Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಸಲ್ ಕ್ಯಾಚ್(ಸ್ನಾಯು ಸೆಳೆತ) ತಡೆಯಲು ಟಿಪ್ಸ್
ಮಸಲ್ ಕ್ಯಾಚ್(ಕ್ರಾಂಪ್) ಅಥವಾ ಸ್ನಾಯು ಸೆಳೆತ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಈ ಸ್ನಾಯು ಸೆಳೆತ ವಯಸ್ಸಾದವರಲ್ಲಿ ಮಾತ್ರವಲ್ಲ, ಚಿಕ್ಕ ಪ್ರಾಯದಲ್ಲೂ ಕಂಡು ಬರಬಹುದು. ಇನ್ನು ಗರ್ಭಿಣಿ ಮಹಿಳೆಯರಲ್ಲಂತೂ ಈ ಸಮಸ್ಯೆ ಸರ್ವೇ ಸಾಮಾನ್ಯ.
ಈ ರೀತಿ ಮಸಲ್ ಕ್ಯಾಚ್ ಆದರೆ ಅದರ ನೋವು ತಡೆಯುವುದು ಅಸಾಧ್ಯ ಅನ್ನುವಷ್ಟು ನೋವಾಗಿರುತ್ತದೆ. ದಿನಾ ವ್ಯಾಯಾಮ ಮಾಡುವ ಆಟಗಾರರಲ್ಲೂ ಈ ಸ್ನಾಯು ಸೆಳೆತ ಕಂಡು ಬರುತ್ತದೆ. ಈ ರೀತಿ ಮಸಲ್ ಕ್ಯಾಚ್ ಆದಾಗ ಯಾರಾದರೂ ಮಸಾಜ್ ಮಾಡಿದರೆ ನೋವು ಕಮ್ಮಿಯಾಗಿ ನಂತರ ನಾರ್ಮಲ್ ಆಗುವುದು. ಕೆಲವರಿಗೆ ಮಲಗಿದ್ದಲ್ಲಿಯೇ ಮಸಲ್ ಕ್ಯಾಚ್ ಆಗುವುದು.
ಈ ಸ್ನಾಯು ಸೆಳೆತವನ್ನು ಈ ಕೆಳಗಿನ ವಿಧಾನಗಳನ್ನು ಬಳಸಿ ಕಡಿಮೆ ಮಾಡಬಹುದು:

ಹೀಟ್ ಪ್ಯಾಡ್
ಕೆಲವರಿಗೆ ಆಗಾಗ ಸ್ನಾಯು ಸೆಳೆತ ಕಂಡು ಬರುತ್ತದೆ. ಅಂತವರು ಈ ಹೀಟ್ ಪ್ಯಾಡ್ ವಾರಕ್ಕೊಮ್ಮೆ 20 ನಿಮಿಷ ಕಾಲ ನೋವು ಇಲ್ಲದಿದ್ದರೂ ಸ್ನಾಯು ಸೆಳೆತ ಕಂಡು ಬರುವ ಕಡೆ ಸುತ್ತಬೇಕು. ಈ ರೀತಿ ಮಾಡುವುದರಿಂದ ಸ್ನಾಯು ಸೆಳೆತವನ್ನು ತಡೆಯಬಹುದು.

ಎಪ್ಸೋಮ್ ಸಾಲ್ಟ್
ಬಿಸಿ ನೀರಿಗೆ ಎಪ್ಸೋಮ್ ಸಾಲ್ಟ್ ಹಾಕಿ ಆ ನೀರಿನಲ್ಲಿ ಕಾಲನ್ನು ಅದ್ದಿ ಕೂತರೆ ನೋವು ಕಡಿಮೆಯಾಗಿ ನಿಮ್ಮ ಸ್ನಾಯುಗಳಿಗೆ ವಿಶ್ರಾಂತಿಯನ್ನು ನೀಡುವುದು.

ಮಸಾಜ್
ಆಗಾಗ ಮಸಲ್ ಕ್ಯಾಚ್ ಆಗುತ್ತಿದ್ದರೆ ಎಣ್ಣೆ ಮಸಾಜ್ ಮಾಡಿಸುವುದು ಒಳ್ಳೆಯದು, ಇದರ ಜೊತೆಗೆ ಸರಿಯಾಗಿ ವ್ಯಾಯಾಮ ಮಾಡುವುದರಿಂದ ಸ್ನಾಯು ಸೆಳೆತ ಉಂಟಾಗದಂತೆ ತಡೆಯಬಹುದು.

