For Quick Alerts
ALLOW NOTIFICATIONS  
For Daily Alerts

  ನಿತ್ಯ ಮೂಲಂಗಿ ಜ್ಯೂಸ್ ಕುಡಿದರೆ, ಯಾವ ಕಾಯಿಲೆಯೂ ಬರುವುದಿಲ್ಲ...

  By Arshad
  |

  ಸಾಮಾನ್ಯವಾಗಿ ನಾವೆಲ್ಲಾ ಕಡೆಗಣಿಸುವ ಮೂಲಂಗಿ ಎಷ್ಟು ಆರೋಗ್ಯಕರ ಗೊತ್ತೇ? ಇದರ ರಸದಲ್ಲಿ ಅದ್ಭುತ ಗುಣಗಳಿವೆ. ತರಕಾರಿಯ ರಸವೆಂದ ತಕ್ಷಣ ನಾವೆಲ್ಲಾ ಕ್ಯಾರೆಟ್, ಬೀಟ್ರೂಟ್ ಮತ್ತು ಇತರ ರಸಭರಿತ ಮತ್ತು ಕೊಂಚ ಸಿಹಿಯಾದ ತರಕಾರಿಗಳನ್ನೇ ಆಯ್ದುಕೊಳ್ಳುತ್ತೇವೆ. ಆದರೆ ಮೂಲಂಗಿ ಸಹಾ ಕಡೆಗಣಿಸಬಾರದ ಇನ್ನೊಂದು ಆರೋಗ್ಯಕರ ತರಕಾರಿಯಾಗಿದೆ.

  ಮೂಲಂಗಿಯ ರಸವನ್ನು ಹಸಿಯಾಗಿಯೇ ಸೇವಿಸುವ ಮೂಲಕ ಇದರ ಪೋಷಕಾಂಶಗಳನ್ನು ಸುಲಭವಾಗಿ ದೇಹ ಪಡೆದುಕೊಳ್ಳುತ್ತದೆ. ಸುಮಾರು ಒಂದು ಲೋಟದಷ್ಟು ರಸದಲ್ಲಿ ಏನೇನಿದೆ? ಇದರಲ್ಲಿದೆ ಮ್ಯಾಂಗನೀಸ್, ತಾಮ್ರ, ಸತು, ಫೋಲೇಟ್, ಕ್ಯಾಲ್ಸಿಯಂ, ಪೊಟ್ಯಾಶಿಯಂ, ವಿಟಮಿನ್ ಎ, ಸಿ, ಬಿ6 ಮೊದಲಾದವು ಹೆಚ್ಚಿನ ಪ್ರಮಾಣದಲ್ಲಿ ಲಭಿಸುತ್ತವೆ.

  ಆದರೆ ಮೂಲಂಗಿಯನ್ನು ಹೇಗೆ ಹಸಿಯಾಗಿ ತಿನ್ನಲು ಇಷ್ಟವಾಗುವುದಿಲ್ಲವೋ ಅಂತೆಯೇ ಇದರ ರಸದ ರುಚಿಯೂ ಹೆಚ್ಚಿನವರಿಗೆ ಹಿಡಿಸುವುದಿಲ್ಲ. ಆದ್ದರಿಂದ ಇದನ್ನು ಕುಡಿಯಲು ಸುಲಭವಾಗಿಸಲು ಸಮಪ್ರಮಾಣದ ಕ್ಯಾರೆಟ್ ಜ್ಯೂಸ್ ನೊಂದಿಗೆ ಅಥವಾ ಕೆಲವು ಹನಿ ಲಿಂಬೆರಸವನ್ನು ಹಿಂಡಿ ಕುಡಿಯುವ ಮೂಲಕ ಇದನ್ನು ರುಚಿಕರವಾಗಿಸಬಹುದು. ಬನ್ನಿ, ಈ ಜ್ಯೂಸ್ ಕುಡಿಯುವ ಪ್ರಯೋಜನಗಳ ಬಗ್ಗೆ ನೋಡೋಣ...

