ಪ್ರತಿಯೊಬ್ಬರಿಗೂ 'ರಕ್ತದ ಗುಂಪು' ತಿಳಿದಿರುವುದು ಅತ್ಯವಶ್ಯಕ

By: manu
Subscribe to Boldsky

ಮಾನವರಲ್ಲಿ ಹರಿಯುತ್ತಿರುವ ರಕ್ತದ ಬಣ್ಣ ಕೆಂಪು. ಆದರೆ ಎಲ್ಲರ ರಕ್ತ ಒಂದೇ ಬಗೆಯದ್ದಾಗಿರುವುದಿಲ್ಲ. ಬದಲಿಗೆ ರಕ್ತದ ಕಣಗಳನ್ನು ಅನುಸರಿಸಿ ಮುಖ್ಯವಾಗಿ ನಾಲ್ಕು ವಿಧಗಳನ್ನಾಗಿ ವಿಂಗಡಿಸಲಾಗಿದೆ. ಅವೆಂದರೆ ಎ,ಬಿ, ಎಬಿ ಮತ್ತು ಒ. ಇದರ ಸೂಕ್ಷ್ಮಕಣಗಳ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಪರಿಗಣಿಸಿ ಪ್ರತಿ ಗುಂಪಿಗೂ ಎರಡು ಪ್ರವರ್ಗಗಳಾಗಿದ್ದು ಒಟ್ಟು ಎಂಟು ಪ್ರವರ್ಗಗಳಾಗುತ್ತವೆ. ವ್ಯಕ್ತಿಯ ರಕ್ತದ ಗುಂಪು, ಆತನ ಜಾತಕವನ್ನೇ ಬಿಚ್ಚಿಡುತ್ತದೆ! 

ಪ್ರತಿ ವ್ಯಕ್ತಿಯ ರಕ್ತದ ಗುಂಪು ಪ್ರತ್ಯೇಕವಾಗಿದ್ದು ತಮ್ಮ ರಕ್ತ ಯಾವ ಗುಂಪು ಮತ್ತು ಪ್ರವರ್ಗಕ್ಕೆ ಸೇರಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳುವುದು ಅವಶ್ಯ. ಇಂದು ರಕ್ತದ ಗುಂಪನ್ನು ಸೇವಾವಲಯದ ಉದ್ಯೋಗದಲ್ಲಿರುವವರಿಗೆ ಉದಾಹರಣೆಗೆ ವಾಹನ ಚಾಲಕ, ರಕ್ಷಣಾ ಸಿಬ್ಬಂದಿ, ಮೊದಲಾದವರ ಗುರುತಿನ ಪತ್ರದಲ್ಲಿಯೂ ನಮೂದಿಸಲಾಗುತ್ತದೆ. ಇನ್ನು ಟೀ ಕುಡಿಯುವ ಮೊದಲು 'ರಕ್ತದ ಗುಂಪು' ತಿಳಿದಿರಲಿ!

ಏಕೆಂದರೆ ತುರ್ತು ಪರಿಸ್ಥಿತಿಯಲ್ಲಿ ರಕ್ತ ಪಡೆಯಬೇಕಾದಾಗ ಅಥವಾ ನೀಡಬೇಕಾದ ಸಂದರ್ಭ ಒದಗಿ ಬಂದರೆ ಈ ಮಾಹಿತಿ ಅಪಾರವಾದ ನೆರವನ್ನು ನೀಡುತ್ತದೆ. ವಾಸ್ತವವಾಗಿ ಹೆಚ್ಚಿನವರಿಗೆ ತಮ್ಮ ರಕ್ತದ ಗುಂಪು ಯಾವುದೆಂದೇ ಗೊತ್ತಿಲ್ಲ. ಆದರೆ ಏಕೆ ಗೊತ್ತಿರಬೇಕು? ಇದರಿಂದ ನನಗೇನು ಲಾಭ? ಎಂದೆಲ್ಲಾ ಕೊಂಕು ನುಡಿಯುವವರಿಗೆ ಕೆಳಗಿನ ಮಾಹಿತಿ ಸರಿಯಾದ ಉತ್ತರ ನೀಡಬಲ್ಲುದು. ಅಚ್ಚರಿ ವಿಷಯ: ರಕ್ತದಾನ ಮಾಡುವುದು ಒಳ್ಳೆಯದೇ, ಆದರೆ....

