For Quick Alerts
ALLOW NOTIFICATIONS  
For Daily Alerts

ಬಿಸಿಲಿನ ಝಳಕ್ಕೆ, ತಂಪುಣಿಸುವ ಕೂಲ್ ಕೂಲ್ 'ಕಬ್ಬಿನ ಹಾಲು'

ಕಬ್ಬಿನ ಹಾಲು ಅಥವಾ ಕಬ್ಬಿನ ಜ್ಯೂಸ್ ನೋಡುವಾಗಲೇ ಅದನ್ನು ಕುಡಿಯಬೇಕೆನಿಸುತ್ತದೆ. ಕಬ್ಬಿನ ಜ್ಯೂಸ್ ಗೆ ಸ್ವಲ್ಪ ನಿಂಬೆ ರಸ ಮತ್ತು ಐಸ್ ಹಾಕಿ ಕುಡಿದರೆ ಆಹಾ... ಎಷ್ಟೊಂದು ರುಚಿ...

By Arshad
|

ಬೇಸಿಗೆಯಲ್ಲಿ ದೇಹವು ಬೆವರಿನ ಮೂಲಕ ಹೆಚ್ಚು ನೀರನ್ನು ಕಳೆದುಕೊಳ್ಳುವ ಕಾರಣ ನೀರನ್ನು ಹೆಚ್ಚು ಹೆಚ್ಚಾಗಿ ಕುಡಿಯ ಬೇಕಾಗುತ್ತದೆ. ನೀರಿನ ಬಳಿಕ ಯಾವ ದ್ರವ ಬೇಸಿಗೆಗೆ ಉತ್ತಮ? ಈ ದ್ರವದಲ್ಲಿ ಬೇಸಿಗೆಯಲ್ಲಿ ಬಳಲಿದ್ದ ದೇಹಕ್ಕೆ ಎಲ್ಲಾ ರೀತಿಯ ಪೋಷಣೆ ನೀಡುವ ಪೋಷಕಾಂಶಗಳಿರಬೇಕು. ಹಾಗಿದ್ದರೆ ಈ ಸ್ಥಾನಕ್ಕೆ ಕಬ್ಬಿನ ಹಾಲು ಅಥವಾ ಕಬ್ಬಿನ ಜ್ಯೂಸ್ ಅತ್ಯಂತ ಸೂಕ್ತ. ಬೇಸಿಗೆಯ ಝಳಕ್ಕೆ ತಂಪನ್ನೆರೆಯುವ ಪಾನೀಯಗಳಲ್ಲಿ ಕಬ್ಬಿನ ಹಾಲು ಉನ್ನತ ಸ್ಥಾನದಲ್ಲಿದೆ. ಕಬ್ಬಿನ ಹಾಲಿನ ಫೇಸ್ ಪ್ಯಾಕ್- ಇನ್ನು ಚಿಂತಿಸುವ ಅಗತ್ಯವೇ ಇಲ್ಲ!

ಕಬ್ಬಿನ ಹಾಲು ಕುಡಿಯುವುದರಿಂದ ದೇಹ ತಂಪಗಾಗುವುದರ ಜೊತೆಗೇ ಬೇಸಿಗೆಯಲ್ಲಿ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನೂ ಪಡೆಯುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಚರ್ಮದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಏಳುವುದು, ಕೆಂಪಗಾಗುವುದು, ನೀರಿನ ಕೊರತೆಯಿಂದ ಸುಸ್ತು, ಚರ್ಮದ ಸೋಂಕು ಮೊದಲಾದವು ಎದುರಾಗುತ್ತವೆ. ಈ ದಿನಗಳಲ್ಲಿ ಒಂದು ಲೋಟ ಕಬ್ಬಿನ ಹಾಲು ಕುಡಿದರೆ ಈ ಎಲ್ಲಾ ತೊಂದರೆಗಳು ಇಲ್ಲವಾಗುತ್ತವೆ.

ಬನ್ನಿ, ಬೇಸಿಗೆಯಲ್ಲಿ ಕಬ್ಬಿನ ಹಾಲನ್ನು ಕುಡಿಯುವ ಮೂಲಕ ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎಂದು ನೋಡೋಣ. ಇದರಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿರುವ ಕಾರಣ ಮಧುಮೇಹಿಗಳ ಹೊರತು ಇತರರು ಕುಡಿಯಬಹುದಾಗಿದ್ದು ಇದರ ಪ್ರಯೋಜನಗಳನ್ನು ಅರಿತ ಬಳಿಕ ನಿಮ್ಮ ನೆಚ್ಚಿನ ಪಾನೀಯವಾಗುವುದರಲ್ಲಿ ಸಂದೇಹವೇ ಇಲ್ಲ....

