಜ ಮತ್ತು ಜೀರಿಗೆ ಕುದಿಸಿದ ನೀರು
ಏಲಕ್ಕಿಯ ಬೀಜ ಮತ್ತು ಜೀರಿಗೆ ಕುದಿಸಿದ ನೀರು ಒಂದು ವೇಳೆ ಅಜೀರ್ಣದ ಕಾರಣ ಹೊಟ್ಟೆನೋವಾಗಿದ್ದರೆ (ಅಜೀರ್ಣದ ಸುಲಭ ಸಂಕೇತವೆಂದರೆ ಊಟದ ಬಳಿಕ ಹೊಟ್ಟೆಯಲ್ಲಿ ಆಹಾರ ಗುಡುಗುಡು ಓಡಿದಂತಾಗುವುದು) ಇದಕ್ಕೆ ಏಲಕ್ಕಿಯ ಬೀಜ ಉತ್ತಮ ಪರಿಹಾರವಾಗಿದೆ. ಜೊತೆಗೆ ವಾಕರಿಕೆ, ವಾಂತಿಯನ್ನೂ ಕಡಿಮೆಮಾಡುತ್ತದೆ. ಇದಕ್ಕಾಗಿ ಒಂದು ಲೋಟ ನೀರಿಗೆ ಸುಮಾರು ಐದರಿಂದ ಆರು ಏಲಕ್ಕಿಗಳ ಸಿಪ್ಪೆ ಸುಲಿದು ಕೇವಲ ಬೀಜಗಳನ್ನು ಮತ್ತು ಒಂದು ಚಿಕ್ಕ ಚಮಚ ಜೀರಿಗೆಯನ್ನು ಹಾಕಿ ಕುದಿಸಿ. ಸುಮಾರು ಮೂರು ನಿಮಿಷ ಕುದಿದ ಬಳಿಕ ಒಲೆಯಿಂದಿಳಿಸಿ ತಣಿಯಲು ಬಿಡಿ. ಈ ನೀರನ್ನು ದಿನಕ್ಕೆ ಮೂರು ಬಾರಿ ಊಟದ ಬಳಿಕ ಕುಡಿಯಬಹುದು.....

ಅಡುಗೆ ಸೋಡಾ
ಅಲ್ಕಾ-ಸೆಲ್ಟ್ಜರ್ ನಂತೆ ಕೆಲಸ ಮಾಡುವ ಇದು ಎದೆ ಉರಿ ಮತ್ತು ಅಜೀರ್ಣ ತಡೆಯುತ್ತದೆ ಆ್ಯಂಟ್ಸಿಡ್ ನಂತೆ ಕೆಲಸ ಮಾಡುತ್ತದೆ ಮತ್ತು ಹೊಟ್ಟೆ ಸಮಸ್ಯೆ ನಿವಾರಿಸುತ್ತದೆ. ಆ್ಯಂಟ್ಸಿಡ್ ಗಳು ಅಡುಗೆ ಸೋಡಾದಂತೆ ಸೋಡಿಯಂ ಬೈಕಾರ್ಬೊನೇಟ್ಸ್ ಆಗಿದೆ. ಒಂದು ಚಮಚ ಅಡುಗೆ ಸೋಡಾವನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಮತ್ತು ಕುಡಿದರೆ ತಕ್ಷಣ ಪರಿಹಾರ ಸಿಗುತ್ತದೆ.

ನಿಂಬೆ ರಸ
ಬಿಸಿ ನೀರಿಗೆ ನಿಂಬೆ ರಸ ಹಾಕಿ ಕುಡಿದರೆ ಹೊಟ್ಟೆ ನೋವನ್ನು ನಿವಾರಿಸಬಹುದು. ಒಂದು ಗ್ಲಾಸ್ ಬಿಸಿ ನೀರಿಗೆ ಅರ್ಧ ನಿಂಬೆ ಹಿಂಡಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಕುಡಿಯಿರಿ. ನಿಂಬೆ ಇಲ್ಲದಿದ್ದರೆ ನಿಂಬೆರಸ ಕೂಡ ಕೆಲಸ ಮಾಡುತ್ತದೆ.

