Latest Updates
-
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹುಳಿ ಸಿಹಿ ಮಿಶ್ರಿತ 'ಕಿತ್ತಳೆ-ಹಣ್ಣಿನ' ಆರೋಗ್ಯಕಾರಿ ಪ್ರಯೋಜನಗಳು
ಪ್ರಕೃತಿ ಮಾತೆಯು ನಮಗೆ ನೀಡಿರುವಂತಹ ಪ್ರತಿಯೊಂದು ಹಣ್ಣು ಹಾಗೂ ತರಕಾರಿ ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಲಾಭಕಾರಿ. ಕೆಲವೊಂದು ಹಣ್ಣುಗಳು ಹಾಗೂ ತರಕಾರಿಗಳಲ್ಲಿ ಹೆಚ್ಚಿನ ಪೋಷಕಾಂಶಗಳು ಹಾಗೂ ಆರೋಗ್ಯ ಲಾಭಗಳು ಇವೆ. ಹೆಚ್ಚಿನವರು ಇಷ್ಟಪಡುವಂತಹ ಕಿತ್ತಳೆ ಹಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ.

ಕಿತ್ತಳೆಯು ಕಣ್ಣುಗಳನ್ನು ರಕ್ಷಿಸುವುದು, ದೃಷ್ಟಿ ಸುಧಾರಿಸುವುದು, ಲೈಂಗಿಕ ಸಾಮರ್ಥ್ಯ ವೃದ್ಧಿಸುವುದು, ಮಲಬದ್ಧತೆ ತಡೆಯುವುದು, ಪ್ರತಿರೋಧಕ ವ್ಯವಸ್ಥೆ ಬಲಪಡಿಸುವುದು, ಮನಸ್ಥಿತಿ ಸುಧಾರಿಸುವುದು, ಹಲ್ಲಿನ ಆರೋಗ್ಯ ಉತ್ತಮಪಡಿಸುವುದು, ರಕ್ತದೊತ್ತಡ ನಿಯಂತ್ರಿಸುವುದು, ಚರ್ಮದ ಕಾಂತಿ ಸುಧಾರಿಸುವುದು, ಕ್ಯಾನ್ಸರ್ ಗಡ್ಡೆಗಳು ಬೆಳೆಯದಂತೆ ತಡೆಯುವುದು, ಆಹಾರ ಜೀರ್ಣಿಸಲು ಮತ್ತು ಹೃದಯವನ್ನು ರಕ್ಷಿಸುವುದು. ಈ ಲೇಖನದಲ್ಲಿ ಕಿತ್ತಳೆಯಿಂದ ಆಗುವ ಇನ್ನಷ್ಟು ಲಾಭಗಳ ಬಗ್ಗೆ ತಿಳಿಯಿರಿ.

ಲೈಂಗಿಕ ಸಾಮರ್ಥ್ಯ ಹೆಚ್ಚಿಸುವುದು
ಕಿತ್ತಳೆಯಲ್ಲಿ ಲಘುವಾದ ಕಾಮೋತ್ತೇಜಕ ಗುಣಗಳು ಇವೆ. ಪುರುಷರು ಹಾಗೂ ಮಹಿಳೆಯರಲ್ಲಿ ಇದು ಲೈಂಗಿಕ ಪ್ರದರ್ಶನ ಉತ್ತಮಪಡಿಸುವುದು. ಇದನ್ನು ನಿಯಮಿತವಾಗಿ ಬಳಸಿದರೆ ಆಗ ಲೈಂಗಿಕ ಸಮಸ್ಯೆಗಳಾಗಿರುವ ನಿಮಿರು ದೌರ್ಬಲ್ಯ ಮತ್ತು ಕಾಮಾಸಕ್ತಿ ಕುಂದುವುದನ್ನು ತಡೆಯಬಹುದು. ಸೆಕ್ಸ್ ಹಾರ್ಮೋನುಗಳ ಸ್ರವಿಸುವಿಕೆಯನ್ನು ಕಿತ್ತಳೆಯು ಹೆಚ್ಚಿಸುವುದು ಮತ್ತು ಲೈಂಗಿಕ ಆಸಕ್ತಿ, ನಿಮಿರುವಿಕೆ ಸಾಮರ್ಥ್ಯ ಹೆಚ್ಚಿಸಿ, ಲೈಂಗಿಕ ಜೀವನ ಉತ್ತಮಪಡಿಸುವುದು.