ದೇಹಕ್ಕೆ ಆರ್ದ್ರತೆ ಒದಗಿಸುವುದು

ದೇಹಕ್ಕೆ ಆರ್ದ್ರತೆ ಒದಗಿಸುವುದು

ದೇಹದಲ್ಲಿ ನೀರಿನ ಕೊರತೆಯಾಗುವುದು ಬೇಸಿಗೆಯ ಅತ್ಯಂತ ಕಠಿಣ ಸಮಸ್ಯೆಯಾಗಿದೆ. ಈ ಕೊರತೆಯನ್ನು ನೀಗಿಸಲು ಕಬ್ಬಿನ ಹಾಲು ಅತ್ಯುತ್ತಮವಾಗಿದ್ದು ಸಿಹಿಯಾಗಿಯೂ ಇರುವ ಮೂಲಕ ನಾಲಿಗೆಯ ರುಚಿಯನ್ನೂ ತಣಿಸುತ್ತದೆ. ದೇಹಕ್ಕೆ ಸಾಕಷ್ಟು ನೀರು ದೊರೆತ ಕಾರಣ ಈ ಮೂಲಕ ಎದುರಾಗಬಹುದಾಗಿದ್ದ ಹಲವಾರು ತೊಂದರೆಗಳು ಎದುರಾಗುವುದರಿಂದ ರಕ್ಷಣೆ ಪಡೆಯಬಹುದು.

ಚರ್ಮದ ಆರೋಗ್ಯ ಉತ್ತಮಗೊಳ್ಳುತ್ತದೆ

ಚರ್ಮದ ಆರೋಗ್ಯ ಉತ್ತಮಗೊಳ್ಳುತ್ತದೆ

ಬೇಸಿಗೆಯಲ್ಲಿ ಚರ್ಮದ ತೈಲಗಳು ಸೂಕ್ಷ್ಮರಂಧ್ರಗಳ ಮೂಲಕ ಆವಿಯಾಗಿ ಹೋಗುವ ಕಾರಣದಿಂದಾಗಿ ಚರ್ಮ ಒಣಗುತ್ತದೆ. ಅಲ್ಲದೇ ಒಣಹವೆ ಈ ಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತದೆ. ಕಬ್ಬಿನ ಹಾಲಿನಲ್ಲಿರುವ ಆಲ್ಫಾ ಹೈಡ್ರಾಕ್ಸಿ ಆಕ್ಸೈಡ್ ಅಥವಾ (AHAs) ಗಳು ಚರ್ಮವನ್ನು ಕಾಂತಿಯುಕ್ತ ಮತ್ತು ಆರೋಗ್ಯಕರವಾಗಿರಿಸಲು ನೆರವಾಗುತ್ತವೆ. ಬೇಸಿಗೆಯಲ್ಲಿ ಕಬ್ಬಿನ ಹಾಲು ಕುಡಿಯುವ ಇದು ಅತ್ಯಂತ ಉತ್ತಮ ಉಪಯೋಗವಾಗಿದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಒಂದು ವೇಳೆ ನಿಮಗೆ ಅಜೀರ್ಣದ ತೊಂದರೆ ಇದ್ದರೆ, ವಿಶೇಷವಾಗಿ ಬೇಸಿಗೆಯಲ್ಲಿ ಈ ತೊಂದರೆ ಹೆಚ್ಚಾದರೆ ಕಬ್ಬಿನ ಹಾಲು ನಿಮಗೆ ಅತ್ಯುತ್ತಮವಾದ ಆಯ್ಕೆಯಾಗಿದೆ. ಇದರಲ್ಲಿರುವ ಅಧಿಕ ಪ್ರಮಾಣದ ಪೊಟ್ಯಾಶಿಯಂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೇ ಹೊಟ್ಟೆಯ ಒಳಗೆ ಸೋಂಕು ಉಂಟಾಗದಂತೆ ರಕ್ಷಿಸುತ್ತದೆ ಹಾಗೂ ಹೊಟ್ಟೆಯೊಳಗೆ ಕಿವುಚಿದಂತಾಗುವ peristalsis ಎಂಬ ಸ್ಥಿತಿ ಎದುರಾಗದಂತೆ ತಡೆಯುತ್ತದೆ.

