For Quick Alerts
ALLOW NOTIFICATIONS  
For Daily Alerts

ಕಹಿಕಹಿ ಆಹಾರಗಳು, ಆರೋಗ್ಯದ ಪಾಲಿಗೆ ತುಂಬಾನೇ ಸಿಹಿ!

By Manu
|

ಬಾಯಿಗೆ ರುಚಿಯಾಗಿರುವಂತಹದ್ದು ಖಂಡಿತವಾಗಿಯೂ ದೇಹಕ್ಕೆ ಒಳ್ಳೆಯದಲ್ಲ ಎನ್ನುವ ಮಾತಿದೆ. ಬಾಯಿಗೆ ಯಾವುದು ಕಹಿ ಹಾಗೂ ರುಚಿಯಿಲ್ಲವೋ ಅಂತಹ ಆಹಾರಗಳಲ್ಲಿ ಆರೋಗ್ಯವನ್ನು ಕಾಪಾಡುವಂತಹ ಹಲವಾರು ಗುಣಗಳು ಇರುತ್ತದೆ. ತರಕಾರಿಗಳನ್ನೇ ಪರಿಗಣಿಸಿದರೆ ಇದು ನಮಗೆ ಕಂಡುಬರುತ್ತದೆ. ಹಾಗಲಕಾಯಿ ಕಹಿಯಾದರೂ ಅದರಲ್ಲಿರುವಂತಹ ಪೋಷಕಾಂಶಗಳು ದೇಹಕ್ಕೆ ತುಂಬಾ ಒಳ್ಳೆಯದು.

ಈ ಆಹಾರಗಳು ಕಹಿಯಾದರೆ ಏನಂತೆ?

ಪ್ರಾಣಿಗಳು ಕೂಡ ತಾವು ಅನಾರೋಗ್ಯಕ್ಕೆ ಒಳಗಾದಾಗ ಕಹಿಯಾಗಿರುವ ಸೊಪ್ಪು ಅಥವಾ ಹುಲ್ಲನ್ನು ಸೇವಿಸುತ್ತವೆ. ಯಾಕೆಂದರೆ ಸೊಪ್ಪು ಹಾಗೂ ಹುಲ್ಲಿನಲ್ಲಿ ಶಮನಕಾರಿ ಗುಣಗಳು ಇವೆ. ಈಗೀಗ ನಾವು ತಿನ್ನುವಂತಹ ಜಂಕ್ ಫುಡ್ ಗಳು ಕಿಡ್ನಿ ಹಾಗೂ ಯಕೃತ್ ಮೇಲೆ ಅತಿಯಾದ ಭಾರವನ್ನು ಹಾಕುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳಲು ಕಹಿಯಾದ ತರಕಾರಿಗಳನ್ನು ಸೇವಿಸಬೇಕು. ಬಾಯಿಗೆ ಇದು ರುಚಿಸದೆ ಇದ್ದರೂ ಯಾವ ರೀತಿ ನಿಮಗೆ ನೆರವಾಗುತ್ತದೆ ಎಂದು ಈ ಲೇಖನ ಮೂಲಕ ತಿಳಿದುಕೊಳ್ಳುವ....

ಸಾಮಗ್ರಿಗಳು

ಸಾಮಗ್ರಿಗಳು

ಒಂದು ಹಾಗಲಕಾಯಿ, ಒಂದು ಲಿಂಬೆ ಮತ್ತು ಒಂದು ಚಮಚ ಆಲಿವ್ ತೈಲ

ತಯಾರಿ

ತಯಾರಿ

ಹಾಗಲಕಾಯಿಯನ್ನು ತುಂಡು ಮಾಡಿಕೊಂಡು ಜ್ಯೂಸ್ ತೆಗೆಯಿರಿ. ಲಿಂಬೆಯ ರಸ ತೆಗೆದು ಜ್ಯೂಸ್ ಗೆ ಸೇರಿಸಿ. ಆಲಿವ್ ಎಣ್ಣೆಯನ್ನು ಇದಕ್ಕೆ ಬೆರೆಸಿ. ಎಲ್ಲವರನ್ನು ಮಿಶ್ರಣ ಮಾಡಿಕೊಂಡು ಕುಡಿಯಿರಿ. 30 ದಿನಗಳ ಕಾಲ ಇದನ್ನು ಕುಡಿಯಿರಿ. ಇದರೊಂದಿಗೆ ಹೆಚ್ಚಿನ ನೀರು ಕೂಡ ಸೇವಿಸಬೇಕು.

ಹಾಗಲಕಾಯಿ ಕಹಿಯಾದರೂ, ಸೌಂದರ್ಯದ ಪಾಲಿಗೆ ಸಿಹಿ!