ಅಲೋವೆರಾ ಜ್ಯೂಸ್
ಅಲೋವೆರಾದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವಂತಹ ಶಕ್ತಿಯಿದೆ. ಅಲೋವೆರಾದ ವೈದ್ಯಕೀಯ ಗುಣಗಳೆಂದರೆ ಅದು ನೋವಿಗೆ ಕಾರಣವಾಗುವ ಸೂಕ್ಷ್ಮಣುಗಳ ವಿರುದ್ಧ ಹೋರಾಡುತ್ತದೆ. ಅರ್ಧ ಕಪ್ ನಷ್ಟು ಅಲೋವೆರಾ ಜ್ಯೂಸ್ ಕುಡಿಯಿರಿ ಮತ್ತು ವಿವಿಧ ರೀತಿಯ ಕರುಳಿನ ಸಮಸ್ಯೆಗಳನ್ನು ಕಡಿಮೆ ಮಾಡಿ. ವಿವಿಧ ರೀತಿಯ ಹೊಟ್ಟೆಯ ಸಮಸ್ಯೆಗಳಾದ ಅತಿಸಾರ, ಮಲಬದ್ಧತೆ, ಗ್ಯಾಸ್, ಸೆಳೆತ ಮತ್ತು ಹೊಟ್ಟೆ ಉಬ್ಬುವುದಕ್ಕೆ ಇದು ಒಳ್ಳೆಯ ಚಿಕಿತ್ಸೆಯೆಂದು ಪರಿಗಣಿಸಲಾಗಿದೆ.

ಬಿಸಿ ನೀರು
ಬಿಸಿ ನೀರಿಗೆ ಜೇನು ತುಪ್ಪ ಬೆರೆಸಿ ಮುಂಜಾನೆ ಬರೀ ಹೊಟ್ಟೆಯಲ್ಲಿ ಸೇವಿಸಿದರೆ, ಹೊಟ್ಟೆ ನೋವಿನಿಂದ ಆರಾಮ ಪಡೆಯಬಹುದು. ಅಥವಾ ತುಳಸಿ ರಸ, ಬೆಳ್ಳುಳ್ಳಿ ರಸ, ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ವಾರದಲ್ಲಿ ಎರಡು ದಿನಕ್ಕೊಮ್ಮೆ ಒಂದು ಟೀ ಚಮಚದಷ್ಟು ಸೇವಿಸುವುದರಿಂದ, ಹೊಟ್ಟೆ ಉರಿ ಕಮ್ಮಿಯಾಗುವುದರ ಜೊತೆಗೆ, ಹೊಟ್ಟೆ ನೋವಿನಿಂದ ಮುಕ್ತಿ ಪಡೆಯಬಹುದು.

ಜೀರಿಗೆ
ಜೀರಿಗೆ ಇದು ಲಾಲಾರಸವನ್ನು ಹೆಚ್ಚಿಸುವ ಅಂಶಗಳನ್ನು ತನ್ನಲ್ಲಿ ಹೊಂದಿರುವುದರಿಂದಾಗಿ ಜೀರ್ಣಶಕ್ತಿಯನ್ನು ಪ್ರಚೋದಿಸುತ್ತದೆ. ಇದು ನಮ್ಮ ಚೈತನ್ಯವನ್ನು ಹೆಚ್ಚಿಸಿ, ಗ್ಯಾಸನ್ನು ಹೊಡೆದೋಡಿಸುತ್ತದೆ ಹಾಗು ಗ್ಯಾಸ್ ಟ್ರಬಲ್ ಬರದಂತೆ ಕಾಪಾಡುತ್ತದೆ. ಆಯುರ್ವೇದಿಕ್ ಪದ್ಧತಿಯಲ್ಲಿ ಇದನ್ನು ಅಲ್ಸರ್ ನಿರೋಧಕವಾಗಿ ಬಳಸುತ್ತಿದ್ದರು. ಇದರಲ್ಲಿರುವ ಉಪಶಮನಕಾರಿ ಗುಣಗಳು ಹೊಟ್ಟೆ ತೊಳೆಸುವ ಸಮಸ್ಯೆಯಿಂದ ಮುಕ್ತಿ ಕೊಡುತ್ತಿದ್ದವು. ಇದರ ಪ್ರಯೋಜನವನ್ನು ಪಡೆಯಬೇಕಾದರೆ ಆಗಾಗ ಇದನ್ನು ಸೇವಿಸಿ ಅಸಿಡಿಟಿಯಿಂದ ಮುಕ್ತರಾಗಿ ಅಥವಾ ಇದನ್ನು ಬಿಸಿ ನೀರಿನಲ್ಲಿ ಕುದಿಸಿ, ಆರಿಸಿ. ಸಮಸ್ಯೆ ಉದ್ಬವಿಸಿದಾಗಲೆಲ್ಲ ಇದನ್ನು ಸೇವಿಸಿ.



Click it and Unblock the Notifications











