For Quick Alerts
ALLOW NOTIFICATIONS  
For Daily Alerts

ಹಿಂಸೆ ನೀಡುವ ಕಾಲುಬೆರಳುಗಳ ಸೆಳೆತ! ಇದಕ್ಕೇನು ಪರಿಹಾರ?

By Arshad
|

ಸ್ನಾಯುಗಳು ಕೆಲವೊಮ್ಮೆ ಸೆಳೆತ ಅಥವಾ ಸೆಡೆತಕ್ಕೆ ಒಳಗಾಗುವುದುಂಟು. ತೀರಾ ಹೆಚ್ಚಾಗಿ ಸೈಕಲ್ ತುಳಿದಾಗ, ಅತಿ ಹೆಚ್ಚು ಈಜಿದಾಗ ಅಥವಾ ಹೆಚ್ಚು ನಡೆದಾದ ಮೀನಖಂಡದ, ಕಾಲುಬೆರಳಿನ ಸ್ನಾಯುಗಳು ಥಟ್ಟನೇ ಸಂಕುಚಿಸಿ ಒಳಗಿನಿಂದ ಎಳೆದಂತಾಗುತ್ತದೆ. ಇದನ್ನು ಪುನಃ ಮೊದಲಿನಂತಾಗಿಸುವುದು ಬಹಳ ಕಷ್ಟಕರ ಮತ್ತು ನೋವಿನಿಂದ ಕೂಡಿರುತ್ತದೆ.

ಈ ಕಾರಣಗಳಿಗೂ ಹೊರತಾಗಿ ಕೆಲವೊಮ್ಮೆ ಕಾಲುಬೆರಳುಗಳ ಸ್ನಾಯುಗಳು ಅನೈಚ್ಛಿಕವಾಗಿ ಸೆಡೆತ ಪಡೆಯುತ್ತವೆ. ಆದರೆ ಇವು ಹೆಚ್ಚು ಬಲಯುತವಾಗಿರದೇ ತೆರೆಯಲಿಚ್ಛಿಸಿದರೆ ಕೊಂಚ ನೋವುಂಟುಮಾಡಿಯಾದರೂ ತರೆಯುತ್ತವೆ. ಸ್ನಾಯು ಸೆಳೆತ ತಡೆಗಟ್ಟುವ ಮಾರ್ಗಗಳು

ಅಂದರೆ ಮೆದುಳಿನಿಂದ ಬಂದ ಸಂಕೇತಗಳಿಗೆ ಸ್ಪಂದಿಸುತ್ತವೆ. ಈ ಸೆಡೆತ ಕೆಲವು ಸೆಕೆಂಡುಗಳಿಂದ ಪ್ರಾರಂಭಗೊಂಡು ಎರಡು ಗಂಟೆಯವರೆಗೂ ಇರಬಹುದು. ಹೆಚ್ಚಿನ ಸಂದರ್ಭದಲ್ಲಿ ಇವು ಕೆಲವು ಸೆಕೆಂಡುಗಳ ಕಾಲ ಮಾತ್ರವೇ ಇರುತ್ತವೆ. ಆದರೆ ಈ ಸೆಕೆಂಡುಗಳು ಯಾತನಾಮಯವಾಗಿರುತ್ತವೆ. ಮಸಲ್ ಕ್ಯಾಚ್(ಸ್ನಾಯು ಸೆಳೆತ) ತಡೆಯಲು ಟಿಪ್ಸ್

ಈ ಸೆಡೆತಕ್ಕೆ ಕೆಲವಾರು ಕಾರಣಗಳಿವೆ. ಪ್ರಮುಖ ಕಾರಣವೆಂದರೆ ಆಹಾರದಲ್ಲಿ ಸಾಕಷ್ಟು ಪೌಷ್ಟಿಕತೆ ಇಲ್ಲದಿರುವುದು. ಕಾಲು ಬೆರಳುಗಳು ಹೃದಯದಿಂದ ಹೊರಟ ರಕ್ತ ತಲುಪಲು ಅತ್ಯಂತ ದೂರವಿರುವ ಕಾರಣ ಈ ಕೊರತೆ ಅತಿ ಹೆಚ್ಚಾಗಿ ಇಲ್ಲಿಯೇ ಕಾಣಿಸಿಕೊಳ್ಳುತ್ತದೆ. ಇದರ ಹೊರತಾಗಿ ಇನ್ನೂ ಕೆಲವಾರು ಕಾರಣಗಳಿದ್ದು ಇವುಗಳಲ್ಲಿ ಪ್ರಮುಖವಾದುದನ್ನು ಕೆಳಗೆ ವಿವರಿಸಲಾಗಿದೆ....