ಕಣ್ಣುಗಳ ರಕ್ಷಣೆ ಮತ್ತು ದೃಷ್ಟಿ ಸುಧಾರಣೆ
ವಿಟಮಿನ್ ಎ ಅಧಿಕವಾಗಿರುವಂತಹ ಆಹಾರ ಸೇವನೆ ಮಾಡಿದರೆ ಕಣ್ಣುಗಳ ಆರೋಗ್ಯ ಕಾಪಾಡಬಹುದು. ಕಿತ್ತಳೆಯಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದರೊಂದಿಗೆ ಇನ್ನಿತರ ಕೆಲವು ಬಯೊಫ್ಲಾವನಾಯ್ಡ್ ಗಳು ಅಕ್ಷಿಪಟಲದ ಅವನತಿ, ಕಣ್ಣಿನ ಪೊರೆ ಮತ್ತು ದೃಷ್ಟಿ ಮಂದವಾಗುವುದನ್ನು ತಡೆಯುವುದು. ನಿಮ್ಮ ಆಹಾರ ಕ್ರಮದಲ್ಲಿ ಕಿತ್ತಳೆಯನ್ನು ಸೇರಿಸುವುದರಿಂದ ದೃಷ್ಟಿಯನ್ನು ಸುಧಾರಿಸಬಹುದು ಮತ್ತು ಆರೋಗ್ಯಕರ ಕಣ್ಣುಗಳನ್ನು ಕಾಪಾಡಬಹುದು.

ಮಲಬದ್ಧತೆ ತಡೆಯುವುದು
ಕರುಳಿನ ಚಲನೆಯು ಅನಿಯಮಿತವಾಗಿದ್ದಾಗ ಮತ್ತು ಸರಿಯಾಗಿ ನೀರು ಸೇವನೆ ಮಾಡದೆ ಮಲವು ಗಟ್ಟಿಯಾದಾಗ ಮಲಬದ್ಧತೆ ಕಾಣಿಸಿಕೊಳ್ಳುವುದು. ಕಿತ್ತಳೆಯಲ್ಲಿ ಇರುವಂತಹ ನಾರಿನಾಂಶವು ಮಲಬದ್ಧತೆ ತಡೆಯುವುದು ಮತ್ತು ಅದರಿಂದ ಆರಾಮ ನೀಡುವುದು. ಮಲಬದ್ಧತೆ ತಡೆಯಲು ನೀರು ಕೂಡ ಅತೀ ಅಗತ್ಯ. ಕಿತ್ತಳೆಯಲ್ಲಿ ಹೆಚ್ಚಿನ ಮಟ್ಟದ ನೀರಿನಾಂಶವಿದೆ. ಇದರಿಂದ ಮಲವು ಸರಾಗವಾಗಿ ಸಾಗಲು ನೆರವಾಗುವುದು.

ಮನಸ್ಥಿತಿ ಸುಧಾರಣೆ
ಕಿತ್ತಳೆಯು ಮನಸ್ಥಿತಿ ಸುಧಾರಣೆ ಮಾಡಿಕೊಂಡು ಖಿನ್ನತೆಯನ್ನು ಕಡಿಮೆ ಮಾಡುವುದು. ಇದರಲ್ಲಿರುವಂತಹ ಸಿಟ್ರಸ್ ಸುವಾಸನೆಯು ಆತಂಕ ತಗ್ಗಿಸುವುದು ಮತ್ತು ಆರಾಮ ಒದಗಿಸುವುದು. ಸಿಟ್ರಸ್ ಸುವಾಸನೆಯಲ್ಲಿ ಫ್ಲಾವನಾಯ್ಡ್ ಗಳಿವೆ. ಇದು ಒತ್ತಡ ಕಡಿಮೆ ಮಾಡಿ, ಮನಸ್ಥಿತಿ ಸುಧಾರಿಸುವುದು. ಕಿತ್ತಳೆಯನ್ನು ಯಾವಾಗಲೂ ಒತ್ತಡ ನಿವಾರಿಸಲು ಬಳಸಲಾಗುತ್ತದೆ. ಇದು ದೇಹದಲ್ಲಿ ಕಾರ್ಟಿಸೊಲ್ ನ್ನು ಕಡಿಮೆ ಮಾಡುವುದು ಮತ್ತು ಲೈಂಗಿಕ ಕ್ರಿಯೆ ವೃದ್ಧಿಸುವುದು(ಆರೋಗ್ಯಕರ ಟೆಸ್ಟೊಸ್ಟೆರಾನ್ ಮಟ್ಟ ಸುಧಾರಿಸುವುದು)

ರಕ್ತದೊತ್ತಡ ನಿಯಂತ್ರಿಸುವುದು
ಕಿತ್ತಳೆಯಲ್ಲಿ ಇರುವಂತಹ ಪೊಟಾಶಿಯಂ ಅಂಶವು ರಕ್ತನಾಳಗಳನ್ನು ಸಡಿಲಗೊಳಿಸುವ ಕಾರಣದಿಂದಾಗಿ ರಕ್ತದೊತ್ತಡ ನಿಯಂತ್ರಿಸಲು ನೆರವಾಗುವುದು. ಬಯೋಫ್ಲಾವನಾಯ್ಡ್ ಗಳು ರಕ್ತನಾಳಗಳ ಸ್ಥಿತಿಸ್ಥಾಪಕತ್ವ ಸುಧಾರಣೆ ಮಾಡುವುದು. ಪೊಟಾಶಿಯಂ ನೀರಿನ ಸಮತೋಲನದ ಮೇಲೆ ಪ್ರಭಾವ ಬೀರುವುದು. ಇದು ಸೋಡಿಯಂನಿಂದಾಗಿ ನೀರು ನಿಲ್ಲುವುದನ್ನು ತಡೆಯುವುದು. ಕಿತ್ತಳೆಯು ಕಿಡ್ನಿಯ ಕಾರ್ಯವನ್ನು ಸುಗಮಗೊಳಿಸುವುದು. ಕಿಡ್ನಿಯಲ್ಲಿ ಕಲ್ಲುಗಳು ಆಗದಂತೆ ಇದು ತಡೆಯುವುದು. ಕಿಡ್ನಿಯು ರಕ್ತದೊತ್ತಡ ನಿಯಂತ್ರಿಸಲು ನೆರವಾಗುವುದು.