ವೆಜಿಟೆಬಲ್ ಎಣ್ಣೆ
ವೆಜಿಟೆಬಲ್ ಎಣ್ಣೆಯನ್ನು ಬಿಸಿ ಮಾಡಿ ಅದರಿಂದ ಮಸಾಜ್ ಮಾಡಿದರೆ ಮುಂದೆ ಬರುವ ಮಸಲ್ ಕ್ಯಾಚ್ ಅನ್ನು ತಡೆಯಬಹುದು.

ಟಾನಿಕ್ ವಾಟರ್
ಟಾನಿಕ್ ವಾಟರ್ ಅನ್ನು ವಾರಕ್ಕೊಮ್ಮೆ ತೆಗೆದುಕೊಳ್ಳುವುದರಿಂದ ಸ್ನಾಯು ಸೆಳೆತವನ್ನು ತಡೆಯಬಹುದು.

ಮಲಗುವ ಭಂಗಿ
ಬೆಡ್ ಶೀಟ್ ಅನ್ನು ಒದ್ದು ಮಲಗುವಾಗ ಕಾಲಿನ ಬೆರಳುಗಳು ಮ2ಡಚುವಂತೆ ಬಿಗಿಯಾಗಿ ಒದ್ದುಕೊಂಡು ಮಲಗುವುದರಿಂದ ಮಸಲ್ ಕ್ಯಾಚ್ ಉಂಟಾಗುತ್ತದೆ. ಆದ್ದರಿಂದ ಮಲಗುವಾಗ ಬೆರಳುಗಳ ಮೇಲೆ ಒತ್ತಡ ಬೀಳದಂತೆ ಮಲಗಿ.

ವಿಟಮಿನ್ ಇ ಇರುವ ಆಹಾರಗಳು
ವಿಟಮಿನ್ ಇ ಕೊರತೆ ಕೂಡ ಸ್ನಾಯು ಸೆಳೆತಕ್ಕೆ ಪ್ರಮುಖ ಕಾರಣ. ಆದ್ದರಿಂದ ವಿಟಮಿನ್ ಇ ಇರುವ ಆಹಾರಗಳನ್ನು ಹೆಚ್ಚಾಗಿ ತಿನ್ನಿ.

ಮೆಗ್ನಿಷಿಯಂ
ಮೆಗ್ನಿಷಿಯಂ ಇರುವ ಆಹಾರಗಳನ್ನು ನಿಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ಸೇರಿಸಿ. ಬಾಳೆ ಹಣ್ಣು, ಕಿತ್ತಳೆಯಲ್ಲಿ ಮೆಗ್ನಿಷಿಯಂ ಅಂಶವಿರುತ್ತದೆ.

ಹಾಲಿನ ಉತ್ಪನ್ನ
ಮಸಲ್ ಕ್ಯಾಚ್ ಆಗುತ್ತಿದ್ದರೆ ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ತಿನ್ನಿ. ಇದರಲ್ಲಿರುವ ಕ್ಯಾಲ್ಸಿಯಂ ಸ್ನಾಯುಗಳನ್ನು ಬಲಪಡಿಸಿ ಮಸಲ್ ಕ್ಯಾಚ್ ಉಂಟಾಗದಂತೆ ತಡೆಯುತ್ತದೆ.

ನೀರನ್ನು ಚೆನ್ನಾಗಿ ಕುಡಿಯಿರಿ
ಮಸಲ್ ಕ್ಯಾಚ್ ಗೆ ಮತ್ತೊಂದು ಪ್ರಮುಖ ಕಾರಣವೆಂದರೆ ದೇಹದಲ್ಲಿ ನೀರಿನಂಶ ಕಮ್ಮಿಯಾಗಿರುವುದು. ಆದ್ದರಿಂದ ದಿನದಲ್ಲಿ 8 ಗ್ಲಾಸ್ ನೀರು ಕುಡಿಯಲು ಮರೆಯಬೇಡಿ.

ಶಕ್ತಿ ವರ್ಧಕ ಪಾನೀಯಾಗಳು
ಆಟ ಆಡಿ ತುಂಬಾ ಬೆವರಿದ್ದರೆ ಗ್ಲೂಕೋಸ್ ಪೌಡರ್ ಅಥವಾ ಇತರ ಎನರ್ಜಿ ಬೂಸ್ಟ್ ತೆಗೆದುಕೊಳ್ಳುವುದರಿಂದ ದೇಹದಲ್ಲಿ ನಷ್ಟವಾದ ಸೋಡಿಯಂ ಅನ್ನು ತುಂಬಿ ಮಸಲ್ ಕ್ಯಾಚ್ ಆಗುವುದನ್ನು ತಡೆಯಬಹುದು.

