For Quick Alerts
ALLOW NOTIFICATIONS  
For Daily Alerts

ಬೆಳಿಗ್ಗೆ ಎದ್ದು ನಿಂಬೆರಸದ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯಿರಿ

By Hemanth
|

ತೂಕ ಇಳಿಸುವ ದೃಷ್ಟಿಯಿಂದ ಮತ್ತು ಬೊಜ್ಜು ಕರಗಿಸುವ ಸಲುವಾಗಿ ಇಂದಿನ ದಿನಗಳಲ್ಲಿ ಲಿಂಬೆನೀರಿಗೆ ಜೇನುತುಪ್ಪ ಹಾಕಿಕೊಂಡು ಕುಡಿಯವುದು ಒಂದು ಟ್ರೆಂಡ್ ಆಗಿಬಿಟ್ಟಿದೆ. ದಿನದ ಆರಂಭದಲ್ಲಿ ಖಾಲಿ ಹೊಟ್ಟೆಯಲ್ಲಿ ಇದರ ಸೇವನೆ ಮಾಡಿದರೆ ಅದರಿಂದ ದೇಹದಲ್ಲಿನ ವಿಷಕಾರಿ ಅಂಶವು ಹೊರಹಾಕಲು ನೆರವಾಗುವುದು. ಲಿಂಬೆನೀರು ಮತ್ತು ಜೇನುತುಪ್ಪ ಬೆರೆಸಿ ಕುಡಿದರೆ ಅದರಿಂದ ಕೇವಲ ಬೊಜ್ಜು ಕರಗಿಸಲು ಮಾತ್ರ ಸಾಧ್ಯವೆಂದು ಹೆಚ್ಚಿನವರು ಭಾವಿಸಿದ್ದಾರೆ.

honey and lemon water

ಆದರೆ ಅವರ ಭಾವನೆ ಸರಿಯಲ್ಲ. ಇದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳೂ ನಮ್ಮ ದೇಹಕ್ಕೆ ಸಿಗುವುದು. ನೀವು ಕಲ್ಪನೆಯು ಮಾಡದಷ್ಟು ಲಾಭಗಳು ದೇಹಕ್ಕೆ ಸಿಗುವುದು. ಹಾಗಾದರೆ ಇನ್ನು ತಡವೇಕೇ? ಈ ಲೇಖನ ಓದುತ್ತಾ ಲಿಂಬೆನೀರು ಮತ್ತು ಜೇನುತುಪ್ಪದ ಲಾಭ ತಿಳಿಯಲು ತಯಾರಾಗಿ.....

ಜೀರ್ಣಕ್ರಿಯೆ ಸುಧಾರಣೆ

ಜೀರ್ಣಕ್ರಿಯೆ ಸುಧಾರಣೆ

ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿರುವಿರಾದರೆ ನೀವು ಲಿಂಬೆರಸ ಮತ್ತು ಜೇನುತುಪ್ಪದ ಮಿಶ್ರಣ ಕುಡಿಯಲೇಬೇಕು. ಇದನ್ನು ಕುಡಿಯುವುದರಿಂದ ಹೊಟ್ಟೆಯ ಆಮ್ಲ ಮತ್ತು ಪಿತ್ತರಸ ಸ್ರವಿಸುವಿಕೆ ಹೆಚ್ಚಾಗುವುದು. ಇದರಿಂದ ದೇಹವು ತುಂಬಾ ಸುಲಭವಾಗಿ ಪೋಷಕಾಂಶಗಳನ್ನು ಹೀರಿಕೊಳ್ಳಬಹುದು. ಲಿಂಬೆ ಮತ್ತು ಜೇನುತುಪ್ಪದ ನೀರನ್ನು ಸೇವನೆ ಮಾಡುವುದುರಿಂದ ಕರುಳಿನ ಕ್ರಿಯೆಯೆಗಳು ಸುಧಾರಣೆಯಾಗುವುದು ಮತ್ತು ಹೊಟ್ಟೆಯಲ್ಲಿ ಉಬ್ಬರ ಹಾಗೂ ಕಿರಿಕಿರಿಯಾಗುವ ಸಮಸ್ಯೆಯು ನಿವಾರಣೆಯಾಗುವುದು.

