Latest Updates
-
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ!
ಒಂದೆರಡು ದಿನಗಳಲ್ಲಿಯೇ 'ಮಲಬದ್ಧತೆ' ಸಮಸ್ಯೆ ಕಡಿಮೆ ಮಾಡುವ ಆಹಾರಗಳು
ಕೆಲವರು ಶೌಚಾಯಲಕ್ಕೆ ಹೋಗಿ ಅಲ್ಲಿ ಗಂಟೆಗಟ್ಟಲೆ ಒದ್ದಾಡುತ್ತಾರೆ. ಮಲ ವಿಸರ್ಜನೆ ಸರಿಯಾಗಿ ಆಗದೆ ಇರುವುದೇ ಇದಕ್ಕೆ ಪ್ರಮುಖ ಕಾರಣ. ಇಂತಹ ಸಮಸ್ಯೆ ಇಂದಿನ ಜೀವನಶೈಲಿಯಿಂದಾಗಿ ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುವುದು. ನೀವು ಕೂಡ ಒಂದು ದಿನ ಈ ಸಮಸ್ಯೆಗೀಡಾಗಿರಬಹುದು. ಆದರೆ ಕೆಲವರಿಗೆ ಇದು ಪ್ರತಿನಿತ್ಯದ ಸಮಸ್ಯೆಯಾಗಿದೆ. ಮಲವು ಗಟ್ಟಿಯಾದಾಗ ಅದನ್ನು ಹೊರಹಾಕಲು ಕಷ್ಟಪಡುವುದೇ ಮಲಬದ್ಧತೆ.

ನಿರ್ಜಲೀಕರಣ, ಕೆಟ್ಟ ಆಹಾರ ಕ್ರಮ, ಅಸಿಡಿಟಿ, ಅಜೀರ್ಣ, ಚಟುವಟಿಕೆಯಿಲ್ಲದ ಜೀವನಶೈಲಿ, ಒತ್ತಡ, ಕೆಲವು ಔಷಧಿಗಳು, ಕರುಳಿನ ಕ್ಯಾನ್ಸರ್, ಪೈಲ್ಸ್ ಇತ್ಯಾದಿಗಳು ಮಲಬದ್ಧತೆಗೆ ಕಾರಣಗಳು. ಮಲವಿಸರ್ಜನೆಗೆ ಕಷ್ಟಪಡುವುದು, ಹೊಟ್ಟೆನೋವು, ಹೊಟ್ಟೆ ಉಬ್ಬರ, ಗುದನಾಳದಲ್ಲಿ ನೋವು, ವಾಕರಿಕೆ, ವಾಂತಿ ಇತ್ಯಾದಿಗಳು ಮಲಬದ್ಧತೆ ಲಕ್ಷಣಗಳು. ಕೆಲವರು ವಿರೇಚಕ ತೆಗೆದುಕೊಂಡು ಇದರಿಂದ ಪರಿಹಾರ ಪಡೆಯಲು ಬಯಸುವರು. ಆದರೆ ಇದು ಕರುಳಿನ ಮೇಲೆ ಅಡ್ಡಪರಿಣಾಮ ಬೀರಬಹುದು. ಇದರಿಂದ ನೀವು ನೈಸರ್ಗಿಕವಾಗಿ ಮಲಬದ್ಧತೆ ನಿವಾರಣೆ ಮಾಡುವುದು ಹೇಗೆ ಎಂದು ತಿಳಿಯಿರಿ.

