For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಕಾಡುವ ರಿಂಗ್‌ವರ್ಮ್ ಸಮಸ್ಯೆಗೆ ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

By Hemanth
|

ತುರಿಕಜ್ಜಿ (ರಿಂಗ್‌ವರ್ಮ್) ಎನ್ನುವುದು ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುವುದು. ಇದನ್ನು ಇಂಗ್ಲಿಷ್ ನಲ್ಲಿ ರಿಂಗ್ ವರ್ಮ್ ಎಂದು ಕರೆಯಲಾಗುತ್ತದೆ. ಇದು ಒಂದು ವೃತ್ತಾಕಾರದಲ್ಲಿ ಆಗುವಂತಹ ಕಚ್ಚಿ. ಆದರೆ ಕೆಲವೊಂದು ಸಲ ದೊಡ್ಡವರಲ್ಲೂ ಇಂತಹ ಸಮಸ್ಯೆ ಕಾಣಿಸುವುದು. ಇದಕ್ಕೆ ಪ್ರಮುಖ ಕಾರಣವೆಂದರೆ ಶೀಲೀಂಧ್ರ ಸೋಂಕು. ಇದು ದೇಹದಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹರಡುವುದು. ತಲೆಬುರುಡೆ, ಕಾಲು, ಕೈಗಳು, ಪಾದ ಮತ್ತು ಬೆರಳುಗಳಲ್ಲಿ ಇದು ಕಾಣಿಸಿಕೊಳ್ಳಬಹುದು.

ಟ್ರೈಕೊಫೈಟನ್, ಮೈಕ್ರೊಸ್ಪೊರಮ್ ಮತ್ತು ಎಪಿಡರ್ಮಾಫಿಟನ್ ಎನ್ನುವ ಶಿಲೀಂಧ್ರಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಶಿಲೀಂಧ್ರಿಯಗಳು ಬಿಸಿ ಹಾಗೂ ತೇವಾಂಶವಿರುವ ಜಾಗದಲ್ಲಿ ವಾಸ ಮಾಡುವುದು. ಇವುಗಳು ಒಂದೇ ಜಾಗದಲ್ಲಿ ತಿಂಗಳುಗಟ್ಟಲೆ ನಿಲ್ಲುವುದು. ಇವುಗಳು, ಉಗುರು, ಕೂದಲಿನ ಕೋಶ ಮತ್ತು ಮಡಿಚಿರುವ ಚರ್ಮದಲ್ಲಿ ನೆಲೆನಿಲ್ಲಬಹುದು. ತುರಿಕಚ್ಚಿ ಕಾಣಿಸಿಕೊಂಡರೆ ಅದನ್ನು ನಿವಾರಿಸಲು ಹಲವಾರು ರೀತಿಯ ಮನೆಮದ್ದುಗಳು ಇವೆ. ಇದನ್ನು ಈ ಲೇಖನದ ಮೂಲಕ ತಿಳಿಯಿರಿ....

ತಲೆಬುರುಡೆಗೆ ತುರಿಕಜ್ಜಿ ಹೇಗೆ ಉಂಟಾಗುವುದು?

ತಲೆಬುರುಡೆಗೆ ತುರಿಕಜ್ಜಿ ಹೇಗೆ ಉಂಟಾಗುವುದು?

