ಹಾಗಲಕಾಯಿ ಜ್ಯೂಸ್: ಕಹಿಯಾದರೂ-ಆರೋಗ್ಯದ ಪಾಲಿಗೆ ಸಿಹಿ

By: manu
Subscribe to Boldsky

ಹಾಗಲಕಾಯಿಯ ಕಹಿಯಾದ ರುಚಿಯಿಂದಾಗಿ ಹೆಚ್ಚಿನವರು ಇದನ್ನು ಇಷ್ಟಪಡುವುದಿಲ್ಲ. ಅದರಲ್ಲೂ ಇದರ ಜ್ಯೂಸ್ ಹೇಗಿರುತ್ತದೆ? ಹೆಸರು ಕೇಳಿದಾಕ್ಷಣ ಹೆಚ್ಚಿನವರು ಮುಖ ಕಿವಿಚುತ್ತಾರೆ. ಆದರೆ ಇದರಲ್ಲಿರುವ ಪೋಷಕಾಂಶಗಳ ಪಟ್ಟಿಯನ್ನು ನೋಡಿದ ಬಳಿಕ ಇದರ ಕಹಿಗುಣ ಇದನ್ನು ಮೆಚ್ಚಲು ಅಡ್ಡಯಾಗದು. ಹಾಗಲಕಾಯಿ:ಆರೋಗ್ಯಕ್ಕೆ ಸಿಹಿ, ರೋಗ ರುಜಿನಗಳಿಗೆ ಕಹಿ!

ಇದರಲ್ಲಿ ವಿಟಮಿನ್ ಸಿ, B1, B2, B3, ಪೊಟ್ಯಾಶಿಯಂ, ಸತು, ಮ್ಯಾಂಗನೀಸ್ ನಂತಹ ಹಲವಾರು ಖನಿಜಗಳು, ವಿಸೈನ್, ಕ್ಯಾರಾಡಿನ್, ಮೊಮೋರ್ಡಿನ್ ಮೊದಲಾದ ಫೈಟೋ ನ್ಯೂಟ್ರಿಯೆಂಟುಗಳು, ಕ್ಯಾರೋಟಿನಾಯ್ಡುಗಳು ಮೊದಲಾದ ಪೋಷಕಾಂಶಗಳಿವೆ. ಆದರೆ ಈ ಪೋಷಕಾಂಶಗಳು ನಮ್ಮ ದೇಹಕ್ಕೆ ಹೇಗೆ ಪ್ರಯೋಜನಕಾರಿಯಾಗಿವೆ? ಚೋಟುದ್ದ ಹಾಗಲಕಾಯಿ-ಬಾಯಿಗೆ ಕಹಿ, ಆರೋಗ್ಯಕ್ಕೆ ಸಿಹಿ

ಬನ್ನಿ, ಇವುಗಳ ಪ್ರಯೋಜನಗಳೇನು ಎಂಬುದನ್ನು ನೋಡೋಣ: ಆದರೆ ಅದಕ್ಕೂ ಮುನ್ನ ಒಂದು ಎಚ್ಚರಿಕೆಯ ಮಾತು. ಇದರಲ್ಲಿ ಪೋಷಕಾಂಶಗಳು ಅತಿ ಹೆಚ್ಚಿರುವುದೇ ಒಂದು ತೊಡಕಾಗಿದ್ದು ಈ ರಸವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ನಮ್ಮ ಶರೀರ ಈ ಆಗಾಧ ಪ್ರಮಾಣವನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಅತಿಸಾರದ ಮೂಲಕ ಹೊರಹಾಕುತ್ತದೆ. (ಅಗತ್ಯಕ್ಕೂ ಹೆಚ್ಚು ನೀರು ತುಂಬಿಸಿದರೆ ಪಾತ್ರೆಯಿಂದ ಹೊರ ಉಕ್ಕುವಂತೆ). ಆದ್ದರಿಂದ ದಿನಕ್ಕೊಂದು ಲೋಟಕ್ಕಿಂತ ಹೆಚ್ಚಿನ ಪ್ರಮಾಣ ಒಳ್ಳೆಯದಲ್ಲ... 

ಯಕೃತ್

ಯಕೃತ್

ಹಾಗಲಕಾಯಿಯಲ್ಲಿ ಮೊಮೋರ್ಡಿಕಾ ಎಂಬ ಪೋಷಕಾಂಶವಿದೆ. ಇದು ಯಕೃತ್ ನ ಕ್ಷಮತೆಯನ್ನು ಹೆಚ್ಚಿಸುವುದು ಮಾತ್ರವಲ್ಲ, ಹಲವಾರು ತೊಂದರೆಗಳಿಂದ ರಕ್ಷಣೆಯನ್ನೂ ನೀಡುತ್ತದೆ.