  ಅಂಗಾಂಗ ಶುದ್ಧಕಾರಕ

  ಅಂಗಾಂಗ ಶುದ್ಧಕಾರಕ

  ಮೂಲಂಗಿ ಜ್ಯೂಸ್ ಕುಡಿಯುವ ಮೂಲಕ ನಮ್ಮ ದೇಹದ ಪ್ರಮುಖ ಅಂಗಗಳು ಶುದ್ದೀಕರಣಗೊಳ್ಳುತ್ತವೆ. ವಿಶೇಷವಾಗಿ ಮೂತ್ರಕೋಶ, ಮೂತ್ರಪಿಂಡಗಳು, ಪ್ರಾಸ್ಟೇಟ್ ಗ್ರಂಥಿ ಹಾಗೂ ಜೀರ್ಣಾಂಗಗಳು ಒಳಗಿನಿಂದ ಸ್ವಚ್ಛಗೊಂಡು ಕಲ್ಮಶಗಳು ಹಾಗೂ ವಿಷಕಾರಿ ವಸ್ತುಗಳು ಮತ್ತು ಮುಖ್ಯವಾಗಿ ಹೊಟ್ಟೆಯಲ್ಲಿ ಆಶ್ರಯ ಪಡೆದಿದ್ದ ಪರಾವಲಂಬಿ ಸೂಕ್ಷ್ಮಜೀವಿಗಳು ಹೊರಹಾಕಲ್ಪಡುತ್ತವೆ. ವಿಶೇಷವಾಗಿ ಯಕೃತ್ ಹಾಗೂ ಪಿತ್ತಕೋಶವನ್ನು ಶುದ್ದೀಕರಿಸಲು ಮೂಲಂಗಿ ರಸದ ಸೇವನೆ ಉತ್ತಮವಾಗಿದೆ.

  ಕಿಣ್ವಗಳ ಲಭ್ಯತೆ

  ಕಿಣ್ವಗಳ ಲಭ್ಯತೆ

  ಮೂಲಂಗಿ ರಸದಲ್ಲಿ ಹಲವಾರು ಕಿಣ್ವಗಳಿವೆ. ಇವುಗಳಲ್ಲಿ ಪ್ರಮುಖವಾಗಿ ಮೈರೋಸಿನೇಸ್, ಈಸ್ಟರೇಸ್, ಅಮೈಲೇಸ್ ಮತ್ತು ಡೈಯಾಸ್ಟೇಸ್ ಎಂಬ ಕಿಣ್ವಗಳು ಹಲವಾರು ಶಿಲೀಂಧ್ರದ ಮೂಲಕ ಆವರಿಸುವ (ಉದಾಹರಣೆಗೆ fibromyalgia) ಸೋಂಕುಗಳನ್ನು ಗುಣಪಡಿಸುತ್ತದೆ.

  ಮಲಬದ್ಧತೆಯನ್ನು ನಿವಾರಿಸುತ್ತದೆ

  ಮಲಬದ್ಧತೆಯನ್ನು ನಿವಾರಿಸುತ್ತದೆ

  ಜೀರ್ಣಶಕ್ತಿಯನ್ನು ಹೆಚ್ಚಿಸಿ ಪಿತ್ತರಸವನ್ನು ಜೀರ್ಣಾಂಗಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವ ಮೂಲಕ ಜೀರ್ಣಕ್ರಿಯೆಯನ್ನು ಪರಿಪೂರ್ಣ ಹಾಗೂ ಸುಲಭವಾಗಿಸುತ್ತದೆ. ಒಂದು ವೇಳೆ ನಿಮಗೆ ಮಲಬದ್ಧತೆಯ ತೊಂದರೆ ಇದ್ದರೆ ಮೂಲಂಗಿ ರಸ ಉಪಶಮನ ನೀಡುತ್ತದೆ. ನಿತ್ಯವೂ ಕೊಂಚ ಮೂಲಂಗಿ ರಸ ಕುಡಿಯುವ ಮೂಲಕ ಮಲಬದ್ದತೆಯ ತೊಂದರೆ ಇಲ್ಲವಾಗುತ್ತದೆ.

  ಉರಿಯೂತ ನಿವಾರಕ ಗುಣ

  ಉರಿಯೂತ ನಿವಾರಕ ಗುಣ

  ಇದರಲ್ಲಿರುವ ಉರಿಯೂತ ನಿವಾರಕ ಕಣಗಳು ವಿಶೇಷವಾಗಿ ಮೂತ್ರನಾಳದ ಸೋಂಕನ್ನು ಹಾಗೂ ಮೂತ್ರಪಿಂಡಕ್ಕೆ ಸೋಂಕು ಉಂಟು ಮಾಡುವ ಕಣಗಳನ್ನು ನಿವಾರಿಸಿ ಸೋಂಕು ಉಂಟಾಗದಂತೆ ನೋಡಿಕೊಳ್ಳುತ್ತದೆ. ಒಂದು ವೇಳೆ ನಿಯಮಿತವಾಗಿ ಮೂಲಂಗಿ ಜ್ಯೂಸ್ ಕುಡಿಯುತ್ತ ಬಂದರೆ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ.

