Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ತೂಕ ಇಳಿಸಿಕೊಳ್ಳಲು ಬಯಸುವವರು-ತಪ್ಪದೇ ಇಂತಹ ಆಹಾರಗಳನ್ನು ಸೇವಿಸಿ
ದೇಹದ ತೂಕ ಕಳೆದುಕೊಳ್ಳುವುದು ಎಂದರೇನು? ಒಂದು ಹೊತ್ತಿನ ಊಟ ಬಿಟ್ಟು ಉಪವಾಸ ಮಾಡುವುದೇ? ಅಥವಾ ದಿನನಿತ್ಯ ಜಿಮ್ ಗೆ ಹೋಗಿ ಬೆವರು ಇಳಿಸುವುದೇ? ಹೀಗೆ ಹಲವಾರು ರೀತಿಯ ಪ್ರಶ್ನೆಗಳು ತೂಕ ಇಳಿಸಿಕೊಳ್ಳಲು ಬಯಸುವವರಲ್ಲಿ ಇದೆ. ದೇಹದ ತೂಕ ಸಮತೋಲನದಲ್ಲಿಡಲು ಉಪವಾಸ ಮಾಡಬೇಕೆಂದಿಲ್ಲ. ದೇಹದ ತೂಕ ಇಳಿಸಿಕೊಳ್ಳಲು ನೀವು ಬಯಸಿದ್ದರೆ ಆಗ ಆಹಾರ ಪಥ್ಯ ಮಾಡುತ್ತೀರಿ.

ಈ ವೇಳೆ ದೇಹಕ್ಕೆ ಬೇಕಾಗುವ ಪ್ರಮುಖ ಪೋಷಕಾಂಶಗಳು ನಿಮ್ಮ ಆಹಾರದಲ್ಲಿರಬೇಕು. ತಿನ್ನುವಂತಹ ಪ್ರತಿಯೊಂದು ಆಹಾರವು ಆರೋಗ್ಯಕ್ಕೆ ವಿಭಿನ್ನ ರೀತಿಯಿಂದ ನೆರವಾಗುವುದು. ಈ ಲೇಖನದಲ್ಲಿ ತೂಕ ಇಳಿಸಲು ಬಯಸುವವರು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕಾದ ಆಹಾರಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ನಿಮ್ಮ ದೇಹಕ್ಕೆ ಬೇಕಾಗಿರುವ ಪ್ರಮುಖ ಪೋಷಕಾಂಶಗಳನ್ನು ಒದಗಿಸಿಕೊಡಲಿದೆ.

ಹಸಿರೆಲೆ ತರಕಾರಿಗಳು
ತೂಕ ಕಳೆದುಕೊಳ್ಳುವತ್ತ ನೀವು ಕೆಲಸ ಮಾಡುತ್ತಲಿದ್ದರೆ ಆಗ ನೀವು ಹೆಚ್ಚಿನ ಕಾರ್ಬ್ಸ್ ಮತ್ತು ಕ್ಯಾಲರಿ ಇರುವಂತಹ ಆಹಾರವನ್ನು ಸೇವನೆ ಮಾಡಬಾರದು. ಈ ಕಾರಣದಿಂದಾಗಿ ಹಸಿರೆಲೆ ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಬಸಲೆ, ಕಾಲಾರ್ಡ್ಸ್, ಕೇಲ್, ಸ್ವಿಸ್ ಚಾರ್ಡ್ ಗಳು ಇತ್ಯಾದಿಗಳನ್ನು ಸೇವಿಸಿ. ಇದು ಪರಿಣಾಮಕಾರಿಯಾಗಿ ತೂಕ ಇಳಿಸಲು ನೆರವಾಗುವುದು ಮತ್ತು ವಿವಿಧ ರೀತಿಯ ಪೋಷಕಾಂಶಗಳು, ಆ್ಯಂಟಿಆಕ್ಸಿಡೆಂಟ್, ಕಬ್ಬಿನಾಂಶ ಮತ್ತು ಕ್ಯಾಲ್ಸಿಯಂ ಒದಗಿಸಿ, ಸಂಪೂರ್ಣ ಆರೋಗ್ಯ ಕಾಪಾಡುವುದು.