1. ಕಲ್ಲಂಗಡಿ
ಕಲ್ಲಂಗಡಿ ಹಣ್ಣು ಎಂದರೆ ಯಾರಿಗೆ ಇಷ್ಟವಿಲ್ಲಾ ಹೇಳಿ? ಬೇಸಿಗೆಯ ಬಿಸಿಗೆ ಸ್ವಲ್ಪ ತಂಪಾದ ಅನುಭವವನ್ನು ನೀಡುವ ಹಣ್ಣು ಇದು. ಇದನ್ನು ಕೇವಲ ಬೇಸಿಗೆ ಸಮಯದಲ್ಲಷ್ಟೇ ಅಲ್ಲಾ ಎಲ್ಲಾ ಕಾಲದಲ್ಲಿ ಲಭ್ಯವಿದ್ದರೂ ಜನರು ಬಹಳ ಪ್ರೀತಿಯಿಂದ ಸೇವಿಸುತ್ತಾರೆ. ಸಮೃದ್ಧವಾದ ನೀರಿನಂಶ ಹಾಗೂ ಉತ್ತಮ ರುಚಿಯಿಂದ ಕೂಡಿರುವ ಈ ಹಣ್ಣನ್ನು ತೂಕ ಇಳಿಸುವ ಉದ್ದೇಶಕ್ಕೂ ಸಹ ಸೇವಿಸಬಹುದು. ಅತಿಯಾದ ತೂಕ ಹೊಂದಿದವರು ಕೆಲವು ದಿನಗಳ ಕಾಲ ಕಲ್ಲಂಗಡಿಯನ್ನು ಗಣನೀಯವಾಗಿ ಸೇವಿಸಿದರೆ ಬಹುಬೇಗ ತೂಕ ಇಳಿಸಬಹುದು, ಅಲ್ಲದೆ ಮಲಬದ್ಧತೆ ಹೊಂದಿದ್ದವರಿಗೂ ಒಳ್ಳೆಯದು... ಹಾಗಾಗಿ ಮಲಬದ್ಧತೆ ನಿವಾರಣೆ ಮಾಡಲು ಕಲ್ಲಂಗಡಿ ಪ್ರಮುಖ ಆಹಾರ. ಇದರಲ್ಲಿ ಉನ್ನತ ಮಟ್ಟದ ನಾರಿಣಾಂಶ ಮತ್ತು ನೀರಿನಾಂಶವಿದೆ. ಇದು ಕರುಳಿನ ಕ್ರಿಯೆ ಸರಾಗಗೊಳಿಸುವುದು.

2. ಓಟ್ ಮೀಲ್
ಬಿಳಿ ತೋಕೆ ಗೋಧಿಯಿಂದ ಮಾಡುವಂತಹ ಓಟ್ ಮೀಲ್ ಇಡೀ ಧಾನ್ಯವಾಗಿದ್ದು, ಇದರಲ್ಲಿ ಹೊಟ್ಟು ಹಾಗೂ ಮೊಳಕೆಯನ್ನು ಹಾಗೆ ಉಳಿಸಿಕೊಳ್ಳಲಾಗುತ್ತದೆ. ಈ ಕಾರಣದಿಂದಾಗಿ ಓಟ್ ಮೀಲ್ ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದೆ. ಓಟ್ ಮೀಲ್ ನಲ್ಲಿ ಹಲವಾರು ಆರೋಗ್ಯಕರ ಅನುಕೂಲಗಳಿದ್ದು, ಇದು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ, ಹೃದಯದ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆ ಸಮಸ್ಯೆಯನ್ನೂ ನಿಯಂತ್ರಿಸುತ್ತದೆ. ಹಾಗಾಗಿ, ಬೆಳಗ್ಗಿನ ಉಪಾಹಾರಕ್ಕೆ ಒಂದು ಪಿಂಗಾಣಿಯಷ್ಟು ಓಟ್ ಮೀಲ್ ಸೇವನೆ ಮಾಡಿ. ಇದರಲ್ಲಿರುವ ನಾರಿನಾಂಶವು ಮಲವನ್ನು ಮೆತ್ತಗೆ ಮಾಡುವುದು.

3. ಸ್ಟ್ರಾಬೆರಿ
ಸ್ಟ್ರಾಬೆರಿಯಲ್ಲಿ ಅಧಿಕ ಪ್ರಮಾಣದ ರೋಗನಿರೋಧಕ ಶಕ್ತಿಯನ್ನು ಒಳಗೊಂಡಿರುತ್ತವೆ. ಪ್ರೋಟೀನ್ ವಿಟಮಿನ್ ಭರಿತವಾಗಿರುವ ಇವುಗಳು ಕೊಬ್ಬನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರುಚಿಯಲ್ಲಿ ಅಷ್ಟೇನೂ ಸಿಹಿಯಾಗಿಲ್ಲದ ಹುಳಿ ಮಿಶ್ರಿತ ಹಣ್ಣು ಸ್ಟ್ರಾಬೆರಿ ಅತ್ಯಧಿಕ ಪೋಷಕಾಂಶವನ್ನು ಸಮ್ಮಿಳಿತಕೊಂಡಿದೆ. ಅದರಲ್ಲೂ ಮಲಬದ್ಧತೆಗೆ ನೈಸರ್ಗಿಕ ಪರಿಹಾರವೆಂದರೆ ಸ್ಟ್ರಾಬೆರಿ. ಇದರಲ್ಲಿರುವ ಪೆಕ್ಟಿನ್ ಎನ್ನುವ ಅಂಶವು ಕರುಳಿನಲ್ಲಿ ಲೋಳೆ ಹೆಚ್ಚಿಸಿ, ಮಲ ಸರಾಗವಾಗಿ ಸಾಗಲು ನೆರವಾಗುವುದು.