ತುರಿಕಜ್ಜಿ ಉಂಟಾಗಲು ಹಲವಾರು ರೀತಿಯ ಶಿಲೀಂಧ್ರ ಸೋಂಕು ಕಾರಣ. ಆದರೆ ತಜ್ಞರ ಪ್ರಕಾರ ಇದಕ್ಕೆ ಪ್ರಮುಖವಾಗಿ ಟ್ರೈಕೊಫೈಟನ್, ಮೈಕ್ರೊಸ್ಪೊರಮ್ ಮತ್ತು ಎಪಿಡರ್ಮಾಫಿಟನ್ ಎನ್ನುವ ಶಿಲೀಂಧ್ರಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಶಿಲೀಂಧ್ರಿಯಗಳು ಬಿಸಿ ಹಾಗೂ ತೇವಾಂಶವಿರುವ ಜಾಗದಲ್ಲಿ ವಾಸ ಮಾಡುವುದು. ಇವುಗಳು ಒಂದೇ ಜಾಗದಲ್ಲಿ ತಿಂಗಳುಗಟ್ಟಲೆ ನಿಲ್ಲುವುದು. ಇವುಗಳು, ಉಗುರು, ಕೂದಲಿನ ಕೋಶ ಮತ್ತು ಮಡಿಚಿರುವ ಚರ್ಮದಲ್ಲಿ ನೆಲೆನಿಲ್ಲುವುದು. ಇದರಿಂದಾಗಿ ಸೋಂಕು ಬರಬಹುದು.

ತೆಂಗಿನೆಣ್ಣೆ

ತೆಂಗಿನೆಣ್ಣೆ

ಇದು ಕೂದಲಿಗೆ ಅದ್ಭುತವಾಗಿ ಕೆಲಸ ಮಾಡುವುದು. ಇದು ಕೂದಲು ಮತ್ತು ತಲೆಬುರುಡೆಗೆ ತೇವಾಂಶ ನೀಡುವುದು, ಕೂದಲನ್ನು ಬಲಗೊಳೀಸುವುದು ಮತ್ತು ತಲೆಹೊಟ್ಟು ನಿವಾರಣೆ ಮಾಡುವುದು.ರಾತ್ರಿ ಮಲಗುವ ಮೊದಲು ತಲೆಬುರುಡೆಯ ಬಾಧಿತ ಜಾಗಕ್ಕೆ ತೆಂಗಿನೆಣ್ಣೆ ಹಚ್ಚಿಕೊಳ್ಳಿ. ಬೆಳಗ್ಗೆ ಎದ್ದು ಶಿಲೀಂಧ್ರ ವಿರೋಧಿ ಶಾಂಪೂವಿನಿಂದ ಕೂದಲು ತೊಳೆಯಿರಿ. ಮೂರು ವಾರಗಳ ಕಾಲ ಹೀಗೆ ಮಾಡಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

1-2 ಎಸಲು ಬೆಳ್ಳುಳ್ಳೀ ತೆಗೆದುಕೊಳ್ಳಿ ಮತ್ತು ಇದನ್ನು ಜಜ್ಜಿಕೊಳ್ಳಿ. ಕೆಲವು ಹನಿ ನೀರು ಹಾಕಿಕೊಂಡು ಪೇಸ್ಟ್ ಮಾಡಿ ತಲೆಬುರುಡೆಗೆ ಹಚ್ಚಿ.ಎರಡು ಬೆಳ್ಳುಳ್ಳಿ ಎಸಲುಗಳನ್ನು ಎರಡು ಚಮಚ ಜೇನುತುಪ್ಪ ಮತ್ತು ಆಲಿವ್ ತೈಲದ ಜತೆ ಬೆರೆಸಿಕೊಳ್ಳಿ. ಇದನ್ನು ಬಾಧಿತ ಜಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ ಮತ್ತು 40 ನಿಮಿಷ ಕಾಲ ಹಾಗೆ ಬಿಡಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ದಿನದಲ್ಲಿ ಎರಡು ಸಲ ಹೀಗೆ ಮಾಡಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು. ಬೆಳ್ಳುಳ್ಳಿ ಮತ್ತು ಜೇನುತುಪ್ಪದಲ್ಲಿ ಶಿಲೀಂಧ್ರ ವಿರೋಧಿ ಗುಣಗಳು ಹೆಚ್ಚಾಗಿದೆ. ಇದು ಸೋಂಕನ್ನು ಬೇಗನೆ ನಿವಾರಿಸುವುದು.