ಮೊಟ್ಟೆ
ಮೊಟ್ಟೆಯಲ್ಲಿ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಇದೆ ಮತ್ತು ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿತ್ತು. ಆದರೆ ಅಧ್ಯಯನಗಳು ಇದು ಸುಳ್ಳು ಎಂದು ಹೇಳಿವೆ. ಮೊಟ್ಟೆಗಳಲ್ಲಿ ಉನ್ನತ ಮಟ್ಟದ ಪ್ರೋಟೀನ್ ಇದೆ ಮತ್ತು ದೀರ್ಘಕಾಲದ ತನಕ ಇದು ಹೊಟ್ಟೆ ತುಂಬಿರುವಂತೆ ಮಾಡುವುದು. ಬೊಜ್ಜು ದೇಹವನ್ನು ಹೊಂದಿದ್ದ 30 ಮಹಿಳೆಯರಿಗೆ ಬೆಳಗ್ಗಿನ ಉಪಾಹಾರಕ್ಕೆ ಮೊಟ್ಟೆ ನೀಡಿ ಪರೀಕ್ಷೆ ಮಾಡಲಾಯಿತು. ಇವರಿಗೆ ದೀರ್ಘಕಾಲ ಹೊಟ್ಟೆ ತುಂಬಿದಂತೆ ಆಗಿ, ಮುಂದಿನ 36 ಗಂಟೆಗಳ ಕಾಲ ಕಡಿಮೆ ಆಹಾರ ಸೇವಿಸುತ್ತಿದ್ದರು. ಕ್ಯಾಲರಿ ನಿರ್ಬಂಧಿತ ಆಹಾರ ಕ್ರಮವು ಮಹಿಳೆಯರಲ್ಲಿ ತೂಕ ಕಳೆದುಕೊಳ್ಳಲು ಸಹಕಾರಿಯಾಯಿತು ಎಂದು ಅಧ್ಯಯನಗಳು ಕಂಡುಕೊಂಡಿವೆ.

ಬಹುದಳ ತರಕಾರಿಗಳು
ಬ್ರೊಕೊಲಿ, ಎಲೆಕೋಸು, ಹೂಕೋಸು ಇತ್ಯಾದಿ ತರಕಾರಿಗಳಲ್ಲಿ ಉನ್ನತ ಮಟ್ಟದ ನಾರಿನಾಂಶ ಮತ್ತು ಪ್ರೋಟೀನ್ ಇದೆ. ಇದು ಕ್ಯಾನ್ಸರ್ ವಿರೋಧಿ ಮತ್ತು ಕಡಿಮೆ ಶಕ್ತಿ ಸಾಂದ್ರತೆಯುಳ್ಳ ತರಕಾರಿ. ಪ್ರಾಣಿಜನ್ಯ ಆಹಾರದಂತೆ ಇದರಲ್ಲಿ ಪ್ರೋಟೀನ್ ಇಲ್ಲದೆ ಇದ್ದರೂ ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನು ತಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಳ್ಳಬಹುದು.

ಎಣ್ಣೆಯಂಶವಿರುವ ಮೀನುಗಳು
ಎಣ್ಣೆಯಂಶವಿರುವ ಮೀನುಗಳಾಗಿರುವಂತಹ ಸಾಲ್ಮನ್, ಮ್ಯಾಕೆರೆಲ್,ಸಾರ್ಡಿನ್, ಟ್ರೌಟ್ ಇತ್ಯಾದಿಗಳಲ್ಲಿ ಕಡಿಮೆ ಕ್ಯಾಲರಿ ಇದೆ ಮತ್ತು ಇದು ದೀರ್ಘಕಾಲದ ತನಕ ಹೊಟ್ಟೆ ತುಂಬಿದಂತೆ ಇಡುವುದು. ಇವುಗಳಲ್ಲಿ ಇರುವಂತಹ ಐಯೋಡಿನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲವು ಕಣ್ಣಿನ ದೃಷ್ಟಿ ಸುಧಾರಣೆ ಮಾಡುವುದು ಮತ್ತು ಹೃದಯದ ಕಾಯಿಲೆಗಳನ್ನು ದೂರವಿಡುವುದು. ಹಲವಾರು ಪೋಷಕಾಂಶಗಳೊಂದಿಗೆ ತುಂಬಿರುವ ಇದು ಥೈರಾಯ್ಡ್ ಸರಿಯಾಗಿ ಕೆಲಸ ಮಾಡಲು ನೆರವಾಗುದು ಮತ್ತು ಚಯಾಪಚಯ ವೃದ್ಧಿಸುವುದು. ತೂಕ ಇಳಿಸುವ ವೇಳೆ ನೀವು ಈ ಆಹಾರ ಸೇವಿಸಬೇಕು.