ಮೂತ್ರನಾಳದ ಸೋಂಕಿನಿಂದ ರಕ್ಷಿಸುತ್ತದೆ

ಮೂತ್ರನಾಳದ ಸೋಂಕಿನಿಂದ ರಕ್ಷಿಸುತ್ತದೆ

ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಂತೆಯೇ ಮೂತ್ರ ಗಾಢವಾಗುತ್ತಾ ಹೋಗುತ್ತದೆ. ಇದು ಮೂತ್ರನಾಳ ಮತ್ತು ಮೂತ್ರ ಕೋಶದ ಒಳಗೆ ಸೋಂಕು ಉಂಟಾಗಲು ಕಾರಣವಾಗುತ್ತವೆ. ಕಬ್ಬಿನ ಹಾಲು ಕೊಂಚ ಕ್ಷಾರೀಯವಾಗಿರುವ ಕಾರಣ ಆಮ್ಲೀಯ ಮೂತ್ರವನ್ನು ಸಂತುಲಿತಗೊಳಿಸಿಸಲು ನೆರವಾಗುತ್ತದೆ. ಈ ಮೂಲಕ ಮೂತ್ರನಾಳದಲ್ಲಿ ಉರಿ, ಸೋಂಕು ಮೊದಲಾದ ತೊಂದರೆಗಳಿಂದ ಮುಕ್ತಿ ದೊರಕುತ್ತದೆ.

ಕಾಮಲೆಯನ್ನು ಗುಣಪಡಿಸುತ್ತದೆ

ಕಾಮಲೆಯನ್ನು ಗುಣಪಡಿಸುತ್ತದೆ

ಕಬ್ಬಿನ ಕಾಲು ಕಾಮಲೆ ಇರುವವರೆಗೆ ನೈಸರ್ಗಿಕವಾದ ಔಷಧಿಯಾಗಿದೆ. ಲಿವರ್ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೆ ಈ ಕಾಯಿಲೆ ಬರುತ್ತದೆ. ಕಾಮಲೆ ಬಂದವರು ದಿನಕ್ಕೆ ಎರಡು ಗ್ಲಾಸ್ ಕಬ್ಬಿನ ಜ್ಯೂಸ್ ಕುಡಿದರೆ ಬೇಗನೆ ಗುಣಮುಖವಾಗುವಿರಿ.

ಕಿಡ್ನಿಯಲ್ಲಿ ಕಲ್ಲನ್ನು ಹೋಗಲಾಡಿಸುತ್ತದೆ

ಕಿಡ್ನಿಯಲ್ಲಿ ಕಲ್ಲನ್ನು ಹೋಗಲಾಡಿಸುತ್ತದೆ

ಕಬ್ಬಿನ ಹಾಲಿನ ಅತ್ಯಂತ ಪ್ರಯೋಜನಕಾರಿಯಾದ ಗುಣವೆಂದರೆ ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸುತ್ತದೆ. ಕಿಡ್ನಿಯಲ್ಲಿ ಕಲ್ಲಿದ್ದವರು ಇದನ್ನು ಪ್ರತಿದಿನ ಕುಡಿದರೆ ಆ ಸಮಸ್ಯೆಯಿಂದ ಗುಣಮುಖವಾಗಲು ಸಹಕಾರಿಯಾಗುತ್ತದೆ.

ಸಣ್ಣಪುಟ್ಟ ಕಾಯಿಲೆಗಳಿಗೆ ರಾಮಬಾಣ

ಸಣ್ಣಪುಟ್ಟ ಕಾಯಿಲೆಗಳಿಗೆ ರಾಮಬಾಣ

ಮೂತ್ರ ಉರಿ, ಗುಪ್ತ ಕಾಯಿಲೆಗಳು, ಎದೆ ಉರಿ, ಹೊಟ್ಟೆ ಉರಿ ಈ ರೀತಿಯ ಸಮಸ್ಯೆಗಳ ವಿರುದ್ಧ ಹೋರಾಡಿ ನಿಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿ ಈ ಜ್ಯೂಸ್ ಸಹಕಾರಿಯಾಗಿದೆ.

English summary

Why Sugarcane Juice Is A Must Have This Summer Season

Summer brings in discomforts ranging from minor skin tan to serious dehydration and infections. Something simple like taking a glass of sugarcane juice can keep most of these problems away. So, go through these amazing health benefits of drinking sugarcane juice in summer. Knowing this will definitely make sugarcane juice your favourite drink.
X
Desktop Bottom Promotion