ಅಮಲು ಇಳಿಯಲು

ಅಮಲು ಇಳಿಯಲು

ಒಂದು ವೇಳೆ ಹಿಂದಿನ ದಿನದ ವ್ಯಸನದ ಪರಿಣಾಮ ಮರುದಿನ ಬೆಳಿಗ್ಗೆ ಎದ್ದ ಬಳಿಕವೂ ಇದ್ದರೆ ತಕ್ಷಣ ಒಂದು ಲೋಟ ಹಾಗಲಕಾಯಿಯ ರಸವನ್ನು ಕುಡಿಯುವುದರಿಂದ ಜೀರ್ಣಾಂಗಗಳಲ್ಲಿದ್ದ ವಿಷಕಾರಿ ವಸ್ತುಗಳನ್ನು ಶೀಘ್ರ ವಿಸರ್ಜಿಸುವಂತೆ ಮಾಡಿ ದೇಹದಲ್ಲಿ ಆವರಿಸಿದ್ದ ವಿಷಕಾರಿ ಕಣಗಳ ಪ್ರಭಾವವನನ್ನು ಕಡಿಮೆಗೊಳಿಸಿ ಸಾಮಾನ್ಯ ಸ್ಥಿತಿಗೆ ಬರಲು ನೆರವಾಗುತ್ತದೆ.

ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್

ನಿಯಮಿತವಾಗಿ ಒಂದು ಲೋಟ ಹಾಗಲಕಾಯಿಯ ರಸ ಕುಡಿಯುವುದರಿಂದ ದೇಹದಲ್ಲಿದ್ದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಹಾಗೂ ಇದರ ಉರಿಯೂತ ನಿವಾರಕ ಗುಣ ದೇಹದ ಹಲವಾರು ಉರಿಯೂತಗಳನ್ನು ನಿವಾರಿಸುತ್ತದೆ.ಆಯುರ್ವೇದ ಟಿಪ್ಸ್: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಮನೆಮದ್ದು

ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಂತ್ರಣ

ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಂತ್ರಣ

ಹಾಗಲಕಾಯಿಯ ರಸ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸುವ ಗುಣ ಹೊಂದಿದೆ ಎಂದು ಕಂಡು ಕೊಳ್ಳಲಾಗಿದೆ. ವಿಶೇಷವಾಗಿ ಇದು ಟೈಪ್-2 ಮಧುಮೇಹವನ್ನು ತಡೆಯುವ ಕ್ಷಮತೆ ಹೊಂದಿದೆ.

ಹಾಗಲಕಾಯಿ ಜ್ಯೂಸ್ ಮಾಡುವ ವಿಧಾನ

ಹಾಗಲಕಾಯಿ ಜ್ಯೂಸ್ ಮಾಡುವ ವಿಧಾನ

ತಾಜಾ ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಅದರ ಮೇಲ್ಭಾಗದ ಸಿಪ್ಪೆಯನ್ನು ತೆಗೆಯಿರಿ ಹಾಗೂ ಇದನ್ನು ಮಧ್ಯಭಾಗದಲ್ಲಿ ಕತ್ತರಿಸಿ ಬೀಜವನ್ನು ಚಮಚದ ಮೂಲಕ ತೆಗೆಯಿರಿ. ಸಿಪ್ಪೆಯ ಕಹಿಯನ್ನು ನೀವು ಸಹಿಸಿಕೊಳ್ಳಬಲ್ಲಿರೆ೦ದಾದಲ್ಲಿ ಅದನ್ನು ತೆಗೆಯುವ ಅಗತ್ಯವಿಲ್ಲ.

ಅನೇಕರು ಹಾಗಲಕಾಯಿಯ ಮೇಲ್ಭಾಗದ ಸಿಪ್ಪೆಯನ್ನು ತೆಗೆಯುವ ಗೋಜಿಗೇ ಹೋಗುವುದಿಲ್ಲ. ಇನ್ನು ಹರಿತವಾದ ಚಾಕುವನ್ನು ಬಳಸಿ ಹಾಗಲಕಾಯಿಯನ್ನು ಸಣ್ಣದಾಗಿ ತುಂಡರಿಸಿಕೊಳ್ಳಿ.

ಹಾಗಲಕಾಯಿ ಜ್ಯೂಸ್ ಮಾಡುವ ವಿಧಾನ

ಹಾಗಲಕಾಯಿ ಜ್ಯೂಸ್ ಮಾಡುವ ವಿಧಾನ

*ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಮತ್ತು ನೀರಿನಲ್ಲಿ 30 ನಿಮಿಷಗಳ ಕಾಲ ಹಾಗಲಕಾಯಿಯನ್ನು ಮುಳುಗಿಸಿಡಿ.