ಬೇಯಿಸಿದ ಆಲೂಗಡ್ಡೆ
ಬೇಯಿಸಿದ ಬಿಳಿ ಆಲೂಗಡ್ಡೆಯಲ್ಲಿ ಕೊಬ್ಬು ಇರಲ್ಲ ಮತ್ತು ಇದರಲ್ಲಿ ಹಲವಾರು ರೀತಿಯ ಪೋಷಕಾಂಶ ಗಳಾಗಿರುವ ಪೊಟಾಶಿಯಂ ಮುಂತಾದವುಗಳಿವೆ. ಇದು ರಕ್ತದೊತ್ತಡ ನಿಯಂತ್ರಣದಲ್ಲಿಡುವುದು. ತೂಕ ಕಳೆದುಕೊಳ್ಳ ಬಯಸುವವರು ಇದನ್ನು ಸೇವಿಸಿ. ಇದು ದೀರ್ಘಕಾಲ ತನಕ ಹೊಟ್ಟೆ ತುಂಬಿರುವಂತೆ ಮಾಡಿ ತೂಕ ಇಳಿಸಲು ಸಹಕಾರಿಯಾಗಲಿದೆ.

ಧಾನ್ಯಗಳು
ಕಿಡ್ನಿ ಬೀನ್ಸ್, ಮಸೂರ, ಕಪ್ಪು ಬೀನ್ಸ್ ಇತ್ಯಾದಿ ದ್ವಿದಳ ಧಾನ್ಯಗಳಲ್ಲಿ ಪ್ರೋಟೀನ್ ಅಧಿಕವಾಗಿದೆ ಮತ್ತು ನಾರಿನಾಂಶವು ಸಮೃದ್ಧವಿದೆ. ಕೊಬ್ಬಿನಾಂಶ ಕಡಿಮೆ ಇರುವಂತಹ ಈ ಆಹಾರಗಳಲ್ಲಿ ಪೊಟಾಶಿಯಂ, ಫಾಲಟೆ, ಕಬ್ಬಿನಾಂಶ ಮತ್ತು ಮೆಗ್ನಿಶಿಯಂ ಇದೆ. ಅಧಿಕ ನಾರಿನಾಂಶವು ದೀರ್ಘಕಾಲದ ತನಕ ಹೊಟ್ಟೆ ತುಂಬಿದಂತೆ ಇಡುವುದು.

ಬೀಜಗಳು
ಬೀಜಗಳಲ್ಲಿ ಉನ್ನತ ಮಟ್ಟದ ಪ್ರೋಟೀನ್, ನಾರಿನಾಂಶ ಮತ್ತು ಆರೋಗ್ಯಕರ ಕೊಬ್ಬಿದೆ. ಇದು ತೂಕ ಕಳೆದುಕೊಳ್ಳಲು ನೆರವಾಗುವುದು ಮತ್ತು ಚಯಾಪಚಯ ಕ್ರಿಯೆ ಉತ್ತೇಜಿಸುವುದು. ಬೀಜಗಳನ್ನು ಸೇವನೆ ಮಾಡುವವರು ದೈಹಿಕವಾಗಿ ಫಿಟ್ ಹಾಗೂ ಆರೋಗ್ಯಕರವಾಗಿರಲಿದ್ದಾರೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಆದರೆ ಇದನ್ನು ಮಿತವಾಗಿ ಸೇವನೆ ಮಾಡಿದರೆ ಒಳ್ಳೆಯದು. ಅತಿಯಾಗಿ ಸೇವಿಸಿದರೆ ಕ್ಯಾಲರಿ ಅತಿಯಾಗುವುದು.

