ಪವಿತ್ರ ನದಿಗಳಲ್ಲಿ ಮುಳುಗು ಹಾಕಿದರೆ, ಸಾಕಷ್ಟು ಆರೋಗ್ಯ ಲಾಭಗಳಿವೆ!

By: manu
Subscribe to Boldsky

ಭಾರತೀಯ ಸಂಸ್ಕೃತಿಯ ಬಹಳ ಹಳೆಯದಾಗಿದ್ದು ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ. ಇವುಗಳನ್ನು ಗೊಡ್ಡು ಸಂಪ್ರದಾಯ ಎಂದು ಕೈಬಿಡದೇ ಈ ವೈಜ್ಞಾನಿಕ ಯುಗದಲ್ಲಿ ಆಚರಿಸಿಕೊಂಡು ಬರಲು ಇದರ ಹಿಂದೆ ಇರುವ ವೈಜ್ಞಾನಿಕ ಕಾರಣಗಳು ಪುಷ್ಟಿ ನೀಡುತ್ತವೆ.

ಇವುಗಳಲ್ಲಿ ಆರೋಗ್ಯಕರ ಪ್ರಯೋಜನಗಳೂ ಸೇರಿವೆ. ಭಾರತದಲ್ಲಿರುವ ಹಲವಾರು ಪುಣ್ಯ ಕ್ಷೇತ್ರಗಳಲ್ಲಿರುವ ನದಿ, ಸಾಗರ ಅಥವಾ ನೀರಿನ ಸೆಲೆಗಳಲ್ಲಿ ಮುಳುಗು ಹಾಕಿ ಬಳಿಕ ಸ್ನಾನ ಮಾಡುವುದು ಧಾರ್ಮಿಕ ವಿಧಿಯಾಗಿದ್ದು ಭಕ್ತರು ಈ ವಿಧಿಯನ್ನು ತನ್ಮಯತೆಯಿಂದ ಆಚರಿಸುತ್ತಾರೆ.

ಇಂದಿಗೂ ಹಳ್ಳಿಗಳಲ್ಲಿ ಭಕ್ತರು ಮುಂಜಾನೆಯ ಸ್ನಾನವನ್ನು ಕೆರೆ, ನದಿ ಅಥವಾ ಇತರ ತೆರೆದ ನೀರಿನ ತಾಣಗಳಲ್ಲಿ ಮಾಡುತ್ತಾರೆ. ಇದಕ್ಕೆ ಧಾರ್ಮಿಕ ಕಾರಣಗಳ ಹೊರತಾಗಿ ಆರೋಗ್ಯಕರ ಪ್ರಯೋಜನಗಳೂ ಇವೆ. ಬನ್ನಿ, ಈ ಪ್ರಯೋಜನಗಳ ಬಗ್ಗೆ ಅರಿಯೋಣ....

ಪ್ರಯೋಜನ #1

ಪ್ರಯೋಜನ #1

ಬೆಳಿಗ್ಗೆದ್ದ ಬಳಿಕ ತಣ್ಣೀರಿನಲ್ಲಿ ಮುಳುಗು ಹಾಕಿದ ತಕ್ಷಣ ಕೆಲವು ಕ್ಷಣಗಳವರೆಗೆ ಉಸಿರು ಕಟ್ಟಿದಂತಾಗುತ್ತದೆ. ಮುಳುಗಿ ಮೇಲೆದ್ದ ಬಳಿಕ ದೀರ್ಘ ಶ್ವಾಸ ಎಳೆದುಕೊಳ್ಳಬೇಕಾಗುತ್ತದೆ. ಇದು ಶ್ವಾಸಕೋಶದ ಕ್ಷಮತೆಯನ್ನು ಹೆಚ್ಚಿಸುವ ಅತ್ಯುತ್ತಮವಾದ ವ್ಯಾಯಾಮವಾಗಿದೆ.