ರಕ್ತದ ಗುಂಪನ್ನು ಕಂಡುಕೊಂಡಿದ್ದರೆ ತುರ್ತು ಪರಿಸ್ಥಿತಿಯಲ್ಲಿ ಮಾತ್ರವಲ್ಲ, ವ್ಯಕ್ತಿಯ ನಡವಳಿಕೆಯನ್ನೂ ಅರಿಯಬಹುದು. ನಿಮ್ಮ ರಕ್ತದ ಗುಂಪಿಗೆ ಯಾವ ರೀತಿಯ ಜೀವನಶೈಲಿ ಸೂಕ್ತ ಎಂಬುದನ್ನೂ ಕಂಡುಕೊಳ್ಳಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳಲು ಯಾವ ರೀತಿಯ ಬದಲಾವಣೆ ಉತ್ತಮ ಎಂಬುದನ್ನೂ ನಿರ್ಧರಿಸಬಹುದು. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ... 

ಆಹಾರಕ್ರಮ

ಆಹಾರಕ್ರಮ

ಪ್ರತಿ ಗುಂಪಿನ ರಕ್ತದ ವ್ಯಕ್ತಿಗಳ ಆಹಾರಕ್ರಮ ಅಥವಾ ಅವರು ಬಯಸುವ ಆಹಾರಕ್ರಮ ಭಿನ್ನವಾಗಿರುತ್ತದೆ. ಉದಾಹರಣೆಗೆ ಎ ಗುಂಪಿನ ರಕ್ತದ ವ್ಯಕ್ತಿಗಳಿಗೆ ತರಕಾರಿ ಉತ್ತಮ. ನಿಮಗೆ ಮಾಂಸಾಹಾರ ಸೂಕ್ತವಲ್ಲ. ಒ ಗುಂಪಿನವರಿಗೆ ಹೆಚ್ಚಿನ ಪ್ರೋಟೀನಿನ ಅವಶ್ಯಕತೆ ಇರುವ ಕಾರಣ ಮೀನು ಮತ್ತು ಮಾಂಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಬಿ. ಗುಂಪಿನವರು ಕೆಂಪು ಮಾಂಸವನ್ನು ತಿನ್ನಬಹುದು ಆದರೆ ಇತರ ಬಗೆಯ ಮಾಂಸಗಳನ್ನು ವರ್ಜಿಸಬೇಕು. ಎಬಿ ಗುಂಪಿನವರು ಬಿಳಿ ಮಾಂಸ ಹಾಗೂ ಸಾಗರ ಉತ್ಪನ್ನಗಳನ್ನು ಸೇವಿಸಬೇಕು.

ಪ್ರತಿಕ್ರಿಯೆ

ಪ್ರತಿಕ್ರಿಯೆ

ಒಂದು ಸಂಶೋಧನೆಯ ಪ್ರಕಾರ ಕೆಲವು ರಕ್ತದ ಗುಂಪಿನ ವ್ಯಕ್ತಿಗಳು ಇತರರಿಗಿಂತ ಹೆಚ್ಚು ಬೇಗನೇ ಒತ್ತಡಕ್ಕೆ ಒಳಗಾಗುತ್ತಾರೆ. ಉದಾಹರಣೆಗೆ ಒ ಗುಂಪಿನ ವ್ಯಕ್ತಿಗಳು ಸುಲಭವಾಗಿ ಒತ್ತಡಕ್ಕೆ ತುತ್ತಾಗುತ್ತಾರೆ. ಹಾಗಾಗಿ ಈ ಗುಂಪಿನ ವ್ಯಕ್ತಿಗಳು ಒತ್ತಡ ಹೆಚ್ಚಿಸುವ ಸಂದರ್ಭಗಳಲ್ಲಿ ಒತ್ತಡಕ್ಕೆ ಒಳಗಾಗದೇ ಇರಲು ಮಾನಸಿಕರಾಗಿ ಸದೃಢರಾಗಲು ಶ್ರಮಿಸಬೇಕು.