ದೇಹವನ್ನು ನಿರ್ವಿಷಗೊಳಿಸುವುದು

ದೇಹವನ್ನು ನಿರ್ವಿಷಗೊಳಿಸುವುದು

ಮೊಡವೆ, ಬೊಕ್ಕೆ ಮತ್ತು ಮಲಬದ್ಧತೆ ಸಮಸ್ಯೆಯಿಂದ ಪರಿಹಾರ ಬೇಕಾದರೆ ಲಿಂಬೆರಸ ಮತ್ತು ಜೇನುತುಪ್ಪ ಹಾಕಿದ ನೀರು ಒಳ್ಳೆಯ ಪರಿಣಾಮ. ಶ್ವಾಸಕೋಶ, ಚರ್ಮ ಮತ್ತು ಯಕೃತ್ ನಲ್ಲಿ ಜಮೆಯಾಗಿರುವಂತಹ ವಿಷಕಾರಿ ಅಂಶಗಳನ್ನು ಇದು ತೆಗೆದುಹಾಕುವುದು. ಮಾಲಿನ್ಯ ಮತ್ತು ಹಾನಿಕಾರಕ ರಾಸಾಯನಿಕಗಳು ವಿಷಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದ ಲಿಂಭೆರಸ ಮತ್ತು ಜೇನುತುಪ್ಪವು ಯಕೃತ್ ಗೆ ಒಳ್ಳೆಯ ಬಲವರ್ಧಕವಾಗಿರುವುದು. ಇದು ವಿಷವನ್ನು ತಟಸ್ಥಗೊಳಿಸಿ, ದೇಹವನ್ನು ನಿರ್ವಿಷಗೊಳಿಸುವುದು.

ಚರ್ಮ ಶುದ್ಧೀಕರಿಸುವುದು

ಚರ್ಮ ಶುದ್ಧೀಕರಿಸುವುದು

ಬೊಕ್ಕೆ ಮತ್ತು ಮೊಡವೆಗಳು ಇಲ್ಲದೆ ಇರುವಂತಹ ಚರ್ಮ ಪಡೆಯಲು ಲಿಂಬೆನೀರು ಮತ್ತು ಜೇನುತುಪ್ಪ ಒಳ್ಳೆಯ ಪರಿಹಾರ. ಬೆಳಗ್ಗೆ ಬಿಸಿ ನೀರಿನೊಂದಿಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಪ್ರತಿನಿತ್ಯ ಸೇವನೆ ಮಾಡಿ ಮತ್ತು ಚರ್ಮವು ನೈಸರ್ಗಿಕ ಕಾಂತಿ ಪಡೆಯುವುದು. ಹೆಚ್ಚುವರಿ ಎಣ್ಣೆಯನ್ನು ನಿಯಂತ್ರಿಸುವ ಮತ್ತು ಅದನ್ನು ಚರ್ಮದ ಮೇಲ್ಭಾಗದಿಂದ ತೆಗೆಯುವಂತಹ ಗುಣವು ಲಿಂಬೆಯಲ್ಲಿದೆ. ಇದರಲ್ಲಿ ಇರುವಂತಹ ಸಿಟ್ರಿಕ್ ಆಮ್ಲವು, ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಇರುವಂತಹ ಫ್ರೀ ರ್ಯಾಡಿಕಲ್ ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕುವುದು.

ಪ್ರತಿರೋಧಕ ಶಕ್ತಿ ಹೆಚ್ಚಳ

ಪ್ರತಿರೋಧಕ ಶಕ್ತಿ ಹೆಚ್ಚಳ

ಲಿಂಬೆನೀರು ಮತ್ತು ಜೇನುತುಪ್ಪ ಸೇವನೆ ಮಾಡಿದರೆ ಅದರಿಂದ ಪ್ರತಿರೋಧಕ ಶಕ್ತಿ ಹೆಚ್ಚಾಗುವುದು ಮತ್ತು ಹವಾಮಾನ ಬದಲಾವಣೆಗಳಿಂದ ಬರುವಂತಹ ಕೆಲವೊಂದು ಕಾಯಿಲೆಗಳನ್ನು ಇದು ತಡೆಯುವುದು. ಜೇನುತುಪ್ಪದಲ್ಲಿ ಚಿಕಿತ್ಸಕ ಪ್ರೋಟೀನ್, ಸೂಕ್ಷ್ಮಾಣು ವಿರೋಧಿ, ಆ್ಯಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರುವ ಕಾರಣದಿಂದಾಗಿ ಇದು ಸಾಮಾನ್ಯ ಚಳಿಜ್ವರ ಕಡಿಮೆ ಮಾಡುವುದು.

ಚಯಾಪಚಯ ಸುಧಾರಣೆ

ಚಯಾಪಚಯ ಸುಧಾರಣೆ

ಜೇನುತುಪ್ಪ ಮತ್ತು ಲಿಂಬೆಯು ದೇಹದ ಚಯಾಪಚಯವನ್ನು ಸುಧಾರಣೆ ಮಾಡಿಕೊಂಡು ಹೊಟ್ಟೆಯ ಕ್ರಿಯೆಗಳನ್ನು ನಿಯಂತ್ರಿಸುವುದು. ಪ್ರತಿನಿತ್ಯ ಬೆಳಗ್ಗೆ ಈ ನೀರು ಕುಡಿಯುವುದರಿಂದ ಕೊಬ್ಬು ಕರಗುವುದು ಮಾತ್ರವಲ್ಲದೆ ನೀವು ತುಂಬಾ ಆರೋಗ್ಯ ಮತ್ತು ಚಟುವಟಿಕೆಯಿಂದ ಇರಬಹುದು.