ಪ್ರಯೋಜನ #2

ಪ್ರಯೋಜನ #2

ಅಲ್ಲದೇ, ಪ್ರತಿ ಬಾರಿ ಮುಳುಗು ಹಾಕಿದಾಗ ದೀರ್ಘ ಉಸಿರೆಳೆದುಕೊಂಡು ಸುಮಾರು ಅರ್ಧ ನಿಮಿಷವಾದರೂ ಉಸಿರು ಕಟ್ಟಿಕೊಂಡು ತಲೆಯನ್ನು ನೀರಿನಿಂದ ಹೊರತೆಗೆದ ಬಳಿಕ ಪೂರ್ಣ ಉಸಿರನ್ನು ಬಿಡುವುದು ಶ್ವಾಸಕೋಶಕ್ಕೆ ಅತ್ಯುತ್ತಮವಾದ ವ್ಯಾಯಾಮವಾಗಿದೆ.

ವಾರದ ನಾಲ್ಕು ದಿನ ತಲೆ ಸ್ನಾನ ಮಾಡುವಂತಿಲ್ಲ! ಯಾಕೆ ಹೀಗೆ?

ಪ್ರಯೋಜನ #3

ಪ್ರಯೋಜನ #3

ತಣ್ಣೀರಿನಲ್ಲಿ ಮುಳುಗು ಹಾಕಿದಾಗ ದೇಹದ ತಾಪಮಾನವೂ ಕಡಿಮೆಯಾಗುತ್ತದೆ ಇದನ್ನು ಸರಿಪಡಿಸಲು ದೇಹದಲ್ಲಿ ಬೀಟಾ-ಎಂಡಾರ್ಫಿನ್ ಮತ್ತು ನೋರಾಡ್ರಿನಲಿನ್ ಮೊದಲಾದ ರಸದೂತಗಳು ಬಿಡುಗಡೆಯಾಗುತ್ತವೆ. ಈ ರಸದೂತಗಳು ತಾಜಾತನವನ್ನು ನೀಡುವ ರಾಸಾಯನಿಕಗಳಾಗಿದ್ದು ಖಿನ್ನತೆಯಿಂದ ಹೊರಬರಲು ನೆರವಾಗುತ್ತದೆ. ತಲೆಬಿಸಿಯಾದಾಗ ತಲೆಯ ಮೇಲೆ ಒಂದು ಬಕೆಟ್ಟು ತಣ್ಣೀರನ್ನು ಸುರಿಯುವುದು ಇದೇ ಕಾರಣಕ್ಕೆ.

ಪ್ರಯೋಜನ #4

ಪ್ರಯೋಜನ #4

ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಬೆಳಿಗ್ಗೆದ್ದು ತಣ್ಣೀರಿನಲ್ಲಿ ಮುಳುಗು ಹಾಕುವ ಮೂಲಕ ಖಿನ್ನತೆ ಆವರಿಸುವ ಸಾಧ್ಯತೆಯನ್ನು ತಡೆಗಟ್ಟಬಹುದು.

ಪ್ರಯೋಜನ #5

ಪ್ರಯೋಜನ #5

ಇನ್ನೊಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಬೆಳಗ್ಗೆದ್ದು ತಣ್ಣೀರಿನಲ್ಲಿ ಮುಳುಗು ಹಾಕುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಹಲವು ಸೋಂಕುಗಳನ್ನು ಆವರಿಸುವುದರಿಂದ ರಕ್ಷಣೆ ನೀಡುತ್ತದೆ.

