ನಿಯಮಿತವಾಗಿ ಅನಾನಸ್ ಹಣ್ಣು ತಿಂದ್ರೆ ಸಾಕು, ದೇಹದ ತೂಕ ಇಳಿಸಬಹುದು!

Posted By: Hemanth
Subscribe to Boldsky

ದೇಹದ ತೂಕ ಹೆಚ್ಚಾಗಿದ್ದರೂ ಚಿಂತೆ. ಅದು ಕಡಿಮೆಯಿದ್ದರೂ ಚಿಂತೆಗೆ ಕಾರಣ. ಆದರೆ ದೇಹದ ತೂಕ ಸಮತೋಲನದಲ್ಲಿದ್ದರೆ ಆಗ ಆರೋಗ್ಯ ಕೂಡ ಚೆನ್ನಾಗಿದೆ ಎಂದು ತಿಳಿದುಕೊಳ್ಳಬಹುದು. ಅತಿಯಾದ ತೂಕ ಮತ್ತು ಅತೀ ಕಡಿಮೆ ತೂಕವು ಯಾವುದೋ ಸಮಸ್ಯೆಯ ಕಾರಣದಿಂದ ಆಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸ್ಲಿಮ್ ಆಗುವಂತಹ ಪರಿಪಾಠವು ಮುಂದುವರಿದಿದೆ. ಸ್ಲಿಮ್ ಅಂದರೆ ದೇಹವನ್ನು ಫಿಟ್ ಹಾಗೂ ಆರೋಗ್ಯವಾಗಿಡುವುದು. ಆಹಾರ ಸಹಿತ ಪ್ರತಿಯೊಂದರಲ್ಲೂ ಕಲ್ಮಷ ತುಂಬಿರುವಂತಹ ದಿನಗಳಲ್ಲಿ ಹೀಗೆ ದೇಹವನ್ನು ಫಿಟ್ ಹಾಗೂ ಆರೋಗ್ಯವಾಗಿಟ್ಟುಕೊಳ್ಳುವುದು ಅತೀ ಅಗತ್ಯ.

ಅದರಲ್ಲೂ ನೀವು ಆಹಾರ ಪಥ್ಯ ಮಾಡುವಂತಹ ಸಂದರ್ಭದಲ್ಲಿ ಕೆಲವು ಹಣ್ಣುಗಳನ್ನು ತಿಂದರೆ ಅದರಿಂದ ದೇಹದ ತೂಕ ಕಡಿಮೆ ಮಾಡಲು ಸಹಕಾರಿ. ಇಂತಹ ಒಂದು ಹಣ್ಣೆಂದರೆ ಅದು ಅನಾನಸು. ಅನಾನಸಿನಲ್ಲಿ ನಾರಿನಾಂಶವು ಹೆಚ್ಚಿದ್ದು, ಕ್ಯಾಲರಿ ಕಡಿಮೆಯಿದೆ. ಅನಾನಸಿನಲ್ಲಿ ಇರುವಂತಹ ಹಲವಾರು ರೀತಿಯ ವಿಟಮಿನ್, ಖನಿಜಾಂಶಗಳು ಹಾಗು ಕಿಣ್ವಗಳಿಂದಾಗಿ ಅದು ದೇಹದ ಕೊಬ್ಬು ಕರಗಿಸುವುದು ಎಂದು ಅಧ್ಯಯನಗಳು ಹೇಳಿವೆ.

ಹುಳಿ ಮಿಶ್ರಿತ ಸಿಹಿಯಾದ ಅನಾನಸ್‌ ಜ್ಯೂಸ್‌‌ನ‌ ಮಹತ್ವ ಅರಿಯಿರಿ!

ಅನಾನಸಿನಲ್ಲಿ ಬ್ರೊಮೆಲಿನ್ ಇದೆ

ಅನಾನಸಿನಲ್ಲಿ ಬ್ರೊಮೆಲಿನ್ ಇದೆ

ಬ್ರೊಮೆಲಿನ ಪ್ರೋಟೀನ್ ವಿಭಜಕ ಕಿಣ್ವವಾಗಿದ್ದು, ಇದು ಪ್ರೋಟೀನ್ ನ್ನು ವಿಘಟಿಸುವುದು. ಇದು ಅನಾನಸಿನ ತಿರುಳು ಮತ್ತು ರಸದಲ್ಲಿದೆ. ಬ್ರೊಮೆಲಿನ್ ನ್ನು ಜೀರ್ಣಕ್ರಿಯೆಗೆ ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಸರಿಯಾದ ಜೀರ್ಣಕ್ರಿಯೆ ವ್ಯವಸ್ಥೆಯು ನಿಮ್ಮ ಆರೋಗ್ಯವನ್ನು ಹಲವಾರು ರೀತಿಯಿಂದ ಸುಧಾರಿಸುವುದು.

ವಿಟಮಿನ್ ಸಿ

ವಿಟಮಿನ್ ಸಿ

ವಿಟಮಿನ್ ಸಿ ಮತ್ತು ಕೊಬ್ಬಿನ ಚಯಾಪಚಯದ ಮಧ್ಯೆ ಗಾಢವಾದ ಸಂಬಂಧವಿದೆ ಎಂದು ಅಧ್ಯಯನಗಳು ಹೇಳಿವೆ. ವಿಟಮಿನ್ ಸಿ ಯು ಕಾರ್ನಿಟೈನ್ ಸಂಶ್ಲೇಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಕಾರ್ನಿಟೈನ್ ಒಂದು ಅಮಿನೋ ಆಮ್ಲವಾಗಿದ್ದು, ಇದು ಕೊಬ್ಬಿನಾಮ್ಲವನ್ನು ಸಾಗಿಸುವಲ್ಲಿ ಪಾತ್ರ ನಿರ್ವಹಿಸುವುದು.