4. ಹಸಿರೆಲೆ ತರಕಾರಿಗಳು
ಸಾತ್ವಿಕ ಆಹಾರವೆಂದು ಕರೆಯಲಾಗುವ ತರಕಾರಿಗಳು ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಮಾಂಸಹಾರಿಗಳಿಗಿಂತ ಸಸ್ಯಾಹಾರಿಗಳು ಹೆಚ್ಚು ಆರೋಗ್ಯವಾಗಿದ್ದಾರೆ ಎಂದರೆ ತಪ್ಪಾಗಲಾರದು. ತರಕಾರಿ ಹಾಗೂ ಹಸಿರೆಲೆ ತರಕಾರಿಗಳಲ್ಲಿ ಇರುವಂತಹ ಹಲವಾರು ರೀತಿಯ ವಿಟಮಿನ್ ಹಾಗೂ ಪೋಷಕಾಂಶಗಳು ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಸಿರೆಲೆ ತರಕಾರಿಗಳಲ್ಲಿ ನಾರಿನಾಂಶವು ಅಧಿಕವಾಗಿರುವುದು. ಇದರಿಂದ ಮಲಬದ್ಧತೆ ಸಮಸ್ಯೆಯನ್ನು ತುಂಬಾ ಕಡಿಮೆ ಮಾಡಬಹುದು.

5. ಒಣದ್ರಾಕ್ಷಿ
ಒಣದ್ರಾಕ್ಷಿ ಎಂದರೆ ನಾವೆಲ್ಲರೂ ಸಿಹಿತಿಂಡಿಯ ಸೊಗಡು ಹೆಚ್ಚಿಸುವ ಪದಾರ್ಥವೆಂದೇ ಪರಿಗಣಿಸಿದ್ದೇವೆ. ಆದರೆ ಒಣದ್ರಾಕ್ಷಿಯನ್ನು ನೆನೆಸಿಟ್ಟ ನೀರು ಮಾತ್ರ ಆರೋಗ್ಯಕ್ಕೆ ತುಂಬಾ ಉತ್ತಮ. ಅದರಲ್ಲೂ ವಿಶೇಷವಾಗಿ ಒಣದ್ರಾಕ್ಷಿಯು ಮಲಬದ್ಧತೆ ಸಮಸ್ಯೆ ಕಡಿಮೆ ಮಾಡುವ ಪ್ರಮುಖ ಆಹಾರವಾಗಿದೆ. ಇದರಲ್ಲಿ ಮಲ ಮೆತ್ತಗೆ ಮಾಡುವ ನಾರಿನಾಂಶ ಹಾಗೂ ಮೆಗ್ನಿಶಿಯಂ ಇದೆ.

6. ಮೊಸರು
ನಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ವೈದ್ಯರೂ ಜೀರ್ಣ ಸಮಸ್ಯೆ ಇರುವ ರೋಗಿಗಳಿಗೆ ಮೊಸರನ್ನೇ ಆಹಾರವನ್ನಾಗಿ ಸ್ವೀಕರಿಸಲು ಸಲಹೆ ಮಾಡುತ್ತಾರೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಊಟದ ಕೊನೆಯಲ್ಲಿ ಮೊಸರು ಇಲ್ಲವಾದಲ್ಲಿ ಊಟ ಎಂಬುದು ಯಾವತ್ತಿಗೂ ಪರಿಪೂರ್ಣವಾಗುವುದಿಲ್ಲ. ಒಂದು ಒಳ್ಳೆಯ ಊಟಕ್ಕೆ ಉಪಸಂಹಾರ ಆಡುವುದೇ ಮೊಸರು. ಊಟದ ಕೊನೆಯಲ್ಲಿ ನೀವು ಸೇವಿಸುವ ಮೊಸರನ್ನವು ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಮೊಸರು ನೈಸರ್ಗಿಕ ವಿರೇಚಕವಾಗಿದ್ದು, ಇದು ಆರೋಗ್ಯಕರ ಬ್ಯಾಕ್ಟೀರಿಯಾ ಬೆಳವಣಿಗೆಗೆ ನೆರವಾಗಿ, ಮಲಬದ್ಧತೆ ಕಡಿಮೆ ಮಾಡುವುದು.

