Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ದಿನಕ್ಕೊಂದು ವಿನೆಗರ್ ಬೆರೆಸಿದ ಮೊಟ್ಟೆ ತಿಂದರೆ-ಮಧುಮೇಹ ಸಮಸ್ಯೆ ನಿಯಂತ್ರಣಕ್ಕೆ!
ಇಂದು ವಿಶ್ವದಲ್ಲಿ ಮಧುಮೇಹಿಗಳ ಸಂಖ್ಯೆ ಅತಿಹೆಚ್ಚಾಗಿದೆ. ಮೇದೋಜೀರಕ ಗ್ರಂಥಿ ಯಾವಾಗ ಅಗತ್ಯವಿದ್ದಷ್ಟು ಇನ್ಸುಲಿನ್ ಅನ್ನು ಉತ್ಪಾದಿಸಲು ವಿಫಲವಾಗುತ್ತದೆಯೋ ಆಗ ಸಕ್ಕರೆಯನ್ನು ಬಳಸಿಕೊಳ್ಳಲು ಸಾಧ್ಯವಾಗದಿರುವುದೇ ಮಧುಮೇಹ (ಟೈಪ್ 1) ಒಂದು ವೇಳೆ ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗಿದ್ದರೂ ಇದನ್ನು ಬಳಸಿಕೊಳ್ಳಲು ವಿಫಲವಾದರೆ ಇದು ಟೈಪ್ 2 ಮಧುಮೇಹ ಎನ್ನಿಸಿಕೊಳ್ಳುತ್ತದೆ.
ಮಧುಮೇಹದ ಸಾಮಾನ್ಯ ಲಕ್ಷಣಗಳೆಂದರೆ ತೂಕ ಶೀಘ್ರವಾಗಿ ಇಳಿಯುವುದು, ಸುಸ್ತು, ದೃಷ್ಟಿ ಮಂಜಾಗುವುದು, ಪದೇ ಪದೇ ಮೂತ್ರಕ್ಕೆ ಅವಸರವಾಗುವುದು, ಸತತ ಬಾಯಾರಿಕೆ, ಗುಪ್ತಾಂಗಗಳ ಸುತ್ತಲ ಭಾಗದಲ್ಲಿ ಸತತ ತುರಿಕೆ ಮೊದಲಾದವು. ಮಧುಮೇಹವನ್ನು ಗುಣಪಡಿಸಲು ಸಾಧ್ಯವಿಲ್ಲ, ಆದರೆ ಇದನ್ನು ನಿಯಂತ್ರಣದಲ್ಲಿರಿಸುವ ಮೂಲಕ ಸಾಮಾನ್ಯ ಜೀವನ ನಡೆಸಬಹುದು.
ಇದನ್ನು ನಿಯಂತ್ರಿಸದೇ ಹೋದರೆ ಪರೋಕ್ಷ ಪರಿಣಾಮಗಳಿಂದ ಮೂತ್ರಪಿಂಡ ವಿಫಲವಾಗುವುದು, ಹೃದಯದ ತೊಂದರೆ, ಕುರುಡುತನ, ನರವೈಫಲ್ಯ ಹಾಗೂ ಉದ್ರೇಕಗೊಳ್ಳದಿರುವುದು ಮೊದಲಾದ ತೊಂದರೆಗಳು ಎದುರಾಗಬಹುದು. ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಲು ಒಂದು ಸುಲಭ ಉಪಾಯವಿದೆ. ಇದು ಅಲ್ಪಸಮಯದಲ್ಲಿಯೇ ತಯಾರಿಸಲು ಸಾಧ್ಯವಾಗುತ್ತದೆ. ಆದರೆ ರಕ್ತದಲಿ ಸಕ್ಕರೆಯನ್ನು ಹೆಚ್ಚಿಸುವ ಆಹಾರಗಳನ್ನು ಸೇವಿಸದಿರುವುದೂ ಅಷ್ಟೇ ಮುಖ್ಯವಾಗಿದೆ.
ತಯಾರಿಸುವ ವಿಧಾನ
ಒಂದು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸಿಪ್ಪೆ ಸುಲಿಯಿರಿ. ಬಳಿಕ ಮುಳ್ಳುಚಮಚದಿಂದ ಕೆಲವಾರು ಬಾರಿ ಚುಚ್ಚಿ ಒಂದು ಪಾತ್ರೆಯಲ್ಲಿರಿಸಿ.
ಇದರ ಮೇಲೆ ಕೊಂಚ ಶಿರ್ಕಾವನ್ನು ಸಿಂಪಡಿಸಿ ಇಡಿಯ ರಾತ್ರಿ ಹಾಗೇ ಬಿಡಿ.
ಮರುದಿನ ಬೆಳಿಗ್ಗೆ ಒಂದು ಲೋಟದಲ್ಲಿ ಒಂದು ಚಿಕ್ಕ ಚಮಚದಷ್ಟು ಶಿರ್ಕಾ ಬೆರೆಸಿ ಈ ಮೊಟ್ಟೆಯನ್ನು ತಿನ್ನುತ್ತಾ, ನಡುವೆ ಈ ನೀರನ್ನು ಕುಡಿಯುತ್ತಾ ಸೇವಿಸಿ.
ಈ ವಿಧಾನವನ್ನು ಕೆಲವಾರು ದಿನಗಳವರೆಗೆ ಮುಂದುವರೆಸಿ ಕೆಲ ದಿನಗಳ ಬಳಿಕ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಾಗಿರುವುದನ್ನು ಗಮನಿಸಿ. ಅತ್ಯಂತ ಸುಲಭವಾಗಿದ್ದರೂ ಅತಿ ಹೆಚ್ಚು ಪರಿಣಾಮಕಾರಿಯಾಗಿರುವ ಈ ವಿಧಾನ ಅತಿ ಕಡಿಮೆ ಖರ್ಚಿನಲ್ಲಿಯೂ ಆಗುತ್ತದೆ. ಇದುನೈಸರ್ಗಿಕ ವಿಧಾನವಾಗಿದ್ದು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಲು ಅತ್ಯುತ್ತಮ ವಿಧಾನವಾಗಿದೆ.