ಸೂಪ್
ನಾವು ತಿನ್ನುವಂತಹ ಘನ ಆಹಾರವನ್ನು ಸೂಪ್ ಮಾಡಿಕೊಂಡು ಸೇವಿಸಿದರೆ ಅದರಿಂದ ಹೆಚ್ಚು ತೃಪ್ತಿ ಸಿಗುವುದು ಎಂದು ವಿವಿಧ ಅಧ್ಯಯನಗಳು ಹೇಳಿವೆ. ಹೆಚ್ಚು ನೀರಿನಾಂಶವಿರುವಂತಹ ಆಹಾರವು ಹೊಟ್ಟೆಗೆ ತೃಪ್ತಿ ನೀಡುವುದು. ತರಕಾರಿಗಳು ಮತ್ತು ಇತರ ಘನ ಆಹಾರದಿಂದ ತುಂಬಿರುವಂತಹ ಸೂಪ್ ತೂಕ ಕಳೆದುಕೊಳ್ಳಲು ಸಹಕಾರಿ.

ಯಾವುದೇ ಕಾರಣಕ್ಕು ಒಂದು ಊಟವನ್ನು ಬಿಡಬೇಡಿ!!
ಊಟವನ್ನು ಬಿಟ್ಟು ಉಪವಾಸ ಕೂರುವುದರಿಂದ ತೂಕವನ್ನು ಇಳಿಸಿಕೊಳ್ಳಲು ಆಗುವುದಿಲ್ಲ! ನೀವು ಊಟವನ್ನು ಬಿಡುವುದರಿಂದ ನಿಮಗೆ ಹಸಿವಾಗುತ್ತದೆ. ಇದರಿಂದಾಗಿ ನೀವು ಮುಂದೆ ಸೇವಿಸುವ ಊಟವು ಮತ್ತಷ್ಟು ಹೆಚ್ಚಾಗುವ ಸಂಭವ ಅಧಿಕವಾಗಿರುತ್ತದೆ.

ಡಯಟ್‌ಗೆ ಹಣ್ಣು ಮತ್ತು ತರಕಾರಿಗಳನ್ನು ಸೇರಿಸಿ
ಕರಿದ ತಿಂಡಿಗಳ ಹಾಗು ಕುರುಕಲು ತಿಂಡಿಗಳ ಬದಲಿಗೆ ಹಣ್ಣು ಮತ್ತು ತರಕಾರಿಗಳನ್ನು ನಿಮ್ಮ ಡಯಟ್‍ನಲ್ಲಿ ಸೇರಿಸಿಕೊಳ್ಳಿ. ಹಣ್ಣು ಮತ್ತು ತರಕಾರಿಗಳಲ್ಲಿ ನೀರಿನಂಶ ಹೆಚ್ಚಾಗಿರುತ್ತದೆ. ಇದರ ಜೊತೆಗೆ ಹಣ್ಣು ಮತ್ತು ತರಕಾರಿಗಳಲ್ಲಿ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿರುತ್ತವೆ, ಇವು ನಮ್ಮ ದೇಹಕ್ಕೆ ಅತ್ಯಗತ್ಯ ಎಂಬುದನ್ನು ಮರೆಯಬಾರದು.

ಕುರುಕಲು ತಿಂಡಿ ತಿನ್ನುವುದನ್ನು ಬಿಡಿ
ತಿನ್ನುವ ಚಪಲವು ನಿಮ್ಮ ತೂಕವನ್ನು ಇಳಿಸಿಕೊಳ್ಳುವ ಅಭಿಲಾಷೆಯ ಶತ್ರುಗಳು. ಸುಮಾರು ಜನರು ತಮ್ಮ ತಿನ್ನುವ ಚಪಲವನ್ನು ನಿಯಂತ್ರಿಸಿಕೊಳ್ಳಲಾರದೆ ಜಂಕ್ ಫುಡ್ ತಿನ್ನುವ ಅಭ್ಯಾಸವನ್ನು ಇರಿಸಿಕೊಂಡಿರುತ್ತಾರೆ. ನಿಮಗೆ ನಿಜಕ್ಕು ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದಾದಲ್ಲಿ ಮೊದಲು ಕುರುಕಲು ತಿಂಡಿ ತಿನ್ನುವುದನ್ನು ಬಿಡಿ!



Click it and Unblock the Notifications