ಗಂಟಲು ನೋವಿಗೆ ಒಳ್ಳೆಯ ಮದ್ದು

ಗಂಟಲು ನೋವಿಗೆ ಒಳ್ಳೆಯ ಮದ್ದು

ಗಂಟಲು ನೋವಿನ ಸೋಂಕನ್ನು ಸಿಟ್ರಸ್ ಹೆಚ್ಚು ಮಾಡುತ್ತದೆ ಎನ್ನುವ ಸುಳ್ಳು ವಾದವಿದೆ. ಆದರೆ ವಾಸ್ತವದಲ್ಲಿ ಇದು ಅದರ ತದ್ವಿರುದ್ಧವಾಗಿದೆ. ಲಿಂಬೆಯಿಂದ ಕಫವು ತೆಳುವಾಗುವುದು. ಇದಿಂದ ಶ್ವಾಸಕೋಶದ ವ್ಯವಸ್ಥೆಯಿಂದ ಇದು ಹೊರಹೋಗಲು ಸುಲಭವಾಗುವುದು.

ಶಕ್ತಿ ಹೆಚ್ಚಿಸುವುದು

ಶಕ್ತಿ ಹೆಚ್ಚಿಸುವುದು

ಜೇನುತುಪ್ಪವು ನೈಸರ್ಗಿಕ ಶಕ್ತಿವರ್ಧಕವಾಗಿದೆ ಮತ್ತು ಸಕ್ಕರೆ ಸೇವನೆಗಿಂತ ಇದು ತುಂಬಾ ಆರೋಗ್ಯಕಾರಿ. ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ಕೊಲ್ಲುವ ಗುಣಗಳು ದೇಹದ ಶಕ್ತಿ ಹೆಚ್ಚಿಸಿ, ಚುರುಕಾಗಿಡುವುದು.

ಜೇನುತುಪ್ಪ ಲಿಂಬೆ ಪಾನೀಯ ತಯಾರಿ ಹೇಗೆ?

ಜೇನುತುಪ್ಪ ಲಿಂಬೆ ಪಾನೀಯ ತಯಾರಿ ಹೇಗೆ?

ಒಂದು ಕಪ್ ಬಿಸಿ ನೀರಿಗೆ ಅರ್ಧದಷ್ಟು ತಾಜಾ ಲಿಂಬೆರಸ ಹಿಂಡಿ ಮತ್ತು ಒಂದು ಚಮಚ ಜೇನುತುಪ್ಪ ಇದಕ್ಕೆ ಬೆರೆಸಿಕೊಳ್ಳಿ. ಬೆಳಗ್ಗೆ ಪ್ರತಿನಿತ್ಯ ಇದರ ಸೇವನೆ ಮಾಡಿ. ನೀವು ತಂಪಾದ ನೀರಿಗೆ ಇದನ್ನು ಹಾಕಿಕೊಂಡು ಕುಡಿದರೆ ಆಗ ಬೇಸಗೆಯಲ್ಲಿ ಇದು ದೇಹಕ್ಕೆ ಮತ್ತಷ್ಟು ಚೈತನ್ಯ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಪಾನೀಯವು ಮಕ್ಕಳಿಗೆ ಕೂಡ ತುಂಬಾ ಒಳ್ಳೆಯದು. ಇದರಿಂದ ಖಾಲಿ ಹೊಟ್ಟೆಯಲ್ಲಿ ಇದರ ಸೇವನೆ ಮಾಡಿ. ಇದು ಚಯಾಪಚಯ ಕ್ರಿಯೆ ಹೆಚ್ಚಿಸಿ, ಜಮೆಯಾಗಿರುವ ಕೊಬ್ಬು ಕಡಿಮೆ ಮಾಡುವುದು ಮತ್ತು ಹೊಟ್ಟೆಯ ಕ್ರಿಯೆಗಳನ್ನು ನಿಯಂತ್ರಿಸುವುದು. ಬೆಳಗ್ಗೆ ಇದರ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಜೀರ್ಣಕ್ರಿಯೆ ಹೆಚ್ಚಿಸಿಕೊಳ್ಳಲು ಎರಡು ಊಟದ ಮಧ್ಯೆ ಇದನ್ನು ಕುಡಿಯಿರಿ. ಇದು ದೇಹವನ್ನು ನಿರ್ಜಲೀಕರಣದಿಂದ ಕಾಪಾಡುವುದು ಮತ್ತು ಚೈತನ್ಯ ನೀಡುವುದು.

English summary

Here Are 7 Amazing Health Benefits of Honey And Lemon Water

A common trend seen in most individuals is drinking lemon water with honey early in the morning. Well, it is indeed a good way to kick-start your day with a refreshing drink. This beverage helps to detoxify the skin and alkalizes the body. Many individuals believe that this condition of lemon water with honey is only beneficial for weight loss. But alas! You all have limited information. The health effects of this water go beyond your imagination. Here are some of the best benefits of honey and lemon water.
X
Desktop Bottom Promotion