ಆರೋಗ್ಯ

ಆರೋಗ್ಯ

ಪ್ರತಿ ರಕ್ತದ ಗುಂಪಿನ ವ್ಯಕ್ತಿಗಳು ಪ್ರತ್ಯೇಕವಾದ ಕೆಲವು ಆರೋಗ್ಯದ ಸಮಸ್ಯೆಗೆ ಇತರರಿಗಿಂತ ಹೆಚ್ಚು ಸುಲಭವಾಗಿ ತುತ್ತಾಗುವ ಸಾಧ್ಯತೆ ಹೊಂದಿರುತ್ತಾರೆ. ನಿಮ್ಮ ರಕ್ತದ ಗುಂಪು ತಿಳಿದಿದ್ದರೆ ನೀವೇ ಸ್ವತಃ ಅಂತರ್ಜಾಲವನ್ನು ಜಾಲಾಡಿ ನಿಮಗೆ ಬಾಧಿಸಬಹುದಾದ ರೋಗಗಳಾವುವು ಎಂಬುದನ್ನು ಕಂಡುಕೊಂಡು ಈ ಬಗ್ಗೆ ಎಚ್ಚರಿರಲು ಸಾಧ್ಯವಾಗುತ್ತದೆ.

ವ್ಯಕ್ತಿತ್ವ

ವ್ಯಕ್ತಿತ್ವ

ಪ್ರತಿ ಗುಂಪಿನ ವ್ಯಕ್ತಿಗಳೂ ಪ್ರತ್ಯೇಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಉದಾಹರಣೆಗ ಎ ಗುಂಪಿನ ವ್ಯಕ್ತಿಗಳು ಸಾಮಾನ್ಯವಾಗಿ ಕಲಾವಂತಿಕೆಯನ್ನು ಹೊಂದಿದ್ದು ಶಾಂತಸ್ವಭಾವದವರಾಗಿರುತ್ತಾರೆ. ಒ ಗುಂಪಿನ ವ್ಯಕ್ತಿಗಳು ಹೆಚ್ಚು ಸಂಘಜೀವಿಯಾಗಿದ್ದು ಆತ್ಮವಿಶ್ವಾಸ ಹೊಂದಿರುತ್ತಾರೆ. ಇವರು ಉಳಿದವರಿಗಿಂತ ಹೆಚ್ಚು ಕ್ರಿಯಾತ್ಮಕರಾಗಿರುತ್ತಾರೆ. ಬಿ ಗುಂಪಿಯ ವ್ಯಕ್ತಿಗಳು ದೃಢನಿರ್ಧಾರದ ವ್ಯಕ್ತಿಗಳಾಗಿದ್ದು ಸ್ವತಂತ್ರರಾಗಿರಲು ಇಚ್ಛಿಸುತ್ತಾರೆ. ಎಬಿ ಗುಂಪಿನ ವ್ಯಕ್ತಿಗಳು ಹೆಚ್ಚು ಕಾಳಜಿ ವಹಿಸುವವರೂ, ಜವಾಬ್ದಾರಿಯುತರೂ ವಿಶ್ವಾಸಾರ್ಹರೂ ಆಗಿದ್ದರೂ ಸಾಮಾನ್ಯವಾಗಿ ಸ್ವತಃ ಏನನ್ನೂ ಪ್ರಾರಂಭಿಸದ ಪುಕ್ಕಲರಾಗಿರುತ್ತಾರೆ.