ಪ್ರಯೋಜನ #6

ಪ್ರಯೋಜನ #6

ಮುಳುಗು ಹಾಕಿದಾದ ದೇಹದ ತಾಪಮಾನವೂ ಕಡಿಮೆಯಾಗುವ ಮೂಲಕ ದೇಹದ ದುಗ್ಧರಸ ಸಾಗುವ ನರಗಳೂ ಸಂಕುಚಿತಗೊಳ್ಳುತ್ತವೆ. ಪರಿಣಾಮವಾಗಿ ದುಗ್ಧರಸ ದೇಹದ ಎಲ್ಲಾ ಭಾಗಕ್ಕೆ ಪಸರಿಸಲು ಸಾಧ್ಯವಾಗುತ್ತದೆ. ಅಲ್ಲದೇ ತಣ್ಣೀರಿನ ಪ್ರಭಾವದಿಂದ ದುಗ್ಧರಸ ಪ್ರಸಾರ ವ್ಯವಸ್ಥೆಯೂ ಉತ್ತಮಗೊಳ್ಳುತ್ತದೆ.

ಪ್ರಯೋಜನ #7

ಪ್ರಯೋಜನ #7

ಬೆಳಗ್ಗಿನ ತಣ್ಣೀರಿನ ಮುಳುಗುವಿಕೆಯಿಂದ ಇಡಿಯ ದಿನ ತಾಜಾತನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಡಿಯ ದಿನ ಚಟುವಟಿಕೆಯಿಂದಿರಲು ದೇಹದಲ್ಲಿ ಈ ಸಮಯದಲ್ಲಿ ಬಿಡುಗಡೆಯಾದ ಕೆಲವು ರಸದೂತಗಳು ಕಾರಣವಾಗಿವೆ.

ಪ್ರಯೋಜನ #8

ಪ್ರಯೋಜನ #8

ಬೆಳಗ್ಗಿನ ತಣ್ಣೀರಿನಲ್ಲಿ ಮುಳುಗು ಹಾಕುವ ಸಮಯದಲ್ಲಿ ರಕ್ತಪರಿಚಲನೆ ದಿಢೀರನೇ ಚುರುಕಾಗುತ್ತದೆ. ಹೃದಯ ಬಡಿತವೂ ಹೆಚ್ಚುತ್ತದೆ. ತಣ್ಣೀರಿನಿಂದ ತಣ್ಣಗಾಗಿದ್ದ ದೇಹವನ್ನು ಮತ್ತೆ ಬಿಸಿಯಾಗಿಸಲು ಎಲ್ಲಾ ವ್ಯವಸ್ಥೆಗಳು ಚುಕುರಾಗಿ ಕೆಲಸ ಮಾಡಬೇಕಾಗುತ್ತದೆ. ಹೀಗೆ ಪ್ರತಿದಿನವೂ ತಣ್ಣೀರಿನಲ್ಲಿ ಮುಳುಗು ಹಾಕುವ ಮೂಲಕ ದೇಹ ವಿವಿಧ ತಾಪಮಾನಗಳಲ್ಲಿ ಅತಿ ಕಡಿಮೆ ಸಮಯದಲ್ಲಿ ಹೊಂದಿಕೊಳ್ಳಲು ತಯಾರಾಗುತ್ತದೆ.

ಪ್ರಯೋಜನ #9

ಪ್ರಯೋಜನ #9

ಮುಳುಗು ಹಾಕಿದ ಬಳಿಕ ದೇಹದಲ್ಲಿ ನಡೆಯುವ ಒಟ್ಟಾರೆ ಪ್ರಕ್ರಿಯೆಗಳಿಗೆಲ್ಲಾ ಶಕ್ತಿ ನೀಡಲು ಕ್ಯಾಲೋರಿಗಳು ಹೆಚ್ಚಾಗಿ ಖರ್ಚಾಗುತ್ತವೆ ಹಾಗೂ ಮಾನಸಿತ ಒತ್ತಡವೂ ಇಲ್ಲವಾಗುತ್ತದೆ.

English summary

Why Indians Take A Dip In Holy Rivers? Here Are The Health Benefits

Some of the old and traditional Indian habits are still followed and respected due to many reasons. They offer certain health benefits too. In most of the holy places, there are ponds and rivers in which people take a a few dips and then take bath. Also, in villages, people prefer to bath in ponds and other water bodies. They offer so many health benefits. Here are a few.
Subscribe Newsletter