ಸಾಂಪ್ರದಾಯಿಕ ಅಡುಗೆ ರೊಟ್ಟಿ-ದಾಲ್‍ನ ವಿಶೇಷ ಗುಣಗಳು

By: Divya
Subscribe to Boldsky

ಆಧುನಿಕತೆ ಬೆಳೆದಂತೆ ನಮ್ಮ ಆಹಾರ ಶೈಲಿಯಲ್ಲೂ ಅನೇಕ ಬದಲಾವಣೆಗಳು ಉಂಟಾಗುತ್ತಿವೆ. ಒತ್ತಡದ ಬದುಕಿನಲ್ಲಿ ಹೆಚ್ಚಿನ ಜನರು ಕಾರ್ಖಾನೆಯಲ್ಲಿ ತಯಾರಿಸುವ ಸಂಸ್ಕರಿತ ಆಹಾರ ಪದಾರ್ಥಗಳ ಮೊರೆ ಹೋಗುತ್ತಾರೆ.

ಹೀಗಾಗಿಯೇ ಇಂದು ಅನೇಕರು ಬೊಜ್ಜಿನಿಂದ ಬಳಲುತ್ತಿದ್ದಾರೆ. ಬೊಜ್ಜಿನ ಸಮಸ್ಯೆಯಿಂದ ಪಾರಾಗಲು ಆಹಾರ ಉತ್ಪನ್ನದಲ್ಲಿ ಕೊಬ್ಬು ಮುಕ್ತ, ಅಂಟು ಮುಕ್ತ ಮತ್ತು ಸಕ್ಕರೆ ಮುಕ್ತ ಗುಣಗಳಿವೆಯೇ ಎಂದು ಅರಸುತ್ತಾರೆ.

ಸಂಸ್ಕರಿತ ಆಹಾರ ಪದಾರ್ಥಗಳಲ್ಲಿ ಅದೆಷ್ಟೇ ಪೋಷಕಾಂಶಗಳ ಪ್ರಮಾಣ ಪಟ್ಟಿಯ ಹೆಸರಿದ್ದರೂ ಅದು ಗುಣ ಮಟ್ಟದ ಆರೋಗ್ಯ ನೀಡದು. ಮನೆಯಲ್ಲಿ ತಯಾರಿಸುವ ಸಾಂಪ್ರದಾಯಿಕ ಅಡುಗೆ ಹಾಗೂ ತಾಜಾ ಹಣ್ಣು, ತರಕಾರಿಗಳು ಮಾತ್ರ ಆರೋಗ್ಯ ವೃದ್ಧಿಸುವಲ್ಲಿ ಸಹಾಯ ಮಾಡುವವು.   

 ಇದನ್ನೂ ಓದಿ-  ಸರಳ ತಯಾರಿಕೆಯ ಹರಿಕಾರ ರುಚಿಕರವಾದ ದಾಲ್ ಫ್ರೈ

ಕಡಿಮೆ ಸಮಯದಲ್ಲಿ ತಯಾರಿಸಬಲ್ಲ ಮತ್ತು ಹೆಚ್ಚು ಪೋಷಕಾಂಶ ಹೊಂದಿರುವ ಆಹಾರ ಪದಾರ್ಥವೆಂದರೆ ರೊಟ್ಟಿ ಮತ್ತು ದಾಲ್. ಈ ಸಾಂಪ್ರದಾಯಿಕ ಅಡುಗೆಯ ಸೇವನೆಯಿಂದ ಯಾವೆಲ್ಲಾ ಅನುಕೂಲವನ್ನು ಪಡೆಯಬಹುದು ಎಂಬುದನ್ನು ಇಲ್ಲಿ ತಿಳಿಯೋಣ...

ಕಾರಣ-1

ಕಾರಣ-1

ದಾಲ್ ಮತ್ತು ರೊಟ್ಟಿಯ ಹೊಂದಾಣಿಕೆಯಿಂದ ಆರೋಗ್ಯಕ್ಕೆ ಬೇಕಾದ ಸಮೃದ್ಧವಾದ ನಾರಿನಂಶವು ದೊರೆಯುತ್ತದೆ. ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಹೆಚ್ಚಿಸಿ, ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಣದಲ್ಲಿರುವಂತೆ ಮಾಡುತ್ತದೆ.

ಕಾರಣ-2

ಕಾರಣ-2

ಬೇಳೆ ಕಾಳುಗಳಲ್ಲಿ ಅತಿಹೆಚ್ಚು ಪ್ರೋಟೀನ್, ಫೈಬರ್, ಖನಿಜಗಳು, ವಿಟಮಿನ್ ಬಿ1 ಗಳು ಇರುತ್ತವೆ.