ಪೋಷಕಾಂಶಗಳ ಕೊರತೆ

ಪೋಷಕಾಂಶಗಳ ಕೊರತೆ

ಕೆಲವು ಔಷಧಿಗಳ ಸೇವನೆಯ ಬಳಿಕ ಈ ಸೆಡೆತ ಹೆಚ್ಚಾಗಿ ಕಂಡುಬರುತ್ತದೆ. ಮೂತ್ರವರ್ಧಕ ಔಷಧಿಗಳ ಮೂಲಕ ದೇಹದಿಂದ ದ್ರವ ಹೆಚ್ಚಾಗಿ ಹೊರಹರಿಯುವ ಮೂಲಕ ಕೆಲವು ಪೋಷಕಾಂಶಗಳ ಕೊರತೆಯಿಂದಾಗಿ ಬೆರಳುಗಳು ಸೆಡೆತ ಪಡೆಯುತ್ತವೆ. ಅಲ್ಲದೇ ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನೇಶಿಯಂ ಮತ್ತು ಸತುವಿನ ಕೊರತೆಯಿಂದಲೂ ಈ ತೊಂದರೆ ಕಾಣಬರುತ್ತದೆ.

ರಕ್ತ ಸಂಚಾರದಲ್ಲಿ ವ್ಯತ್ಯಯ

ರಕ್ತ ಸಂಚಾರದಲ್ಲಿ ವ್ಯತ್ಯಯ

ಕಡಿಮೆ ಪ್ರಮಾಣದಲ್ಲಿ ಅಥವಾ ಕಡಿಮೆ ಒತ್ತಡದಲ್ಲಿ ರಕ್ತ ದೇಹದಲ್ಲಿ ಹರಿದಾಗ ನರವ್ಯವಸ್ಥೆಯ ತುದಿಯಲ್ಲಿರುವ ಕಾಲುಬೆರಳುಗಳಿಗೆ ಅತಿ ಕಡಿಮೆ ರಕ್ತ ಲಭ್ಯವಾಗಿ ಇದರಿಂದ ಸ್ನಾಯುಗಳು ಪೋಷಣೆಯಿಲ್ಲದೇ ಸಂಕುಚಿಸಿ ಸೆಡೆತಕ್ಕೆ ಕಾರಣವಾಗುತ್ತವೆ. ಒಂದು ವೇಳೆ ಈ ಪ್ರಮಾಣ ತೀರಾ ಕಡಿಮೆಯಿದ್ದರೆ ಕಾಲುಬೆರಳುಗಳ ಸಹಿತ ಪಾದವೂ ಸೆಡೆತಕ್ಕೆ ಒಳಗಾಗುತ್ತದೆ.

ಒಪ್ಪದ ಪಾದರಕ್ಷೆಗಳನ್ನು ತೊಡುವುದು

ಒಪ್ಪದ ಪಾದರಕ್ಷೆಗಳನ್ನು ತೊಡುವುದು

ತಮ್ಮ ಪಾದಗಳ ಗಾತ್ರಕ್ಕೂ ಚಿಕ್ಕದಾಗ ಅಥವಾ ಅತಿ ಹೆಚ್ಚಿನ ಹಿಮ್ಮಡಿಯ ಅಥವಾ ನಡೆಯಲು ತ್ರಾಸು ನೀಡುವಂತಹ ಪಾದರಕ್ಷೆಗಳನ್ನು ಧರಿಸುವ ಮೂಲಕವೂ ಈ ತೊಂದರೆ ಎದುರಾಗಬಹುದು.