ಕ್ಯಾಲರಿ

ಕ್ಯಾಲರಿ

ಅನಾನಸು ವಿಟಮಿನ್, ನಾರಿನಾಂಶ ಮತ್ತು ಖನಿಜಾಂಶವನ್ನು ಒದಗಿಸುವುದು. ಒಂದು ಕಪ್ ಅನಾನಸಿನಲ್ಲಿ 83 ಕ್ಯಾಲರಿ ಇದೆ. ಸಂಸ್ಕರಿಸಿದ ಅನಾನಸಿನಲ್ಲಿ 79 ಕ್ಯಾಲರಿ ಇರುವುದು. ಡಬ್ಬದಲ್ಲಿರುವ ಅನಾನಸಿಗೆ ಹೆಚ್ಚು ಸಕ್ಕರೆ ಅಂಶ ಹಾಕಿರುವ ಕಾರಣ ತಾಜಾ ಸೇವನೆ ಮಾಡಿ.

ಶಕ್ತಿ ಸಾಂದ್ರತೆ

ಶಕ್ತಿ ಸಾಂದ್ರತೆ

ಈ ಹಣ್ಣಿನಲ್ಲಿ ಶಕ್ತಿ ಸಾಂದ್ರತೆಯು ತುಂಬಾ ಕಡಿಮೆ ಇರುವ ಕಾರಣದಿಂದಾಗಿ ತೂಕ ಕಳೆದುಕೊಳ್ಳಲು ಪರಿಣಾಮಕಾರಿ. ಇದರಲ್ಲಿ ಶಕ್ತಿ ಸಾಂದ್ರತೆ ಕಡಿಮೆ ಮತ್ತು ನಾರಿನಾಂಶವು ಹೆಚ್ಚಾಗಿದೆ. ಇದರಿಂದ ಹೊಟ್ಟೆಯು ದೀರ್ಘ ಕಾಲದ ತನಕ ತುಂಬಿರುವಂತೆ ಆಗುವುದು. ಕಡಿಮೆ ಕೊಬ್ಬು ಇರುವ ಮೊಸರಿಗೆ ಅನಾನಸು ಹಾಕಿಕೊಳ್ಳಿ ಮತ್ತು ಅದನ್ನು ಸೇವಿಸಿ. ರಾತ್ರಿಯ ಊಟಕ್ಕೆ ಅನಾನಸಿನ ಸಾಲ್ಸ ಮಾಡಬಹುದು.

ಅನಾನಸಿನ ಲಾಭಗಳು

ಅನಾನಸಿನ ಲಾಭಗಳು

ಅನಾನಸಿನಲ್ಲಿ ನಾರಿನಾಂಶವು ಹೆಚ್ಚಾಗಿದ್ದು, ಇದು ಹೊಟ್ಟೆಗೆ ಒಳ್ಳೆಯದು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಸಾಮಾನ್ಯವಾಗುವುದ ಮತ್ತು ಇದರಿಂದ ಹಸಿವು ಕಡಿಮೆಯಾಗುವುದು. ಹೀಗೆ ತೂಕ ಕಡಿಮೆ ಮಾಡಬಹುದು ಎಂದು ಹಾವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಹೇಳಿದೆ.

ಅನಾನಸು ಜ್ಯೂಸ್ ಕುಡಿಯಿರಿ

ಅನಾನಸು ಜ್ಯೂಸ್ ಕುಡಿಯಿರಿ

ಅನಾನಸು ಜ್ಯೂಸ್ ನಲ್ಲಿ ಸರಳ ಸಕ್ಕರೆ, ಗ್ಲೂಕೋಸ್ ಮತ್ತು ಫ್ರುಕ್ಟೋಸ್ ಇದೆ. ಫ್ರುಕ್ಟೋಸ್ ತೂಕ ಹೆಚ್ಚಳಕ್ಕೆ ನೆರವಾಗುವುದು. ಇದರಿಂದ ಹೆಚ್ಚು ಜ್ಯೂಸ್ ಕುಡಿದರೆ ಅದರಿಂದ ವ್ಯತಿರಿಕ್ತ ಪರಿಣಾಮ ಬೀರಬಹುದು. ಇದರಿಂದಾಗಿ ನೀವು ಹೆಚ್ಚು ಕ್ಯಾಲರಿ ಸೇವಿಸುವಂತೆ ಆಗಬಹುದು. ಜ್ಯೂಸ್ ಕುಡಿಯುವ ಬದಲು ಹಣ್ಣನ್ನು ಸೇವಿಸಿದರೆ ಒಳ್ಳೆಯದು.

ಗರ್ಭಿಣಿಯರೇ ನೆನಪಿಡಿ, ಅಪ್ಪಿ ತಪ್ಪಿಯೂ ಅನಾನಸ್ ಹಣ್ಣು ಸೇವಿಸಬೇಡಿ...

Read more about: health wellness
English summary

Does Eating Pineapple Make You Lose Weight

Eating Pineapple Make You Lose WeightBut, eating the right kind of foods during your weight loss plan is important. One of them is pineapple, as it will help you achieve your weight loss goal. You must be thinking how are pineapples good for weight loss? Pineapples contain high amounts of fibre and are low in calories, which can make you lose weight.Some studies show that pineapple may aid in reducing body fat.