#1

#1

ಹಾಗಲಕಾಯಿಯು ಕಹಿಯಾಗುತ್ತಾ ಇದ್ದರೆ ಸ್ವಲ್ಪ ಜೇನುತುಪ್ಪ ಸೇರಿಸಿಕೊಳ್ಳಿ. ಆದರೆ ಇದು ಒಳ್ಳೆಯದಲ್ಲ. ಕಹಿಯು ಪ್ರಮುಖ ಪಾತ್ರ ನಿರ್ವಹಿಸುವುದು. ಕೆಲವೊಂದು ಜೀರ್ಣಕ್ರಿಯೆ ಕಾರ್ಯವನ್ನು ಇದು ಉತ್ತೇಜಿಸುತ್ತದೆ. ಜೀರ್ಣಕ್ರಿಯೆ ಹೆಚ್ಚಿಸಿ ಆಮ್ಲವು ಹಿಮ್ಮುಖವಾಗಿ ಹರಿಯುವುದನ್ನು ತಡೆಯುವುದು.

#2

#2

ಕಹಿಯು ಹೊಟ್ಟೆಯಲ್ಲಿನ ಕಿರಿಕಿರಿಯನ್ನು ತಪ್ಪಿಸುವುದು. ಇದರಿಂದ ಆಹಾರ ಸೂಕ್ಷ್ಮತೆ ಕಡಿಮೆಯಾಗಿ ಹೊಟ್ಟೆಯ ಆರೋಗ್ಯಕ್ಕೆ ನೆರವಾಗುವುದು.

ಹಾಗಲಕಾಯಿ ಜ್ಯೂಸ್: ಕಹಿಯಾದರೂ-ಆರೋಗ್ಯದ ಪಾಲಿಗೆ ಸಿಹಿ

#3

#3

ಇದು ಜೀರ್ಣಕ್ರಿಯೆಯ ಕಾರ್ಯವನ್ನು ಸಾಮಾನ್ಯಗೊಳಿಸಿ ಅತಿಯಾಗಿ ತಿನ್ನುವುದನ್ನು ತಪ್ಪಿಸುವುದು. ನಿಮಗೆ ಅತಿಯಾದ ತೂಕದ ಬಗ್ಗೆ ಚಿಂತೆಯಿದ್ದರೆ ಈ ಜ್ಯೂಸ್ ಕುಡಿಯಿರಿ.

#4

#4

ಕಹಿಯಾದ ಅಂಶವು ರಕ್ತದಲ್ಲಿ ಸಕ್ಕರೆ ಮಟ್ಟ, ಹಾರ್ಮೋನು ಮಟ್ಟ ಮತ್ತು ಅಂತಃಸ್ರಾವಕ ಗ್ರಂಥಿಯನ್ನು ಸಾಮಾನ್ಯಗೊಳಿಸುತ್ತದೆ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ.

#5

#5

ಹೊಟ್ಟೆಯಲ್ಲಿ ಲೋಳೆ ಸ್ರವಿಸುವಿಕೆಯನ್ನು ಉತ್ತೇಜಿಸುವ ಕಹಿ ಅಂಶವು ಹೊಟ್ಟೆಯ ಅಲ್ಸರ್ ನ್ನು ತಡೆಯುತ್ತದೆ. ಹಾಗಲಕಾಯಿಯು ಆಂತರಿಕ ಪರಿಸರ ಕ್ಷಾರೀಯವನ್ನು ಕಾಪಾಡಿ ದೇಹದಲ್ಲಿ ಆಮ್ಲೀಯತೆಯ ಮಟ್ಟವನ್ನು ಕಡಿಮೆಗೊಳಿಸುತ್ತದೆ.

#6

#6

ತರಕಾರಿಗಳಲ್ಲಿ ಕಾಲೆ, ಡಾಂಡೋಲಿಯನ್ ಗ್ರೀನ್, ಪಾಲಕ್ ನಂತಹ ತರಕಾರಿಗಳು ಕೂಡ ಹಾಗಲಕಾಯಿಯಂತೆ ಲಾಭವನ್ನು ನೀಡಬಲ್ಲದು. ಇದನ್ನು ಹಸಿಯಾಗಿ ಅಥವಾ ಜ್ಯೂಸ್ ತೆಗೆದು ಕುಡಿದರೆ ಅದರ ಲಾಭ ಸಿಗುವುದು.

English summary

Why Are Bitter Foods Good For You?

Have you ever wondered why some animals eat bitter plants when they fall sick? Is it of any use? Well, there seems to be a link. Bitter taste seems to heal. When you eat too much of junk, you tend to feel fatigued, sluggish and dull due to the compounds present in the additives. They over load the kidneys and the liver. Read on to know more...
X
Desktop Bottom Promotion