ಇದನ್ನೂ ಓದಿ- ಚಪಾತಿ ಜೊತೆ ಸವಿಯಲು ದಾಲ್ ರೆಸಿಪಿ

ಕಾರಣ-3

ಕಾರಣ-3

ಇವು ಕಬ್ಬಿಣ ಮತ್ತು ಪೊಟ್ಯಾಸಿಯಮ್‍ ಅನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತವೆ. ಇದರಿಂದ ಸ್ತನ ಕ್ಯಾನ್ಸರ್ ಸೇರಿದಂತೆ ಅನೇಕ ಕ್ಯಾನ್ಸರ್ ತೊಂದರೆಗಳನ್ನು ತಡೆಗಟ್ಟುವಲ್ಲಿ ಸಹಕಾರಿ.

ಕಾರಣ-4

ಕಾರಣ-4

ಅಕ್ಕಿ ಮತ್ತು ಬೇಳೆಯನ್ನು ಒಟ್ಟಾಗಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಅಮೈನೋ ಆಮ್ಲವನ್ನು ಹೊಂದಬಹುದು.

ಕಾರಣ-5

ಕಾರಣ-5

ಕೆಂಪು ಅಕ್ಕಿಯು ಕೂಡ ಸೆಲೆನಿಯಮ್, ಮ್ಯಾಂಗನೀಸ್, ತಾಮ್ರ, ಫಾಸ್ಫರಸ್ ಮತ್ತು ಮೆಗ್ನೀಸಿಯಮ್‍ಗಳಿಂದ ಸಮೃದ್ಧವಾಗಿದೆ. ಅಲ್ಲದೆ ಬೇಳೆಗಳು (ಮಸೂರಗಳು) ತಾಮ್ರ, ರಂಜಕ, ಕಬ್ಬಿಣ ಮತ್ತು ಮ್ಯಾಂಗನೀಸ್‍ಅನ್ನು ನೀಡುತ್ತದೆ.

ಕಾರಣ-6

ಕಾರಣ-6

ಸಬ್ಜಿ (ಪಲ್ಯ)ಯ ಬಗ್ಗೆ ಮಾತನಾಡುವುದಾದರೆ ರೊಟ್ಟಿಯ ಜೊತೆಗೆ ಬೆಂಡೆಕಾಯಿ, ಎಲೆಕೋಸು, ಹೂಕೋಸು, ಬದನೆಕಾಯಿಯಂತಹ ತರಕಾರಿಯನ್ನು ಬಳಸಿ ಸೇವಿಸುವುದಾಗಿದೆ. ಇವು ಹೆಚ್ಚು ಪೋಷಕಾಂಶಗಳನ್ನು ನೀಡುತ್ತವೆ.

ಕಾರಣ-7

ಕಾರಣ-7

ಅರಿಶಿನ ಮತ್ತು ಬೆಳ್ಳುಳ್ಳಿಯಂತಹ ಮಸಾಲೆ ಪದಾರ್ಥವನ್ನು ಪಾಕವಿಧಾನದಲ್ಲಿ ಸೇರಿಸುತ್ತಾರೆ. ಇವು ಸೂಕ್ಷ್ಮ ಜೀವಿಗಳ ವಿರೋಧಿಗಳಾಗಿರುವುದರಿಂದ ದೇಹಕ್ಕೆ ಆರೋಗ್ಯಕರ ಅಂಶವನ್ನು ಒದಗಿಸುತ್ತವೆ.

ಕಾರಣ-8

ಕಾರಣ-8

ಜೀರಿಗೆ, ಸಾಸಿವೆ, ಕರಿಬೇವಿನ ಎಲೆ ಮತ್ತು ಮೆಣಸಿನಕಾಯಿಯನ್ನು ಸಹ ದಾಲ್‍ನಲ್ಲಿ ಬಳಸಲಾಗುತ್ತದೆ. ಇವು ಆರೋಗ್ಯ ವೃದ್ಧಿಗೆ ಸಹಕರಿಸುವುದಲ್ಲದೆ ಹೊಟ್ಟೆ ಉಬ್ಬರ, ಅಜೀರ್ಣ ಆಗದಿರುವುದನ್ನು ತಡೆಯುತ್ತದೆ.

ಕಾರಣ-9

ಕಾರಣ-9

ಸ್ಥೂಲಕಾಯದ ಬಗ್ಗೆ ನಿಜವಾಗಲೂ ಚಿಂತೆ ಮಾಡುತ್ತಿದ್ದೀರಿ ಎಂದಾದರೆ ಮೊದಲು ಮಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.

ಕಾರಣ-10

ಕಾರಣ-10

ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಸಾಂಪ್ರದಾಯಿಕ ಆಹಾರ ಪದ್ಧತಿ ಹಾಗೂ ಆಯಾ ಋತುವಿನಲ್ಲಿ ಸಿಗುವ ಹಣ್ಣು-ತರಕಾರಿಗಳನ್ನು ಸೇವಿಸಬೇಕು. ಆಗ ಆರೋಗ್ಯವಂತರಾಗಿರಲು ಸಾಧ್ಯ.

English summary

Why We Need To Get Back To Dal-Rotti To Stay Healthy?

Eating home food and seasonal fruits is far healthier than enjoying fast foods and trying to be health-conscious by buying products which are labeled as fat-free!
Subscribe Newsletter