ಮಕ್ಕಳು

ಮಕ್ಕಳು

ತಂದೆ ತಾಯಿಯರ ಮತ್ತು ಮಕ್ಕಳ ರಕ್ತದ ಗುಂಪನ್ನು ಪರಿಗಣಿಸಿದ ಬಳಿಕ ವೈದ್ಯರು ನಿಮ್ಮ ಕುಟುಂಬಕ್ಕೆ ಯಾವ ಕಾಯಿಲೆಗಳು ಹೆಚ್ಚು ಬರುವ ಸಂಭವವಿರುತ್ತದೆ ಎಂಬ ಬಗ್ಗೆ ಮಾಹಿತಿ ನೀಡಬಲ್ಲರು.

ಸ್ಥೂಲಕಾಯ

ಸ್ಥೂಲಕಾಯ

ಕೆಲವು ರಕ್ತದ ಗುಂಪಿನ ವ್ಯಕ್ತಿಗಳು ಇತರರಿಗಿಂತ ಬೇಗನೇ ಸ್ಥೂಲಕಾಯಕ್ಕೆ ತುತ್ತಾಗುತ್ತಾರೆ. ಉದಾಹರಣೆಗೆ ಒ ಗುಂಪಿನ ವ್ಯಕ್ತಿಗಳಿಗೆ ಹೊಟ್ಟೆಯ ಕೊಬ್ಬು ಸುಲಭವಾಗಿ ಹೆಚ್ಚುತ್ತದೆ. ಅಂತೆಯೇ ಎ ಗುಂಪಿನ ವ್ಯಕ್ತಿಗಳಿಗೆ ಹೊಟ್ಟೆಯ ಸುತ್ತಳತೆ ಹೆಚ್ಚಿರುವುದು ಸಾಮಾನ್ಯವಾಗಿ ಕಡಿಮೆ.

ಗರ್ಭಾವಸ್ಥೆ

ಗರ್ಭಾವಸ್ಥೆ

ಕೆಲವು ರಕ್ತದ ಗುಂಪುಗಳ ವ್ಯಕ್ತಿಗಳು ಇತರರಿಗಿಂತ ಬೇಗನೇ ಮತ್ತು ಸುಲಭವಾಗಿ ಗರ್ಭಧರಿಸಲು ಸಮರ್ಥರಿರುತ್ತಾರೆ.

ವ್ಯಾಯಾಮ

ವ್ಯಾಯಾಮ

ನಿತ್ಯದ ವ್ಯಾಯಾಮವನ್ನೂ ರಕ್ತದ ಗುಂಪು ನಿರ್ಧರಿಸುತ್ತದೆ. ಉದಾಹರಣೆಗೆ ಬಿ ಗುಂಪಿನ ವ್ಯಕ್ತಿಗಳು ಬಿರುಸಿನ ಚಟುವಟಿಕೆ ಇರುವ ಮಾರ್ಶಿಯಲ್ ಕ್ರೀಡೆಗಳು, ಟೆನ್ನಿಸ್ ಮೊದಲಾದ ಕ್ರೀಡೆಗಳನ್ನು ಆಯ್ದುಕೊಳ್ಳಬಹುದು. ಎ. ಗುಂಪಿನ ವ್ಯಕ್ತಿಗಳು ನಿರಾಳವಾಗಿ ಚಾಲನೆ ನೀಡುವ ಚಟುವಟಿಕೆಗಳನ್ನು ಉದಾಹರಣೆಗೆ ಯೋಗಾಭ್ಯಾಸವನ್ನು ಆಯ್ದುಕೊಳ್ಳಬಹುದು.

 
English summary

Why Is It Important To Know Your Blood Group

Every blood group comes with different set of needs, qualities and requirements. So, if you know your type, you can research more on what kind of a lifestyle suits you. That helps you tailor-make your lifestyle in such a way that you stay healthy. Read on...
Subscribe Newsletter