ಅಲೋವೆರಾ

ಅಲೋವೆರಾ

ತಲೆಬುರುಡೆಯಲ್ಲಿ ತುರಿಕಚ್ಚಿ ಆಗಿರುವ ಭಾಗಕ್ಕೆ ಅಲೋವೆರಾ ಗಿಡದ ತಾಜಾ ಲೋಳೆಯನ್ನು ಹಚ್ಚಿಕೊಳ್ಳಿ. 20-30 ನಿಮಿಷ ಬಳಿಕ ಬಿಸಿ ನೀರಿನಿಂದ ತೊಳೆಯಿರಿ. ದಿನದಲ್ಲಿ ಎರಡು ಸಲ ಹೀಗೆ ಮಾಡಿ.

ಅರಿಶಿನ

ಅರಿಶಿನ

ಹಾಲಿಗೆ ಅರಶಿನ ಹಾಕಿ ಅದನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ತಲೆಯಲ್ಲಿ ತುರಿಕಚ್ಚಿ ಇರುವ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತಲೆಬುರುಡೆ ತೊಳೆಯಿರಿ. ಹಾಲು ಬೇಡವೆಂದಾದರೆ ನೀರು ಹಾಕಿ ಪೇಸ್ಟ್ ಮಾಡಿ.

ಮೈರ್ಹ್ ಮತ್ತು ಗೋಲ್ಡನ್ ಸೀಲ್

ಮೈರ್ಹ್ ಮತ್ತು ಗೋಲ್ಡನ್ ಸೀಲ್

ಒಂದು ಚಮಚ ಗೋಲ್ಟನ್ ಸೀಲ್ ಮತ್ತು ಅರ್ಧ ಚಮಚ ಮೈರ್ಹ್ ನ ಹುಡಿಯನ್ನು ಕುದಿಯುವ ನೀರಿಗೆ ಹಾಕಿಕೊಳ್ಳಿ. ಈ ನೀರು ತಣ್ಣಗಾದ ಬಳಿಕ ಅದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ.

ನೀವು ಪಾಲಿಸಬೇಕಾದ ಮುಂಜಾಗೃತೆಗಳು

ನೀವು ಪಾಲಿಸಬೇಕಾದ ಮುಂಜಾಗೃತೆಗಳು

*ಟವೆಲ್, ಬಾಚಣಿಗೆ, ಬಟ್ಟೆ, ಹೆಲ್ಮೆಟ್ ಅಥವಾ ಟೋಪಿ ಹಂಚಿಕೊಳ್ಳಬೇಡಿ.

* ಕೂದಲು ಕತ್ತರಿಸಿಕೊಂಡು ಬಂದ ಬಳಿಕ ಸ್ನಾನ ಮಾಡಿ.

ಮಕ್ಕಳಲ್ಲಿ ತುರಿಕಚ್ಚಿ ಕಡಿಮೆಯಾಗಲು ಕಡಿಮೆಯೆಂದರೂ ಒಂದು ತಿಂಗಳು ಬೇಕಾಗುವುದು. ಚಿಕಿತ್ಸೆಯನ್ನು ತುಂಬಾ ತಾಳ್ಮೆಯಿಂದ ಮಾಡಿ ಮತ್ತು ಕಡಿಮೆಯಾಗದೆ ಇದ್ದರೆ ವೈದ್ಯರನ್ನು ಭೇಟಿಯಾಗಿ.

English summary

Home Remedies To Treat Ringworm Of The Scalp

Ringworm is a contagious fungal infection. If not treated, it could spread from one part of the skin to other areas. Mostly seen in children, it affects the scalp, feet, groin area, arms, legs, and nails. While the name might suggest a link with a worm, it’s not. It’s named “ringworm” because the infection makes a strong ring-like shape on the skin. Ringworm of the scalp is otherwise known as tinea capitis.
X
Desktop Bottom Promotion