  ಕಫವನ್ನು ನಿವಾರಿಸುತ್ತದೆ

  ಕಫವನ್ನು ನಿವಾರಿಸುತ್ತದೆ

  ಒಂದು ವೇಳೆ ಗಂಟಲು ಮತ್ತು ಶ್ವಾಸನಾಳಗಳಲ್ಲಿ ಕಫ ಕಟ್ಟಿಕೊಂಡು ಗಟ್ಟಿಯಾಗಿ ಉಸಿರಾಟದ ತೊಂದರೆ ಎದುರಾದರೆ ಅಸ್ತಮಾ ಅಥವಾ ಬ್ರಾಂಕೈಟಿಸ್ ಮೊದಲಾದ ತೊಂದರೆಗಳು ಕಾಣಿಸಿಕೊಳ್ಳಬಹುದು. ಮೂಲಂಗಿ ರಸ ಈ ಕಫವನ್ನು ಸಡಿಲಿಸಿ ನಿವಾರಿಸುವ ಮೂಲಕ ಈ ತೊಂದರೆಗಳನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲ, ವಾಕರಿಕೆ, ವಾಂತಿ ಹಾಗೂ ಗಂಟಲ ಬೇನೆಯ ತೊಂದರೆಗಳನ್ನೂ ನಿವಾರಿಸಲು ಸಾಧ್ಯ.

  ಕ್ಯಾನ್ಸರ್ ಕಣಗಳ ಅಭಿವೃದ್ಧಿಯನ್ನು ತಡೆಯುತ್ತದೆ

  ಕ್ಯಾನ್ಸರ್ ಕಣಗಳ ಅಭಿವೃದ್ಧಿಯನ್ನು ತಡೆಯುತ್ತದೆ

  ಇದರಲ್ಲಿರುವ ವಿಟಮಿನ್ ಸಿ ಹಾಗೂ ಆಂಥೂಸೈಯಾನಿನ್ ಎಂಬ ಪೋಷಕಾಂಶ ದೇಹದಲ್ಲಿ ಒಂದು ವೇಳೆ ಕ್ಯಾನ್ಸರ್ ಕಣಗಳು ಬೆಳವಣಿಗೆಯ ಹಂತದಲ್ಲಿದ್ದರೆ ಇನ್ನಷ್ಟು ಬೆಳೆಯುವುದನ್ನು ತಡೆಯುತ್ತದೆ. ಈ ಬಗ್ಗೆ ನಡೆದ ಸಂಶೋಧನೆಯಲ್ಲಿ ನಿಯಮಿತವಾಗಿ ಮೂಲಂಗಿ ಜ್ಯೂಸ್ ಕುಡಿಯುತ್ತಾ ಬರುವ ಮೂಲಕ ಚಿಕ್ಕಕರುಳು, ದೊಡ್ಡ ಕರುಳು, ಜಠರ ಮತ್ತು ಮೂತ್ರಪಿಂಡಗಳಲ್ಲಿ ಕಾಣಿಸಿಕೊಂಡ ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ಹತ್ತಿಕ್ಕುವುದನ್ನು ಗಮನಿಸಲಾಗಿದೆ.

  ಚರ್ಮದ ತೊಂದರೆಗಳನ್ನು ನಿವಾರಿಸುತ್ತದೆ

  ಚರ್ಮದ ತೊಂದರೆಗಳನ್ನು ನಿವಾರಿಸುತ್ತದೆ

  ಇದರಲಿರುವ ಗಂಧಕ, ಸತು ಮತ್ತು ವಿಟಮಿನ್ ಎ ಮತ್ತು ಸಿ ಚರ್ಮದ ಆರೋಗ್ಯಕ್ಕೂ ಪೂರಕವಾಗಿದೆ. ನಿಯಮಿತ ಸೇವನೆಯಿಂದ ಮೊಡವೆ, ತುರಿಕೆ, ಚರ್ಮ ಕೆಂಪಗಾಗುವುದು ಮೊದಲಾದ ಚರ್ಮದ ಕಾಯಿಲೆಗಳನ್ನು ಬರದಂತೆ ನೋಡಿಕೊಳ್ಳುತ್ತದೆ.

  ಮೂಲಂಗಿ ಜ್ಯೂಸ್‌+ಲಿಂಬೆ ರಸದ ಜೋಡಿಯ ಜಬರ್ದಸ್ತ್ ಪವರ್...

  English summary

  Why Radish Juice Must Be A Part of Your Diet?

  Do you know how healthy is radish? Vegetable juices are miraculous. Most of us include carrots, beetroots and other vegetables to the juicing routine. But radish is one good juicing option that shouldn't be ignored. The nutrients in radish can be easily absorbed when it is consumed as a raw juice. What does a glass of radish juice offer?
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more