ಆಹಾರ ಜೀರ್ಣಿಸಲು ನೆರವಾಗುವುದು
ಹೊಟ್ಟೆಯಲ್ಲಿ ಅತಿಯಾಗಿರುವಂತಹ ಆಮ್ಲೀಯತೆ ಮತ್ತು ಕರುಳಿನ ಕಾಯಿಲೆಯ ಪರಿಣಾಮದಿಂದಾಗಿ ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಕೆಲವೊಂದು ಸಮಸ್ಯೆಗಳು ಕಾಣಿಸುವುದು. ಕಿತ್ತಳೆಯು ಜೀರ್ಣಕ್ರಿಯೆ ರಸದ ಸ್ರವಿಸುವಿಕೆಯನ್ನು ಉತ್ತೇಜಿಸಿ, ಜೀರ್ಣಕ್ರಿಯೆ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡಲು ನೆರವಾಗುವುದು. ಹೊಟ್ಟೆಯ ಅಸಿಡಿಟಿ ಕಡಿಮೆ ಮಾಡಿ, ಜಠರದುರಿ ತಡೆಯುವುದು.

ಹೃದಯದ ರಕ್ಷಣೆ
ಅತಿಯಾದ ಕೊಲೆಸ್ಟ್ರಾಲ್ ಮತ್ತು ಕೊಬ್ಬಿನಾಮ್ಲಗಳಿಂದಾಗಿ ರಕ್ತದ ಹರಿವನ್ನು ತಡೆದಾಗ ಪ್ರಮುಖ ಅಂಗಾಂಗಗಳು ಮತ್ತು ಕೋಶಗಳಿಗೆ ಬೇಕಾಗಿರುವಂತಹ ಪೋಷಕಾಂಶ ಹಾಗೂ ಆಮ್ಲಜನಕವು ಸರಬರಾಜು ಆಗುವುದಿಲ್ಲ. ಇದರಿಂದ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಯಮಿತವಾಗಿ ಕಿತ್ತಳೆ ಸೇವನೆ ಮಾಡಿದರೆ ಅದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಹೃದಯವನ್ನು ಕಾಪಾಡುವುದು. ಕಿತ್ತಳೆಯಲ್ಲಿ ಹೀರಿಕೊಳ್ಳುವ ನಾರಿನಾಂಶವಿರುವ ಕಾರಣದಿಂದಾಗಿ ಇದು ರಕ್ತದಲ್ಲಿರುವ ಕೊಬ್ಬನ್ನು ತೆಗೆಯುವುದು.

ಅಸ್ತಮಾ ನಿಯಂತ್ರಿಸಲು ಸಹಕಾರಿ
ಕಿತ್ತಳೆಯು ಅಸ್ತಮಾದ ಲಕ್ಷಣಗಳನ್ನು ಕಡಿಮೆ ಮಾಡಲು ನೆರವಾಗುವುದು ಎಂದು ಅಧ್ಯಯನಗಳು ಕಂಡುಕೊಂಡಾಗ ದೊಡ್ಡ ಮಟ್ಟದ ಕ್ರಾಂತಿಯಾಗಿತ್ತು. ಕಿತ್ತಳೆಯಲ್ಲಿರುವ ಬಯೋ ಫ್ಲಾವನಾಯ್ಡ್ ಗಳು ಇದಕ್ಕೆ ಕಾರಣವಾಗಿದೆ. ಈ ಸಂಯುಕ್ತವು ಅಸ್ತಮಾಗೆ ಕಾರಣವಾಗುವ ಅಂಶವನ್ನು ತಡೆಯುವುದು. ನಿಯಮಿತವಾಗಿ ಕಿತ್ತಳೆ ಸೇವನೆ ಮಾಡಿದರೆ ಅದರಿಂದ ಅಸ್ತಮಾದ ದಾಳಿಯನ್ನು ಕಡಿಮೆ ಮಾಡಬಹುದು. ಇದು ಹೆಚ್ಚಿನ ಜನರಲ್ಲಿ ಅಸ್ತಮಾವನ್ನು ಕಡಿಮೆ ಮಾಡಿದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.



Click it and Unblock the Notifications