7. ಅಗಸೆ ಬೀಜಗಳು(ಫ್ಲ್ಯಾಕ್ಸ್ ಸೀಡ್ಸ್)
ಫ್ಲಾಕ್ಸ್ ಬೀಜಗಳು ಅಥವಾ ಅಗಸೆ ಬೀಜಗಳು ನಮ್ಮ ಆರೋಗ್ಯಕ್ಕೆ ಅತ್ಯಂತ ಉಪಯೋಗಕಾರಿಯಾದ ಬೀಜಗಳು ಆಗಿರುತ್ತವೆ. ಇದನ್ನು ಪ್ರಾಚೀನ ಕಾಲದಿಂದಲೂ ಸಹ ಬಳಸಿಕೊಂಡು ಬರಲಾಗುತ್ತಿದೆ. ಪ್ರಾಚೀನ ಪ್ರಾಚ್ಯ ವಸ್ತುಗಳ ಉತ್ಪನ್ನಗಳಲ್ಲಿ ಕಂಡು ಬಂದ ಅಂಶಗಳ ಪ್ರಕಾರ ಇದನ್ನು ಮೊದಲು ಈಜಿಪ್ಟ್‌ನಲ್ಲಿ ನೆಫೆರೆಟಿಗಳು ಇದ್ದ ಕಾಲದಲ್ಲಿ ಬಳಸಲು ಆರಂಭಿಸಿದರಂತೆ.ಇದನ್ನು ಇದರಲ್ಲಿರುವ ಸ್ವಾಭಾವಿಕ ನಾರಿನಂಶಕ್ಕಾಗಿ ಬೆಳೆಯಲು ಆರಂಭಿಸಿದರಂತೆ. ಇದು ಭಾರತದಲ್ಲಿ ವಿಶೇಷವಾಗಿ ಹಳ್ಳಿಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಒಮೆಗಾ-3 ಕೊಬ್ಬಿನಾಮ್ಲವು ಅಧಿಕವಾಗಿರುವಂತಹ ಅಗಸೆ ಬೀಜವು ಮಲಬದ್ಧತೆಗೆ ನೈಸರ್ಗಿಕ ಪರಿಹಾರವಾಗಿದೆ.

8. ಸೇಬು
"ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುವುದು" ಈ ವಾಕ್ಯವನ್ನು ಚಿಕ್ಕಂದಿನಿಂದಲೂ ಕೇಳುತ್ತಲೇ ಬಂದಿದ್ದೇವೆ. ಬೇರೆಲ್ಲಾ ಹಣ್ಣುಗಳಿಗಿಂತ ಸೇಬಿನಲ್ಲಿರುವ ಪೋಷಕಾಂಶಗಳ ಆಗರವೇ ಇದಕ್ಕೆ ಕಾರಣ. ಪ್ರತಿದಿನ ಸೇಬು ಹಣ್ಣೊಂದನ್ನು ತಿನ್ನುವ ಮೂಲಕ ದೇಹಕ್ಕೆ ಅಗತ್ಯವಾದ ಪ್ರಮಾಣದ ಪ್ರೋಟೀನುಗಳು, ವಿಟಮಿನ್ ಗಳು, ಆಂಟಿ ಆಕ್ಸಿಡೆಂಟುಗಳು ಹಾಗೂ ಮುಖ್ಯವಾಗಿ ವಿಟಮಿನ್ ಸಿ ಲಭ್ಯವಿರುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಂಡು ಬರುವ ಕಾರಣ ಸೇಬಿಗೆ ವೈದ್ಯರನ್ನು ದೂರ ಅಟ್ಟಿದ ಅತಿಶಯೋಕ್ತಿ ಲಭ್ಯವಾಗಿದೆ. ಅದರಲ್ಲೂ ಮಲಬದ್ಧತೆ ನಿವಾರಣೆ ಮಾಡುವಲ್ಲಿಯೂ ಸೇಬು ಹಣ್ಣು ಪ್ರಮುಖ ಆಹಾರ. ಇದರಲ್ಲಿ ನಾರಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದ್ದು, ಕರುಳಿನ ಕ್ರಿಯೆಗೆ ಸಹಕಾರಿಯಾಗಿದೆ.

9. ಹೂಗೋಸು
ಹೂಗೋಸಿನಲ್ಲಿ ಹೀರಿಕೊಳ್ಳುವ ನಾರಿನಾಂಶವು ಅಧಿಕವಾಗಿರುವ ಕಾರಣ ಇದು ಮಲಬದ್ಧತೆಗೆ ಒಳ್ಳೆಯ ಆಹಾರವಾಗಿದೆ. ಇದು ಮಲವನ್ನು ಮೆತ್ತಗೆ ಮಾಡುವುದು ಮತ್ತು ಕರುಳಿನ ಕ್ರಿಯೆ ಸರಾಗವಾಗಿಸುವುದು.