ಮಾನಸಿಕ ಒತ್ತಡ
ಮಾನಸಿಕ ಒತ್ತಡ ಕೂಡ ಸ್ನಾಯು ಸೆಳೆತದ ಸಮಸ್ಯೆಯನ್ನು ತರುವುದು, ಆದ್ದರಿಂದ ಮಾನಸಿಕ ಒತ್ತಡವಿದ್ದರೆ ಅದನ್ನು ಹೋಗಲಾಡಿಸುವ ಮಾರ್ಗಗಳತ್ತ ಗಮನ ಹರಿಸಿ.

ಸೋಡಿಯಂ
ದೇಹದಲ್ಲಿ ಸೋಡಿಯಂ ಕೊರತೆ ಉಂಟಾದರೆ ಸ್ನಾಯುಗಳ ಸೆಳೆತ ಉಂಟಾಗುವುದು. ಆದ್ದರಿಂದ ಉಪ್ಪನ್ನು ನಿಗದಿತ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು.

ವಿಟಮಿನ್ ಡಿ
ವಿಟಮಿನ್ ಡಿ ಕೂಡ ಸ್ನಾಯು ಸೆಳೆತ ತಡೆಯಲು ಅವಶ್ಯಕ. ಸೂರ್ಯನ ಕಿರಣಗಳಿಂದ ಮತ್ತು ಅಣಬೆಯಂತಹ ತರಕಾರಿಗಳಿಂದ ವಿಟಮಿನ್ ಡಿ ಪಡೆದುಕೊಳ್ಳಬಹುದು.

ದೇಹದಲ್ಲಿ ಸಡಿಲತೆ
ಒಂದೇ ಕಡೆ ಕೂರುವುದರಿಂದ ನಮ್ಮ ದೇಹದ ಜಡ ಹಿಡಿಯುವುದು, ಆದ್ದರಿಂದ ವ್ಯಾಯಾಮ ಮಾಡುವುದು, ಕೈ ಕಾಲುಗಳನ್ನು ಅಲ್ಲಾಡಿಸುವುದು ಮಾಡುತ್ತಿರಬೇಕು.

ಕಾರ್ಬೋ ಹೈಡ್ರೇಟ್ಸ್
ಹೆಚ್ಚಿನವರು ಸ್ಲಿಮ್ ಆಗಬೇಕೆಂದು ಕಾರ್ಬೋ ಹೈಡ್ರೇಟ್ಸ್ ಮುಟ್ಟುವುದೇ ಇಲ್ಲ, ಆದರೆ ಹಾಗೆ ಮಾಡಬಾರದು, ನಮ್ಮ ದೇಹಕ್ಕೆ ಅಗತ್ಯವಿರುವ ಕಾರ್ಬೋಹೈಟ್ರೇಟ್ಸ್ ಒದಗಿಸಿದರೆ ಮಾತ್ರ ದೇಹಕ್ಕೆ ಶಕ್ತಿ ಬರುವುದು.

ಬೆಚ್ಚಗೆ ಇರಿ
ಸ್ನಾಯು ಸೆಳೆತ ಅಧಿಕ ತಂಪಾದ ವಾತಾವರಣ ಇರುವಾಗ ಹೆಚ್ಚಾಗಿ ಕಂಡು ಬರುತ್ತದೆ. ಆ ಸಮಯದಲ್ಲಿ ಸಾಕ್ಸ್ ಧರಿಸಿ ಕಾಲನ್ನು ಬೆಚ್ಚಗೆ ಇಟ್ಟುಕೊಳ್ಳಬೇಕು.

Aquatic therapy
Aquatic therapy ಮಾಡಿಸುವುದರಿಂದಲೂ ಸ್ನಾಯು ಸೆಳೆತವನ್ನು ಕಮ್ಮಿ ಮಾಡಬಹುದು.

ಆಟ
ಸಮಯ ಸಿಕ್ಕಾಗ ಆಟ ಆಡುವುದು, ಸೈಕಲ್ ಸವಾರಿ ಮಾಡುವುದು ಇವೆಲ್ಲಾ ಒಳ್ಳೆಯದು.

ವ್ಯಾಯಾಮ
ದಿನನಿತ್ಯ ಅರ್ಧ ಗಂಟೆ ಸಮಯವನ್ನು ವ್ಯಾಯಾಮಕ್ಕಾಗಿ ಮೀಸಲಿಡಿ.

ಚಪ್ಪಲಿ
ತುಂಬಾ ಬಿಗಿಯಾದ ಚಪ್ಪಲಿ ಧರಿಸಬೇಡಿ, ಕಂಫರ್ಟ್ ಅನಿಸುವ ಚಪ್ಪಲಿ ಆಯ್ಕೆ ಮಾಡಿ.



Click it and Unblock the Notifications