*ಬೇಕಾದಲ್ಲಿ ಸ್ವಲ್ಪ ಉಪ್ಪು ಅಥವಾ ಲಿಂಬೆ ರಸವನ್ನು ಸೇರಿಸಿ ಇದರಿಂದ ಇದರ ಕಹಿ ನಿವಾರಣೆಯಾಗುತ್ತದೆ. ಅನ೦ತರ ಇವುಗಳನ್ನು ಮಿಕ್ಸರ್ ನಲ್ಲಿ ಹಾಕಿರಿ ಜೊತೆಗೆ ಅದಕ್ಕೆ ಅಗತ್ಯವಿದ್ದಷ್ಟು ನೀರನ್ನು ಸೇರಿಸಿರಿ. ಬಳಿಕ ಮಿಕ್ಸಿಯನ್ನು ಮಧ್ಯಮ ವೇಗದಲ್ಲಿ ತಿರುಗಿಸುವುದರ ಮೂಲಕ ಕಹಿ ಜ್ಯೂಸ್ ಅನ್ನು ಪಡೆದುಕೊಳ್ಳಿರಿ.

ಹಾಗಲಕಾಯಿಯ ಸೇವನೆಯ ಬಗ್ಗೆ ವಹಿಸಬೇಕಾದ ಎಚ್ಚರಿಕೆಗಳು

ಹಾಗಲಕಾಯಿಯ ಸೇವನೆಯ ಬಗ್ಗೆ ವಹಿಸಬೇಕಾದ ಎಚ್ಚರಿಕೆಗಳು

*ಗರ್ಭಿಣಿಯರಿಗೆ ಉತ್ತಮವಲ್ಲ: ಒಂದು ವೇಳೆ ಹೆಚ್ಚು ಪ್ರಮಾಣದಲ್ಲಿ ಹಾಗಲಕಾಯಿಯ ಜ್ಯೂಸ್ ಸೇವಿಸಿದರೆ ಪೂರ್ಣಮಾಸ ತುಂಬುವ ಮೊದಲೇ ಹೆರಿಗೆಯಾಗುವ ಸಂಭವವಿರುವುದರಿಂದ ಗರ್ಭಿಣಿಯರು ಐದು ತಿಂಗಳು ತುಂಬಿದ ಬಳಿಕ ಹಾಗಲಕಾಯಿಯ ಹೆಸರನ್ನೆತ್ತದಿರುವುದೇ ಉತ್ತಮ.

*ಕ್ಷಾರವಸ್ತುಗಳಿಗೆ ಅಲರ್ಜಿಯಿದ್ದವರಿಗೂ ತಕ್ಕುದಲ್ಲ: ಒಂದು ವೇಳೆ ಕ್ಷಾರೀಯ (alkaloid substances) ವಸ್ತುಗಳಿಗೆ ಅಲರ್ಜಿಯಿದ್ದರೆ ಹಾಗಲಕಾಯಿ ಅವರಿಗೆ ಒಳ್ಳೆಯದಲ್ಲ. ಇದರಿಂದ ಅತಿಜೊಲ್ಲು ಸುರಿಯುವುದು, ಮುಖ ಕೆಂಪಾಗುವುದು, ಕಣ್ಣು ಮಂಜಾಗುವುದು, ಹೊಟ್ಟೆನೋವು, ವಾಕರಿಕೆ, ವಾಂತಿ, ಮಾಂಸಖಂಡಗಳಲ್ಲಿ ಶಕ್ತಿಯಿಲ್ಲದಿರುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಇನ್ನುಳಿದಂತೆ ಇದು ಎಲ್ಲರಿಗೂ ಉತ್ತಮವಾದ ಆಹಾರವಾಗಿದೆ. ಹಾಗಲಕಾಯಿಯ ಖಾದ್ಯದಲ್ಲಿ ಬೆಲ್ಲ ಸೇರಿಸಿದರೆ ಇದರ ಕಹಿಯನ್ನು ಸಹಿಸಲು ಸಾಧ್ಯವಾಗುತ್ತದೆ.

 
English summary

How Karela Juice Works Like Medicine

Most of us hate karela or bitter gourd. The reason is its taste. It tastes bitter. And its juice? None of us would fall in love with it. But wait! Don't ignore it if you want a healthy life! Karela contains vitamin C, B1, B2, B3, minerals like potassium, zinc, manganese and also phytonutrients like vicine, charadin, momordin and carotenoids.
Subscribe Newsletter