10. ಕಿತ್ತಳೆ
ಕಿತ್ತಳೆ ಹಣ್ಣುಗಳು ಕಡಿಮೆ ಪ್ರಮಾಣದಲ್ಲಿ ಕ್ಯಾಲರಿಗಳನ್ನು ಹೊ೦ದಿರುತ್ತವೆ ಆದರೆ, ಇವುಗಳಲ್ಲಿ ಭರಪೂರ ಪ್ರಮಾಣದಲ್ಲಿ ಪೋಷಕಾ೦ಶಗಳಿರುತ್ತವೆ. ವಿಟಮಿನ್ ಸಿ ಇರುವ ಕಿತ್ತಳೆಯು ಮಲಬದ್ಧತೆ ನಿವಾರಣೆ ಮಾಡಲು, ಇದರ ನೋವು ಮತ್ತು ಹೊಟ್ಟೆ ಉಬ್ಬರ ಕೂಡ ಕಡಿಮೆ ಮಾಡುವುದು.

11. ಸಿಹಿ ಗೆಣಸು
ಸಿಹಿಗೆಣಸು ತಿನ್ನುವುದರಿಂದ ಕೊಬ್ಬು ಬರುತ್ತದೆಯೇ? ಇದು ಆರೋಗ್ಯಕ್ಕೆ ಒಳ್ಳೆಯದೇ? ಇಂತಹ ಪ್ರಶ್ನೆಗಳು ಸಿಹಿಗೆಣಸನ್ನು ಕಂಡಾಗ ಮನದಲ್ಲಿ ಮೂಡಬಹುದು. ವಾಸ್ತವವಾಗಿ ಸಿಹಿಗೆಣಸಿನಲ್ಲಿ ಹೆಚ್ಚಿನ ಹಾಗೂ ಪ್ರಬಲ ಪೋಷಕಾಂಶಗಳಿದ್ದು ಆರೋಗ್ಯವನ್ನು ವೃದ್ಧಿಸುತ್ತದೆ. ವಿಶೇಷವಾಗಿ ಇದರಲ್ಲಿರುವ ವಿಟಮಿನ್ ಎ ಹಾಗೂ ಕರಗುವ ನಾರುಗಳಲ್ಲಿ ಅಪಾರ ಪ್ರಯೋಜನಗಳಿವೆ. ಅಲ್ಲದೆ ಸಿಹಿ ಗೆಣಸು ಕೂಡ ನೈಸರ್ಗಿಕ ವಿರೇಚಕವಾಗಿದೆ. ಇದರಲ್ಲಿ ನಾರಿನಾಂಶ, ನೀರು ಮತ್ತು ಮೆಗ್ನಿಶಿಯಂ ಉತ್ತಮವಾಗಿದೆ.

12. ಕುಂಬಳಕಾಯಿ
ಕುಂಬಳಕಾಯಿ ಕೂಡ ಮಲಬದ್ಧತೆ ನಿವಾರಣೆ ಮಾಡುವುದು. ಇದರಲ್ಲಿ ವಿದ್ಯುದ್ವಿಚ್ಛೇದ ಮತ್ತು ನಾರಿನಾಂಶವು ಅಧಿಕವಾಗಿದೆ. ಇದು ಕರುಳಿನ ಕ್ರಿಯೆಗೆ ನೆರವಾಗುವುದು.

13. ದಿನನಿತ್ಯ ಗಂಜಿ ಊಟ ಮಾಡಿರಿ
ಗಂಜಿಯಲ್ಲಿರುವ ಪಿಷ್ಟದಲ್ಲಿ ನಮ್ಮ ಜೀರ್ಣಕ್ರಿಯೆಗೆ ನೆರವಾಗುವ ಬ್ಯಾಕ್ಟೀರಿಯಾಗಳು ಇರುವ ಕಾರಣ ಜೀರ್ಣಕ್ರಿಯೆ ಆರಾಮವಾಗಿ ನಡೆಯುತ್ತದೆ. ಅಲ್ಲದೇ ಉತ್ತಮ ಪ್ರಮಾಣದ ಕರಗಿದ ನಾರು ಇರುವುದರಿಂದ ಆಹಾರ ಸುಲಭವಾಗಿ ಚಲಿಸಲು ಮತ್ತು ವಿಸರ್ಜನೆ ಸುಲಭವಾಗಲು ನೆರವಾಗುತ್ತದೆ.



Click it and Unblock the Notifications