ಅತಿ ಹೆಚ್ಚಿನ ವ್ಯಾಯಾಮ

ಅತಿ ಹೆಚ್ಚಿನ ವ್ಯಾಯಾಮ

ಅತಿ ಹೆಚ್ಚಿನ ವ್ಯಾಯಮದ ಮೂಲಕವೂ ಈ ಸೆಡೆತ ಕಾಣಬರುತ್ತದೆ. ಸೆಡೆತ ಬಂದ ಬಳಿಕ ಇದನ್ನು ಸಡಿಲಿಸಲು ಹೆಚ್ಚಿನ ಒತ್ತಡ ಹಾಕದೇ ಇರುವುದು ಜಾಣತನದ ಕ್ರಮ. ಏಕೆಂದರೆ ಇದನ್ನು ತೆರೆಯಲು ಶ್ರಮಪಟ್ಟಷ್ಟೂ ಇದು ಇನ್ನೂ ಹೆಚ್ಚಾಗಿ ಸೆಳೆಯುತ್ತದೆ. ಆದ್ದರಿಂದ ಯಾವುದೇ ಮನಸ್ಸಿನ ಒತ್ತಡವಿಲ್ಲದೇ ಕೊಂಚ ಕಾಲ ಹಾಗೇ ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ನಿಧಾನವಾಗಿ ಇದು ಮೊದಲಿನಂತಾಗುತ್ತದೆ. ಈ ತೊಂದರೆ ಅನುವಂಶಿಕವಾಗಿಯೂ ಬರುತ್ತದೆ.

ಬಿಸಿನೀರಿನಲ್ಲಿ ಪಾದ ಮುಳುಗಿಸುವುದು

ಬಿಸಿನೀರಿನಲ್ಲಿ ಪಾದ ಮುಳುಗಿಸುವುದು

ಸೆಡೆತವನ್ನು ಕಡಿಮೆ ಮಾಡಲು ಇನ್ನೊಬ್ಬರ ಸಹಾಯ ಲಭ್ಯವಿದ್ದರೆ ಕಾಲಿನ ಮೀನಖಂಡದಿಂದ ಪ್ರಾರಂಭಗೊಂಡು ಕಾಲುಬೆರಳುಗಳವರೆಗೆ ಬಿಸಿ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ಇದಕ್ಕೆ ಪರಿಹಾರ ಪಡೆಯಬಹುದು. ಇನ್ನೊಂದು ವಿಧಾನವೆಂದರೆ ಅಗಲವಾದ ಪಾತ್ರೆಯೊಂದರಲ್ಲಿ ಸಾಕಷ್ಟು ಬಿಸಿ ಇರುವ ನೀರನ್ನು ತುಂಬಿ ಈ ನೀರಿನಲ್ಲಿ ಪಾದಗಳನ್ನು ಮುಳುಗಿಸಿಡಬೇಕು. ಇದರಿಂದ ರಕ್ತಸಂಚಾರ ಹೆಚ್ಚಿ ಸೆಡೆತ ನಿಧಾನವಾಗಿ ಕಡಿಮೆಯಾಗುತ್ತದೆ. ಸಾಧ್ಯವಾದರೆ ಈ ನೀರಿನಲ್ಲಿ ಕೊಂಚ ಕಲ್ಲುಪ್ಪು ಸೇರಿಸುವುದು ಇನ್ನಷ್ಟು ಉತ್ತಮವಾಗಿದೆ.

ಧ್ಯಾನ

ಧ್ಯಾನ

ಕೆಲವು ಸಂದರ್ಭಗಳಲ್ಲಿ ಧ್ಯಾನವೂ ಈ ಸೆಡೆತಕ್ಕೆ ಒಂದು ಕಾರಣವಾಗಿರುವ ಸಾಧ್ಯತೆ ಇದೆ. ಧ್ಯಾನದ ಸಮಯದಲ್ಲಿ ಮೆದುಳಿಗೆ ರಕ್ತದ ಸಿಂಹಪಾಲು ರವಾನೆಯಾಗುವ ಮೂಲಕ ಕಾಲುಬೆರಳುಗಳಿಗೆ ಅತಿ ಕಡಿಮೆ ರಕ್ತ ಲಭ್ಯವಾಗಿ ಸೆಡೆತಕ್ಕೆ ಕಾರಣವಾಗುತ್ತದೆ. ನಿಮ್ಮ ಕುಟುಂಬ ವೈದ್ಯರು ಈ ಕಾರಣವನ್ನು ತಮ್ಮ ಪರೀಕ್ಷೆಗಳ ಮೂಲಕ ದೃಢಪಡಿಸಬಲ್ಲರು. ಹೌದು ಎಂದಾದರೆ ಧ್ಯಾನಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಮೂಲಕ ಈ ತೊಂದರೆಯನ್ನು ಇಲ್ಲವಾಗಿಸಬಹುದು.

English summary

Why Do You Get Toe Cramps? Ways To Get Rid Of Them

Cramps refer to unconscious as well as forcible contractions of the muscles that refuse to unwind. Under normal conditions, the muscles of the toe unwind whenever we want to move them and these moves are coordinated by the brain signals. In case of cramps, these muscles have an inclination to contract even without the brain signs that may be a painful condition.
X
Desktop Bottom Promotion